Shree Kunduru Bettada Matha

Shree Kunduru Bettada Matha Claimed

ಶ್ರೀ ಕುಂದೂರು ಬೆಟ್ಟದ ಮಠ

Average Reviews

Description

ಶ್ರೀ ಕುಂದೂರು ಬೆಟ್ಟದ ಮಠ – ತೆಂಕಹಳ್ಳಿ

ಕರ್ತೃ – ಪೂಜ್ಯ ಶ್ರೀ ರುದ್ರಮುನಿ ಮಹಾಸ್ವಾಮಿಗಳು

ಮಳವಳ್ಳಿ ತಾಲ್ಲೂಕಿನ ತೆಂಕಹಳ್ಳಿ ಗ್ರಾಮದಿಂದ ಅನತಿ ದೂರದಲ್ಲಿರುವಕುಂದೂರು ಬೆಟ್ಟದ ತಪ್ಪಲಿನಲ್ಲಿ ಸ್ಥಾಪಿತಗೊಂಡಿರುವ ಶ್ರೀ ಕುಂದೂರು ಬೆಟ್ಟದ ಮಠವು ತನ್ನವಿಶಿಷ್ಟ ರೀತಿಯ ಸಂಪ್ರದಾಯದಿಂದ ಪ್ರಚಲಿತದಲ್ಲಿದೆ. 12ನೇ ಶತಮಾನದ ಕˉÁ್ಯಣಕ್ರಾಂತಿಯ ಸಮಯದಲ್ಲಿ ಅನೇಕ ಶರಣರು ದಕ್ಷಿಣಕ್ಕೆ ಬಂದು ಕುಂದೂರು ಬೆಟ್ಟದಗುಹೆಗಳಲ್ಲಿದ್ದರೆಂದು ಪ್ರತೀತಿ.ಸುಮಾರು 100 ವರ್ಷಗಳ ಹಿಂದೆ ಶ್ರೀ ರುದ್ರಮುನಿ ಸ್ವಾಮಿಗಳು ಉತ್ತರದಕಡೆಯಿಂದ ಸಂಚರಿಸುತ್ತಾ ಈ ಭಾಗಕ್ಕೆ ಆಗಮಿಸಿ ಕುಂದೂರು ಬೆಟ್ಟದಲ್ಲಿ ನೆˉÉನಿಂತು ಅಪಾರ¨s Àಕ ್ತಸಮೂಹವನ್ನು ಹೊಂದಿದ್ದರು. ತಮ್ಮ ಪವಾಡಗಳಿಂದ ಮನೆಮಾತಾಗಿದ್ದಕರ್ತೃಗುರುಗಳು 1937ರ ದೀಪಾವಳಿಯಲ್ಲಿ ಲಿಂಗದೊಡನೆ ಬೆರೆತರು. ನಂತರ 1937ರಲ್ಲಿಶ್ರೀಮಠದ ಉತ್ತರಾಧಿಕಾರಿಗಳಾಗಿ ಬಂದ ಶ್ರೀ ಚಿಕ್ಕವೀರಸ್ವಾಮಿಗಳು ಶ್ರೀಮಠವನ್ನು ತಮ್ಮಆಚರಣೆಗಳ ಮೂಲಕ ಬೆಳಗಿ 1971ರಲ್ಲಿ ಲಿಂಗೈಕ್ಯರಾದರು.ಆನಂತರ ಬಂದ ಶ್ರೀ ಮಹಾಂತ ಸ್ವಾಮಿಗಳು ಹಲವು ಕಾಲ ಶ್ರೀಮಠದಶ್ರೇಯೋಭಿವೃದ್ಧಿಗೆ ಶ್ರಮಿಸಿ 1978ರಲ್ಲಿ ಲಿಂಗೈಕ್ಯರಾದರು. ನಂತರ 1976ರಲ್ಲಿಪಟ್ಟಾಧಿಕಾರವನ್ನು ಸ್ವೀಕರಿಸಿದ ಶ್ರೀ ಸುಬ್ಬೇದೇವರು ಸ್ವಾಮಿಗಳು 1978ರಲ್ಲಿಯೇ ತಮ್ಮಉತ್ತರಾಧಿಕಾರಿಗಳನ್ನಾಗಿ ಈಗಿನ ಹಿರಿಯ ಶ್ರೀಗಳಾದ ಶ್ರೀ ಗುರುಸ್ವಾಮಿಗಳನ್ನುನೇಮಿಸಿಕೊಂಡು ಪಟ್ಟಾಧಿಕಾರದ ಅನುಗ್ರಹ ನೀಡಿದರು. ಶ್ರೀ ಸುಬ್ಬೇದೇವರು ಸ್ವಾಮಿಗಳುಸ್ವತಃ ತಾವೇ ಕೃಷಿಕರಾಗಿ ನಿಂತು ಅನ್ನದಾತನ ಮತ್ತು ಅನ್ನದ ಮಹತ್ವವನ್ನು ಸಮುದಾಯಕ್ಕೆತಿಳಿಸಿದರು. ಇವರು 2002ರಲ್ಲಿ ಲಿಂಗೈಕ್ಯರಾದರು.ಈಗಿನ ಹಿರಿಯ ಶ್ರೀಗಳಾದ ಪೂಜ್ಯ ಶ್ರೀ ಗುರು ಸ್ವಾಮಿಗಳು ಹಿರಿಯ ಗುರುಗಳಕೃಪಾಶೀರ್ವಾದ ಬಲದಿಂದ ಮಠದ ಮಹತ್ತನ್ನು ಮತ್ತಷ್ಟು ಹೆಚ್ಚಿಸಿ ಅಪಾರಭಕ್ತಸ್ತೋಮವನ್ನು ಹೊಂದಿರುವರು. ಭಕ್ತರ ಸಹಕಾರದೊಂದಿಗೆ ಮಠದ ಜೀರ್ಣೋದ್ಧಾರಮಾಡಿರುವ ಶ್ರೀಗಳು ಪ್ರಾರ್ಥನಾ ಮಂದಿರ ಕಟ್ಟಿಸಿದ್ದಾರೆ. ಪ್ರಸ್ತುತ ಶ್ರೀಗಳು ತಮ್ಮಉತ್ತರಾಧಿಕಾರಿಗಳನ್ನಾಗಿ ಶ್ರೀ ನಂಜುಂಡ ಸ್ವಾಮಿಗಳನ್ನು ನೇಮಕ ಮಾಡಿಕೊಂಡಿದ್ದುಉಬಯರೂ ಶ್ರೀಮಠದ ಸರ್ವತೋಮುಖ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಗುರು ಮಹಾಸ್ವಾಮಿಗಳು
Date of Birth :
1955
Place :
ಹೊಸಳ್ಳಿ, ಮಳವಳ್ಳಿ ತಾ||
Pattadikara :
01-11-1978
Photo :
Swamiji Name :
ಪೂಜ್ಯ ಶ್ರೀ ನಂಜುಂಡ ಸ್ವಾಮಿಗಳು
Date of Birth :
1970
Place :
ಮುಟ್ಟನಹಳ್ಳಿ, ಮಳವಳ್ಳಿ ತಾ||
Photo :

Programs

ಜನವರಿ ಮೊದಲನೇ ಭಾನುವಾರದಂದು "ವಾರ್ಷಿಕ ಮಹೋತ್ಸವ"
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ ಮತ್ತು ಪ್ರತಿ ಎರಡು ತಿಂಗಳಿಗೊಮ್ಮೆ
ಶ್ರೀ ಮಠದಲ್ಲಿ "ಶಿವಾನುಭವ ಗೋಷ್ಠಿ"
ಕಾರ್ತಿಕ ಮಾಸದಲ್ಲಿ ಶ್ರೀ ಮಠದ ಜಾತ್ರೆ ಮತ್ತು
ಶ್ರೀ ಮೂಲ ಗುರುಗಳ ಪುಣ್ಯಾರಾಧನೆ ಹಾಗೂ
ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು
ಆಷಾಡ ಮಾಸದಲ್ಲಿ ಶ್ರೀ ಲಿಂ||
ಷ.ಬ್ರ. ಚನ್ನಬಸವ ಮಹಾಸ್ವಾಮಿಗಳ ಪುಣ್ಯಾರಾಧ£

Photos

Full Address Kannada

ಶ್ರೀ ಕುಂದೂರು ಬೆಟ್ಟದ ಮಠ
ತೆಂಕಹಳ್ಳಿ, ಕುಂದೂರು ಪೋಸ್ಟ್ - 571 430
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ

Map

Near by Places

ಮಳವಳ್ಳಿ - 10 ಕಿ.ಮೀ.
ತಲಕಾಡು - 15 ಕಿ.ಮೀ.
ಮಂಡ್ಯ - 40 ಕಿ.ಮೀ.
ಮೈಸೂರು - 55 ಕಿ.ಮೀ.

Statistic

316 Views
0 Rating
0 Favorite
0 Share
error: Content is protected !!