Shree Kshetra Kallumatha

Shree Kshetra Kallumatha Claimed

ಶ್ರೀ ಕ್ಷೇತ್ರ ಕಲ್ಲುಮಠ

Average Reviews

Description

ಶ್ರೀ ಕ್ಷೇತ್ರ ಕಲ್ಲುಮಠ

ಕರ್ತೃ – ಚರಮೂರ್ತಿ ಶ್ರೀ ಮಹಾಂತ ಮಹಾಸ್ವಾಮಿಗಳು

ಕೊಡ್ಲಿಪೇಟೆ ಗ್ರಾಮದಿಂದ ಸುಮಾರು 2 ಕಿ.ಮೀ. ಅಂತರದಲ್ಲಿರುವದೊಡ್ಡಕೊಡ್ಲಿಯ ಕಾಫಿ ತೋಟದ ನಿಸರ್ಗದ ರಮಣೀಯ ಸ್ಥಳದಲ್ಲಿ ಸ್ಥಾಪಿತಗೊಂಡುಭಕ್ತರನ್ನು ಪೆÇರೆಯುತ್ತಿರುವ ಸುಕ್ಷೇತ್ರವೇ ಶ್ರೀ ಕ್ಷೇತ್ರ ಕಲ್ಲು ಮಠ. ಸುಮಾರು 16ನೇಶತಮಾನದಲ್ಲಿ ಸ್ಥಾಪಿತಗೊಂಡಿದ್ದಂತೆ ಕಂಡು ಬರುವ ಶ್ರೀಮಠಕ್ಕೆ ಕೊಡಗಿನ ದೊಡ್ಡವೀರರಾಜೇಂದ್ರ ಒಡೆಯರ್ರವರು 1806ರಲ್ಲಿ ಭೂಮಿ ದಾನ ಕೊಟ್ಟಿರುವುದು ಕಂಡುಬರುತ್ತದೆ. ಕಳೆದ ಐದು ಶತಮಾನಗಳಿಂದ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿಗುರುತಿಸಿಕೊಂಡು ಬರುತ್ತಿರುವ ಶ್ರೀಮಠದ ಸ್ಥಾಪಕರು ಪರಮ ಪೂಜ್ಯ ಶ್ರೀ ಚರಮೂರ್ತಿಮಹಾಂತ ಮಹಾಸ್ವಾಮಿಗಳು.ಶ್ರೀ ಕಲ್ಲುಮಠದ ಕಟ್ಟಡವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಠದ ಕಟ್ಟಡಹೊಯ್ಸಳರ ಕಾಲದಲ್ಲಿ ಕಲ್ಲಿನಿಂದ ನಿರ್ಮಾಣಗೊಂಡಿರಬಹುದೆಂದು ಅಂದಾಜಿಸಬಹುದು.ಕಾಲಕ್ರಮೇಣ ಮಠದ ಧಾರ್ಮಿಕ ಕಾರ್ಯಗಳು ಹೆಚ್ಚಾದಂತೆ ಅವಶ್ಯಕತೆಗೆ ಅನುಗುಣವಾಗಿಕಟ್ಟಡವನ್ನು ವಿಸ್ತರಿಸಲಾಗಿದೆ. ಬಹುಶಃ ಶ್ರೀಮಠವು ಹಾಲೇರಿ ಅರಸು ಮನೆತನಕ್ಕೂಪೂರ್ವದಲ್ಲಿ ಚೆಂಗಾಳ್ವರ ಕಾಲದಲ್ಲಿ ಸ್ಥಾಪನೆಗೊಂಡಿರಬಹುದು.ಕರ್ತೃ ಗುರುಗಳಾದ ಶ್ರೀ ಚರಮೂರ್ತಿ ಮಹಾಂತ ಸ್ವಾಮಿಗಳು ಮಹಾನ್ಶಿವಪೂಜಾ ನಿಷ್ಠರಾಗಿದ್ದು ತಮ್ಮ ಆಚರಣೆಗಳ ಮೂಲಕ ಅಪಾರ ಭಕ್ತಬಳಗವನ್ನುಸಂಪಾದಿಸಿಕೊಂಡಿದ್ದರು. ವಾಕ್ಸಿದ್ದಿಪುರುಷರೂ ಆಗಿದ್ದ ಶ್ರೀಗಳು ತಮ್ಮ ಪರಿಶ್ರಮದಿಂದಮಠವನ್ನು ಅಭಿವೃದ್ಧಿಪಡಿಸಿದ್ದು ಇವರ ನಂತರದಲ್ಲಿ ಶ್ರೀ ಚರಮೂರ್ತಿ ಸೋಮಶೇಖರಸ್ವಾಮಿಗಳು ಪಟ್ಟಾಧಿಕಾರ ಸ್ವೀಕರಿಸಿ ಧಾರ್ಮಿಕ ಕಾರ್ಯಗಳನ್ನು ವ್ಯವಸ್ಥಿತವಾಗಿ ನಡೆಸಿದ್ದರು.ಶ್ರೀಮಠದ 3ನೇ ಶ್ರೀಗಳಾದ ಶ್ರೀ ಚರಮೂರ್ತಿ ಚಂದ್ರಶೇಖರ ಸ್ವಾಮಿಗಳು, 4ನೇಶ್ರೀಗಳಾದ ಶ್ರೀ ಚರಮೂರ್ತಿ ಸೋಮಪ್ಪ ಸ್ವಾಮಿಗಳು, 5ನೇ ಶ್ರೀಗಳಾದ ಶ್ರೀ ಚರಮೂರ್ತಿರೇಣುಕ ಸ್ವಾಮಿಗಳು ಹಾಗೂ 6ನೇ ಶ್ರೀಗಳಾದ ಶ್ರೀ ಚರಮೂರ್ತಿ ಬಸವಲಿಂಗ ಸ್ವಾಮಿಗಳುಶ್ರೀಮಠವನ್ನು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಅಭಿವೃದ್ಧಿಗೊಳಿಸಿದ್ದು ಇವರುಗಳಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳ ಅವಶ್ಯಕತೆಯಿದೆ.ಇವರುಗಳ ನಂತರ ಬಂದ ಹಿಂದಿನ ಶ್ರೀಗಳಾದ ಶ್ರೀ ಚರಮೂರ್ತಿ ನಂಜುಂಡಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಅಭಿವೃದ್ಧಿ ಪಥದತ್ತ ಸಾಗಿದೆ. ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ ಶ್ರೀಗಳು ಶ್ರೀಮಠವನ್ನು ಆರ್ಥಿಕವಾಗಿ ಸದೃಢಗೊಳಿಸಿಮಠವು ಸ್ವಾವಲಂಬನೆ ಸಾಧಿಸುವಂತೆ ಮಾಡಿದರು. ಗುರುಗಳು ತಮ್ಮ ಜೀವಿತಾವಧಿಯಲ್ಲಿತುಮಕೂರು ಸಿದ್ದಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಮಠದಆಡಳಿತವನ್ನು ಒಪ್ಪಿಸಿ ಲಿಂಗೈಕ್ಯರಾಗಿದ್ದಾರೆ. ಶ್ರೀ ನಂಜುಂಡ ಸ್ವಾಮಿಗಳು ಲಿಂಗೈಕ್ಯರಾದನಂತರ ಕೆಲವು ದಿನಗಳ ಕಾಲ ಮಠವು ಉತ್ತರಾಧಿಕಾರಿಗಳಿಲ್ಲದೆ ಖಾಲಿ ಉಳಿಯಿತು.ಪ್ರಸ್ತುತ ಶ್ರೀಗಳಾದ ಶ್ರೀ ಚರಮೂರ್ತಿ ಮಹಾಂತ ಸ್ವಾಮಿಗಳು 1957ರಲ್ಲಿಮಡಿಕೇರಿ ತಾಲ್ಲೂಕು ಮದೆನಾಡು ಗ್ರಾಮದ ಓಣಿಪುರ ಮಠದಲ್ಲಿ ಜನಿಸಿದವರಾಗಿದ್ದು ಶ್ರೀಸಿದ್ದಗಂಗಾ ಮಠದಲ್ಲಿ ಪ್ರೌಢ ಶಿಕ್ಷಣದಿಂದ ಬಿ.ಎ. ಪದವಿವರೆಗಿನ ತಮ್ಮ ವಿದ್ಯಾಭ್ಯಾಸಪೂರ್ಣಗೊಳಿಸಿದರು. ಸಿದ್ದಗಂಗಾ ಶ್ರೀಗಳ ಸೇವೆಯನ್ನು ನಿರಂತರವಾಗಿ 10 ವರ್ಷಗಳ ಕಾಲಮಾಡಿಕೊಂಡು ಬಂದ ಶ್ರೀಗಳು ಅಲ್ಲಿಯೇ ವೇದ ಮತ್ತು ಸಂಸ್ಕøತ ವಿಷಯಗಳ ಆಳವಾದಅಧ್ಯಯನ ನಡೆಸಿದರು.ಶ್ರೀ ಮಹಾಂತ ಸ್ವಾಮಿಗಳು ಸಿದ್ದಗಂಗಾ ಮಠದ ಪರಮ ಪೂಜ್ಯ ಶ್ರೀ ಶಿವಕುಮಾರಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಅಲ್ಲಿಯೇ ಶ್ರೀ ಕಲ್ಲುಮಠದ ಪಟ್ಟಾಧಿಕಾರದಅನುಗ್ರಹವನ್ನು 1975ರ ಮೇ 22ರಲ್ಲಿ ಸ್ವೀಕರಿಸಿದರು. ತದನಂತರ ದೊಡ್ಡಕೊಡ್ಲಿಯಸುಕ್ಷೇತ್ರಕ್ಕೆ ಆಗಮಿಸಿ ಮಠದ ಸಂಪೂರ್ಣ ಜವಾಬ್ದಾರಿ ಸ್ವೀಕರಿಸಿದ ಶ್ರೀಗಳು ಹರಿದು ಹಂಚಿಹೋಗಿದ್ದ ಶ್ರೀಮಠದ ಆಸ್ತಿಯನ್ನು ಶಿಸ್ತುಬದ್ದಗೊಳಿಸಿ ವರಮಾನವನ್ನು ಹೆಚ್ಚಿಸಿದರು. ಶ್ರೀಗಳುಪ್ರಗತಿಪರ ಧಾರ್ಮಿಕ ಚಿಂತಕರಾಗಿದ್ದು ಧರ್ಮವನ್ನು ವೈಚಾರಿಕ ದೃಷ್ಟಿಕೋನದಿಂದಅವಲೋಕಿಸಿ ವೀರಶೈವ ಧರ್ಮವನ್ನು ಪ್ರಚುರ ಪಡಿಸುತ್ತಿದ್ದಾರೆ.ಶ್ರೀಗಳು ಕೇವಲ ಧಾರ್ಮಿಕ ಆಚರಣೆಗಳಿಗಷ್ಠೇ ಮಹತ್ವ ನೀಡದೇ ಶ್ರೀಮಠವನ್ನುಸಾಮಾಜಿಕ ಹಾಗೂ ಶೈಕ್ಷಣಿಕವಾಗಿಯೂ ಮುಂದುವರೆಸುತ್ತಿದ್ದಾರೆ. 2002ರಲ್ಲಿ ಶ್ರೀನಂಜುಂಡಸ್ವಾಮಿ ವಿದ್ಯಾಸಂಸ್ಥೆ(ರಿ)ನ್ನು ಸ್ಥಾಪಿಸಿದ್ದು ಇದರ ಅಡಿಯಲ್ಲಿ ಸಂಸ್ಕøತ ಶಾಲೆ,ಕಿರಿಯ/ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿಈ ಭಾಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

Swamiji

Swamiji Name :
ಶ್ರೀ ನಿ.ಪ್ರ.ಸ್ವ. ಚರಮೂರ್ತಿ ಮಹಾಂತ ಮಹಾಸ್ವಾಮಿಗಳು
Date of Birth :
01-03-1957
Place :
ಮದೆನಾಡು ಗ್ರಾಮ, ಮಡಿಕೇರಿ ತಾ||
Pattadikara :
22-05-1975
Photo :

Programs

ಪ್ರತಿ ಹುಣ್ಣಿಮೆಗೆ ಶಿವಾನುಭವ ಗೋಷ್ಠಿ
ಬಸವಜಯಂತಿ ಆಚರಣೆ ಡಿಸೆಂಬರ್ನಲ್ಲಿ
ಶ್ರೀ ಹಿರಿಯ ಗುರುಗಳ & ಕರ್ತೃಗಳ ಪುಣ್ಯಾರಾಧನೆ
ನವಂಬರ್ ತಿಂಗಳಲ್ಲಿ ಶ್ರೀ ಚೌಡಮ್ಮ ದೇವಿ ಹಬ್ಬ ಆಚರಣೆ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಸಂಸ್ಕøತ ಶಾಲೆ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಕ್ಷೇತ್ರ ಕಲ್ಲು ಮಠ ದೊಡ್ಡಕೊಡ್ಲಿ,
ಕೊಡ್ಲಿಪೇಟೆ ಪೋಸ್ಟ್ - 571 231
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ

Map

Near by Places

ಕೊಡ್ಲಿಪೇಟೆ - 2 ಕಿ.ಮೀ.
ಬಾಳುಪೇಟೆ - 23 ಕಿ.ಮೀ.
ಸಕಲೇಶಪುರ - 28 ಕಿ.ಮೀ.
ಹಾಸನ - 55 ಕಿ.ಮೀ.

Statistic

61 Views
0 Rating
0 Favorite
0 Share
error: Content is protected !!