Shree Koritoppige Virakta Matha

Shree Koritoppige Virakta Matha Claimed

ಶ್ರೀ ಕೋರಿಟೊಪ್ಪಿಗೆ ವಿರಕ್ತಮಠ

Average Reviews

Description

ಶ್ರೀ ಕೋರಿಟೊಪ್ಪಿಗೆ ವಿರಕ್ತಮಠ

ಕರ್ತೃ – ಶ್ರೀ ಕೋರಿಟೊಪ್ಪಿಗೆ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು

ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಸುಮಾರು 1486 ರಲ್ಲಿಶ್ರೀ ಕೋರಿಟೊಪ್ಪಿಗೆ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳಿಂದ ಸ್ಥಾಪನೆಯಾಗಿದೆಯೆಂದುಹೇಳಲಾದ ಶ್ರೀ ಕೋರಿಟೊಪ್ಪಿಗೆ ವಿರಕ್ತಮಠವು ಅಂದಿನಿಂದ ಇಂದಿನವರೆಗೂ ಬೆಳೆದುಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಂಡಿದೆ.1486 ರಲ್ಲಿ ಸ್ಥಾಪನೆಗೊಂಡಿರುವ ಶ್ರೀ ಮಠದ ಗುರು ಪರಂಪರೆ ಬಗ್ಗೆ ನಿಖರವಾಗಿಹೇಳಲು ಸಾಧ್ಯವಿಲ್ಲ. ಮಠದ ಪರಂಪರೆಯಲ್ಲಿ ಸುಮಾರು 14 ಸ್ವಾಮಿಗಳು ಆಡಳಿತನಡೆಸಿರಬಹುದೆಂದು ಹೇಳಲಾದರೂ ಅದಕ್ಕೆ ಪುರಾವೆಗಳು ಲಭ್ಯವಿಲ್ಲ. ಆದರೆ 7 ಜನಸ್ವಾಮಿಗಳನ್ನು ಮಾತ್ರ ಗುರುತಿಸಬಹುದಾಗಿದೆ. ಹಾಗೆಯೇ ಮಠದಲ್ಲಿ ಸಿಗುವ ಶಾಸನಗಳಿಂದಶ್ರೀಮಠಕ್ಕೆ ಮೈಸೂರು ಅರಸರಾದ ಶ್ರೀ ಕೃಷ್ಣರಾಜ ಒಡೆಯರ್ರವರು ದತ್ತಿ ನೀಡಿ ಮಠದಅಭಿವೃದ್ಧಿಯಲ್ಲಿ ಪಾಲ್ಗೊಂಡಿರುವ ಮಾಹಿತಿ ದೊರೆಯುತ್ತದೆ.ಈಗಿನ ಶ್ರೀಗಳಾದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಮೇ 14, 2000 ರಲ್ಲಿ ಮಠದಅಧಿಕಾರವಹಿಸಿಕೊಂಡು ಅಭಿವೃದ್ಧಿ ಮಾಡುತ್ತಿದ್ದಾರೆ. ಶ್ರೀಗಳು ಅಧಿಕಾರವಹಿಸಿಕೊಂಡನಂತರ ಮಠದ ಕಟ್ಟಡವನ್ನು ನವೀಕರಣ ಮಾಡಿದ್ದಲ್ಲದೆ ಮಠದ ಸುತ್ತ ಶೈಕ್ಷಣಿಕ ಸಂಸ್ಥೆಗಳಸ್ಥಾಪನೆಗೂ ಕಾರಣರಾಗಿದ್ದಾರೆ. ಹಾಗೆಯೇ ಮಠದ ಕತೃಗದ್ದುಗೆಯನ್ನು ಅಭಿವೃದ್ಧಿಪಡಿಸಿದ್ದಾರೆ.ಶ್ರೀಗಳು ಧಾರ್ಮಿಕ ಕೆಲಸಗಳಿಗೆ ಸೀಮಿತಗೊಂಡ ಮಠವನ್ನು ಶಿಕ್ಷಣ ಮತ್ತುನಿರುದ್ಯೋಗ ನಿರ್ಮೂಲನೆ ಕಡೆಗೆ ಸಮಾಜಮುಖಿಯಾಗಿ ತಲೆಯೆತ್ತಿ ನಿಲ್ಲುವಂತೆ ಮಾಡಲುಸೂಕ್ತ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಹಾಗೆಯೇ ಸಾಹಿತ್ಯದ ಮೂಲಕ ಧರ್ಮಪ್ರಚಾರದ ಕಾರ್ಯಕ್ಕೂ ಕೈ ಹಾಕಿದ್ದಾರೆ.ಶ್ರೀ ಮಠದಲ್ಲಿ ವಿಶೇಷವಾಗಿ ಬಸವ ಜಯಂತಿ ಆಚರಣೆ ಹಾಗೂ ಸಾಮೂಹಿಕವಿವಾಹ ಕಾರ್ಯಕ್ರಮಗಳು ನಡೆಯುತ್ತವೆ. ಹಾಗೆಯೇ ಶ್ರೀಮಠದ ಆವರಣದಲ್ಲಿಪುರಾತನವಾದ ಶಿಲಾಶಾಸನಗಳು, ವೀರಗಲ್ಲುಗಳು, ನಾಗರಕಲ್ಲುಗಳು ಕಾಣಸಿಗುತ್ತವೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಿದ್ದೇಶ್ವರ ಸ್ವಾಮಿಗಳು
Date of Birth :
1954
Place :
ಸೂರಡ್ಡಿಹಳ್ಳಿ ಜಗಳೂರು ತಾ||
Pattadikara :
14-5-2000
Photo :

Programs

ಶ್ರಾವಣಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ. ಬಸವ ಜಯಂತಿಯ ಆಚರಣೆ ಮತ್ತು ಸಾಮೂಹಿಕ ವಿವಾಹಗಳು ನವೆಂಬರ್ ತಿಂಗಳಲ್ಲಿ ಲಿಂ. ಶ್ರೀ ಮ.ನಿ.ಪ್ರ. ಶಿವಕುಮಾರ ಮಹಾಸ್ವಾಮಿಗಳ ಪುಣ್ಯಾರಾಧನೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕತೃಗಳ ಪುಣ್ಯಾರಾಧನೆ.

Institutions

ಶಿಶುವಿಹಾರ ಕಿರಿಯ/ ಹಿರಿಯ ಪ್ರಾಥಮಿಕ ಶಾಲೆ. ಐ.ಟಿ.ಐ. ಕಾಲೇಜು.

Photos

Full Address Kannada

ಶ್ರೀ ಕೋರಿಟೊಪ್ಪಿಗೆ ವಿರಕ್ತಮಠ ಶಿರಾಳಕೊಪ್ಪ- 577 428 ಶಿಕಾರಿಪುರ ತಾ., ಶಿವಮೊಗ್ಗ ಜಿ.

Map

Near by Places

ಶಿಕಾರಿಪುರ - 20 ಕಿ.ಮೀ. ಹಿರೇಕೆರೂರು - 19 ಕಿ.ಮೀ. ಸೊರಬ - 18 ಕಿ.ಮೀ.

Statistic

13 Views
0 Rating
0 Favorite
0 Share
error: Content is protected !!