ಕಲಬುರಗಿ ನಗರದ ಸರಾಫ್ ಬಜಾರ್ನ ಭೋಯಿಗಲ್ಲಿಯಲ್ಲಿ ಸುಮಾರು 400ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಹಾಜನ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕಆಚರಣೆಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿದೆ. ಶ್ರೀಮದ್ಉಜ್ಜಯಿನಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವಶ್ರೀ ಮಹಾಜನ ಮಠದ ಸ್ಥಾಪಕ ಗುರುಗಳು ಶ್ರೀ.ಷ.ಬ್ರ. ಸಿದ್ದರಾಮ ಶಿವಯೋಗಿಗಳು.ಶ್ರೀ ಸಿದ್ದರಾಮ ಶಿವಯೋಗಿಗಳು ಶ್ರೀಮಠದ ಕರ್ತೃಗುರುಗಳಾಗಿದ್ದು ಇವರಜೊತೆಯಲ್ಲಿ ಶ್ರೀ.ಷ.ಬ್ರ. ಈಶ್ವರಲಿಂಗ ಶಿವಯೋಗಿಗಳನ್ನೂ ಕರ್ತೃಗುರುಗಳಾಗಿಗುರುತಿಸಲಾಗಿದೆ. ಉಭಯ ಗುರುಗಳೂ ವೀರಶೈವ ತತ್ತ್ವಸಿದ್ದಾಂತಗಳನ್ನು ಜನರಿಗೆಪರಿಣಾಮಕಾರಿಯಾಗಿ ತಲುಪಿಸಿ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದರು. ಇವರುಗಳನಂತರದ ಪರಂಪರೆಯಲ್ಲಿ ಈವರೆಗೂ 7 ಜನ ಶ್ರೀಗಳು ಅಧಿಕಾರ ನಡೆಸಿದ್ದು ಶ್ರೀಮಠವನ್ನುಪ್ರಗತಿಪಥದಲ್ಲಿ ಮುನ್ನಡೆಸಿದ್ದಾರೆ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ಸಿದ್ದರಾಮ ಶಿವಾಚಾರ್ಯಮಹಾಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ ಲಿಂಗೈಕ್ಯರಾಗಿದ್ದು ಇವರುಐಕ್ಯಗೊಂಡ ನಂತರ ಈಗಿನ ಶ್ರೀಗಳ ತಂದೆಯವರೇ ಶ್ರೀಮಠದ ಧಾರ್ಮಿಕ ಆಚರಣೆಗಳನ್ನುನಡೆಸಿದ್ದಾರೆ. ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳುಕಲಬುರಗಿಯಲ್ಲಿ ಎಂ.ಎ. ಸ್ನಾತಕ ಪದವಿ ಪಡೆದಿದ್ದು ನಂತರ ಹುಬ್ಬಳ್ಳಿಯ ಮೂರು ಸಾವಿರಮಠದಲ್ಲಿ ಆಧ್ಯಾತ್ಮ ಶಿಕ್ಷಣವನ್ನು ಪಡೆದರು.ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಶ್ರೀಮಠಕ್ಕೆ ಮರಳಿದ ಶ್ರೀ. ಸಿದ್ದರಾಮಶಿವಾಚಾರ್ಯರು 1988ರ ಅಕ್ಟೋಬರ್ 20 ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದರು.ಶ್ರೀಗಳು 1986ರಲ್ಲಿಯೇ ಶ್ರೀಮಠಕ್ಕೆ ಆಗಮಿಸಿ ಮಠದ ಜೀರ್ಣೋದ್ದಾರ ಕಾರ್ಯಕೈಗೊಂಡು ನಂತರವಷ್ಟೇ ಪಟ್ಟಾಧಿಕಾರ ಸ್ವೀಕರಿಸಿದರು. ಶ್ರೀಗಳು ತಮ್ಮ ಕ್ರಿಯಾಶೀಲವ್ಯಕ್ತಿತ್ತ್ವದಿಂದ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿ ಪಡಿಸುತ್ತಿದ್ದು ಜೊತೆಯಲ್ಲಿಹೈದರಾಬಾದ್ ಕರ್ನಾಟಕ ಶಿವಾಚಾರ್ಯ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿಸಂಘಟನಾ ಕ್ಷೇತ್ರದಲ್ಲಿಯೂ ಹೆಸರು ಗಳಿಸಿದ್ದಾರೆ.
Swamiji
Swamiji Name :
ಶ್ರೀ.ಷ.ಬ್ರ. ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು
Date of Birth :
10-8-1962
Place :
ಕಲಬುರಗಿ
Pattadikara :
20-10-1988
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ
ದಸರಾದಲ್ಲಿ ನಿತ್ಯ ಶ್ರೀದೇವಿ ಪುರಾಣ ಪಾರಾಯಣ
ಆಷಾಡ ಮಾಸ ಚತುರ್ದಶಿಗೆ ಕರ್ತೃಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಮುಕ್ತಾಯಮಂಗಳಕ್ಕೆ ಭಜನೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
Photos
Full Address Kannada
ಶ್ರೀ ಮಹಾಜನ ಮಠ ಸರಾಫ್ ಬಜಾರ್,
ಭೋಯಿಗಲ್ಲಿ, ಕಲಬುರಗಿ - 585 101