Shree Muttina Pende Hirematha

Shree Muttina Pende Hirematha Claimed

ಶ್ರೀ ಮುತ್ತಿನ ಪೆಂಡೆ ಹಿರೇಮಠ

Average Reviews

Description

ಶ್ರೀ ಮುತ್ತಿನ ಪೆಂಡೆ ಹಿರೇಮಠ (ಕಲ್ಮಠ)

ಕರ್ತೃ – ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು

ಮಾನ್ವಿ ಪಟ್ಟಣದಲ್ಲಿ ಸುಮಾರು 550 ವರ್ಷಗಳ ಹಿಂದೆ ಶ್ರೀ ಷ.ಬ್ರ. ಗುರುಲಿಂಗಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪನೆಗೊಂಡಿರುವ ಶ್ರೀಶೈಲ ಪೀಠದ ಶಾಖಾಮಠವಾದ ಶ್ರೀಮುತ್ತಿನಪೆಂಡೆ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈಭಾಗದ ಪ್ರಮುಖ ದಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ.ಶ್ರೀ ಗುರುಲಿಂಗ ಶಿವಾಚಾರ್ಯರು ತಪೋಧನರೂ, ಲಿಂಗ ಪೂಜಾನಿಷ್ಠರೂ,ಮೌನವ್ರತಪಾಲಕರೂ ಆಗಿದ್ದು ಯಾರಿಗೂ ದರ್ಶನ ನೀಡದೆ ˉÉೂೀಕಕˉÁ್ಯಣಾರ್ಥಲಿಂಗಪೂಜೆಯಲ್ಲಿ ಮಗ್ನರಾಗಿ ಸದಾಕಾಲ ಅನುಷ್ಠಾನದಲ್ಲಿರುತ್ತಿದ್ದರು. ಇಂತಹ ಮಹಾನ್ಶ್ರೀಗಳು ತಮ್ಮ ಕೊನೆಯ ದಿನಗಳಲ್ಲಿ ಶ್ರೀಮಠವನ್ನು ಸ್ಥಾಪಿಸಿ ಉತ್ತರಾಧಿಕಾರಿಗಳನ್ನು ಹೆಸರಿಸಿಲಿಂಗೈಕ್ಯರಾದರು. ಗುರುಗಳ ಅಪ್ಪಣೆಯಂತೆ ಭಕ್ತರೇ ಗುರುಗಳ ಸಮಾಧಿ ಗದ್ದುಗೆ ನಿರ್ಮಿಸಿಶ್ರೀಮಠವನ್ನು ಸ್ಥಾಪಿಸಿದ್ದು ಶ್ರೀ ವಿರೂಪಾಕ್ಷ ಶಿವಾಚಾರ್ಯರನ್ನು ಪಟ್ಟಕ್ಕೆ ತಂದರೆನ್ನˉÁಗಿದೆ.ಈ ರೀತಿ ಬೆಳೆದ ಶ್ರೀಮಠದ ಪರಂಪರೆಯು ಶ್ರೀಮಂತವಾಗಿದ್ದು ಶ್ರೀಮಠದ ಪಟ್ಟಕ್ಕೆಬಂದ ಎˉÁ್ಲ ಶ್ರೀಗಳು ಲಿಂಗಪೂಜಾನಿಷ್ಠರಾಗಿ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನುನಡೆಸಿಕೊಂಡು ಬಂದಿದ್ದಾರೆ. ಪರಂಪರೆಯಲ್ಲಿ ಬರುವ 6ನೇ ಶ್ರೀಗಳಾದ ಶ್ರೀ ಎರಡನೇವಿರೂಪಾಕ್ಷ ಶಿವಾಚಾರ್ಯರು ಶ್ರೀಮಠದ ಜೀರ್ಣೋದ್ಧಾರ ಮಾಡಿದ್ದಾರೆ ಎನ್ನˉÁಗಿದೆ.ತದನಂತರ 8ನೇ ಶ್ರೀಗಳಾದ ಶ್ರೀ ಎರಡನೇ ಮಹಾಂತ ಶಿವಾಚಾರ್ಯರು ಪ್ರಭಾವಿಗಳಾಗಿದ್ದು, ಹೈದರಾಬಾದ್ ನವಾಬನು ಗುರುಗಳ ಪ್ರಭಾವಕ್ಕೆ ಮಣಿದು ಹದಿನೈದು ಎಕರೆಭೂಮಿಯನ್ನು ಉಂಬಳಿಯಾಗಿ ನೀಡಿದ್ದಾನೆ. ಅಲ್ಲದೆ ಗುರುಗಳ ಕೃಪೆಗೆ ಪಾತ್ರರಾಗಿದ್ದ ಭಕ್ತರುಮೂವತ್ತು ಎಕರೆಗೂ ಹೆಚ್ಚಿನ ಭೂಮಿಯನ್ನು ಶ್ರೀಮಠಕ್ಕೆ ದಾನ ಮಾಡಿ ಶ್ರೀಮಠವುಆರ್ಥಿಕವಾಗಿ ಸ್ವಾವಲಂಬಿಯಾಗಲು ಕಾರಣರಾದರು. ನಂತರ ಬಂದ ಶ್ರೀ ಸಂಗಮೇಶ್ವರಶಿವಾಚಾರ್ಯರು ಮಾನ್ವಿ ಶಾಖಾಮಠವಾದ ಹರವಿಯಲ್ಲಿ ವಾಸ್ತವ್ಯ ಹೂಡಿ ಸುತ್ತಲಿನಗ್ರಾಮಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ಸ್ವತಃಕೃಷಿಕಾಯಕಯೋಗಿಗಳಾಗಿದ್ದು ಶ್ರೀಮಠದ ಜಮೀನನ್ನು ಅಭಿವೃದ್ಧಿಪಡಿಸಿ ತಾವೇ ಉತ್ಪಾದನೆತೆಗೆಯತೊಡಗಿದರು. ಶ್ರೀಗಳು ತಮ್ಮ ಕಾಯಕಯೋಗದಿಂದ ಶ್ರೀಮಠವನ್ನುಶ್ರೀಮಂತಗೊಳಿಸಿದ್ದಲ್ಲದೆ ಶ್ರೀಮಠವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದರು. ಶ್ರೀಗಳುಶ್ರೀಮಠಕ್ಕೆ ಶ್ರೀಶೈಲ ಜಗದ್ಗುರುಗಳನ್ನು ಕರೆಸಿ ಅಭೂತಪೂರ್ವವಾದ ಕಾರ್ಯಕ್ರಮವನ್ನುನಡೆಸಿ ಧರ್ಮಪ್ರಚಾರವನ್ನು ಕೈಗೊಂಡರು. ಹೀಗೆ ಶ್ರೀಮಠವನ್ನು ಧಾರ್ಮಿಕ ಹಾಗೂಸಾಮಾಜಿಕವಾಗಿ ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದ ಶ್ರೀಗಳು 1962ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಮೂರ್ತಿ ಶಿವಾಚಾರ್ಯರು 1967ರಲ್ಲಿಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಹಿಂದಿನ ಶ್ರೀಗಳ ಹಾದಿಯಲ್ಲಿಯೇಸಾಗುತ್ತಿದ್ದಾರೆ. ಸ್ವತಃ ಕಾಯಕಯೋಗಿಗಳಾದ ಶ್ರೀಗಳು ಶ್ರೀಮಠವನ್ನು ಹೆಚ್ಚಿನ ರೀತಿಯಲ್ಲಿಅಭಿವೃದ್ಧಿಗೊಳಿಸುತ್ತಿದ್ದಾರೆ. ಶ್ರೀಗಳು ಶಿವಯೋಗ ಮಂದಿರ, ಸೊˉÁಪುರ ಹಾಗೂಮಟಮಾರಿಗಳಲ್ಲಿ ಉನ್ನತ ವಿದ್ಯಾಭ್ಯಾಸ ಪೂರ್ಣಗೊಳಿಸಿದವರಾಗಿದ್ದು ತಮ್ಮ ಪಾಂಡಿತ್ಯಪೂರ್ಣ ಉಪದೇಶಗಳಿಂದ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.ಶ್ರೀ ಶಿವಮೂರ್ತಿ ಶಿವಾಚಾರ್ಯರು ತಮ್ಮ ಧಾರ್ಮಿಕ ಪರಂಪರೆ ಮತ್ತುಪ್ರಗತಿಪರ ವಿಚಾರಧಾರೆಯೊಂದಿಗೆ ಶ್ರೀಮಠದಲ್ಲಿ ಗಣೇಶ ಉತ್ಸವಕ್ಕೆ ಚಾಲನೆ ನೀಡಿದರು.ಶ್ರೀಗಳು ಕˉÁ್ಯಣದ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವೀರಶೈವ ಧರ್ಮೀಯರೊಂದಿಗೆ ಇತರರಿಗೂ ಅವಕಾಶ ಕಲ್ಪಿಸಿದ್ದಾರೆ. ಸಕಲ ಧರ್ಮಗಳ ಧಾರ್ಮಿಕ ಗುರುಗಳೊಂದಿಗೆ ಸಂಪರ್ಕದಲ್ಲಿರುವ ಶ್ರೀಗಳು ನವರಾತ್ರಿ ಸಂದರ್ಭದಲ್ಲಿ ಸರ್ವಧರ್ಮ ನಾಯಕರಭಾವಚಿತ್ರಗಳ ಮೆರವಣಿಗೆ ಮುಖಾಂತರ ಕೋಮು ಸೌಹಾರ್ದತೆಗೆ ನಾಂದಿ ಹಾಡಿದರು.ಶ್ರೀಗಳು ಮಠದ ವತಿಯಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆ ಮೂಲಕಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಹೀಗೆ ಧಾರ್ಮಿಕ, ಸಾಮಾಜಿಕ,ಸಾಂಸ್ಕøತಿಕ ಹಾಗೂ ಶೈಕ್ಷಣಿಕವಾಗಿ ಶ್ರೀಮಠವನ್ನು ಅಭಿವೃದ್ಧಿಗೊಳಿಸುತ್ತಾ ಸಾಗಿರುವ ಶ್ರೀಗಳುಇಂದು ನಮ್ಮ ನಡುವೆ ಇರುವ ಮಹಾನ್ ಚೇತನವಾಗಿದ್ದಾರೆ. ಶ್ರೀಗಳು ಸಾಹಿತ್ಯದಲ್ಲೂ ಆಸಕ್ತಿಹೊಂದಿದ್ದು ಶ್ರೀಮಠದ ಕಲ್ಮಠ ಪ್ರಕಾಶನದ ವತಿಯಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೆಯೇ ಶ್ರೀ ವಿರೂಪಾಕ್ಷೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದಸ್ಥಾಪನೆಗೂ ಕಾರಣರಾಗಿದ್ದಾರೆ. ಶ್ರೀಗಳ ಈ ಎˉÁ್ಲ ಸಾಧನೆಗಳನ್ನು ಗುರುತಿಸಿದ ಅಮೇರಿಕಾದಕಾಸ್ಮೋಪಾಲಿಟನ್ ಯೂನಿವರ್ಸಿಟಿಯವರು ಶ್ರೀಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನುನೀಡಿ ಗೌರವಿಸಿದ್ದಾರೆ. ಹಾಗೆಯೇ ಇಂಟರ್ನ್ಯಾಶನˉï ಪಬ್ಲಿಷಿಂಗ್ ಹೌಸ್, ನ್ಯೂಡೆಲ್ಲಿಇವರು ಬೆಸ್ಟ್ ಸಿಟಿಜನ್ ಆಫ್ ಇಂಡಿಯ ಪ್ರಶಸ್ತಿ ನೀಡಿ ಗೌರವಿಸಿರುವುದು ಕನ್ನಡ ನಾಡಿಗೆಹೆಮ್ಮೆಯ ಸಂಗತಿಯಾಗಿದೆ.

ವಿಶೇಷತೆ:

ಯಾತ್ರಿ ನಿವಾಸ ಮತ್ತು ಧ್ಯಾನಮಂದಿರ

(ಒಂದು ಲಕ್ಷ ಶಿವಲಿಂಗಗಳ ಮಂದಿರ)

Swamiji

Swamiji Name :
ಶ್ರೀ ಷ.ಬ್ರ. ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1967
Place :
ಹರವಿ, ಮಾನ್ವಿ ತಾ||
Pattadikara :
4-9-1946
Photo :

Programs

UuÀ Éೀಶ ಹಬ್ಬ ಆಚರಣೆ. zಸ Àರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ, ಜಾತ್ರಾ ಮಹೋತ್ಸವ, ವಿವಿಧ ಕಾರ್ಯಕ್ರಮಗಳು. ಮಾಘಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಶಾª್ರÀಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಹರವಿಯಲ್ಲಿ ಪುರಾಣ ಪ್ರವಚನ. ªಷ ರ್Àದಲ್ಲಿ ಒಂದುಬಾರಿ ಕೋಟಿ ಜಪ ಅನುಷ್ಠಾನ.

Institutions

ಸಂಸ್ಕøತ / ಸಂಗೀತ ಪಾಠಶಾˉÉ. ಕಿರಿಯ / ಹಿರಿಯ ಪ್ರಾಥಮಿಕ / ಪೌq್ರsÀ ಶಾˉÉ. ¥ದ Àವಿ ಪೂರ್ವ / ¥ದ Àವಿ ಕಾˉÉೀಜು ಆಯುರ್ವೇದ ಮೆಡಿಕˉï ಕಾˉÉೀಜು & ಆಸ್ಪತ್ರೆ. ಡಿ.ಎಡ್. ಕಾˉÉೀಜು ವಿದ್ಯಾರ್ಥಿ / ವಿದ್ಯಾರ್ಥಿನಿ ನಿಲಯಗಳು

Photos

Full Address Kannada

ಶ್ರೀ ಮುತ್ತಿನಪೆಂಡೆ ಹಿರೇಮಠ (ಕಲ್ಮಠ) ಮಾನ್ವಿ - 584 123 ಮಾನ್ವಿ ತಾ||, ರಾಯಚೂರು ಜಿ||

Map

Near by Places

ಚೀಪಲಕರ್ವಿ - 11 ಕಿ.ಮೀ. ಸಿಂಧನೂರು - 44 ಕಿ.ಮೀ. ರಾಯಚೂರು - 55 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!