Shree Kottureshwara Matha

Shree Kottureshwara Matha Claimed

ಶ್ರೀ ಕೊಟ್ಟೂರೇಶ್ವರ ಮಠ

Average Reviews

Description

ಶ್ರೀ ಕೊಟ್ಟೂರೇಶ್ವರ ಮಠ

ಕರ್ತೃ – ಶ್ರೀ ಗುರು ಬಸವರಾಜೇಂದ್ರ ಮಹಾಸ್ವಾಮಿಗಳು

ಶಿವನ ಅಪ್ಪಣೆಯಂತೆ ಲೋಕೋದ್ಧಾರ ಮಾಡಲು ಆಗಮಿಸಿದರೆಂದು ಹೇಳಲಾದಪಂಚಗಣಾಧೀಶರಲ್ಲಿ ಶ್ರೀ ಕೊಟ್ಟೂರು ಗುರುಬಸವೇಶ್ವರರು ಒಬ್ಬರು. ಪಂಚಗಣಾಧೀಶ್ವರರುಒಂದಾಗಿ ಪುಣ್ಯಕ್ಷೇತ್ರಗಳನ್ನು ದರ್ಶಿಸುತ್ತಾ ಕರ್ನಾಟಕಕ್ಕೆ ಬಂದು ಕೂಡ್ಲಿಗಿ ಬಳಿಯ ಕುಪ್ಪಿನಕೆರೆಗ್ರಾಮದ ಆಂಜನೇಯ ದೇವಾಲಯದಲ್ಲಿ ತಂಗಿದ್ದು ಮುಂದೆ ಸಂಚರಿಸುತ್ತಾ ಬಾಗಳಿಯ ಶ್ರೀಕಲ್ಲೇಶ್ವರ ದೇವಾಲಯಕ್ಕೆ ಆಗಮಿಸುತ್ತಾರೆ. ಈ ಐವರು ಮಹಾ ಶಿವಶರಣರುಸಮಾಲೋಚಿಸಿ ತಾವುಗಳು ಬೇರೆಬೇರೆಯಾಗಿ ಸಂಚಾರ ಹೊರಟಾಗ ಶ್ರೀ ಬಸವೇಶ್ವರರುಕೊಟ್ಟೂರಿಗೆ ಬಂದು ನೆಲೆನಿಲ್ಲುತ್ತಾರೆ ಎಂದು ತಿಳಿದುಬರುತ್ತದೆ.ಶ್ರೀ ಗುರು ಬಸವೇಶ್ವರರು ಸುಮಾರು 16-17ನೆಯ ಶತಮಾನದಲ್ಲಿ ಜೀವಿಸಿದ್ದರೆಂದು ತಿಳಿದುಬರುತ್ತದೆ. ಶ್ರೀಗಳು ಕೊಟ್ಟೂರಿಗೆ ಬಂದು ಅನೇಕ ಪವಾಡಗಳನ್ನು ನಡೆಸಿದ್ದಾರೆ.ಹಾಗೆಯೇ ಸದಾ ಕೌಪೀನಧಾರಿಯಾಗಿ ನೋಡುಗರ ಕಣ್ಣಿಗೆ ಹುಚ್ಚನಾಗಿ ಕಾಣಿಸಿಕೊಂಡರು.ಹೀಗೆ ಧಾರ್ಮಿಕತೆಯ ಪ್ರಭಾವದಿಂದಾಗಿ ಜನರಿಗೆ ಹುಚ್ಚನಂತೆ ಕಾಣಿಸಿಕೊಂಡು ತಮ್ಮಪವಾಡಗಳಿಂದ ಈ ಭಾಗದ ಜನರನ್ನು ಉದ್ಧರಿಸಿದ್ದಾರೆ ಎಂದು ಹೇಳುವ ಜಾನಪದಕತೆಗಳು, ಭಕ್ತಿಗೀತೆಗಳು ನಮಗೆ ಸಿಗುತ್ತವೆ.ಶ್ರೀಗುರು ಬಸವೇಶ್ವರರು ಮಹಾ ಶಿವಶರಣರು ತಮ್ಮ ಧಾರ್ಮಿಕ ಚಿಂತನೆಗಳಿಂದಮೌಢ್ಯತೆಗೆ ಒಳಗಾಗಿದ್ದ ಜನರನ್ನು ಸನ್ಮಾರ್ಗಕ್ಕೆ ತಂದರು ಮತ್ತು ಜನರಿಗೆ ವೀರಶೈವಧರ್ಮಾಚರಣೆಗಳನ್ನು ತಿಳಿಸಿಕೊಡುತ್ತಾ ಅವರನ್ನು ಧರ್ಮದ ಕೆಲಸಕ್ಕೆ ಹಚ್ಚಿದರು ಎಂದುತಿಳಿದುಬರುತ್ತದೆ. ಶ್ರೀಗಳು ಪ್ರತಿದಿನ ಸಂಜೆ ಧರ್ಮಸಭೆಗಳನ್ನು ನಡೆಸಿ ಧರ್ಮೋಪದೇಶಮಾಡುತ್ತಿದ್ದರೆಂದು ತಿಳಿದುಬರುತ್ತದೆ.ಶ್ರೀಗುರು ಬಸವೇಶ್ವರರು ಮೊದಲು ಕೊಟ್ಟೂರಿಗೆ ಬಂದಾಗ ನೆಲೆನಿಂದ ಮಠವೇಶ್ರೀ ಮೂರ್ಕಲ್ ಮಠ, ನಂಬಿಯಕ್ಕನಿಗೆ ಪ್ರೀತಿಯ ಮಗನಾಗಿ ವಾತ್ಸಲ್ಯ ಕಂಡ ಸ್ಥಳವೇತೊಟ್ಟಿಲು ಮಠ. ತಮ್ಮ ಧಾರ್ಮಿಕ ಚಿಂತನೆಗಳಿಂದ ಪ್ರಸಿದ್ಧಿಗೊಂಡು ಧರ್ಮಸಭೆಗಳನ್ನುನಡೆಸುತ್ತಾ ಸಾವಿರಾರು ಭಕ್ತರನ್ನು ಸೆಳೆಯುತ್ತಿದ್ದ ಮಠವೇ ದರ್ಬಾರ್ ಮಠ ಅಥವಾ ಶ್ರೀಹಿರೇಮಠ ಮತ್ತು ಕೊನೆಗೆ ಜೀವಂತ ಸಮಾಧಿ ಹೋದ ಸ್ಥಳವೇ ಶ್ರೀ ಗಚ್ಚಿನ ಮಠವೆಂದುತಿಳಿದುಬರುತ್ತದೆ.ಶ್ರೀಗಳು ಜೀವಂತ ಸಮಾಧಿ ಹೋದ ನಂತರ ಈ ಎಲ್ಲಾ ಸ್ಥಳಗಳಲ್ಲಿಯೂ ಶ್ರೀಬಸವೇಶ್ವರರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಿತ್ಯಪೂಜೆಗಳನ್ನು ನಡೆಸಿಕೊಂಡುಬರಲಾಗುತ್ತಿದೆ. ಪ್ರತಿ ಅಮವಾಸ್ಯೆಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದರ್ಶನಪಡೆಯುತ್ತಾರೆ ಹಾಗೆಯೇ ಪ್ರತಿವರ್ಷ ಫೆಬ್ರವರಿಯಲ್ಲಿ ಶ್ರೀಮಠದ ಜಾತ್ರೆ ನಡೆಯುತ್ತಿದ್ದು ಶ್ರೀಕೊಟ್ಟೂರು ಬಸವೇಶ್ವರ ಸ್ವಾಮಿಗಳ ರಥೋತ್ಸವವು ಲಕ್ಷಾಂತರ ಭಕ್ತಾದಿಗಳಜಯಘೋಷಗಳೊಂದಿಗೆ ಜರುಗುತ್ತದೆ.ಶ್ರೀಗುರು ಕೊಟ್ಟೂರು ಗುರುಬಸವೇಶ್ವರ ಸ್ವಾಮಿಗಳೆಂದರೆ ಸುತ್ತಮುತ್ತಲಿನಜಿಲ್ಲೆಗಳಲ್ಲಿ ಬಹುಪ್ರಸಿದ್ಧಿ. ಈ ಭಾಗಗಳಲ್ಲಿ ನೀವು ಎಲ್ಲಿ ನೋಡಿದರೂ ಕೊಟ್ರಪ್ಪ, ಕೊಟ್ರಯ್ಯ,ಕೊಟ್ರಮ್ಮ, ಕೊಟ್ರೇಶ ಮುಂತಾದ ಶ್ರೀಸ್ವಾಮಿಗಳ ಹೆಸರಿನವರೇ ಕಾಣಸಿಗುತ್ತಾರೆ. ಹಾಗೂದಾವಣಗೆರೆಯ ಹಳೇಪೇಟೆ, ರಾಣೆಬೆನ್ನೂರು ತಾಲ್ಲೂಕಿನ ಐರಣಿ ಮುಂತಾದ ಕಡೆಗಳಲ್ಲಿಶ್ರೀಗುರು ಕೊಟ್ಟೂರೇಶ್ವರ ಗುಡಿಗಳು ಕಾಣಸಿಗುತ್ತಿದ್ದು ಲಕ್ಷಾಂತರ ಭಕ್ತರು ಭಕ್ತಿಯಿಂದಪೂಜಿಸುತ್ತಾರೆ.ಒಂದು ಪ್ರತೀತಿಯಂತೆ ಹಾನಗಲ್ಲು ಕುಮಾರ ಸ್ವಾಮಿಗಳು ಸ್ಥಾಪಿಸಿರುವ‘ಶಿವಯೋಗ ಮಂದಿರ’ದ ಸ್ಥಳದಲ್ಲಿ ಕೊಟ್ಟೂರು ಗುರುಬಸವೇಶ್ವರ ಸ್ವಾಮಿಯ ಗುಡಿಇತ್ತೆಂಬುದು ಇತಿಹಾಸದಲ್ಲಿ ತಿಳಿದುಬರುತ್ತದೆ. ಇಳಕಲ್ ಶ್ರೀ ಮಹಾಂತ ಶಿವಯೋಗಿಗಳುಶಿವಯೋಗ ಮಂದಿರಕ್ಕೆ ಸ್ಥಳವನ್ನು ಹುಡುಕುತ್ತಾ ಹೊರಟಾಗ ಬಿಲ್ವಪತ್ರೆ ಮರಗಳಿಂದಕೂಡಿರುವ ಈ ಪ್ರದೇಶವನ್ನು ನೋಡಿ ಇಲ್ಲೇ ಶಿವಯೋಗಮಂದಿರವನ್ನು ಸ್ಥಾಪಿಸಬೇಕೆಂದುನಿಶ್ಚಯಿಸಿದರೆಂದು ತಿಳಿದುಬರುತ್ತದೆ.

Swamiji

Swamiji Name :
ಶ್ರೀ ಗುರು ಬಸವರಾಜೇಂದ್ರ ಮಹಾಸ್ವಾಮಿಗಳು
Photo :
Swamiji Name :
ಶ್ರೀ ಮ.ನಿ.ಪ್ರ. ಸದಾಶಿವಮೂರ್ತಿಗಳು
Photo :

Programs

ಪ್ರತಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳು. ಪ್ರತಿ ಅಮವಾಸ್ಯೆಗೆ ವಿಶೇಷ ಧಾರ್ಮಿಕ ಆಚರಣೆಗಳು ಹಾಗೂ ದಾಸೋಹ. ಕಾರ್ತೀಕ ಮಾಸದ ಕೊನೆಯ ದಿನ ಬೆಳ್ಳಿ ರಥೋತ್ಸವ ಮತ್ತು ಕಾರ್ತಿಕೋತ್ಸವ. ಶ್ರೀ ಕೊಟ್ಟೂರೇಶ್ವರ ಸ್ವಾಮಿಯು ದಸರಾದಲ್ಲಿ ಬನ್ನಿ ಮುಡಿಯುವುದಕ್ಕೆ ತೇರುಗಡ್ಡೆಯವರೆಗೂ ಹೋಗಿಬರುತ್ತದೆ. ಮಾಘ ಬಹುಳ ದಶಮಿಯ ದಿನದಂದು ಮೂಲ ನಕ್ಷತ್ರದ ಸಮಯದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ.

Photos

Full Address Kannada

ಶ್ರೀ ಕೊಟ್ಟೂರೇಶ್ವರ ಮಠ
ಕೊಟ್ಟೂರು - 583 134
ಕೂಡ್ಲಿಗಿ ತಾ||, ಬಳ್ಳಾರಿ ಜಿ||

Map

Near by Places

ಕೂಡ್ಲಿಗಿ - 21 ಕಿ.ಮೀ. ಹರಪನಹಳ್ಳಿ - 32 ಕಿ.ಮೀ. ಚಿತ್ರದುರ್ಗ - 78 ಕಿ.ಮೀ. ದಾವಣಗೆರೆ - 80 ಕಿ.ಮೀ.

Statistic

246 Views
0 Rating
0 Favorite
0 Share
error: Content is protected !!