ರಾಮನಗರ ಜಿˉÉ್ಲ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಗ್ರಾಮದ ಹೊರವಲಯದಲ್ಲಿ ್ಲಅಸ್ತಿತ್ತ್ವದಲ್ಲಿರುವ ಶ್ರೀ ಮೂಡಲ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕಪ್ರಚಲಿತದಲ್ಲಿದೆ. ಸುಮಾರು 500 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಶ್ರೀಮೂಡಲ ಮಠದ ಕರ್ತೃಗದ್ದುಗೆಯು ಪೂಜ್ಯ ಶ್ರೀ ಕಂಬಳಿ ಸ್ವಾಮಿಗಳದ್ದೆಂದುತಿಳಿದುಬರುತ್ತದೆ. ಕರ್ತೃಗುರುಗಳು ಬಸವನ ಮೇˉÉ ಕೂತು ಕಂಬಳಿ ಹೊತ್ತುಕೊಂಡುಸಂಚರಿಸುತ್ತಿದ್ದರಿಂದ ಶ್ರೀ ಕಂಬಳಿ ಸ್ವಾಮಿಗಳು ಎಂಬ ಹೆಸರು ಬಂದಿತೆಂದು ಹೇಳˉÁಗಿದೆ.ತಿಪ್ಪಸಂದ್ರ ಗ್ರಾಮಕ್ಕೆ ಈ ಹೆಸರು ಬರಲು ಐತಿಹಾಸಿಕ ಕಾರಣವಿದೆ. ಒಮ್ಮೆತಿಪ್ಪನಾಯಕನೆಂಬ ನಾಯಕನು ಯುದ್ದಮಾಡಿ ಮಧ್ಯರಾತ್ರಿಯಲ್ಲಿ ಸೈನ್ಯ ಸಮೇತ ಬಂದು ಈಗ್ರಾಮದ ಪಾಳು ಬಿದ್ದ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯುತ್ತಿರಬೇಕಾದಾಗ ಬಿದ್ದ ಸ್ಪಪ್ನದಂತೆಇದೇ ಗ್ರಾಮದಿಂದˉÉೀ ರಾಜ್ಯಬಾರ ಮಾಡಿದನೆಂದು ಹಾಗೂ ಮೂಡಲ ದಿಕ್ಕಿಗೆ ಕಂಡ ಪಾಳುಬಿದ್ದ ಮಠವನ್ನು ಜೀರ್ಣಾಭಿವೃದ್ಧಿಗೊಳಿಸಿ ಶ್ರೀ ಸಂಗಮೇಶ್ವರ ಸ್ವಾಮಿಗಳನ್ನುನೇಮಿಸಿದನೆಂದು ಪ್ರತೀತಿ ಇದ್ದು ಮೂಡಲ ದಿಕ್ಕಿಗೆ ಕಂಡ ಮಠಕ್ಕೆ ಶ್ರೀ ಮೂಡಲ ಮಠವೆಂದೇಹೆಸರು ಬಂದಿತೆಂದು ತಿಳಿದುಬರುತ್ತದೆ.ಈ ರೀತಿಯಾಗಿ ಬೆಳೆದು ಬಂದ ಶ್ರೀಮಠವು ಮುಂದೆ ಶ್ರೀ ಚಂದ್ರಮೌಳೇಶ್ವರಸ್ವಾಮಿಗಳು, ಶ್ರೀ ಕಂಬಳಿ ಸ್ವಾಮಿಗಳು, ಶ್ರೀ ಸಿದ್ದವೀರ ಸ್ವಾಮಿಗಳು ಹಾಗೂ ಹಿಂದಿನಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳ ಮೇಲ್ಪಿಚಾರಣೆಯಲ್ಲಿ ಸುಮಾರು 400 ರಿಂದ 500ವರ್ಷಗಳಿಂದಲೂ ಮುಂದುವರೆದುಕೊಂಡು ಬಂದಿದೆ. ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸಿದ್ದಲಿಂಗ ಸ್ವಾಮಿಗಳು 1953ರ ಮಾರ್ಚ್ ತಿಂಗಳಲ್ಲಿ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಪಂಚಾಕ್ಷರಿ ಸ್ವಾಮಿಗಳನ್ನು ಪಟ್ಟಕ್ಕೆ ತಂದು 1970 ರಲ್ಲಿ ಲಿಂಗೈಕ್ಯರಾದರು.ಈಗಿನ ಹಿರಿಯ ಶ್ರೀಗಳಾದ ಶ್ರೀ ಮ.ನಿ.ಪ್ರ. ಪಂಚಾಕ್ಷರಿ ಸ್ವಾಮಿಗಳು ಪರಂಪರೆಗೆಅನುಗುಣವಾಗಿ ಶ್ರೀ ಮಠದ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಶ್ರೀಮಠವನ್ನುಅಭಿವೃದ್ದಿಪಡಿಸಿದ್ದಾರೆ. ಶ್ರೀಗಳು ಇತ್ತೀಚೆಗೆ 2014 ಮೇ 26ರಂದು ತಮ್ಮಉತ್ತರಾಧಿಕಾರಿಗಳನ್ನಾಗಿ ಕಸಘಟ್ಟ ಗ್ರಾಮದ ವಿನಯ್ ಕುಮಾರ್ ಎಂಬ ನೂತನ ವಟುವಿಗೆಷಠಲಬ್ರಹ್ಮೋಪದೇಶ ಪೂರ್ವಕವಾಗಿ ದೀಕ್ಷೆಯನ್ನು ಅನುಗ್ರಹಿಸಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಪಂಚಾಕ್ಷರಿ ಸ್ವಾಮಿಗಳು
Date of Birth :
1937
Place :
ತಿಪ್ಪಸಂದ್ರ, ಮಾಗಡಿ ತಾ||
Pattadikara :
ಮಾರ್ಚ್ 1953
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ ಶಿವರಾತ್ರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಕಾರ್ತಿಕ ಹಾಗೂ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ
Institutions
ಕಿರಿಯ ಪ್ರಾಥಮಿಕ ಶಾˉÉ
Photos
Full Address Kannada
ಶ್ರೀ ಮೂಡಲ ಮಠ ತಿಪ್ಪಸಂದ್ರ- 562 131 ಮಾಗಡಿ ತಾ||, ರಾಮನಗರ ಜಿˉÉ್ಲ