Shree Melanagavi Veera Simhasana Samsthana Matha

Shree Melanagavi Veera Simhasana Samsthana Matha Claimed

ಶ್ರೀ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠ

Average Reviews

Description

ಶ್ರೀ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠ – ಶಿವಗಂಗಾ ಸುಕ್ಷೇತ್ರ

ಕರ್ತೃ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರು

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಶಿವಗಂಗಾಸುಕ್ಷೇತ್ರವು ದಕ್ಷಿಣ ಕಾಶಿಯೆಂದೇ ಪ್ರಸಿದ್ದಿ ಪಡೆದ ಪಾವನ ಕ್ಷೇತ್ರ. ಸಾಕ್ಷಾತ್ ಶಿವನೇಗಂಗಾಧರೇಶ್ವರನಾಗಿ ಸ್ವರ್ಣಾಂಭ ಸಹಿತವಾಗಿ ನೆಲೆಸಿದ ತಾಣವಿದೆಂದು ಹೇಳಲಾಗುತ್ತದೆ.ಇಂತಹ ಪುಣ್ಯ ಕ್ಷೇತ್ರದಲ್ಲಿರುವ ಶ್ರೀ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠವುಅನಾದಿ ಕಾಲದಿಂದಲೂ ಪ್ರಸಿದ್ದಿ ಪಡೆದ ಮಠವಾಗಿದೆ. ರಂಭಾಪುರಿ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರೇ ಶ್ರೀ ರುದ್ರಮುನೀಶ್ವರರಿಗೆ ಶಿವದೀಕ್ಷೆ ಮತ್ತು ಷಟ್‍ಸ್ಥಲ ಸಿದ್ದಾಂತವನ್ನುಉಪದೇಶ ಮಾಡಿದ ಸ್ಥಳವೇ ಶ್ರೀ ಮೇಲಣಗವಿ ಮಠವಾಗಿ ಬೆಳೆದಿದೆ ಎಂಬ ಪ್ರತೀತಿ ಇದೆ.ಅಂದು ಉದ್ಭವವಾದ ಕಳಶ ತೀರ್ಥವೇ ಇಂದು ಒಳಕಲ್ಲು ತೀರ್ಥವಾಗಿದೆ ಎನ್ನಲಾಗಿದೆ.ಇಲ್ಲಿನ ವಿಶೇಷವೆಂದರೆ “ಪುಣ್ಯವಂತರಿಗೆ ತೀರ್ಥ ಸಿಗುತ್ತದೆ. ಭಾಗ್ಯಹೀನರಿಗೆ ತೀರ್ಥಸಿಗುವುದಿಲ್ಲ” ಎಂಬ ಧಾರ್ಮಿಕ ನಂಬಿಕೆಯ ಪ್ರತೀತಿ ಇದೆ.ಶ್ರೀಮಠವು ಪ್ರಾಚೀನಕಾಲದೆ ್ದಂದು ಹೇಳಲಾದರೂಗುರುಪರಂಪರೆಯ ಬಗೆ ್ಗಸ್ಪಷ್ಟತೆಯಿಲ್ಲ. ಮಠದ ವತಿಯಿಂದಪ್ರಕಟವಾದ (1984) ಸಮರ್ಪಣೆಸ್ಮರಣ ಸಂಚಿಕೆಯಲ್ಲಿ ಶಿವಗಂಗೆಎಸ್.ಪಿ. ಯಡಿಯೂರಪ ್ಪನವರುಶ್ರೀಮಠದ ಗುರುಪರಂಪರೆಯನ್ನುಶಿ ್ರೀವ ು o Àದ ಪಟ್ಟವಲ್ಲ ರಿ ೀಪರಂಪರೆಯಿಂದ ತಿಳಿದು ಬರುವಪಟ್ಟಿಯನ್ನು ನೀಡಿದ್ದಾರೆ. ಅದರ ಪ್ರಕಾರ ಶ್ರೀ ರೇಣುಕರಿಂದ ಅನುಗ್ರಹಿಸಲ್ಪಟ್ಟ ಶ್ರೀರುದ್ರಮುನೀಶ್ವರರಿಂದ ಇಂದಿನ ಶ್ರೀಗಳ ತನಕ 17 ಜನ ಶ್ರೀಗಳ ಪಟ್ಟಿಯನ್ನುಮಾಡಬಹುದಾಗಿದೆ. ಆದರೆ ಶ್ರೀಮಠದ ಬಗ್ಗೆ ಸ್ಪಷ್ಟ ಮಾಹಿತಿಗಳ ಕೊರತೆಯಿಂದ ಇನ್ನೂಅನೇಕ ಶ್ರೀಗಳನ್ನು ಹೆಸರಿಸಲು ಸಾಧ್ಯವಿಲ್ಲದಾಗಿದೆ. ಈ ಮಠ ಅನಾದಿ ಕಾಲದಿಂದಲೂಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯಿಕವಾಗಿ ಬಹಳ ಪ್ರಭಾವಿ ಮಠವಾಗಿ ಸಾಗಿಬಂದಿದೆ.ಶ್ರೀ ಮೇಲಣಗವಿ ಮಠದ ಪೂಜ್ಯರೆಲ್ಲರೂ ಸಾಹಿತ್ಯದ ಅಭಿರುಚಿಯನ್ನುಹೊಂದಿದ್ದಂತೆ ಕಂಡುಬರುತ್ತದೆ. ಪ್ರಾಚೀನದಿಂದಲೂ ಅನೇಕ ಮಹನೀಯ ಸಾಹಿತಿಗಳುಶಿವಶರಣರಿಗೆ ಆಶ್ರಯ ನೀಡಿ ಬೆಳೆಸಿರುವುದನ್ನು ಕಾಣಬಹುದು. ಇದಕ್ಕೆ ಸಾಕ್ಷಿ ಎಂಬಂತೆ“ವೀರಶೈವಾಮೃತ ಪುರಾಣ”, “ಗಣಭಾಷಿತ ರತ್ನಮಾಲೆ”ಗಳ ಕರ್ತೃ ಗುಬ್ಬಿಯಮಲ್ಲಣ್ಣಾರ್ಯರು (ಕ್ರಿ.ಶ. 1513) ಮೇಲಣಗವಿ ಮಠದ ಶಿಷ್ಯರಾಗಿದ್ದು “ಭೂಲೋಕ ಪಾವನ ಕಕುದ್ಗಿರಿ ಸುದಾಕ್ಷಿಣ್ಯ ಕೈಲಾಸವೆನಿಸಿದ್ದ ಮೇಲಣಗವಿ ಮಠದ ಶಿಷ್ಯನಾಗಿರುವೆ” ಎಂದು ತಮ್ಮ“ವೀರಶೈವಾಮೃತ ಪುರಾಣ”ದಲ್ಲಿ ಬರೆದುಕೊಂಡಿದ್ದಾರೆ. ಇವರಲ್ಲದೇ ಹಲಗೆಯಾರ್ಯ,ಕೊಟ್ಟೂರು ಗುರು ಬಸವಲಿಂಗ ಕವಿ ಮುಂತಾದವರು ಈ ಮಠದ ಪ್ರಭಾವಕ್ಕೆ ಒಳಗಾಗಿಮಠದ ಶಿಷ್ಯರಾಗಿದ್ದರು ಎಂದು ತಿಳಿದುಬರುತ್ತದೆ.ಶ್ರೀಮಠದ ಪರಂಪರೆಯಲ್ಲಿ ಅನೇಕ ಮಹಾಮಹಿಮ ಪೂಜ್ಯರು ಆಗಿಹೋಗಿದ್ದಾರೆ. ಅವರಲ್ಲಿ ಅಗ್ರಗಣ್ಯರು ಪಟ್ಟದ ಶ್ರೀ ವಿಶ್ವಾರಾಧ್ಯ ದೇಶಿಕೇಂದ್ರ ಶಿವಾಚಾರ್ಯಮಹಾಸ್ವಾಮಿಗಳು. ಶ್ರೀಗಳು ಬಾಲ್ಯದಿಂದಲೂ ಶಿವಪೂಜಾನಿಷ್ಠರು, ಅಧ್ಯಯನಶೀಲರೂಆಗಿದ್ದರು. ಶಿರಹಟ್ಟಿ ಶ್ರೀ ಫಕೀರಸ್ವಾಮಿ ಮಠದಲ್ಲಿ ಜ್ಯೋತಿಷ್ಯ ಶಾಸ್ತ್ರ, ಸೋಲಾಪುರದ ಶ್ರೀಹೋಟಗಿ ಮಠದಲ್ಲಿ ಸಂಸ್ಕøತ ಅಧ್ಯಯನ, ನಂತರ ಜಗದೀಶ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿಕಲ್ಕತ್ತಾ ಕಾವ್ಯ ಪರೀಕ್ಷೆ ಮುಗಿಸಿ ಉನ್ನತ ಜ್ಞಾನವನ್ನು ಸಂಪಾದಿಸಿದರು. ತದನಂತರಕಾಶಿಯಲ್ಲಿ ಒಂದು ವರ್ಷ, ಬೆಂಗಳೂರಿನ ಶ್ರೀ ಮಹಂತರ ಮಠದಲ್ಲಿ ಐದಾರು ವರ್ಷಗಳಕಾಲ ಸಂಸ್ಕøತ ಸಾಹಿತ್ಯ ಹಾಗೂ ಶಿವಾದ್ವೈತ ಸಿದ್ದಾಂತವನ್ನು ಅಧ್ಯಯನ ಮಾಡಿ 1951ರಲ್ಲಿಶ್ರೀಮಠದ ಅಧಿಕಾರ ಸ್ವೀಕರಿಸಿದರು.1951ರಲ್ಲಿ ಶ್ರೀಮಠದ ಅಧಿಕಾರಕ್ಕೆ ಬಂದ ಶ್ರೀಗಳು ತಮ್ಮ ವಿದ್ವತ್ ಪೂರ್ಣಉಪದೇಶಗಳು, ಆಚರಣೆಗಳ ಮುಖೇನ ಭಕ್ತರಲ್ಲಿ ಧಾರ್ಮಿಕ ಸಂಸ್ಕಾರವನ್ನು ಹೆಚ್ಚಿಸಿದರು.1984ರವರೆಗೆ ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ ಶ್ರೀಗಳು 1984ರಲ್ಲಿ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ ಪಟ್ಟಾಧಿಕಾರವನ್ನು ನೀಡಿ ವಿಶ್ರಾಂತ ಜೀವನನಡೆಸತೊಡಗಿದರು. ಶ್ರೀ ಸಿದ್ದಲಿಂಗ ಶಿವಾಚಾರ್ಯರು ಗುರುಗಳಂತೆಯೇ ವಿದ್ವತ್ ಪೂರ್ಣಪಂಡಿತರು. ಹಿಂದಿನ ರಂಭಾಪುರಿ ಜಗದ್ಗುರು ಶ್ರೀ ರುದ್ರಮುನಿ ಭಗವತ್ಪಾದರಿಂದ“ಮಹಾಚಾರ್ಯ ತತ್ವಪ್ರಚಾರಕ” ಎಂಬ ಬಿರುದನ್ನು ಪಡೆದವರು. ಶ್ರೀಗಳು ಶ್ರೀಮಠಕ್ಕೆ ಬಂದನಂತರ ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದರು.ಗುರುಗಳು ಪ್ರಾರಂಭಿಸಿದ್ದ ಶಿಕ್ಷಣ ಸಂಸ್ಥೆಯನ್ನು ಉನ್ನತೀಕರಿಸಿದ ಶ್ರೀಗಳು 1992ರ ಫೆಬ್ರವರಿ6ರಂದು ಶ್ರೀ ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯಮಹಾಸ್ವಾಮಿಗಳೆಂಬ ಅಭಿದಾನದೊಂದಿಗೆ ಶ್ರೀಮದ್ ರಂಭಾಪುರಿ ಪೀಠದ ಅಧಿಕಾರವನ್ನುವಹಿಸಿಕೊಂಡರು.ತದನಂತರ ಹಿರಿಯ ಗುರುಗಳಾಗಿದ್ದ ಶ್ರೀ ವಿಶ್ವಾರಾಧ್ಯ ದೇಶಿಕೇಂದ್ರಶಿವಾಚಾರ್ಯರು 1994ರ ಫೆಬ್ರವರಿ 24ರಂದು ಈಗಿನ ಶ್ರೀಗಳಾದ ಶ್ರೀ ಪಟ್ಟದ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಶ್ರೀಮಠಕ್ಕೆ ಪಟ್ಟಾಧಿಕಾರಅನುಗ್ರಹವನ್ನು ನೀಡಿ 2003ರಲ್ಲಿ ಲಿಂಗೈಕ್ಯರಾದರು. ಪಟ್ಟದ ಶ್ರೀ ಮಲಯ ಶಾಂತಮುನಿದೇಶಿಕೇಂದ್ರ ಸ್ವಾಮಿಗಳು ಬೆಂಗಳೂರಿನ ಶ್ರೀ ಮಹಾಂತಿನ ಮಠದಲ್ಲಿ ಸಂಸ್ಕøತ, ವೇದಗಳನ್ನುಅಭ್ಯಸಿಸಿದ್ದು ಪರಂಪರೆಯ ಗುರುಗಳಂತೆಯೇ ಅಧ್ಯಯನಶೀಲರು. ಶ್ರೀಗಳು ಶ್ರೀಮಠದಪಟ್ಟಕ್ಕೆ ಬಂದ ನಂತರ ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದರು. ಸದಾ ಹಸನ್ಮುಖಿಗಳಾಗಿ, ಶಾಂತಮೂರ್ತಿಗಳಾಗಿಸಮಷ್ಟಿ ಸಮಾಜವನ್ನು ಮುನ್ನಡೆಸುತ್ತಿರುವ ಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆಶ್ರಮಿಸುತ್ತಿದ್ದಾರೆ.ಶ್ರೀಮಠವು ಪೂರ್ವದಿಂದಲೂ ಧಾರ್ಮಿಕ, ಸಾಮಾಜಿಕ ಕಾರ್ಯಚಟುವಟಿಕೆಗಳಜೊತೆಯಲ್ಲಿ ಶೈಕ್ಷಣಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ. ಲಿಂ. ಪಟ್ಟದ ಶ್ರೀ ವಿಶ್ವಾರಾಧ್ಯದೇಶಿಕೇಂದ್ರ ಶಿವಾಚಾರ್ಯರು ಶ್ರೀ ಜಿ.ಆರ್. ಎಸ್. ವಿದ್ಯಾಪೀಠವನ್ನು ಸ್ಥಾಪಿಸುವ ಮೂಲಕಗ್ರಾಮಾಂತರ ಜನತೆಗೆ ವಿದ್ಯಾದಾನವನ್ನು ಪ್ರಾರಂಭಿಸಿದರು. ಪ್ರಸ್ತುತದ ಶ್ರೀಮದ್ ರಂಭಾಪುರಿಜಗದ್ಗುರುಗಳು ತಮ್ಮ ಪೂರ್ವಾಶ್ರಮದಲ್ಲಿ ಶ್ರೀಮಠದ ಗುರುಗಳಾಗಿ ಅಮವಾಸ್ಯೆ ಪೂಜೆಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಮುಂತಾದ ಕಾರ್ಯಕ್ರಮಗಳನ್ನುಪ್ರಾರಂಭಿಸಿದರು. ಈಗಿನ ಶ್ರೀಗಳಾದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯರು ತಮ್ಮಪೂರ್ವಾಚಾರ್ಯರ ಸಂಕಲ್ಪಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದುಶ್ರೀಮಠದಲ್ಲಿ ಪ್ರೌಢಶಾಲೆ, ವೇದಪಾಠಶಾಲೆ, ಐ.ಟಿ.ಐ. ಕಾಲೇಜು ಹಾಗೂ ಉಚಿತ ವಿದ್ಯಾರ್ಥಿನಿಲಯವನ್ನು ಆರಂಭಿಸಿ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರತಿ ವರ್ಷವೂಶ್ರೀಮಠದ ವತಿಯಿಂದ ಸಮಾಜದ ವಿವಿಧ ರಂಗಗಳಲ್ಲಿ ಸಾಧಿಸಿರುವ ಸಾಧಕರಿಗೆ“ಶಿವಗಂಗಾ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

Swamiji

Swamiji Name :
ಪಟ್ಟದ ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
16-09-1966
Place :
ಕೆಲೂರು, ಹುನಗುಂದ ತಾ||
Pattadikara :
24-02-1994
Photo :

Programs

ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಯುಗಾದಿಯಂದು ಪಂಚಾಂಗ ಶ್ರವಣ
ದಸರದಲ್ಲಿ 10 ದಿನಗಳ ಕಾಲ ಶ್ರೀ ದೇವಿ ಪುರಾಣ ಪ್ರವಚನ
ಕಾರ್ತಿಕ ಮಾಸದಲ್ಲಿ ದೀಪೋತ್ಸವ
ಪಾಲ್ಗುಣ ಮಾಸದಲ್ಲಿ ಕೊನೆಯ ಮಂಗಳವಾರ
ಲಿಂ|| ಶ್ರೀ ಶಾಂತಮ್ಮನವರ ಪುಣ್ಯಾರಾಧನೆ
ಶಾª್ರÀಣ ಮಾಸದ ಶಿವಪೂಜಾನುಷ್ಠಾನ, ಪ್ರವಚನ
ಶ್ರೀ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸª

Institutions

ವೇದ ಪಾಠಶಾಲೆ
ಕಿರಿಯ/ಹಿರಿಯ ಪ್ರಾಥಮಿಕ / ಪೌq್ರsÀಶಾಲೆ
ಪದವಿ ಪೂರ್ವ ಕಾಲೇಜ್
ವಿದ್ಯಾರ್ಥಿ ನಿಲಯ / ಐ.ಟಿ.ಐ. ಕಾಲೇಜ್
ಗೋಶಾಲೆ

Photos

Full Address Kannada

ಶ್ರೀ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠ
ಶ್ರೀ ಶಿವಗಂಗಾ ಸುಕ್ಷೇತ್ರ - 562 111
ನೆಲಮಂಗಲ ತಾ||, ಬೆಂಗಳೂರು ಗ್ರಾಮಾಂತರ ಜಿಲ್ಲೆ

Map

Near by Places

ದಾಬಸ್ಪೇಟೆ - 7 ಕಿ.ಮೀ.
ತುಮಕೂರು - 26 ಕಿ.ಮೀ.
ನೆಲಮಂಗಲ - 27 ಕಿ.ಮೀ.
ಬೆಂಗಳೂರು - 49 ಕಿ.ಮೀ.

Statistic

995 Views
0 Rating
0 Favorite
2 Shares
error: Content is protected !!