ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮವು ತಾಲ್ಲೂಕುಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು, ಈ ಗ್ರಾಮದ ಹೊರಭಾಗದಲ್ಲಿ ಸುಮಾರು 25ವರ್ಷಗಳ ಹಿಂದೆ ಮಾತೋಶ್ರೀ ಸುಗˉÁದೇವಿ ಅಮ್ಮನವರಿಂದ ಸ್ಥಾಪಿತಗೊಂಡಿರುವ ಶ್ರೀಮುಕ್ತಿಮಂದಿರವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳಿಂದ ಹಾಗೂ ಭಜನಾಕಾರ್ಯಕ್ರಮಗಳಿಂದಾಗಿ ಈ ಭಾಗದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿದೆ.ಮಾತೋಶ್ರೀ ಸುಗˉÁದೇವಿ ಅಮ್ಮನವರು ಬಾಲ್ಯದಿಂದˉÉೀ ಆಧ್ಯಾತ್ಮದತ್ತ ಒಲವುಹೊಂದಿದಂತವರು. ತಮ್ಮ 11ನೇ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿದ ಅಮ್ಮನವರುಜಿಡಗಾದ ಶ್ರೀ ಷಡಕ್ಷರಿ ಸಿದ್ದರಾಮೇಶ್ವರ ಸ್ವಾಮಿಗಳ ಸೇವೆ ಮಾಡಿಕೊಂಡಿದ್ದವರು. ಹಾಗೂತಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಪಂಡಾರಪುಕ್ಕೆ ತೆರಳಿ ಅಲ್ಲಿ ಎರಡು ವರ್ಷಗಳ ಕಾಲ ಅಭ್ಯಾಸಮಾಡಿದರು.ಮಾತೋಶ್ರೀ ಸುಗˉÁದೇವಿ ಅಮ್ಮನವರು ಬಂಥನಾಳದ ಶ್ರೀ ವೃಷಭಲಿಂಗೇಶ್ವರಸಂಸ್ಥಾನ ಮಠದ ಶ್ರೀ ಸಂಗನಬಸವ ಶಿವಯೋಗಿಗಳ ಶಿಷ್ಯರಾಗಿದ್ದುಕೊಂಡು ಅವರ ಮಾರ್ಗದರ್ಶನ ಪಡೆದವರು. ಅಮ್ಮನವರು ಸುಮಾರು 25 ವರ್ಷಗಳ ಹಿಂದೆ ಹಿರೇರೂಗಿಯಹೊರಭಾಗದಲ್ಲಿ ಶ್ರೀಮಠವನ್ನು ಜಿಡಗಾದ ಶ್ರೀಷಡಕ್ಷರಿ ಸಿದ್ದರಾಮೇಶ್ವರ ಸ್ವಾಮಿಗಳಸಮ್ಮುಖದಲ್ಲಿ ಪ್ರಾರಂಭಿಸಿ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವ ಕಾರ್ಯಕೈಗೊಂಡರು.ಮಾತೋಶ್ರೀಯವರು ಶ್ರೀ ಮುಕ್ತಿಮಂದಿರದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ವಿಶೇಷ ಸಂದರ್ಭಗಳಲ್ಲಿ ಭಜನಾ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಮತ್ತುಶ್ರಾವಣ ಮಾಸದಲ್ಲಿ ನಿತ್ಯ ಭಜನೆ ಹಾಗೂ ಕೊನೆಯ ದಿನ ವಿಶೇಷ ಕಾರ್ಯಕ್ರಮಗಳನ್ನುಆಯೋಜಿಸುತ್ತಿದ್ದಾರೆ.
Swamiji
Swamiji Name :
ಮಾತೋಶ್ರೀ ಸುಗಲಾದೇವಿ ಅಮ್ಮನವರು
Date of Birth :
9-10-1952
Place :
ಸೋನಿಹಾಳ, ಮಹಾರಾಷ್ಟ್ರ.
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ಭಜನೆ ಹಾಗೂ ಕೊನೆಯದಿನ ವಿಶೇಷ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಮುಕ್ತಿಮಂದಿರ
ಹಿರೇರೂಗಿ - 586 215
ಇಂಡಿ ತಾ||, ವಿಜಯಪುರ ಜಿ||