Shree Murugharajendra Kalmatha, Tiluvalli

Shree Murugharajendra Kalmatha, Tiluvalli Claimed

ಶ್ರೀ ಮುರುಘರಾಜೇಂದ್ರ ಕಲ್ಮಠ, ತಿಳುವಳ್ಳಿ

Average Reviews

Description

ಶ್ರೀ ಮುರುಘರಾಜೇಂದ್ರ ಕಲ್ಮಠ, ತಿಳುವಳ್ಳಿ

ಕರ್ತೃ ಶ್ರೀ ಕಟ್ಟಿಗೆಹಳ್ಳಿ ರಾಚೋಟೇಶ್ವರ ಮಹಾಸ್ವಾಮಿಗಳು

ಶೂನ್ಯ ಪೀಠದ ಪರಂಪರೆಯಲ್ಲಿ ತನ್ನದೇ ಆದ ಇತಿಹಾಸವನ್ನು ಮತ್ತು ಅದರದೇಆದ ಮಹತ್ವವನ್ನು ಹೊಂದಿರುವ ಶ್ರೀ ಮುರುಘರಾಜೇಂದ್ರ ಕಲ್ಮಠವು ಹಾನಗಲ್ಲು ತಾಲ್ಲೂಕಿನತಿಳುವಳ್ಳಿ ಗ್ರಾಮದಲ್ಲಿದ್ದು ಶೂನ್ಯಪೀಠದ ಪರಂಪರೆಯಲ್ಲಿ ಬರುವ ಶ್ರೀ ಕಟ್ಟಿಗೆಹಳ್ಳಿರಾಚೋಟೇಶ್ವರ ಮಹಾಸ್ವಾಮಿಗಳವರ ಲಿಂಗೈಕ್ಯ ಸ್ಥಳವಾಗಿದೆ. ಇದರಿಂದಾಗಿ ಶ್ರೀಮಠದಕತೃಗುರುಗಳು ಶ್ರೀ ಕಟ್ಟಿಗೆಹಳ್ಳಿ ರಾಚೋಟೇಶ್ವರ ಮಹಾಸ್ವಾಮಿಗಳೆಂದು ಹೇಳಬಹುದು.ಕತೃ ಗುರುಗಳ ಕತೃತ್ವ ಶಕ್ತಿಯ ಜೊತೆಯಲ್ಲಿ ಶೂನ್ಯಪೀಠ ಪರಂಪರೆಯಚಿತ್ರದುರ್ಗ ಮುರುಘಾ ಮಠದ 8ನೇ ಜಗದ್ಗುರುಗಳಾದ ಶ್ರೀ ಒಪ್ಪತ್ತಿನ ಚನ್ನವೀರ ಸ್ವಾಮಿಗಳುಇಲ್ಲೇ ಲಿಂಗೈಕ್ಯರಾಗಿವುದರಿಂದ ಇಬ್ಬರೂ ಗುರುಗಳ ತಪೋಶಕ್ತಿಯ ಫಲವಾಗಿ ಶ್ರೀಮಠವುಮುಂಚೂಣಿಗೆ ಬಂದಿದೆ.ಸುಮಾರು 1620-1640 ರ ಸಮಯದಲ್ಲಿ ಜೀವಿಸಿ ತಮ್ಮ ಅಪಾರವಾದ ವಿದ್ವತ್ಮತ್ತು ಅನುಷ್ಠಾನ ಶಕ್ತಿಯಿಂದ ಹೆಸರಾಗಿದ್ದ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು ದೇಶಸಂಚಾರ ಕೈಗೊಂಡು ಕೊನೆಯಲ್ಲಿ ತಿಳುವಳ್ಳಿಗೆ ಬರುತ್ತಾರೆ. ಇಲ್ಲಿಯ ಪರಿಸರ ಹಾಗೂಭಕ್ತರ ಭಕ್ತಿಯ ಪ್ರಭಾವದಿಂದಾಗಿ ಶ್ರೀಗಳು ಇಲ್ಲಿಯೇ ದೀರ್ಘಕಾಲ ನೆಲೆಗೊಂಡು ಲಿಂಗೈಕ್ಯರಾದರು. ಅಂದಿನಿಂದ ಇಂದಿನವರೆವಿಗೂ ಶ್ರೀಮಠವು ಹಾವೇರಿ ಜಿಲ್ಲೆಯ ಪ್ರಮುಖಮಠವಾಗಿ ಬೆಳೆದುಬಂದಿದೆ.ಬಹುಕಾಲದಿಂದಲೂ ಖಾಲಿ ಉಳಿದಿದ್ದ ಮಠಕ್ಕೆ 2011ರಲ್ಲಿ ಉತ್ತರಾಧಿಕಾರಿಗಳಾಗಿಬಂದ ಶ್ರೀ ಬಸವ ನಿರಂಜನ ಸ್ವಾಮಿಗಳು ಮಠವನ್ನು ಧಾರ್ಮಿಕ ಆಚರಣೆಗಳ ಜೊತೆಯಲ್ಲಿಶೈಕ್ಷಣಿಕವಾಗಿ ಸಾಮಾಜಿಕವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿ ಅಮವಾಸ್ಯೆಗೆ “ಶರಣ ಸಂಗಮ” ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಹಾಗೂ ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳ ಜೊತೆಯಲ್ಲಿಯೇ “ಚಿಂತನ ಕಾರ್ಯಕ್ರಮ” ನಡೆಯುತ್ತದೆ ಮತ್ತು ಬಸವ ಜಯಂತಿಯಲ್ಲಿ ವಿವಿಧಸಾಂಸ್ಕøತಿಕ ಹಾಗೂ ಸಾಮಾಜಿಕ ಚರ್ಚಾ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದ್ದುಅಪಾರ ಸಂಖ್ಯೆಯನ್ನು ಭಕ್ತರನ್ನು ಸೆಳೆದು ಪ್ರಸಿದ್ಧಿಗೊಂಡಿದೆ.

Swamiji

Swamiji Name :
ಪೂಜ್ಯ ಶ್ರೀ ಬಸವ ನಿರಂಜನ ಸ್ವಾಮಿಗಳು
Date of Birth :
12-2-1990
Place :
ಮಲ್ಲಾಪುರ, ಹೊಸದುರ್ಗ ತಾ||
Pattadikara :
2011
Photo :

Programs

ಪ್ರತಿ ಅಮವಾಸ್ಯೆಗೆ 'ಶರಣ ಸಂಗಮ'.
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಮತ್ತು ಚಿಂತನ ಕಾರ್ಯಕ್ರಮ.
ಬಸವ ಜಯಂತಿ ಆಚರಣೆ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ಮುರುಘರಾಜೇಂದ್ರ ಕಲ್ಮಠ
ತಿಳುವಳ್ಳಿ - 581 120
ಹಾನಗಲ್ಲು ತಾ., ಹಾವೇರಿ ಜಿ.

Map

Near by Places

ಕೂಸನೂರು - 7 ಕಿ.ಮೀ.
ಹಾನಗಲ್ಲು - 20 ಕಿ.ಮೀ.
ಹಾವೇರಿ - 28 ಕಿ.ಮೀ.

Statistic

14 Views
0 Rating
0 Favorite
0 Share
error: Content is protected !!