Shree Kotturu Kattimani Hirematha

Shree Kotturu Kattimani Hirematha Claimed

ಶ್ರೀ ಕೊಟ್ಟೂರು ಕಟ್ಟೀಮನಿ ಹಿರೇಮಠ

Average Reviews

Description

ಶ್ರೀ ಕೊಟ್ಟೂರು ಕಟ್ಟೀಮನಿ ಹಿರೇಮಠ

ಕರ್ತೃ ಶ್ರೀ ರೇಣುಕ ಭೂತ ಭುಜಂಗ ಸ್ವಾಮಿಗಳು

ಕೊಟ್ಟೂರು ಪಟ್ಟಣದ ಮಧ್ಯಭಾಗದಲ್ಲಿ ಶ್ರೀ ಭೂತಭುಜಂಗ ಸ್ವಾಮಿಗಳ ಕಾಲದಲ್ಲಿಸ್ಥಾಪಿತಗೊಂಡಿದೆಯೆಂದು ಹೇಳಲಾದ ಶ್ರೀ ಕೊಟ್ಟೂರು ಕಟ್ಟೀಮನೆ ಹಿರೇಮಠವುಅಸ್ತಿತ್ವದಲ್ಲಿದ್ದು ಶ್ರೀಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀ ಭೂತಭುಜಂಗನ ಮಠವೆಂದೂ ಸಹ ಕರೆಯಲ್ಪಡುವ ಶ್ರೀಮಠದಪರಂಪರೆಯಲ್ಲಿ ಬಂದಿರುವ ಹಿಂದಿನ ಗುರುಗಳು ಕೊಟ್ಟೂರು ಶ್ರೀ ಗುರುಬಸವೇಶ್ವರಸ್ವಾಮಿಯ ಕ್ರಿಯಾಮೂರ್ತಿಗಳಾಗಿದ್ದರೆಂದು ತಿಳಿದುಬರುತ್ತದೆ. ಆದರೆ ಕಾಲಕ್ರಮೇಣಶ್ರೀಮಠವು ಖಾಲಿ ಉಳಿದಿದ್ದರಿಂದ ಪ್ರಸ್ತುತ ಶ್ರೀ ಮಹಲ್ ಮಠದ ಗುರುಗಳುಕ್ರಿಯಾಮೂರ್ತಿಗಳಾಗಿ ಕ್ರಿಯೆ ನೀಡುತ್ತಿದ್ದಾರೆ.ಶ್ರೀ ಭೂತಬುಜಂಗ ಸ್ವಾಮಿಗಳು ಪವಾಡ ಪುರುಷರಾಗಿದ್ದು ಅವರ ಪವಾಡಗಳಮೂಲಕ ಜನಪದದ ರೀತಿಯಲ್ಲಿ ಉಳಿದುಕೊಂಡಿದ್ದಾರೆ. ಆದರೆ ಗುರುಗಳ ನಂತರದಪರಂಪರೆಯ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲ. ಅದಕ್ಕೆ ಕಾರಣ ಬಹುಶಃ ನಂತರದಎಲ್ಲಾ ಗುರುಗಳು ಶ್ರೀ ಭೂತಭುಜಂಗ ಸ್ವಾಮಿಗಳ ಹೆಸರನ್ನೇ ಅಭಿದಾನ ಪಡೆದಿರುವುದು.ಬಹುಕಾಲ ಖಾಲಿ ಉಳಿದಿದ್ದ ಶ್ರೀಮಠಕ್ಕೆ 1984ರಲ್ಲಿ ಪಟ್ಟಾಧಿಕಾರ ಹೊಂದಿಬಂದವರು ಹಿಂದಿನ ಶ್ರೀಗಳಾದ ಶ್ರೀ ರೇಣುಕ ಭುಜಂಗ ಸ್ವಾಮಿಗಳು. ಶ್ರೀಗಳು ಅಧಿಕಾರವಹಿಸಿಕೊಂಡ ನಂತರ ಶ್ರೀಮಠವು ಸರ್ವಾಂಗೀಣವಾಗಿ ಅಭಿವೃದ್ಧಿಗೊಂಡಿದೆ. ಶ್ರೀಗಳುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿ ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಅಧಿಕಾರ ವಹಿಸಿಕೊಂಡು ಹಿಂದಿನ ಗುರುಗಳ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಶ್ರೀಮಠದಲ್ಲಿಫಾಲ್ಗುಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವ ನಡೆಯುತ್ತಿದ್ದುಹಂಪಿ ಹುಣ್ಣಿಮೆ ದಿನದಂದು ಶ್ರೀ ಸೋಮಲಿಂಗೇಶ್ವರ ದೇವಸ್ಥಾನದ ರಥೋತ್ಸವವು ಶ್ರೀಗಳನೇತೃತ್ವದಲ್ಲಿ ಜರುಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ
Date of Birth :
1-7-1975
Place :
ರಾಂಪುರ, ಕೂಡ್ಲಿಗಿ ತಾ||
Photo :

Programs

ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ, ಸಾಮೂಹಿಕ ವಿವಾಹಗಳು.
ಫಾಲ್ಗುಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶಿವರಾತ್ರಿಗೆ ಕುರಿಕ್ಕಿ ಲಿಂಗೇಶ್ವರ ದೇವಸ್ಥಾನದಲ್ಲಿ ರಥೋತ್ಸವ.
ಹಂಪಿ ಹುಣ್ಣಿಮೆ ದಿನದಂದು ಶ್ರೀಗಳ ನೇತೃತ್ವದಲ್ಲಿ ಶ್ರೀ ಸೋಮಲಿಂಗೇಶ್ವರ ದೇವಸ್ಥಾನದ ರಥೋತ್ಸವ ನಡೆಯುತ್ತದೆ.

Institutions

ಪೂರ್ವ ಪ್ರಾಥಮಿಕ ಶಾಲೆ. ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.

Photos

Full Address Kannada

ಶ್ರೀ ಕೊಟ್ಟೂರು ಕಟ್ಟೀಮನಿ ಹಿರೇಮಠ
ಕೊಟ್ಟೂರು - 583 134 ಕೂಡ್ಲಿಗಿ
ತಾ||, ಬಳ್ಳಾರಿ ಜಿ||

Map

Near by Places

ಕೂಡ್ಲಿಗಿ - 21 ಕಿ.ಮೀ.
ಹರಪನಹಳ್ಳಿ - 32 ಕಿ.ಮೀ.
ಚಿತ್ರದುರ್ಗ - 78 ಕಿ.ಮೀ.
ದಾವಣಗೆರೆ - 80 ಕಿ.ಮೀ.

Statistic

42 Views
0 Rating
0 Favorite
0 Share
error: Content is protected !!