ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮವು ಇತಿಹಾಸ ಪ್ರಸಿದ್ದಗ್ರಾಮವಾಗಿದ್ದು ರಾಷ್ಟ್ರಕೂಟ ಸಾಮ್ರಾಜ್ಯದ ರಾಜಧಾನಿಯಾಗಿ ವೈಭಯಯುತ ಕಾಲವನ್ನುಕಂಡಿತ್ತು. ಇತಿಹಾಸ ಪ್ರಸಿದ್ದ ನೃಪತುಂಗ ರಾಜನ ಕಾಲದಲ್ಲಿ ಉಚ್ಚ್ರಾಯ ಸ್ಥಿತಿ ತಲುಪಿದ್ದಮಾನ್ಯಖೇಡವೇ ಈಗಿನ ಮಳಖೇಡ. ಇಂತಹ ಐತಹಾಸಿಕ ಗ್ರಾಮದಲ್ಲಿ ರಾಜರಿಂದಲೇವೀರಶೈವ ಧರ್ಮದ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿದ್ದು ಆ ಕಾಲಘಟ್ಟದಲ್ಲಿಯೇಅಸ್ತಿತ್ತ್ವದಲ್ಲಿದ್ದು ರಾಜಮನ್ನಣೆಗೆ ಪಾತ್ರವಾಗಿದ್ದ ಮಠವೇ ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾದ ಶ್ರೀ ಮೂಲಾಧಾರ ಮಠ. ಇಂತಹ ಮಠದ ಪರಂಪರೆಯಲ್ಲಿಕರ್ತೃಗುರುಗಳಾದಿಯಾಗಿ ಅನೇಕ ಗುರುಗಳು ಅಧಿಕಾರವನ್ನು ನಡೆಸಿ ಮಠವನ್ನುಅಭಿವೃದ್ಧಿಗೊಳಿಸಿದ್ದಾರೆ.ಪುರಾತನ ಪರಂಪರೆಯ ಶ್ರೀಮಠದ ಕರ್ತೃಗುರುಗಳು ಹಾಗೂ ನಂತರದಗುರುಗಳ ಬಗ್ಗೆ ಸ್ಪಷ್ಟತೆಯಿಲ್ಲ. ಪರಂಪರೆಯಲ್ಲಿ ಈಗ ನಮಗೆ ನಿಖರವಾಗಿ ಸಿಗುವಮಾಹಿತಿಗಳು ಹಿಂದಿನ ಶ್ರೀಗಳಿಗೆ ಸಂಬಂಧಿಸಿದ್ದು ಮಾತ್ರ. ಹಿಂದಿನ ಗುರುಗಳಾದಶ್ರೀ.ಷ.ಬ್ರ.ಕಾರ್ತಿಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ತ್ರಿಕಾಲ ಪೂಜಾನಿಷ್ಠರಾಗಿ, ತಮ್ಮತಪೋಶಕ್ತಿಯ ಬಲದಿಂದ ಶ್ರೀಮಠವನ್ನು ಹೆಚ್ಚು ಅಭಿವೃದ್ಧಿಪಡಿಸಿದ್ದಾರೆ. ಬಾಲಬ್ರಹ್ಮಚಾರಿಗಳೆಂದು ಹೆಸರು ಪಡೆದಿದ್ದ ಶ್ರೀಗಳು ದೀರ್ಘಕಾಲ ಮಠದ ಆಡಳಿತವನ್ನು ನಡೆಸಿಮಠಕ್ಕೆ ಆರ್ಥಿಕ ಭದ್ರತೆಯನ್ನು ತಂದುಕೊಟ್ಟಿದ್ದರು. ಮಹಾ ವಿದ್ವತ್ ಚೇತನರಾದ ಗುರುಗಳುತಮ್ಮ ಪಾಂಡಿತ್ಯದಿಂದ ಹೆಸರಾಗಿದ್ದು ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು.ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ವೀರಗಂಗಾಧರ ಶಿವಾಚಾರ್ಯ ಸ್ವಾಮಿಗಳುಹಿಂದಿನ ಗುರುಗಳ ಕರಕಮಲಸಂಜಾತರಾಗಿ ಬೆಳೆದು, ಗುರುಗಳ ಮಾರ್ಗದರ್ಶನದಲ್ಲಿಪರಿಪಕ್ವಗೊಂಡರು. ಹಿಂದಿನ ಶ್ರೀಗಳಿಂದಲೇ ಮಠಕ್ಕೆ ಪಟ್ಟಾಧಿಕಾರದ ಅನುಗ್ರಹ ಪಡೆದಶ್ರೀಗಳು ಮಳಖೇಡ ಮಠದ ಜೊತೆಗೆ ಶಾಖಾಮಠಗಳ ಅಭಿವೃದ್ಧಿಗೂ ಶ್ರಮಿಸುತ್ತಿದ್ದಾರೆ.ಗುರುಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ನವರಾತ್ರಿಯಲ್ಲಿ ಶ್ರೀದೇವಿಪುರಾಣವನ್ನು ಹೇಳಿಸುತ್ತಿದ್ದು, ಏಪ್ರಿಲ್ ತಿಂಗಳಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಹಾಗೂ ಶ್ರೀಮಠದ ಜಾತ್ರೆಯನ್ನು ನಡೆಸುತ್ತಾರೆ. ಶ್ರೀಮಠದ ವತಿಯಿಂದ ಜ್ಞಾನಭಾರತಿವಿದ್ಯಾಮಂದಿರ ಶಾಲೆಯು ನಡೆಯುತ್ತಿದ್ದು ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆಅನುಕೂಲವಾಗಿದೆ.
Swamiji
Swamiji Name :
ಶ್ರೀ ಷ.ಬ್ರ. ವೀರಗಂಗಾಧರ ಶಿವಾಚಾರ್ಯ ಸ್ವಾಮಿಗಳು
Date of Birth :
07-11-1974
Place :
ಮಾಡಬಾಳ, ಸಿಂಧಗಿ ತಾ||
Photo :
Programs
ರೇಣುಕಾಚಾರ್ಯ ಜಯಂತಿ ಆದರಣೆ
ಏಪ್ರಿಲ್ನಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ಶ್ರೀ ಮಠದ ಜಾತ್ರೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
Photos
Full Address Kannada
ಶ್ರೀ ಮೂಲಾಧಾರ ಮಠ
ಮಳಖೇಡ- 585 317
ಸೇಡಂ ತಾ||, ಕಲಬುರಗಿ ಜಿಲ್ಲೆ