Shree Mulakattimani Hirematha – Pala

Shree Mulakattimani Hirematha – Pala Claimed

ಶ್ರೀ ಮೂಲಕಟ್ಟಿಮನಿ ಹಿರೇಮಠ - ಪಾಳಾ

Average Reviews

Description

ಶ್ರೀ ಮೂಲಕಟ್ಟಿಮನಿ ಹಿರೇಮಠ – ಪಾಳಾ

ಕರ್ತೃ – ಶ್ರೀ ಷ.ಬ್ರ. ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ನಗರದಿಂದ 16 ಕಿ.ಮೀ. ದೂರದಲ್ಲಿರುವ ಪಾಳಾ ಗ್ರಾಮದಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಮೂಲ ಕಟ್ಟಿಮನಿ ಹಿರೇಮಠವು ತನ್ನ ಧಾರ್ಮಿಕ,ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಪ್ರಮುಖಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಶ್ರೀಮದ್ ಉಜ್ಜಯಿನಿ ಪೀಠದಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀ ಮೂಲ ಕಟ್ಟೀಮನಿಹಿರೇಮಠದ ಕರ್ತೃಗುರುಗಳು ಶ್ರೀ ಷ.ಬ್ರ.ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು.ಶ್ರೀ ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಹಾ ತಪಸ್ವಿಗಳಾಗಿ,ಶಿವಯೋಗವನ್ನು ಸಿದ್ದಿ ಮಾಡಿಕೊಂಡಂತಹ ಮಹಾಪುರುಷರು. ಇವರು ವೀರಶೈವಧರ್ಮದ ಪ್ರಚಾರಕರಾಗಿ ಮತ್ತು ಈ ಧರ್ಮದ ಬೆಳವಣಿಗೆಯ ಸಾಧಕರಾಗಿ ಶ್ರಮಿಸಿ ಅದುಈ ಪ್ರಾಂತ್ಯದಲ್ಲಿ ಗಟ್ಟಿಯಾಗಿ ನೆಲೆಗೊಳ್ಳುವಂತೆ ಮಾಡಿದರು. ಗುರುಗಳುಸಂಚಾರಮೂರ್ತಿಗಳಾಗಿ ಈ ನಾಡಿನ ನಾನಾ ಭಾಗದಲ್ಲಿ ಸಂಚರಿಸಿ ಧರ್ಮದ ಬಗ್ಗೆ ಭಕ್ತರಲ್ಲಿಅರಿವನ್ನು ಮೂಡಿಸಿ ತಾವು ಎಲ್ಲೆಲ್ಲಿ ನೆಲೆನಿಂತರೋ ಅಲ್ಲಿ ಮಠಗಳನ್ನು ಸ್ಥಾಪಿಸಿ ಧಾರ್ಮಿಕಆಚರಣೆಗಳ ಕೇಂದ್ರವನ್ನಾಗಿ ಮಾಡಿದರು.ಕರ್ತೃಗುರುಗಳು ಪಾಳಾ ಗ್ರಾಮಕ್ಕೆ ಆಗಮಿಸಿ ನೆಲೆನಿಂತು ಅನುಷ್ಠಾನ ಕೈಗೊಂಡಿದ್ದುಗ್ರಾಮದ ಭಕ್ತರು ಗುರುಗಳ ಪ್ರಭಾವಕ್ಕೆ ಒಳಗಾಗಿ ನಿತ್ಯ ಶ್ರೀಗಳ ಧಾರ್ಮಿಕ ಆಚರಣೆಗಳಿಗೆತೊಂದರೆಯಾಗದಂತೆ ವ್ಯವಸ್ಥೆ ಮಾಡಿದರು. ಗುರುಗಳು ಪಾಳಾದಲ್ಲಿ ಭಕ್ತರಸಹಕಾರದೊಂದಿಗೆ ಮಠವನ್ನು ಸ್ಥಾಪಿಸಿ ನಿರಂತರವಾಗಿ ಆಚರಣೆಗಳು ನಡೆದುಕೊಂಡುಬರುವಂತೆ ಭದ್ರಬುನಾದಿಯನ್ನು ಹಾಕಿದರು. ಈ ರೀತಿಯಾಗಿ ಕರ್ತೃಗುರುಗಳಪ್ರಭಾವಳಿಯಿಂದ ಜಾಗೃತಗೊಂಡು ಪ್ರಸಿದ್ದಗೊಂಡ ಶ್ರೀಮಠದ ಪರಂಪರೆಯಲ್ಲಿ ಈವರೆಗೂಏಳು ಜನ ಶ್ರೀಗಳು ಅಧಿಕಾರ ವಹಿಸಿಕೊಂಡು ತಮ್ಮ ಕಾಲಾವಧಿಗಳಲ್ಲಿ ಶ್ರೀಮಠವನ್ನುಬೆಳಗಿದ್ದಾರೆ.ಶ್ರೀಮಠದ ಪರಂಪರೆಯಲ್ಲಿ ಕಾಣ ಸಿಗುವ ಏಳು ಜನ ಶ್ರೀಗಳಲ್ಲಿ ಮೂವರುಶ್ರೀಗಳು ಶ್ರೀ ಷ.ಬ್ರ. ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳೆಂದೇ ಅಭಿದಾನ ಪಡೆದುಅಧಿಕಾರಕ್ಕೆ ಬಂದಿರುವುದು ವಿಶೇಷ. ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ಮಳೇಂದ್ರಶಿವಾಚಾರ್ಯ ಮಹಾಸ್ವಾಮಿಗಳು ಪರಂಪರೆಯ ಗುರುಗಳ ಹಾದಿಯಲ್ಲಿ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿದ್ದು ಸುಮಾರು 80 ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದಾರೆ.ಹಿಂದಿನ ಶ್ರೀಗಳ ಐಕ್ಯಾ ನಂತರ ಶ್ರೀಮಠವು ಸುಮಾರು 60 ವರ್ಷಗಳ ಕಾಲ ಖಾಲಿಉಳಿದಿದ್ದು ಮಠದ ಧಾರ್ಮಿಕ ಕಾರ್ಯಚಟುವಟಿಕೆಗಳು ಕುಂಠಿತಗೊಂಡಿತ್ತು.176ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು1968ರ ಜುಲೈ 01 ರಂದು ಚಿತ್ತಾಪುರ ತಾಲ್ಲೂಕಿನ ಶಹಾಬಾದ್ ಗ್ರಾಮದಲ್ಲಿ ಜನಿಸಿದ್ದು ತಮ್ಮಪ್ರಾಥಮಿಕ ಶಿಕ್ಷಣವನ್ನು ಮುಗುಳನಾಗಾವಿಯಲ್ಲಿ ಪೂರೈಸಿದರು. ಬಾಲ್ಯದಿಂದಲೂಆದ್ಯಾತ್ಮಿಕತೆಯತ್ತ ಒಲವು ಬೆಳೆಸಿಕೊಂಡಿದ್ದ ಶ್ರೀಗಳು ಹರಪ್ಪನಹಳ್ಳಿಯ ಶ್ರೀ ತೆಗ್ಗಿನಮಠದಲ್ಲಿಆಧ್ಯಾತ್ಮಶಿಕ್ಷಣವನ್ನು ಪಡೆದು ಶ್ರೀಮಠಕ್ಕೆ ಆಗಮಿಸಿದರು. ಪ್ರಾಚೀನ ಇತಿಹಾಸದ ಶ್ರೀ ಮೂಲಕಟ್ಟಿಮನಿ ಹಿರೇಮಠವು ಈಗಿನ ಶ್ರೀಗಳು ಆಗಮಿಸುವುದಕ್ಕೂ ಪೂರ್ವದಲ್ಲಿಶಿಥಿಲಗೊಳ್ಳತೊಡಗಿತ್ತು.ಸುಮಾರು 60 ವರ್ಷಗಳ ಕಾಲ ಖಾಲಿ ಉಳಿದಿದ್ದ ಮಠದ ಪಟ್ಟಾಧಿಕಾರವನ್ನು1990ರ ಮೇ 24ರಂದು ಸ್ವೀಕರಿಸಿ ಮಠಕ್ಕೆ ಆಗಮಿಸಿದ ಶ್ರೀ.ಷ.ಬ್ರ. ಗುರುಮೂರ್ತಿಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಧಾರ್ಮಿಕ ಚಟುವಟಿಕೆಗಳನ್ನುಚುರುಕುಗೊಳಿಸಿದರು. ಶ್ರೀಗಳು ಶ್ರೀಮಠದಲ್ಲಿ ನಿತ್ಯಪೂಜೆ, ಆಗಾಗ್ಗೆ ಪ್ರವಚನಕಾರ್ಯಕ್ರಮಗಳು ಹಾಗೂ ಅನ್ನದಾಸೋಹಗಳನ್ನು ನಿರಂತರವಾಗಿ ನಡೆಸುತ್ತಾ ಭಕ್ತರಪ್ರೀತಿಗೆ ಪಾತ್ರರಾದರು. ಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಗ್ರಾಮದ ಆಚರಣೆಗಳಲ್ಲಿಪಾಲ್ಗೊಳ್ಳುತ್ತಾ ಸಾಮಾಜಿಕವಾಗಿಯೂ ಶ್ರೀಮಠವನ್ನು ಪ್ರಚಲಿತಗೊಳಿಸುತ್ತಿರುವ ಶ್ರೀಗಳುಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಭಕ್ತರಸಹಕಾರದೊಂದಿಗೆ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿಅಮಾವಾಸ್ಯೆಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕಗಳನ್ನು ನಡೆಸುತ್ತಾರೆ. ಮೇ ತಿಂಗಳಲ್ಲಿ ಶ್ರೀಹಿರಿಯ ಗುರುಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಆಯೋಜಿಸಿ ಮುನ್ನಡೆಸುತ್ತಿರುವಶ್ರೀಗಳು ಶಿವರಾತ್ರಿ ಹಾಗೂ ನವರಾತ್ರಿಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನುನಡೆಸಿಕೊಡುತ್ತಿದ್ದಾರೆ. ಹಾಗೂ ಪ್ರತಿ ಶ್ರಾವಣಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಕೊನೆಯ ದಿನಶ್ರೀಮಠದಲ್ಲಿ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಸುತ್ತಮುತ್ತಲಿನಗ್ರಾಮಸ್ಥರು ಪಾಲ್ಗೊಂಡು ಗುರುಗಳ ದರ್ಶನಕ್ಕೆ ಪಾತ್ರರಾಗುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
01-07-1968
Place :
ಶಹಾಬಾದ್, ಚಿತ್ತಾಪುರ ತಾ||
Pattadikara :
24-05-1990
Photo :

Programs

ಪ್ರತಿದಿನ ಅಮಾವಾಸೆಗೆ ವಿಶೇಷ ಪೂಜೆ
ಮೇ ತಿಂಗಳಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಹಾಗೂ ವಿವಿಧ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ಕೊನೆಯ
ದಿನ ಶ್ರೀ ಮಠದಲ್ಲಿ ಪಲ್ಲಕ್ಕಿ ಉತ್ಸವ
ಶಿವರಾತ್ರಿ ಮತ್ತು ನವರಾತ್ರಿಗೆ ವಿಶೇಷ ಪೂಜೆ ಕಾರ್ಯಕ್ರಮಗಳು

Photos

Full Address Kannada

ಶ್ರೀ ಮೂಲಕಟ್ಟಿಮನಿ ಹಿರೇಮಠ
ಪಾಳಾ - 585 228
ಕಲಬುರಗಿ ತಾ|| ಜಿ||

Map

Near by Places

ಸರಡಗಿ ಕ್ರಾಸ್ - 5 ಕಿ.ಮೀ.
ಕಲಬುರಗಿ - 16 ಕಿ.ಮೀ.
ಸೇಡಂ - 49 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!