ಕನಕಪುರ ತಾಲ್ಲೂಕಿನ ಹೊರಳಗಲ್ಲಿನ ಶ್ರೀ ಮಹಾಂತೇಶ್ವರ ಮಠವು ಶ್ರೀಕ್ಷೇತ್ರಮರಳೆಗವಿ ಮಠದ 63 ಶಾಖಾಮಠಗಳˉÉ್ಲೂಂದಾಗಿದ್ದು ಶ್ರೀ ಕ್ಷೇತ್ರ ಮರಳೆಗವಿ ಮಠದ ಪಕ್ಕದಗ್ರಾಮವಾದ ಹೊರಳಗಲ್ಲು ಹಾಗೂ ಸುತ್ತಮುತ್ತಲಿನ ಗ್ರಾಮದ ಅಪಾರ ಭಕ್ತ ಮಹಾಶಯರಭಕ್ತಿ ಬೇಡಿಕೆಯ ಪರವಾಗಿ 200 ವರ್ಷಗಳ ಹಿಂದೆ ಹೊರಳಗಲ್ಲು ಗ್ರಾಮದಲ್ಲಿ ಶ್ರೀಮರಳೆಗವಿ ಮಠವು ತನ್ನ ಶಾಖಾಮಠವನ್ನು ಪ್ರಾರಂಭಿಸಿತು ಎಂದು ತಿಳಿದುಬರುತ್ತದೆ.ಶ್ರೀ ಮಹಾಂತೇಶ್ವರ ಮಠದ ಕರ್ತೃಗುರುಗಳೆಂದು ಶ್ರೀ ನಿ.ಪ್ರ.ಸ್ಪ. ನಾಗಲಿಂಗಮಹಾಸ್ವಾಮಿಗಳನ್ನು ಹೆಸರಿಸˉÁಗಿದೆ. ಇವರ ನಂತರ 1962ರ ಮೇ 10ರಲ್ಲಿ ಶ್ರೀಮಠದಪಟ್ಟಾಧಿಕಾರವನ್ನು ಸ್ವೀಕರಿಸಿದ ಶ್ರೀ ನಿ.ಪ್ರ.ಸ್ಪ. ಸಿದ್ದಲಿಂಗ ಸ್ವಾಮಿಗಳು ಶ್ರೀಮಠವನ್ನು ತಮ್ಮಆಚರಣೆಗಳ ಮೂಲಕ ಪ್ರಚಲಿತಕ್ಕೆ ತಂದರು. ಇವರ ನಂತರ ಶ್ರೀಮಠದ ಪೀಠಾಧಿಪತಿಗಳಾಗಿಬಂದವರು ಹಿಂದಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ಪ. ಮಹಾಂತ ಸ್ವಾಮಿಗಳು.ಶ್ರೀ ಮಹಾಂತ ಸ್ವಾಮಿಗಳಿಗೆ 1972ರ ಜೂನ್ 30ರಲ್ಲಿ ಶ್ರೀ ಮರಳೆಗವಿ ಮಠದ ಶ್ರೀನಿ.ಪ್ರ.ಸ್ಪ. ಲಿಂ. ಕಾˉÁಗ್ನಿ ರುದ್ರಮುನಿ ಮಹಾಸ್ವಾಮಿಗಳು ವಿರಕ್ತಾಶ್ರಮ ನೀಡಿ ಶ್ರೀಮಠದಅಧಿಕಾರ ನೀಡಿದರು. ಶ್ರೀ ಮಹಾಂತ ಸ್ವಾಮಿಗಳು ತಮ್ಮ ಗುರುಗಳ ಆಶೀರ್ವಾದ ಹಾಗೂಮಾರ್ಗದರ್ಶನದಲ್ಲಿ ಶ್ರೀ ಮಹಾಂತೇಶ್ವರ ಮಠದ ಅಭಿವೃದ್ದಿಗೆ ಕಾರಣಕರ್ತರಾಗಿದ್ದಾರೆ.1997ರಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿದ ಶ್ರೀಗಳು ಶ್ರೀಮಠದಲ್ಲಿ ನಿರಂತರವಾಗಿಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಧರ್ಮಜಾಗೃತಿಮೂಡಿಸಿದರು. ಈ ರೀತಿಯಾಗಿ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಶ್ರೀಗಳು2007ರ ಜನವರಿ 29ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ಪ. ಇಮ್ಮಡಿ ಸಿದ್ದಲಿಂಗ ಸ್ವಾಮಿಗಳು 2013ರನವೆಂಬರ್ 15ರಂದು ಶ್ರೀ ಮರಳೆಗವಿ ಮಠದ ಶ್ರೀ ನಿ.ಪ್ರ.ಸ್ಪ. ಚರಮೂರ್ತಿ ಮುಮ್ಮಡಿಶಿವರುದ್ರ ಮಹಾಸ್ವಾಮಿಗಳಿಂದ ಷಟ್ಸ್ಥಲ ಬ್ರಹ್ಮೋಪದೇಶ ಪೂರ್ವಕ ವಿರಕ್ತಾಶ್ರಮ ಸ್ವೀಕರಿಸಿಶ್ರೀಮಠದ ಅಧಿಕಾರ ಸ್ವೀಕರಿಸಿದ್ದಾರೆ. ಶ್ರೀ ಇಮ್ಮಡಿ ಸಿದ್ದಲಿಂಗ ಸ್ವಾಮಿಗಳು ಇನ್ನೂಯುವಕರಾಗಿದ್ದು ತಮ್ಮ ಗುರುಗಳಾದ ಮರಳೆಗವಿ ಶ್ರೀಗಳ ಆಶೀರ್ವಾದ ಹಾಗೂಮಾರ್ಗದರ್ಶನದಲ್ಲಿ ಶ್ರೀಮಠವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಇಮ್ಮಡಿ ಸಿದ್ದಲಿಂಗ ಸ್ವಾಮಿಗಳು
Date of Birth :
12-02-1996
Place :
ಚಿದರವಳ್ಳಿ, ನರಸೀಪುರ ತಾ||
Pattadikara :
15-11-2013
Programs
ಕಾರ್ತಿಕ ಮಾಸದಲ್ಲಿ ಲಿಂ|| ಶ್ರೀ ನಿ.ಪ್ರ.ಸ್ವ. ಮಹಾಂತ ಸ್ವಾಮಿಗಳ ಆರಾಧನೆ ಹಾಗೂ ದೀಪೋತ್ಸವ z£sÀ Àುರ್ಮಾಸದಲ್ಲಿ ವಿಶೇಷ ಪೂಜೆ