Shree Mahanteshwara Viraktamatha – Bairamadagi

Shree Mahanteshwara Viraktamatha – Bairamadagi Claimed

ಶ್ರೀ ಮಹಾಂತೇಶ್ವರ ಸಂಸ್ಥಾನ ವಿರಕ್ತಮಠ -ಭೈರಾಮಡಗಿ

Average Reviews

Description

ಶ್ರೀ ಮಹಾಂತೇಶ್ವರ ಸಂಸ್ಥಾನ ವಿರಕ್ತಮಠ -ಭೈರಾಮಡಗಿ

ಕರ್ತೃ – ಶ್ರೀ ಮ.ನಿ.ಪ್ರ. ಮಹಾಂತೇಶ್ವರ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಭೈರಾಮಡಗಿ ಗ್ರಾಮದಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಪುರಾತನ ಕಾಲದ ಶ್ರೀ ಮಹಾಂತೇಶ್ವರ ಸಂಸ್ಥಾನ ವಿರಕ್ತಮಠವು ಪೂಜ್ಯ ಶ್ರೀ ಮ.ನಿ.ಪ್ರ. ಮಹಾಂತೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡು ಈಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸುತ್ತಿದೆ. ಹನ್ನೊಂದನೆಯಶತಮಾನದಲ್ಲಿ ಸ್ಥಾಪಿತಗೊಂಡಿತೆಂದು ಹೇಳಲಾಗುವ ಶ್ರೀ ಮಹಾಂತೇಶ್ವರ ಸಂಸ್ಥಾನ ವಿರಕ್ತಮಠದ ಪರಂಪರೆಯ ಗುರುಗಳ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ.ಕರ್ತೃ ಗುರುಗಳಾದ ಶ್ರೀ ಮ.ನಿ.ಪ್ರ. ಮಹಾಂತೇಶ್ವರ ಮಹಾಸ್ವಾಮಿಗಳುಲೋಕಕಲ್ಯಾಣಾರ್ಥ ಸಂಚಾರ ಕೈಗೊಂಡು ಅಲ್ಲಲ್ಲಿ ನೆಲೆಗೊಂಡು ಅನುಷ್ಠಾನಗೊಳ್ಳುತ್ತಾಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿಕೊಂಡಿದ್ದರು. ಕರ್ತೃ ಗುರುಗಳು ಕೊನೆಯಲ್ಲಿಭೈರಾಮಡಗಿಗೆ ಬಂದು ನೆಲೆಸಿ ಮಠವನ್ನು ಸ್ಥಾಪನೆ ಮಾಡಿದ್ದಾರೆಂದು ತಿಳಿದುಬರುತ್ತಿದ್ದು ಈಕಾರಣಕ್ಕಾಗಿ ಶ್ರೀಮಠವನ್ನು ಕರ್ತೃಗುರುಗಳ ಹೆಸರಿನಿಂದಲೇ ಗುರುತಿಸಲಾಗುತ್ತಿದೆ.ಶ್ರೀಮಠದ ಪರಂಪರೆಯಲ್ಲಿ ಈವರೆಗೂ ಇಪ್ಪತ್ತು ಜನ ಶ್ರೀಗಳು ಅಧಿಕಾರನಡೆಸಿದ್ದಾರೆಂದು ಹೇಳಲಾದರೂ ಈ ಗುರುಗಳ ಬಗ್ಗೆ ಹೆಚ್ಚು ಮಾಹಿತಿ ದೊರೆಯದಾಗಿದೆ.ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು ತಮ್ಮ ಆಚರಣೆಗಳೊಂದಿಗೆಶ್ರೀಮಠವನ್ನು ಅಭಿವೃದ್ದಿ ಪಡಿಸಿದ್ದು ಕಂಡುಬರುತ್ತದೆ. ಪರಂಪರೆಯಲ್ಲಿ ಬಂದಿರುವ ಎಲ್ಲಾಗುರುಗಳೂ ಶ್ರೀಮಠವನ್ನು ತಮ್ಮ ಶಕ್ತ್ಯಾನುಸಾರ ಅಭಿವೃದ್ದಿಗೊಳಿಸಿದ್ದು ಮಠದ ಕಟ್ಟಡವುಆಕರ್ಷಣೀಯವಾಗಿದೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು 1985ರಲ್ಲಿ ಶ್ರೀಮಠದಅಧಿಕಾರವನ್ನು ವಹಿಸಿಕೊಂಡು ಅಭಿವೃದ್ದಿಪಡಿಸುತ್ತಿದ್ದು ಶ್ರೀಮಠದಲ್ಲಿ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಸ್ವತಃಸಾಹಿತಿಗಳೂ ಆಗಿದ್ದು ಸೃಜನಶೀಲ ರಚನೆಗಳ ಮೂಲಕ ಸಮಾಜವನ್ನು ತಿದ್ದುವಕಾರ್ಯದಲ್ಲಿ ನಿರತರಾಗಿದ್ದಾರೆ. ಶ್ರೀಗಳು ಈ ರೀತಿಯಾಗಿ ಧಾರ್ಮಿಕ, ಸಾಮಾಜಿಕ ಹಾಗೂಸಾಹಿತ್ಯದ ಕಾರ್ಯಚಟುವಟಿಕೆಗಳ ಮೂಲಕ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಗವಿಮಹಾಂತ ಸ್ವಾಮಿಗಳು
Date of Birth :
1949
Place :
ಕ್ಯಾಸನೂರು, ಹಾನಗಲ್ ತಾ||
Pattadikara :
1985
Photo :

Programs

ಪ್ರತಿ ಅಮವಾಸಗೆ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ಭಜನೆ, ಶ್ರೀ ಹಿರಿಯ ಗುರುಗಳ ಸ್ಮರಣೋತ್ಸವ
ನವೆಂಬರ್ 18ರಂದು ಶ್ರೀ ಗುರುಗಳ ಸ್ಮರಣೋತ್ಸವ
ಯುಗಾದಿ, ಬಸವಜಯಂತಿ, ಮಹಾಶಿವರಾತ್ರಿಗಳ ಆಚರಣೆ

Photos

Full Address Kannada

ಶ್ರೀ ಮಹಾಂತೇಶ್ವರ ಸಂಸ್ಥಾನ ವಿರಕ್ತಮಠ
ಬೈರಾಮಡಗಿ, ಗೊಬ್ಬೂರು(ಬಿ) ಪೋಸ್ಟ್ - 585 265
ಅಫಜಲಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಗುಬ್ಬೂರು(ಬಿ) 6 ಕಿ.ಮೀ. ಚೌಡಪುರ 9 ಕಿ.ಮೀ. ಅಫಜಲಪುರ 40 ಕಿ.ಮೀ. ಕಲಬುರಗಿ 35 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!