Shree Nandiveri Samsthana Matha

Shree Nandiveri Samsthana Matha Claimed

ಶ್ರೀ ನಂದಿವೇರಿ ಸಂಸ್ಥಾನ ಮಠ

Average Reviews

Description

ಶ್ರೀ ನಂದಿವೇರಿ ಸಂಸ್ಥಾನ ಮಠ

ಶ್ರೀ ಮ.ನಿ.ಪ್ರ.ಸ್ವ. ಶಿವಕುಮಾರ ಮಹಾಸ್ವಾಮಿಗಳು

ಗÀದಗ ಜಿಲ್ಲಾ ಮುಂಡರಗಿ ತಾಲ್ಲೂಕಿನ ಕಪುತ್ತಗುಡ್ಡ ಡೋಣಿ ಗ್ರಾಮದಹೊರವಲಯದ ಕಾಡಿನಲ್ಲಿ ಅಸ್ತಿತ್ವದಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠವು ಸುಮಾರು200 ವರ್ಷಗಳ ಇತಿಹಾಸವನ್ನು ಹೊಂದಿದೆ. “ಎಪ್ಪತ್ತುಗಿರಿ ನೋಡುವದಕ್ಕಿಂತ, ಕಪ್ಪತ್ತಗಿರಿನೋಡು” ಎಂಬ ನಾಣ್ಣುಡಿಯಂತೆ ಶ್ರೀಮಠದ ಸುತ್ತಲಿನ ಗಿರಿ ಪ್ರದೇಶವು ಹಚ್ಚಹಸಿರಿನಿಂದಕಂಗೊಳಿಸುತ್ತಿದೆ.ಸುಮಾರು 30 ವರ್ಷಗಳ ಹಿಂದಿನ ಮಾತು, ಕಪ್ಪತ್ತಗಿರಿ ಪ್ರದೇಶವು ಸುತ್ತಲಿನಗ್ರಾಮಸ್ಥರ ಕಾಡುಗಳ್ಳರ ನಿರಂತರ ಆಕ್ರಮಣದಿಂದ ತನ್ನ ವೈಭವವನ್ನು ಕಳೆದುಕೊಳ್ಳುತ್ತಾಸಾಗಿತ್ತು. ಸಸ್ಯರಾಶಿಯಾಗಿದ್ದ ಪ್ರದೇಶ ಬೋಳಾಗಲು ಆರಂಭಿಸಿತ್ತು. ಆ ಸಮಯದಲ್ಲಿಶ್ರೀಮಠದ ಅಧಿಕಾರ ಹೊಂದಿ ಬಂದವರೇ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಶ್ರೀಶಿವಕುಮಾರ ಮಹಾಸ್ವಾಮಿಗಳು.ಶ್ರೀಮಠದ ಅಧಿಕಾರಕ್ಕೆ ಬಂದ ಪರಿಸರ ಪ್ರೇಮಿ ಶ್ರೀಗಳು ಸುತ್ತಲಿನ ಪರಿಸ್ಥಿತಿಯನ್ನುಕಂಡು ಮರುಗಿದರು. ಈ ಪ್ರದೇಶವನ್ನು ಮತ್ತೆ ಸಸ್ಯಕಾಶಿಯನ್ನಾಗಿ ಮಾಡಬೇಕೆಂಬ ಪಣತೊಟ್ಟು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 4 ಲಕ್ಷಬೇವು, ಹುಣಸೆ, ಆಲ ಇತ್ಯಾದಿ ಪ್ರಭೇದದ ಸಸಿಗಳನ್ನು ನೆಟ್ಟಿದ್ದಾರೆ. 2003ರ ಅಕ್ಟೋಬರ್29ರಂದು ಜ್ಞಾನಯೋಗಾಶ್ರಮ ಬಿಜಾಪುರದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಮೃತಹಸ್ತದಿಂದ 1 ಲಕ್ಷ ಸಸಿನೆಡುವ ಕಾರ್ಯಕ್ರಮ ಮಾಡಿದರು. ಅಂತರ್ಜಲ ಹೆಚ್ಚಿಸಲುಮಳೆನೀರಿನ ಇಂಗು ಗುಂಡಿಗಳನ್ನು (80000) ಮಾಡಿಸಿದರು. 40 ಚೆಕ್ಡ್ಯಾಂಗಳನ್ನುನಿರ್ಮಿಸಿದರು ಹಾಗೂ 13 ಕೆರೆಗಳನ್ನು ಹೂಳು ತೆಗೆಸಿ ನೀರಿನ ನಿಲ್ಲುವಿಕೆಯನ್ನು ಹೆಚ್ಚಿಸಿದರು.ಈ ಎಲ್ಲಾ ಕೆಲಸಗಳ ಪರಿಣಾಮ ಇಂದು ಈ ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದುಅಂತರ್ಜಲ ಮಟ್ಟ ಹೆಚ್ಚಿದೆ. ಬತ್ತಿ ಹೋಗಿದ್ದ ಬಂಗಾರದ ಹಳ್ಳಕ್ಕೆ ಜೀವ ಬಂದು ಮತ್ತೆಹರಿಯುತ್ತಿದೆ.ಶ್ರೀ ಮ.ನಿ.ಪ್ರ.ಸ್ವ. ಶಿವಕುಮಾರ ಮಹಾಸ್ವಾಮಿಗಳು ಸಮಾಜಕ್ಕೆ ನೀಡಿರುವಕೊಡುಗೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ ಶ್ರೀಗಳಿಗೆ ಪರಿಸರ ಸಂರಕ್ಷಣೆಗೆ ನೀಡುವ Plant Genome Savior Community Award  ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೀಮಠದಲ್ಲಿನಿತ್ಯ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿರುವ ಶ್ರೀಗಳು ಪ್ರತಿ ವರ್ಷ ಶ್ರಾವಣ ಮಾಸದಕೊನೆ ಗುರುವಾರ ಶ್ರೀಮಠದ ಜಾತ್ರೆ (ಪರಿಸರ ಉತ್ಸವ ಜಾತ್ರೆ) ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ.ಸ್ವ. ಶಿವಕುಮಾರ ಮಹಾಸ್ವಾಮಿಗಳು
Date of Birth :
20-01-1960
Place :
ಕೊತಬಾಳ, ರೋಣ ತಾ||
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಕೊನೆಯ ಗುರುವಾರ
ಶ್ರೀಮಠದ ಜಾತ್ರಾ ಮಹೋತ್ಸವ (ಪರಿಸರ ಉತ್ಸವ ಜಾತ್ರೆ)
ಶಿವರಾತ್ರಿಗೆ ಜಾಗರಣೆ, ವಿಶೇಷ ಪೂಜೆ
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ

Photos

Full Address Kannada

ಶ್ರೀ ನಂದಿವೇರಿ ಸಂಸ್ಥಾನ ಮಠ
ಕಪ್ಪತಗುಡ್ಡ ಡೋಣಿ - 582 121
ಮುಂಡರಗಿ ತಾ||, ಗದಗ ಜಿಲ್ಲೆ

Map

Near by Places

ಡೋಣಿ - 4 ಕಿ.ಮೀ.
ಮುಂಡರಗಿ - 15 ಕಿ.ಮೀ.
ಗದಗ - 20 ಕಿ.ಮೀ.

Statistic

11 Views
0 Rating
0 Favorite
0 Share
error: Content is protected !!