ಕರಡಕಲ್ ಗ್ರಾಮದ ಹೊರವಲಯದ ಗುಡ್ಡದ ಪಕ್ಕದಲ್ಲಿ ಪರಮಪೂಜ್ಯ ಶ್ರೀಶಾಂತರುದ್ರಮುನಿ ಮಹಾಸ್ವಾಮಿಗಳಿಂದ 1993ರಲ್ಲಿ ಸ್ಥಾಪಿತಗೊಂಡಿರುವ ಶ್ರೀಕೋರಿಸಿದ್ದೇಶ್ವರ ಮಹಾಮಠವು ಚಿತ್ತಾಪುರ ತಾಲ್ಲೂಕಿನ ನಾಲವಾರದ ಶ್ರೀ ಕೋರಿ ಸಿದ್ದೇಶ್ವರಮಹಾಸಂಸ್ಥಾನ ಮಠದ ಶಾಖಾಮಠವಾಗಿ ಬೆಳೆದು ಬಂದಿದ್ದು, ಶ್ರೀಮದ್ ರಂಭಾಪುರಿಪೀಠದ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದೆ.ಶ್ರೀ ಶಾಂತ ರುದ್ರಮುನಿ ಸ್ವಾಮಿಗಳು ಆಧ್ಯಾತ್ಮವನ್ನು ಮೈಗೂಡಿಸಿಕೊಂಡು ಬಾಲ್ಯದಲ್ಲೇ ಅನುಷ್ಠಾನಾದಿಗಳನ್ನು ಮಾಡಿ ಪಾರಮಾರ್ಥದ ಸಾಧನೆಯನ್ನು ಸಿದ್ಧಿಸಿಕೊಂಡವರು.ತದನಂತರ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಠದ ಶ್ರೀ ತೋಟೇಂದ್ರ ಶಿವಾಚಾರ್ಯರಕೃಪಾಶೀರ್ವಾದದಲ್ಲಿ ಪರಿಪಕ್ವಗೊಂಡು ಆಧ್ಯಾತ್ಮಸಿದ್ಧಿಯನ್ನು ಗಳಿಸಿಕೊಂಡರು. ಹೀಗಿರುವಾಗಲೇ ತಮ್ಮ ಸ್ವಗ್ರಾಮಕ್ಕೆ ಮರಳುವ ಶ್ರೀಗಳು ಗುರುಗಳ ಆಶೀರ್ವಾದದೊಂದಿಗೆ ಕರಡಕಲ್ಲಿನಲ್ಲಿ “ಶ್ರೀ ಕೋರಿ ಸಿದ್ದೇಶ್ವರ ಮಹಾಮಠ” ವನ್ನು ಸ್ಥಾಪಿಸಿದ್ದಾರೆ.ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠದ ಕಟ್ಟಡವನ್ನು ಪೂರ್ಣಗೊಳಿಸಿನಿರಂತರ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರಿಗೆ ಸನ್ಮಾರ್ಗ ತೋರುತ್ತಾಮುಂದುವರೆದಿದ್ದಾರೆ. ಪ್ರತಿ ತಿಂಗಳ ಹುಣ್ಣಿಮೆಗೆ “ಶಿವಾನುಭವ ಗೋಷ್ಠಿ” ಗಳನ್ನುಆಯೋಜಿಸಿ ಆ ಮೂಲಕ ವೀರಶೈವ ಧರ್ಮದ ಹಾಗೂ ತತ್ವಾಚರಣೆಗಳನ್ನು ಮನಮುಟ್ಟುವರೀತಿಯಲ್ಲಿ ಭಕ್ತರಿಗೆ ತಲುಪಿಸುತ್ತಿದ್ದಾರೆ.ಶ್ರಾವಣ ಮಾಸದ ನೂಲುಹುಣ್ಣಿಮೆಯ ದಿನ ಸಹಸ್ರಾರು ಭಕ್ತರ ಜೊತೆನಾಲವಾರಕ್ಕೆ (ಗುರುಕ್ಷೇತ್ರಕ್ಕೆ) ಪಾದಯಾತ್ರೆ ಕೈಗೊಳ್ಳುವ ಶ್ರೀಗಳು ಧರ್ಮಜಾಗೃತಿಯನ್ನುಂಟುಮಾಡುತ್ತಿದ್ದಾರೆ. ಮಹಾಶಿವರಾತ್ರಿಯಲ್ಲಿ ಅನೇಕ ಕಾರ್ಯಕ್ರಮಗಳೊಂದಿಗೆ “ಗುರುದೀಕ್ಷೆ”ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ನವರಾತ್ರಿಯಲ್ಲಿ ಒಂಭತ್ತು ದಿನಗಳ ಕಾಲ ಮೌನಅನುಷ್ಠಾನ ಕೈಗೊಳ್ಳುವ ಶ್ರೀಗಳು ವೈಶಾಖ ಮಾಸದಲ್ಲಿ ಶ್ರೀಮಠದ ಜಾತ್ರೆಯನ್ನು ನಡೆಸುತ್ತಾಬಂದಿದ್ದು ಆ ಸಮಯದಲ್ಲಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಸಾಮಾಜಿಕ ಸೇವೆಮಾಡುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಶಾಂತ ರುದ್ರಮುನಿ ಮಹಾಸ್ವಾಮಿಗಳು
Date of Birth :
1965
Place :
ಕರಡಕˉï, ಸುರಪುರ ತಾ||
Photo :
Programs
ಪ್ರತಿ ಹುಣ್ಣಿಮೆಗೆ ಶಿವಾನುಭವ ಗೋಷ್ಠಿ.
ಮಹಾಶಿವರಾತ್ರಿಗೆ ಗುರುದೀಕ್ಷೆ ಕಾರ್ಯಕ್ರಮ.
ವೈಶಾಖ ಮಾಸದಲ್ಲಿ ಶ್ರೀಮಠದ ಜಾತ್ರೆ, ಸಾಮೂಹಿಕ ವಿವಾಹಗಳು.
ಶಾª್ರÀಣ ಮಾಸದಲ್ಲಿ ಗುರುಕ್ಷೇತ್ರಕ್ಕೆ ಪಾದಯಾತ್ರೆ.
ನವರಾತ್ರಿಯಲ್ಲಿ 9 ದಿನ ಶ್ರೀಗಳ ಮೌನ ಅನುಷ್ಠಾನ ಹಾಗೂ
ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಬನದ ಹುಣ್ಣಿಮೆಗೆ ಶ್ರೀದೇವಿ ಪುರಾಣ ಹಾಗೂ ಶ್ರೀದೇವಿ ಭವ್ಯ ಉತ್ಸವ.
ಗುರುಪೂರ್ಣಿಮೆಗೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಕೋರಿಸಿದ್ದೇಶ್ವರ ಮಹಾ ಸಂಸ್ಥಾನ ಸುಕ್ಷೇತ್ರ
ಕರಡಕಲ್ - 585 216
ಸುರಪುರ ತಾ||, ಯಾದಗಿರಿ ಜಿ||