Shree Murughamatha, Dharawada

Shree Murughamatha, Dharawada Claimed

ಶ್ರೀ ಮುರುಘಾಮಠ, ಧಾರವಾಡ

Average Reviews

Description

ಶ್ರೀ ಮುರುಘಾಮಠ, ಧಾರವಾಡ

ಕರ್ತೃ – ಪೂಜ್ಯ ಶ್ರೀ ರುದ್ರಮುನಿ ಮಹಾಸ್ವಾಮಿಗಳು

ಸಾಂಸ್ಕøತಿಕ ಶ್ರೀಮಂತ ನಗರ ಧಾರವಾಡದ ಶ್ರೀ ಮುರುಘಾಮಠ ಸುಮಾರು 270ವರ್ಷಗಳ ಉಜ್ವಲ ಪರಂಪರೆಯನ್ನು ಹೊಂದಿದ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರ. ಶೂನ್ಯಪೀಠ ಪರಂಪರೆಯ ಶ್ರೀ ಇಮ್ಮಡಿ ಮುರುಘಾಸಿದ್ಧರ (1740) ಶಿಷ್ಯರಾದ ಶ್ರೀ ರುದ್ರಮುನಿಮಹಾಸ್ವಾಮಿಗಳಿಂದ ಸ್ಥಾಪಿತವಾಯಿತೆಂದು ಹೇಳಲಾಗುವ ಶ್ರೀ ಮುರುಘಾಮಠದಮುಂದಿನ 150 ವರ್ಷಗಳ ಇತಿಹಾಸ ಕಾಲಗರ್ಭದಲ್ಲಿ ಅಡಗಿಹೋಗಿದೆ.ಕೇವಲ ಒಂದು ಸಣ್ಣ ಮುರುಕುಮಂಟಪ, ಸುತ್ತಲೂ ಮುಳ್ಳಿನ ಕಂಟಿಗಳಿಂದಆವೃತವಾಗಿ ಕಗ್ಗಾಡಿನಂತಿದ್ದ ಶ್ರೀಮಠಕ್ಕೆ ಕಾಯಕಲ್ಪ ನೀಡಿ ಮರುಜೀವ ತುಂಬಿ ಅದನ್ನುಉತ್ತರೋತ್ತರವಾಗಿ ಬೆಳೆಸಿ ಅದರ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವರು 1916ರಲ್ಲಿಶ್ರೀಮಠದ ಅಧಿಕಾರವನ್ನು ವಹಿಸಿಕೊಂಡ ಅಮೃತಹೃದಯಿ ಪೂಜ್ಯ ಶ್ರೀ ಮೃತ್ಯುಂಜಯಅಪ್ಪಗಳವರು. 1888ರ ಏಪ್ರಿಲ್ 9ರಂದು ಜನಿಸಿದ ಶ್ರೀ ಮೃತ್ಯುಂಜಯಪ್ಪಗಳವರುಬಾಲ್ಯದಲ್ಲೇ ಆಧ್ಯಾತ್ಮಿಕತೆಯ ಒಲವು ಹೊಂದಿ ಧಾರವಾಡ ಹಿರೇಮಠ, ಹೂಲಿ ಮಠಗಳಲ್ಲಿಸಂಸ್ಕøತ ಅಭ್ಯಾಸವನ್ನು ಮಾಡಿದರು. ಶ್ರೀಗಳು ತಮ್ಮ 11ನೇ ವಯಸ್ಸಿನಲ್ಲಿಯೇ ಗದುಗಿನತೋಂಟದಾರ್ಯ ಮಠದಲ್ಲಿ ಸಂಸ್ಕøತ ಅಭ್ಯಾಸವನ್ನು ಮುಂದುವರೆಸಿ ನಂತರ ಬಂದುನಿಂತದ್ದು ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಮುಂದೆ.ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಸೇವೆಯಲ್ಲಿ ಪರಿಪಕ್ವಗೊಂಡಮೃತ್ಯುಂಜಯಪ್ಪಗಳು ಅವರಿಂದ ಆಶೀರ್ವಾದ ಪಡೆದು ದಾವಣಗೆರೆಯ ಶ್ರೀ ವಿರಕ್ತ ಮಠದಅಧಿಕಾರದಲ್ಲಿ ಮಠವನ್ನು ಅಭಿವೃದ್ಧಿ ಪಡಿಸಿ ಭಕ್ತರ ಒತ್ತಾಸೆಯ ಮೇರೆಗೆ ಧಾರವಾಡಕ್ಕೆಆಗಮಿಸುತ್ತಾರೆ. 1916ರಲ್ಲಿ ಶ್ರೀ ಮುರುಘಾಮಠದ ಅಧಿಕಾರ ಸ್ವೀಕರಿಸಿ ಜೀರ್ಣಾವಸ್ಥೆಯಲ್ಲಿದ್ದ ಶ್ರೀಮಠಕ್ಕೆ ಕಾಯಕಲ್ಪ ನೀಡಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಲ್ಲದೇ1917ರ ಮಾರ್ಚ್ 27ರಲ್ಲಿ ಶ್ರೀ ಮುರುಘರಾಜೇಂದ್ರ ಪ್ರಸಾದ ನಿಲಯವನ್ನು ಸ್ಥಾಪಿಸುತ್ತಾರೆ.ಶ್ರೀಗಳು ಪ್ರಸಾದ ನಿಲಯದ ಆರಂಭದಲ್ಲಿ ಹಳ್ಳಿಹಳ್ಳಿಗೆ ಹೋಗಿ, ಪಾದಚಾರಿಗಳಾಗಿಸಂಚರಿಸಿ ಧನಧಾನ್ಯ ಸಂಗ್ರಹಿಸಿದರು. ಪೂಜ್ಯರಿಗೆ ವಿದ್ಯಾರ್ಥಿಗಳೇ ಸರ್ವಸ್ವವಾಗಿದ್ದರು.ಅವರ ಭವಿಷ್ಯ ಜೀವನ ರೂಪಿಸುವುದೇ ಅವರ ಮಹಾಮಣಿಹವಾಗಿತ್ತು. ವಿದ್ಯಾರ್ಥಿಗಳಹೊಟ್ಟೆಗೆ ಪ್ರಸಾದ, ನೆತ್ತಿಗೆ ಜ್ಞಾನ, ಮನಸ್ಸಿಗೆ ಸಂಸ್ಕಾರ ನೀಡಿ ಶ್ರೇಷ್ಠ ಪ್ರಜೆಗಳನ್ನಾಗಿ ಮಾಡಿದರು.ಸಾವಿರಾರು ವಿದ್ಯಾರ್ಥಿಗಳು ಈ ಪ್ರಸಾದ ನಿಲಯದಲ್ಲಿ ಪ್ರಸಾದ ಪಡೆದು ವಿದ್ಯಾರ್ಜನೆಮಾಡಿದ್ದು, ಉನ್ನತ ಹುದ್ದೆಯನ್ನು ಅಲಂಕರಿಸಿ ಕೀರ್ತಿಗಳಿಸಿದ್ದಾರೆ. ರಾಷ್ಟ್ರಕ್ಕೆ ತಮ್ಮದೇ ಅದಸೇವೆಯನ್ನು ಸಲ್ಲಿಸಿ ಶ್ರೀಮಠದ ಹೆಸರನ್ನು ಬೆಳಗಿಸಿದ್ದಾರೆ. ಶ್ರೀಗಳು ಆರಂಭಿಸಿದ ಈ ಪ್ರಸಾದನಿಲಯವೇ ಮುಂದೆ ಕರ್ನಾಟಕದಲ್ಲಿ ಅನೇಕ ಪ್ರಸಾದ ನಿಲಯಗಳು ಹುಟ್ಟಿಕೊಳ್ಳಲು ಪ್ರೇರಣೆನೀಡಿತೆಂಬುದು ಒಂದು ಐತಿಹಾಸಿಕ ಮಹತ್ವದ ಗಮನಾರ್ಹ ಸಂಗತಿಯಾಗಿದೆ.ಜೀರ್ಣಾವಸ್ಥೆಯಲ್ಲಿದ್ದ ಮಠಕ್ಕೆ ಕಾಯಕಲ್ಪ ನೀಡುತ್ತಾ ಬಂದ ಭಕ್ತರ ಅಜ್ಞಾನ,ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಹೋರಾಡುತ್ತಾ ಬಂದ ಶ್ರೀಗಳು ಮಠದಲ್ಲಿಶಿವಾನುಭವಗೋಷ್ಠಿಗಳ ಮೂಲಕ ಪರಿವರ್ತನೆಗೆ ಕಾರಣರಾದರು. ಕೇವಲ ನಾಲ್ಕುದಶಕಗಳಲ್ಲಿ ಶ್ರೀಮಠದ ಚಿತ್ರಣವನ್ನೇ ಬದಲಾಯಿಸಿ ವೀರಶೈವ ಸಮಾಜದ ಅಭಿವೃದ್ಧಿಗೆಶ್ರಮಿಸಿದ ಶ್ರೀಗಳದು ಅಪೂರ್ವ ವ್ಯಕ್ತಿತ್ವ.ಶ್ರೀ ಮೃತ್ಯುಂಜಯಪ್ಪಗಳವರ ನಂತರ ಅಧಿಕಾರಕ್ಕೆ ಬಂದವರು ಶ್ರೀ ಮಹಾಂತಸ್ವಾಮಿಗಳು. ಶ್ರೀ ಮಹಾಂತಪ್ಪನವರು ಗುರುಗಳ ಹಾದಿಯಲ್ಲಿಯೇ ಮುನ್ನಡೆದು ಶ್ರೀಮಠವನ್ನು ಮತ್ತಷ್ಟು ಬೆಳೆಸಿ ಸದೃಢಗೊಳಿಸಿದರು. ಶ್ರೀಮಠದ ವತಿಯಿಂದ ಅನೇಕ ಶಿಕ್ಷಣ ಸಂಸ್ಥೆಗಳನ್ನು, ಶ್ರೀಮಠದ ನಿರ್ವಹಣೆಗಾಗಿ ಹೊಸ ಕಟ್ಟಡಗಳನ್ನು ನಿರ್ಮಿಸಿದರು. ಶ್ರೀಗಳು ತಮ್ಮಗುರುಗಳ ಸಂಕಲ್ಪದಂತೆ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಶ್ರೀಮಠವನ್ನುಸರ್ವತೋಮುಖ ರೀತಿಯಲ್ಲಿ ಬೆಳೆಸಿದರು. ಉಭಯ ಶ್ರೀಗಳೂ ಶರಣಧರ್ಮ ತತ್ವಮೌಲ್ಯಗಳ ಪ್ರಸಾರಕ್ಕಾಗಿ ಅವಿರತ ಶ್ರಮಿಸಿದ್ದು ಇವರಗಳ ಕಾಲದಲ್ಲಿ ಶರಣ ಸಾಹಿತ್ಯಪ್ರಸಾರಕ್ಕಾಗಿ ಶ್ರೀ ಬಾಲಲೀಲ ಮಹಾಂತ ಶಿವಯೋಗಿಗಳ ಗ್ರಂಥಮಾಲೆ ಆರಂಭವಾಯಿತು.ಹೀಗೆ ಶ್ರೀ ಮುರುಘಾಮಠವನ್ನು ಅನ್ನದಾಸೋಹ, ಜ್ಞಾನದಾಸೋಹ, ಅನುಭಾವದಾಸೋಹಗಳ ತ್ರಿವೇಣಿ ಸಂಗಮವನ್ನಾಗಿಸಿದರು.ಇವರುಗಳ ನಂತರ ಅಧಿಕಾರಕ್ಕೆ ಬಂದ ಶ್ರೀ ಶಿವಯೋಗಿ ಸ್ವಾಮಿಗಳು ಉತ್ತಮಆಡಳಿತಗಾರರಾಗಿ ತಮ್ಮ ವಾಕ್ಚಾತುರ್ಯ, ವಿದ್ಯಾಸಂಪನ್ನತೆಯಿಂದ ಪ್ರಸಿದ್ಧಿಗೆ ಬಂದರು.ಪರಂಪರೆಯ ಹಾದಿಯಲ್ಲಿ ಶ್ರೀಮಠವನ್ನು ಮುನ್ನಡೆಸುತ್ತಾ ಮಠವನ್ನು ಹೆಚ್ಚಿನ ರೀತಿಯಲ್ಲಿಅಭಿವೃದ್ಧಿಗೊಳಿಸಿದರು. ಇವರ ನಂತರ ಅಧಿಕಾರಕ್ಕೆ ಬಂದವರೇ ಈಗಿನ ಶ್ರೀಗಳಾದ ಪೂಜ್ಯಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳವರು.1955ರಲ್ಲಿ ಕೆರೂರಿನಲ್ಲಿ ಜನಿಸಿದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಆಧ್ಯಾತ್ಮಿಕಪ್ರವೃತ್ತಿಗನುಗುಣವಾಗಿ ಶಿವಯೋಗ ಮಂದಿರದಲ್ಲಿ ಶಿವಯೋಗ ಸಾಧನೆಗೆ ತೊಡಗಿದರು.ಮುಂದೆ ಧಾರವಾಡ ಮುರುಘಾಮಠದಲ್ಲಿದ್ದುಕೊಂಡು ಪೂಜ್ಯ ಮಹಾಂತಪ್ಪಗಳ ತ್ರಿಕರಣಪೂರಕ ಸೇವೆ ಮಾಡುತ್ತಲೇ ಪಂ. ನಾಗಭೂಷಣ ಶಾಸ್ತ್ರಿಗಳವರಲ್ಲಿ ಸಂಸ್ಕøತ ಅಧ್ಯಯನಪೂರೈಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಶ್ರೀಗಳು ಮುರುಘಾಮಠದ ಸ್ನಾತಕ ವಿಭಾಗದವಿದ್ಯಾರ್ಥಿಗಳನ್ನು ಸಂಘಟಿಸಿ ಧಾರವಾಡದಿಂದ ಎಡೆಯೂರಿಗೆ ಧರ್ಮಜಾಗೃತಿ ಪಾದಯಾತ್ರೆಕೈಗೊಂಡರು. ಅಂದು ಧರ್ಮ ಜಾಗೃತಿಗಾಗಿ ನಡೆದ ಯಾತ್ರೆ ಇಂದಿಗೂ ನಿಂತಿಲ್ಲ. 1974ರಲ್ಲಿಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಮಠದ ಅಧಿಕಾರ ವಹಿಸಿಕೊಂಡನಂತರ ಅದರ ಸ್ವರೂಪವನ್ನೇ ಬದಲಾಯಿಸಿದರು. ಶ್ರೀ ಬಾಲಲೀಲಾ ಭಜನಾ ಪರಿಷತ್ಸ್ಥಾಪಿಸುವುದರೊಂದಿಗೆ ಜಾತ್ರೆಗಳಿಗೆ ಸಾಂಸ್ಕøತಿಕ ಸ್ಪರ್ಶ ನೀಡಿದ್ದು ವಿಶೇಷ.1986ರಲ್ಲಿ ಬೆಂಗಳೂರಿನ ಸರ್ಪಭೂಷಣ ಮಠದ ಅಧಿಕಾರವನ್ನು ವಹಿಸಿಕೊಂಡುಈ ನಡುವೆ ಪಶುಪತಿಹಾಳದ ಶ್ರೀ ಮಹಾಂತೇಶ್ವರ ಮಠದ ಆಡಳಿತವನ್ನು ವಹಿಸಿಕೊಂಡುಅಭಿವೃದ್ಧಿಪಡಿಸಿದರು. ಶ್ರೀ ಮುರುಘಾಮಠದ ಅಧಿಕಾರ ವಹಿಸಿಕೊಂಡ ಶ್ರೀಗಳು ಒಂದುಕ್ಷಣವೂ ವಿರಮಿಸಿಲ್ಲ. ಶ್ರೀಮಠದ ಅಡಿಯಲ್ಲಿ ಅನೇಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುತ್ತಿರುವಶ್ರೀಗಳು ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದಾರೆ. ನಾಡಿನಬಹುತೇಕ ಮಠಾಧೀಶರ, ಸಾಹಿತಿ,ವಿದ್ವಾಂಸರ ನಿಕಟ ಸಂಪರ್ಕವನ್ನಿಟ್ಟುಕೊಂಡಿರುವ ಶ್ರೀಗಳುಸ್ವತಃ ವಿದ್ವಾಂಸರು, ಜನಾನುರಾಗಿಗಳು. ಭಕ್ತರ ಮುಖದಲ್ಲಿ ಲಿಂಗವ ಕಾಣಬೇಕು ಎಂಬಶರಣವಾಣಿಯನ್ನು ಅನುಷ್ಠಾನಕ್ಕೆ ತರುತ್ತಿರುವ ಶ್ರೀಗಳು ಶ್ರೀ ಬಾಲಲೀಲಾ ಮಹಾಂತಶಿವಯೋಗೀಶ್ವರ ಗ್ರಂಥಮಾಲೆಯ ಮೂಲಕ ವೀರಶೈವ ಸಾಹಿತ್ಯದ ಕುರಿತ ಸಂಶೋಧನೆ,ಪ್ರಕಟಣೆ ಹಾಗೂ ಪ್ರಸಾರವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ವಿಶೇಷತೆ :

ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಗ್ರಂಥಮಾಲೆ

(170 ಗ್ರಂಥಗಳ ಪ್ರಕಟಣೆ)

‘ಸಾವಧಾನ’ ದ್ವೈಮಾಸಿಕ ಪತ್ರಿಕೆ ಪ್ರಕಟಣೆ

ವರ್ಷದಲ್ಲಿ ಎರಡು ಸಲ ಶಿವಾನುಭವ ತರಬೇತಿ ಶಿಬಿರದ ಆಯೋಜನೆ

ಮತ್ತು ಲಿಂಗಪೂಜೆಯ ಪ್ರಾತ್ಯಕ್ಷಿತೆ

Swamiji

Swamiji Name :
ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು
Date of Birth :
1955
Place :
ಕೆರೂರು
Photo :

Programs

ಪ್ರತಿ ತಿಂಗಳು ಮೃತ್ಯುಂಜಯ ಅಪ್ಪಗಳವರ ಮಾಸಿಕ ಶಿವಾನುಭವ ಅಷ್ಠಮಿ.
ಶ್ರಾವಣ ಮಾಸದಲ್ಲಿ ನಿತ್ಯ ಶರಣ ಸಾಹಿತ್ಯ ಕುರಿತ ಚಿಂತನಾ ಉಪನ್ಯಾಸ ಕಾರ್ಯಕ್ರಮಗಳು.
ಬಸವ ಜಯಂತಿಯಲ್ಲಿ ಮೂರುದಿನಗಳ ಕಾಲ ವಚನ ಸಂಗೀತೋತ್ಸವ ಕಾರ್ಯಕ್ರಮಗಳು ಮಾಘಮಾಸದಲ್ಲಿ ರಥೋತ್ಸವ, ಜಾತ್ರಾ ಮಹೋತ್ಸವ, ಒಂದು ವಾರಗಳ ಕಾಲ ವಿಶಿಷ್ಠ ಕಾರ್ಯಕ್ರಮಗಳು, ರೈತರಿಗಾಗಿ ಸ್ಪರ್ಧೆಗಳು, ಕೃಷಿ ಮಾಹಿತಿ. ಪ್ರತಿವರ್ಷ ವಚನ ಭಜನಾ ಪರಿಷತ್ತಿನ ಆಯೋಜನೆ / ಭಜನಾ ಸಂಘಗಳಿಗೆ ಪ್ರೋತ್ಸಾಹ ಧನ.
ಶ್ರೀ ಮೃತ್ಯುಂಜಯಪ್ಪಗಳವರ ಜಯಂತಿ, ಮಹಾಂತಪ್ಪಗಳವರ ಜಯಂತಿ ಸ್ಮರಣೋತ್ಸವಗಳ ಪ್ರಯುಕ್ತ ಒಂದು ವಾರ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಪ್ರತಿವರ್ಷ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ.

Institutions

ಪೂರ್ವ ಪ್ರಾಥಮಿಕ ಶಾಲೆಗಳು ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆಗಳು ಸಂಗೀತ, ಸಂಸ್ಕøತ ಪಾಠಶಾಲೆ ಪದವಿ ಪೂರ್ವ / ಪದವಿ ಮಹಾವಿದ್ಯಾಲಯ ವಿದ್ಯಾರ್ಥಿ ನಿಲಯ, ಉಚಿತ ಪ್ರಸಾದ ನಿಲಯ ಕಲಾಭವನ

Photos

Full Address Kannada

ಶ್ರೀ ಮುರುಘಾಮಠ
ಧಾರವಾಡ - 580 006

Map

Near by Places

ಹುಬ್ಬಳ್ಳಿ - 21 ಕಿ.ಮೀ.
ಸವದತ್ತಿ - 40 ಕಿ.ಮೀ.
ಹಳಿಯಾಳ - 35 ಕಿ.ಮೀ.
ಬೆಳಗಾವಿ - 80 ಕಿ.ಮೀ.

Statistic

17 Views
0 Rating
0 Favorite
0 Share
error: Content is protected !!