Shree MariShivayogigala Matha

Shree MariShivayogigala Matha Claimed

ಶ್ರೀ ಮರಿಶಿವಯೋಗಿಗಳ ಮಠ

Average Reviews

Description

ಶ್ರೀ ಮರಿಶಿವಯೋಗಿಗಳ ಮಠ

ಕರ್ತೃ ಶ್ರೀ ಮ.ನಿ.ಪ್ರ. ಬಳಗಾನೂರು ಮರಿ ಶಿವಯೋಗಿಗಳು

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಳೆಕೋಟೆ ಗ್ರಾಮವು ತಾಲ್ಲೂಕುಕೇಂದ್ರದಿಂದ ಕೇವಲ 7 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದ ಗುಡ್ಡದಪಕ್ಕದಲ್ಲಿ ಸುಮಾರು 125 ವರ್ಷಗಳ ಹಿಂದೆ ಬಳಗಾನೂರು ಶ್ರೀ ಮರಿಸ್ವಾಮಿ ತಾತನವರಕಾಲದಲ್ಲಿ ಸ್ಥಾಪಿತಗೊಂಡಿದೆಯೆಂದು ಹೇಳಲಾದ ಶ್ರೀ ಮರಿಸ್ವಾಮಿ ತಾತನವರ ಮಠವುಅಸ್ತಿತ್ವದಲ್ಲಿದ್ದು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ.ಶ್ರೀ ತಾತನವರು ಮೂಲತಃ ರಾಯಚೂರು ಜಿಲ್ಲೆ ಬಳಗಾನೂರಿನವರಾಗಿದ್ದುಅಲ್ಲಿನ ವಿರಕ್ತಮಠದ ಪಟ್ಟಾಧಿಕಾರಿಗಳಾಗಿ ಅಧಿಕಾರ ನಡೆಸಿದರೆಂದು ತಿಳಿದುಬರುತ್ತದೆ.ಮಹಾನ್ ತಪೋನಿಷ್ಠರಾಗಿದ್ದ ತಾತನವರು ಸದಾ ಸಂಚಾರಿಗಳಾಗಿದ್ದರು. ಹಾಗೂ ತಾವುಅನುಷ್ಠಾನಗೊಂಡ ಸ್ಥಳಗಳನ್ನೆಲ್ಲಾ ಪುಣ್ಯಕ್ಷೇತ್ರಗಳನ್ನಾಗಿ ಮಾಡಿ ಭಕ್ತರನ್ನು ಉದ್ಧರಿಸಿದರುಎಂದು ಹೇಳಲಾಗಿದೆ.ಶ್ರೀ ಮರಿಸ್ವಾಮಿ ತಾತನವರು ಲೋಕಸಂಚಾರ ಮಾಡುತ್ತಾ ಸಿರುಗುಪ್ಪಕ್ಕೆ ಬಂದುಅಲ್ಲಿ ಅನುಷ್ಠಾನ ಕೈಗೊಂಡು ಕೊನೆಯಲ್ಲಿ ಹಳೇಕೋಟೆಗೆ ಬಂದವರಾಗಿದ್ದಾರೆ.ಹಳೇಕೋಟೆಗೆ ಬಂದ ಗುರುಗಳು ಇಲ್ಲಿನ ಅವ್ಯವಸ್ಥೆ ಹಾಗೂ ಬರ ಪರಿಸ್ಥಿತಿಯನ್ನು ಕಂಡುಇಲ್ಲಿ ಅನುಷ್ಠಾನಗೊಂಡು ಪವಾಡಗಳನ್ನು ನಡೆಸಿದರೆಂದು ಪ್ರತೀತಿ ಇದೆ. ಗುರುಗಳು ಇಲ್ಲಿಪ್ರತಿನಿತ್ಯ ಶಿವಾನುಭವ ಗೋಷ್ಠಿಗಳು ಹಾಗೂ ಅನ್ನದಾಸೋಹವನ್ನು ನಡೆಸುವುದರ ಜೊತೆಗೆವೀರಶೈವ ಧರ್ಮದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇಂತಹ ಮಹಾಮಹಿಮರುಶ್ರೀಕ್ಷೇತ್ರವನ್ನು ಪ್ರಸಿದ್ಧಿಗೊಳಿಸಿ ಜೀವಂತ ಸಮಾಧಿಯಾದರು ಎಂದು ತಿಳಿದುಬರುತ್ತದೆ.ಶ್ರೀ ಮರಿಸ್ವಾಮಿ ತಾತನವರ ಸಮಾಧಿ ಮೇಲೆ ಗದ್ದುಗೆ ನಿರ್ಮಿಸಿದ ಭಕ್ತರು ನಿತ್ಯಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈಗಿನ ಶ್ರೀಗಳಾದ ಶ್ರೀಮಲ್ಲಿಕಾರ್ಜುನ ಸ್ವಾಮಿಗಳು 1974ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕಹಾಗೂ ಸಾಮಾಜಿಕವಾಗಿ ಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ ಹಾಗೂಮಠವನ್ನು ಅಭಿವೃದ್ಧಿಪಡಿಸಿದ್ದಾರೆ. ಶ್ರೀಮಠದ ಜಾತ್ರೆಯು ಅಕ್ಷಯ ತಿದಿಗೆ ಅಮವಾಸ್ಯೆಗೆಜರುಗುತ್ತಿದ್ದು ಆ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗುತ್ತಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು
Date of Birth :
1953
Place :
ಪಲಕಿ, ಅನಂತಪುರ
Pattadikara :
16-6-1974
Photo :

Programs

ಪ್ರತಿ ಅಮವಾಸ್ಯೆಗೆ ಪಲ್ಲಕ್ಕಿ ಉತ್ಸವ.
ಶಿವರಾತ್ರಿಯಂದು ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ಅಕ್ಷಯ ತದಿಗೆ ಅಮವಾಸ್ಯೆಗೆ ಶ್ರೀಮಠದ ಜಾತ್ರೆ ಹಾಗೂ ಸಾಮೂಹಿಕ ವಿವಾಹಗಳು.
ನವರಾತ್ರಿಗೆ ಶ್ರೀದೇವಿ ಪುರಾಣ ಪಾರಾಯಣ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.
ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ಮರಿಶಿವಯೋಗಿಗಳ ಮಠ
ಹಳೇಕೋಟೆ - 583 122
ಸಿರುಗುಪ್ಪ ತಾ|| ಬಳ್ಳಾರಿ ಜಿ||

Map

Near by Places

ಸಿರುಗುಪ್ಪ - 7 ಕಿ.ಮೀ.
ತೆಕ್ಕಲಕೋಟೆ - 3 ಕಿ.ಮೀ.
ಸಿಂಧನೂರು - 42 ಕಿ.ಮೀ.
ಬಳ್ಳಾರಿ - 55 ಕಿ.ಮೀ.

Statistic

33 Views
0 Rating
0 Favorite
0 Share
error: Content is protected !!