ಜಿಲ್ಲಾ ಕೇಂದ್ರ ಹಾವೇರಿಯಿಂದ 20 ಕಿ.ಮೀ. ದೂರದಲ್ಲಿರುವ ಉಪ್ಪುಣಸಿಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಮ.ನಿ.ಪ್ರ. ಜಯಬಸವೇಶ್ವರ ಸ್ವಾಮಿಗಳಿಂದ ಶ್ರೀ ಮುರುಘಾಮಠವು ಪ್ರಾರಂಭಗೊಂಡು ಈ ಗ್ರಾಮದಲ್ಲಿ ಧಾರ್ಮಿಕ ಆಚರಣೆಗಳನ್ನು ಶ್ರೀಮಠದವತಿಯಿಂದ ಕೈಗೊಂಡು ಊರ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀ ಜಯಬಸವೇಶ್ವರ ಸ್ವಾಮಿಗಳು 1962ರಲ್ಲಿ ಜನಿಸಿದವರಾಗಿದ್ದು 1996ರಏಪ್ರಿಲ್ 7ರಂದು ಉಪ್ಪುಣಸಿ ಗ್ರಾಮದಲ್ಲಿ ಶ್ರೀಮಠವನ್ನು ಸ್ಥಾಪಿಸಿಕೊಂಡು ಧಾರ್ಮಿಕಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಮತ್ತು ಬಸವಾದಿ ಶಿವಶರಣರ ವಚನಗಳನ್ನು,ತತ್ವಪದಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ.ಶ್ರೀಗಳು ಮಠ ಸ್ಥಾಪಿಸಿದ ಕಡಿಮೆ ಅವಧಿಯಲ್ಲಿಯೇ ಮಠಕ್ಕೆ ಸ್ವಂತ ಕಟ್ಟಡದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಶ್ರೀಮಠವನ್ನು ಸಾಮಾಜಿಕವಾಗಿಗುರುತಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಜೊತೆಯಲ್ಲಿ ಶ್ರೀಮಠವನ್ನು ಆರ್ಥಿಕವಾಗಿಸ್ವಾವಲಂಬನೆ ಸಾಧಿಸುವಂತೆ ಮಾಡುವತ್ತ ಗಮನ ಹರಿಸಿದ್ದಾರೆ.ಶ್ರೀಮಠದಲ್ಲಿ ಶ್ರೀಗಳು ಪ್ರತಿದಿನ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿವಾರಶಿವಾನುಭವ ಗೋಷ್ಠಿಗಳನ್ನು ನಡೆಸುತ್ತಿದ್ದು ಅದರ ಮೂಲಕ ಜನರಲ್ಲಿ ಧಾರ್ಮಿಕಆಚರಣೆಗಳ ಮಹತ್ವ ಮತ್ತು ಧಾರ್ಮಿಕ ಪ್ರಜ್ಞೆಯನ್ನು ತಿಳಿಸುವುದರೊಂದಿಗೆ ಯುಗಾದಿಯಲ್ಲಿಶ್ರೀಮಠದ ರಥೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಡುತ್ತಿದ್ದಾರೆ. ಆ ಸಮಯದಲ್ಲಿಹೊರಗಿನಿಂದ ಬಂದ ಭಕ್ತರಿಗೆ ಮಠದಲ್ಲಿ ಅನ್ನದಾಸೋಹ ವ್ಯವಸ್ಥೆಯಿದ್ದು, ಆಗಾಗ್ಗೆನಡೆಯುವ ಗೋಷ್ಠಿಗಳ ಸಂದರ್ಭದಲ್ಲಿ ಪ್ರಸಾದದ ವ್ಯವಸ್ಥೆ ಇರುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಜಯಬಸವೇಶ್ವರ ಸ್ವಾಮಿಗಳು
Date of Birth :
1962
Pattadikara :
7-4-1996
Photo :
Programs
ವಾರಕ್ಕೊಮ್ಮೆ ಶಿವಾನುಭವ ಗೋಷ್ಠಿ
ಯುಗಾದಿಯಂದು ಶ್ರೀಮಠದ ರಥೋತ್ಸವ.
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
Photos
Full Address Kannada
ಶ್ರೀ ಮುರುಘಾ ಮಠ
ಉಪ್ಪುಣಸಿ - 581 148
ಹಾನಗಲ್ಲು ತಾ., ಹಾವೇರಿ ಜಿ.