ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕು ನೆಲ್ಲಿಗೆರೆ ಗ್ರಾಮವು ತಾಲ್ಲೂಕುಕೇಂದ್ರದಿಂದ 11 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಸುಮಾರು 40ವರ್ಷಗಳ ಹಿಂದೆ ಪ್ರಾರಂಭಗೊಂಡಿರಬಹುದಾದ ಮರಿಯಾಲ ಮಠದ ಶಾಖಾ ಮಠವಾದಶ್ರೀ ಮಹಾಂತ ಪಟ್ಟದ ಮಠವು ಅಸ್ತಿತ್ವದಲ್ಲಿದ್ದು ಈ ಗ್ರಾಮದಲ್ಲಿ ಧಾರ್ಮಿಕ ಆಚರಣೆಗಳನ್ನುನಡೆಸಿಕೊಂಡು ಬರುತ್ತಿದೆ.ನೆಲ್ಲಿಗೆರೆ ಗ್ರಾಮದಲ್ಲಿ ಶ್ರೀಮಠವು ಸ್ಥಾಪನೆಯಾಗುವುದಕ್ಕೂ ಪೂರ್ವದಲ್ಲಿ ಒಂದುಮಠವು ಅಸ್ತಿತ್ವದಲ್ಲಿದ್ದು ಶ್ರೀ ಚನ್ನಬಸವ ಸ್ವಾಮಿಗಳೆಂಬುವರು ಧಾರ್ಮಿಕ ಆಚರಣೆಗಳನ್ನುನಡೆಸಿಕೊಂಡು ಬರುತ್ತಿದ್ದರು ಎಂದು ತಿಳಿದು ಬರುತ್ತದೆ. ಆದರೆ ಶ್ರೀ ಚನ್ನಬಸವ ಸ್ವಾಮಿಗಳುಕುಂದೂರು ಬೆಟ್ಟಕ್ಕೆ ಹೋಗಿ ಅನುಷ್ಟಾನಗೊಂಡು ಅಲ್ಲಿಯೇ ಲಿಂಗೈಕ್ಯರಾದರಿಂದ ಅವರಮಠವು ತನ್ನ ಅಸ್ತಿತ್ವವನ್ನು ಕಳೆದುಕೊಂಡು ಜೀರ್ಣಗೊಂಡಿದೆ.ಇದಾದ ಕೆಲ ವರ್ಷಗಳ ನಂತರ ಊರಿನ ಧರ್ಮಾಭಿಮಾನಿಯೊಬ್ಬರುಗ್ರಾಮದಲ್ಲಿ ಧಾಮಿಕ ಆಚರಣೆಗಳನ್ನು ನಡೆಸಲು ಗುರುಗಳ ಅಗತ್ಯವಿದೆ ಎಂದರಿತು ತನ್ನಸ್ವಂತ ಆಸ್ತಿಯಲ್ಲಿ ಕೆಲ ಭಾಗವನ್ನು ಚಾಮರಾಜನಗರ ತಾಲ್ಲೂಕಿನ ಮರಿಯಾಲ ಮಠಕ್ಕೆಬರೆದುಕೊಡುತ್ತಾರೆ. ಹೀಗೆ ಬರೆದು ಕೊಟ್ಟ ಸ್ಥಳದಲ್ಲಿಯೇ ಈಗ್ಗೆ ಸುಮಾರು 40 ವರ್ಷಗಳಹಿಂದೆ ಶ್ರೀಮಠವು ಸ್ಥಾಪಿತಗೊಂಡಿದೆ.ಹೀಗೆ ಸ್ಥಾಪಿತಗೊಂಡ ಶ್ರೀಮಠಕ್ಕೆ ಪಟ್ಟವನ್ನು ವಹಿಸಿಕೊಂಡು ಬಂದವರೇ ಶ್ರೀಪಟ್ಟದ ಮಹಾಂತ ಸ್ವಾಮಿಗಳು. 1979ರ ಏಪ್ರಿˉï 16ರಲ್ಲಿ ಶ್ರೀಮಠದ ಅಧಿಕಾರವನ್ನುವಹಿಸಿಕೊಂಡ ಶ್ರೀಗಳು ತಮ್ಮ ಧಾರ್ಮಿಕ ಆಚರಣೆಗಳಿಂದಾಗಿ ಹಾಗೂ ದಾಸೋಹಕ್ರಮಗಳಿಂದಾಗಿ ಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆ ಮುನ್ನಡೆಸುತ್ತಿದ್ದಾರೆ.ಶ್ರೀ ಮಹಾಂತ ಸ್ವಾಮಿಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳ ಜೊತೆಯಲ್ಲಿಅಸಹಾಯಕರಿಗೆ ಕಂತೆಭಿಕ್ಷೆಯ ಮೂಲಕ ಪ್ರಸಾದದ ವ್ಯವಸ್ಥೆ ಮಾಡುತ್ತಿದ್ದಾರೆ. ಶ್ರೀಗಳುಗ್ರಾಮದ ಹಾಗೂ ಗ್ರಾಮದ ಮನೆಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಪಾˉÉ್ಗೂಂಡುಆಶೀರ್ವದಿಸಿ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಶ್ರೀಮಠದಲ್ಲಿ ಧನುರ್ಮಾಸದವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಪಟ್ಟದ ಮಹಾಂತ ಸ್ವಾಮಿಗಳು
Date of Birth :
1948
Place :
ಕಜ್ಜಿಹುಂಡಿ, ಕೊಳ್ಳೇಗಾಲ ತಾ||
Pattadikara :
16-04-1979
Photo :
Programs
ಪ್ರತಿ ಅಮವಾಸÉ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಧನುರ್ಮಾಸದಲ್ಲಿ ವಿಶೇಷ ಪೂಜೆ
Photos
Full Address Kannada
ಶ್ರೀ ಮಹಾಂತ ಪಟ್ಟದ ಮಠ ನೆಲ್ಲಿಗೆರೆ,
ದೊಡ್ಡಭೂವಳ್ಳಿ ಪೋ. - 571 417
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ