Shree Murusavira Viraktamatha

Shree Murusavira Viraktamatha Claimed

ಶ್ರೀ ಮೂರುಸಾವಿರ ವಿರಕ್ತಮಠ

Average Reviews

Description

ಶ್ರೀ ಮೂರುಸಾವಿರ ವಿರಕ್ತಮಠ, ಉಪ್ಪಿನಬೆಟಗೇರಿ

ಕರ್ತೃ ಪೂಜ್ಯ ಶ್ರೀ ಗುರು ವಿರೂಪಾಕ್ಷ ಮಹಾಸ್ವಾಮಿಗಳು

ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯದರಕ್ಷಣೆಯ ಹೊಣೆ ಹೊತ್ತ ಚನ್ನಬಸವಣ್ಣನವರು ಉಳವಿಗೆ ತೆರಳುತ್ತಿರುವಾಗ ‘ಲವಣಗಿರಿ’ಅಂದರೆ ಈಗಿನ ಉಪ್ಪಿನ ಬೆಟಗೇರಿಯಲ್ಲಿ ಕೆಲಕಾಲ ತಂಗಿದ್ದು, ಕೆಲ ತಾಡೋಲೆಗಳರಕ್ಷಣೆಗಾಗಿ ಶ್ರೀಮಠವನ್ನು ಸ್ಥಾಪಿಸಿದರೆಂದು, ಕ್ರಮೇಣ ಆ ಮಠವೇ ಶ್ರೀ ಮೂರುಸಾವಿರವಿರಕ್ತ ಮಠವೆಂದು ಹೆಸರಾಯಿತೆಂದು ಹೇಳಲಾಗುತ್ತದೆ.ಶ್ರೀಮಠದ ಪ್ರಥಮ ಪೀಠಾಧ್ಯಕ್ಷರಾದ ಶ್ರೀಗುರು ವಿರೂಪಾಕ್ಷ ಮಹಾಸ್ವಾಮಿಗಳುಬಸವಾದಿ ಪ್ರಮುಖರ ಆಶಯದಂತೆ ಕಾಯಕದಾಸೋಹ ಮತ್ತು ಸಮಾನತೆಯ ತತ್ವವನ್ನುಭಕ್ತರಿಗೆ ಉಪದೇಶಿಸುತ್ತಿದ್ದರು. ಶ್ರೀಗಳು ಹಳಿಯಾಳ, ಗರಗ, ದೊಡ್ಡವಾಡ, ಲೋಕೂರ,ತೇಗೂರು ಮುಂತಾದ ಗ್ರಾಮಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸಿ ಧರ್ಮ ಜಾಗೃತಿಮಾಡಿದ್ದಲ್ಲದೇ ಕಿತ್ತೂರು ಸಂಸ್ಥಾನ ಮಹಾರಾಜರಿಗೆ ಮಾರ್ಗದರ್ಶಕರಾಗಿದ್ದರೆಂದುತಿಳಿದುಬರುತ್ತದೆ. ಶ್ರೀಗಳ ನಂತರದ ಎಲ್ಲಾ ಶ್ರೀಗಳು ಕರ್ತೃಗುರುಗಳ ಪರಂಪರೆಯನ್ನುಮುಂದುವರೆಸಿಕೊಂಡು ಬಂದಿದ್ದು ಶ್ರೀಮಠದ ಜೊತೆಯಲ್ಲಿ ಸಮಾಜದ ಸಾಮರಸ್ಯಕ್ಕೆ ಒತ್ತುನೀಡಿದ್ದಾರೆ.ಶ್ರೀಮಠದ ಹಿಂದಿನ ಗುರುಗಳಾದ ಲಿಂಗೈಕ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳುಈ ಭಾಗದ ಬಡ ಮಕ್ಕಳ ಶಿಕ್ಷಣಕ್ಕಾಗಿ ಬಹುವಾಗಿ ಶ್ರಮಿಸಿದ್ದು ಅದಕ್ಕೋಸ್ಕರ ವಿದ್ಯಾದಾನಸಮಿತಿಗೆ ಎರಡು ಎಕರೆ ಜಮೀನನ್ನು ದಾನ ಕೊಟ್ಟು ಮಹದುಪಕಾರ ಮಾಡಿದ್ದಾರೆ. ಹೀಗೆಸಮಾಜದ ಉದ್ಧಾರಕ್ಕಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮಠಕ್ಕೆ 7ನೇ ಪೀಠಾಧಿಪತಿಗಳಾಗಿಆಗಮಿಸಿದ ಇಂದಿನ ಶ್ರೀ ಮ.ನಿ.ಪ್ರ. ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಶ್ರೀಮಠದಜೀರ್ಣೋದ್ಧಾರ ಮತ್ತು ಎಲ್ಲಾ ಶಾಖಾಮಠಗಳ ಅಭಿವೃದ್ಧಿಗೋಸ್ಕರ ಶ್ರಮಿಸುತ್ತಿದ್ದಾರೆ.ಶ್ರೀಗಳು ತಮ್ಮ ಪಾಠ ಪ್ರವಚನಗಳೊಂದಿಗೆ ಸಮಾಜದಲ್ಲಿ ಧರ್ಮಜಾಗೃತಿಗೊಳಿಸುತ್ತಾ ಶ್ರೀಮಠದಲ್ಲಿ ಶ್ರೀ ಕುಮಾರೇಶ್ವರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಈ ಭಾಗದಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಹಾಗೂ ಶ್ರೀಮಠದಲ್ಲಿ ಬಡ ಮಕ್ಕಳಿಗೆಉಚಿತ ವಸತಿ, ಪ್ರಸಾದ ಮತ್ತು ಶಿಕ್ಷಣ ವೆಚ್ಚವನ್ನು ಭರಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು
Date of Birth :
13-6-1974
Place :
ಮಾದನ ಹಿಪ್ಪರಗಿ,ಆಳಂದ ತಾ||
Pattadikara :
12-12-2002
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಚೈತ್ರ ಶುದ್ಧ ಪಂಚಮಿ ದಿನದಂದು ಶ್ರಿ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ, “ಲವಣಗಿರಿ ಉತ್ಸವ” (ಮೂರು ದಿನಗಳ ಪ್ರವಚನ, ಜಂಗಮೋತ್ಸವ, ಕರ್ತೃಗದ್ದುಗೆಗೆ ಮಹಾರುದ್ರಾಭಿಷೇಕ, ಸಾಮಾಜಿಕ ನಾಟಕ ನಂತರದ ಮೂರುದಿನ ಬಯಲು ಕುಸ್ತಿಗಳ ಆಯೋಜನೆ)

Institutions

ಶ್ರೀ ಕುಮಾರೇಶ್ವರ ಶಿಕ್ಷಣ ಸಂಸ್ಥೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ.

Photos

Full Address Kannada

ಶ್ರೀ ಮೂರುಸಾವಿರ ವಿರಕ್ತಮಠ
ಉಪ್ಪಿನ ಬೆಟಗೇರಿ - 581 206
ಧಾರವಾಡ ತಾ||, ಜಿ||

Map

Near by Places

ಧಾರವಾಡ - 18 ಕಿ.ಮೀ.
ಹುಬ್ಬಳ್ಳಿ - 37 ಕಿ.ಮೀ.
ಬೆಳಗಾವಿ - 73 ಕಿ.ಮೀ.

Statistic

9 Views
0 Rating
0 Favorite
0 Share
error: Content is protected !!