ಕರ್ತೃ – ಶ್ರೀ ಷ.ಬ್ರ. ಮುತ್ತಿನ ಕಂತೆಯ ಶಿವಾಚಾರ್ಯ ಸ್ವಾಮಿಗಳು
ಹಾನಗಲ್ಲು ತಾಲ್ಲೂಕು ಕೇಂದ್ರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಅಕ್ಕಿಆಲೂರಿನಲ್ಲಿ ಶ್ರೀ ಮುತ್ತಿನ ಕಂತೆಯ ಶಿವಾಚಾರ್ಯ ಮಹಾಸ್ವಾಮಿಗಳಿಂದಸ್ಥಾಪಿತಗೊಂಡಿರುವ ಪ್ರಾಚೀನ ಶ್ರೀ ಮುತ್ತಿನ ಕಂತಿ ಮಠವು ಅಸ್ಥಿತ್ವದಲ್ಲಿದ್ದು ತಮ್ಮ ಧಾರ್ಮಿಕಆಚರಣೆಗಳ ಮೂಲಕ ಈ ಭಾಗದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದೆ.ಶ್ರೀ ಮಠವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದರೂ ಅದರ ಬಗ್ಗೆನಿಖರತೆಯಿಲ್ಲ. ಹಾಗೆಯೇ ಶ್ರೀ ಮಠದಲ್ಲಿ ಶ್ರೀ ಮುತ್ತಿನ ಕಂತೆಯ ಶಿವಾಚಾರ್ಯ ಸ್ವಾಮಿಗಳನಂತರದ ಗುರುಗಳ ಬಗ್ಗೆ ಸೂಕ್ತ ದಾಖಲೆಗಳು ಲಭ್ಯವಿಲ್ಲದಿರುವುದು ದುರದೃಷ್ಟಕರ.ಕರ್ತೃಗುರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲವಾದರೂ ಶ್ರೀಗಳು ಶಿವಪೂಜಾನಿಷ್ಠರಾಗಿದ್ದು ತಮ್ಮ ಅನುಷ್ಠಾನ ಬಲದಿಂದ ಹಾಗೂ ತಮ್ಮ ಧಾರ್ಮಿಕ ಆಚರಣೆಗಳಿಂದಾಗಿಶ್ರೀಮಠವನ್ನು ಸ್ಥಾಪಿಸಿ ಶ್ರೀಮಠಕ್ಕೆ ಭಕ್ತರನ್ನು ಸೆಳೆದಿದ್ದಾರೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಚಂದ್ರಶೇಖರ ದೇವರು ಇದೇ ಅಕ್ಕಿ ಆಲೂರಿನಲ್ಲಿ1989ರಲ್ಲಿ ಜನಿಸಿದವರಾಗಿದ್ದು, ಮಠಕ್ಕೆ ನಿಯುಕ್ತಿಗೊಂಡಾಗ ಶ್ರೀಮಠವು ಪೂರ್ಣಜೀರ್ಣಗೊಂಡಿದ್ದು ಶ್ರೀಮಠಕ್ಕೆ ಕಟ್ಟಡ ಹಾಗೂ ಮಠದ ಸುತ್ತಲೂ ಅಭಿವೃದ್ಧಿ ಕಾರ್ಯಗಳನ್ನುಕೈಗೊಳ್ಳುವತ್ತ ಗಮನ ಹರಿಸಿದ್ದಾರೆ. ಹಾಗೆಯೇ ಶ್ರೀಗಳು ಹೇಳುವ ಪ್ರಕಾರ ಸಮಸ್ತ ‘ಗೌಳಿ’ಸಮುದಾಯದವರು ಶ್ರೀ ಮಠದ ಶಿಷ್ಯರು.ಶ್ರೀ ಮಠದಲ್ಲಿ ದೈನಂದಿನ ಪೂಜಾ ಕಾರ್ಯಕ್ರಮಗಳೊಂದಿಗೆ ಧನುರ್ಮಾಸದಲ್ಲಿವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ವೈಶಾಖಮಾಸದಲ್ಲಿ ಶ್ರೀ ಹಿರಿಯ ಗುರುಗಳಪುಣ್ಯಾರಾಧನೆ ಮಹೋತ್ಸವ ಜರುಗುತ್ತದೆ.
Swamiji
Swamiji Name :
ಪೂಜ್ಯ ಶ್ರೀ ಚಂದ್ರಶೇಖರ ದೇವರು
Date of Birth :
4-3-1989
Place :
ಅಕ್ಕಿ ಆಲೂರು, ಹಾನಗಲ್ಲು ತಾ||
Photo :
Programs
ಶಿವರಾತ್ರಿಯಲ್ಲಿ ವಿಶೇಷ ಪೂಜೆ.
ಧನುರ್ಮಾಸದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ.
ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ವೈಶಾಖ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
Full Address Kannada
ಶ್ರೀ ಮುತ್ತಿನ ಕಂತಿ ಮಠ
ಅಕ್ಕಿ ಆಲೂರು - 581 102
ಹಾನಗಲ್ಲು ತಾ., ಹಾವೇರಿ ಜಿ.