ಕೊಪ್ಪಳ ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಶ್ರೀ ನಗರಗಡ್ಡಿ ಮಠವುತುಂಗಭದ್ರಾ ನದಿಯ ಒಂದು ನಡುಗಡ್ಡೆಯಲ್ಲಿ ಸುಮಾರು 12 ನೇ ಶತಮಾನದಲ್ಲಿಸ್ಥಾಪಿತಗೊಂಡಿದ್ದು ಈ ಭಾಗದಲ್ಲಿ ಧಾರ್ಮಿಕ ಕಾರ್ಯಗಳನ್ನು ಮುನ್ನಡೆಸಿಕೊಂಡುಬರುತ್ತಿದೆ. ಶ್ರೀಮಠವು ಹಂಪಿ-ಹುಲಗಿಗಳ ನಡುವೆ ತುಂಗಭದ್ರಾ ನದಿಯಲ್ಲಿರುವ ಅನೇಕಚಿಕ್ಕಪುಟ್ಟ ನಡುಗಡ್ಡೆಗಳಲ್ಲಿ ಒಂದಾದ ಮಹಮ್ಮದನಗರ ಸಮೀಪದ ನಡುಗಡ್ಡೆಯಲ್ಲಿದೆ. ಈನಡುಗಡ್ಡೆಯು ಸುಮಾರು 30 ಎಕರೆಗಳಷ್ಟಿದ್ದು ಅತ್ಯಂತ ಪ್ರಶಾಂತವಾದ ಸ್ಥಳವಾಗಿದೆ.ಗುಲಬರ್ಗಾ ಜಿಲ್ಲೆಯ ಆಳಂದ ತಾಲ್ಲೂಕಿನ ಸಾಲೇಗಾಂವ ಗ್ರಾಮದ ಅಲ್ಲಮಪ್ರಭುದೇಶಿಕೇಂದ್ರದ ಸಂಪ್ರದಾಯದ ಷಟ್ಸ್ಥಲ ಸಾರ್ವಭೌಮರಾದ ಶ್ರೀ ಶಾಂತಲಿಂಗಮಹಾಸ್ವಾಮಿಗಳು ದೇಶ ಸಂಚಾರ ಮಾಡುತ್ತಾ ಹಂಪಿಗೆ ಬಂದರು. ಹಂಪಿಯ ಸಮೀಪದಈ ನಡುಗಡ್ಡೆ ಅವರಿಗೆ ತುಂಬಾ ಮೆಚ್ಚುಗೆಯಾಯಿತು. ಇಲ್ಲಿರುವ ಗುಹೆಯಲ್ಲಿ ಹಲವು ದಿನಅನುಷ್ಠಾನಗೊಂಡರು. ಅವರ ತಪೋಮಹಿಮೆಗೆ ಆಕರ್ಷಿತರಾದ ಭಕ್ತರು ಅವರಿಗೆ ಇಲ್ಲಿಯೇಒಂದು ಮಠ ಕಟ್ಟಿಸಿಕೊಟ್ಟಿದ್ದು ಅಂದಿನಿಂದ ಮಠ ಬೆಳೆಯಲಾರಂಭಿಸಿತು.ಕರ್ತೃಗುರುಗಳ ನಂತರ ಸುಮಾರು 14 ಜನ ಶ್ರೀಗಳು ಶ್ರೀಮಠದ ಅಧಿಕಾರವನ್ನುವಹಿಸಿಕೊಂಡು ಶ್ರೀಮಠವನ್ನು ಶ್ರೀಮಂತಗೊಳಿಸಿದ್ದಾರೆ. ತಮ್ಮಗಳ ಘನ ವ್ಯಕ್ತಿತ್ವದಪ ್ರಭಾವದಿಂದ ಅಸಂಖ್ಯಾತ ¨s Àಕ ್ತರನ್ನು ಪಡೆದುಕೊಂಡಿದ್ದ ಶ್ರೀಗಳು ಸದಾಸಂಚಾರದಲ್ಲಿರುತ್ತಿದ್ದರು. ಹೀಗೆಯೇ ಸಂಚಾರದಲ್ಲಿದ್ದ ಸಮಯದಲ್ಲಿ ಅಲ್ಲಲ್ಲೇ ಶಾಖಾಮಠಗಳನ್ನು ಸ್ಥಾಪಿಸುತ್ತಾ ಆ ಮಠಗಳಲ್ಲಿಯೇ ಲಿಂಗೈಕ್ಯರಾಗಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಶಿವಶಾಂತವೀರ ಸ್ವಾಮಿಗಳು ಮಠದ ಏಳಿಗೆಗಾಗಿಬಹಳಷ್ಟು ಶ್ರಮಿಸಿದ ಮಹಾಮಹಿಮರು. ಇಂತಹ ಮಹಾಮಹಿಮ ಶ್ರೀಗಳು ತಮ್ಮಜೀವಿತಾವಧಿಯಲ್ಲಿಯೇ ಈಗಿನ ಶ್ರೀಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಅಧಿಕಾರಕ್ಕೆತಂದಿರುತ್ತಾರೆ. ಈಗಿನ ಶ್ರೀಗಳಾದ ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳು 1995ರ ಎಪ್ರಿಲ್13ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಪರಂಪರೆಯ ಗುರುಗಳ ಹಾದಿಯಲ್ಲಿಯೇಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಶ್ರೀಗಳು ಹಿಂದಿನಶ್ರೀಗಳ ಆಚರಣೆಗಳನ್ನು ಭಕ್ತರ ಸಹಕಾರದೊಂದಿಗೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಾಂತಲಿಂಗೇಶ್ವರ ಸ್ವಾಮಿಗಳು
Date of Birth :
4-1-1978
Place :
ನಾರಾಯಣಪುರ, ಗದಗ ತಾ||
Pattadikara :
13-4-1995
Photo :
Programs
ಮಕರ ಸಂಕ್ರಮಣಕ್ಕೆ ವಿಶೇಷ ಪೂಜಾ ಕಾರ್ಯಕ್ರಮ.
ಚೈತ್ರ ಶುದ್ಧ ಚತುರ್ದಶಿಗೆ ಶ್ರೀ ರಥೋತ್ಸವದ ಅಂಗವಾಗಿ ಅಯ್ಯಾಚಾರ, ಲಿಂಗದೀಕ್ಷೆ, ಧರ್ಮಸಭೆ, ಸಾಮೂಹಿಕ ವಿವಾಹಗಳು ಹಾಗೂ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
Photos
Full Address Kannada
ಶ್ರೀ ನಗರಗಡ್ಡಿಮಠ, ಮಹಮದ್ ನಗರ,
ಹೊಸಬಂಡಿ ಹಾರ್ಲಪುರ ಪೋಸ್ಟ್ - 584131
ಕೊಪ್ಪಳ ತಾ||, ಜಿ||