ಖಜೂರಿ ಗ್ರಾಮದ ಹೊರವಲಯದಲ್ಲಿ ಸ್ಥಾಪನೆಯಾಗಿರುವ ಶ್ರೀ ಕೋರಣೇಶ್ವರಸಂಸ್ಥಾನ ಮಠವು ಕಳೆದ ಶತಮಾನದಲ್ಲಿ ಪ್ರಾರಂಭಗೊಂಡ ಮಠವಾಗಿದ್ದು ಜಾಗೃತಸ್ಥಳವಾಗಿದೆ. ಕಾಸಾರ ಸಿರಸಿ ಗ್ರಾಮದ ಕರಿಬಸವೇಶ್ವರ ಮಠದ ಆಗಿನ ಮಠಾಧ್ಯಕ್ಷರಾದ ಶ್ರೀಕರಿಬಸವ ಶಿವಾಚಾರ್ಯರು ಧರ್ಮಪ್ರಚಾರಾರ್ಥ ಲೋಕಸಂಚಾರ ಕೈಗೊಂಡು ಆಳಂದತಾಲ್ಲೂಕಿನ ಖಜೂರಿ ಗ್ರಾಮಕ್ಕೆ ಬಂದು ಇಲ್ಲಿನ ಭೀಮರಾಯ ಅಲ್ದಿ ಎಂಬುವವರ ರೋಗಗುಣಮಾಡುತ್ತಾರೆ. ನಂತರದಲ್ಲಿ ಭೀಮರಾಯ ಅಲ್ದಿಯವರಿಗೆ ಗಂಡು ಮಗು ಜನಿಸಿ ಆಮಗುವನ್ನು ಕಾಸಾರ ಸಿರಸಿ ಮಠಕ್ಕೆ ಒಪ್ಪಿಸುತ್ತಾರಂತೆ ಎಂಬ ಐತಿಹ್ಯವಿದ್ದು ಆ ಮಗುವೇಕಾಸಾರಸಿರಸಿಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಬೆಳೆದುಸಂಸ್ಕಾರವನ್ನು ಪಡೆದು “ಶ್ರೀ ಕೋರಣೇಶ್ವರ” ರೆಂಬ ಹೆಸರಲ್ಲಿ ಪ್ರಸಿದ್ದರಾದರು. ಶ್ರೀಕೋರಣೇಶ್ವರರು ಲೋಕ ಸಂಚಾರದಲ್ಲಿ ಅನೇಕ ಪವಾಡಗಳನ್ನು ಮಾಡಿ ಭಕ್ತರನ್ನುಉದ್ದರಿಸುತ್ತ ಖಜೂರಿಗೆ ಮರಳಿ 1919ರಲ್ಲಿ ಐಕ್ಯಗೊಳ್ಳುತ್ತಾರೆ. ಗುರುಗಳು ಲಿಂಗೈಕ್ಯರಾದಸಮಾದಿ ಸ್ಥಳದಲ್ಲಿ ಮಠವು ರೂಪುಗೊಂಡು ಧಾರ್ಮಿಕ ಕಾರ್ಯಗಳನ್ನು ನಡೆಸತೊಡಗಿತು.ಶ್ರೀ ಕೋರಣೇಶ್ವರ ಸಂಸ್ಥಾನ ಮಠವನ್ನು 1992ರವರೆಗೆ ಕಾಸಾರಸಿರಸಿಯಗುರುಗಳೇ ನೋಡಿಕೊಂಡು ಬಂದಿದ್ದು ನಂತರ ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿಮುರುಘಾ ಶರಣರ ಕೃಪಾಶೀರ್ವಾದದಿಂದ ಬೆಳೆದ ಶ್ರೀ ಮ.ನಿ.ಪ್ರ. ಮುರುಘೇಂದ್ರಮಹಾಸ್ವಾಮಿಗಳು 1996ರ ಡಿಸೆಂಬರ್ 15ರಲ್ಲಿ ಪಟ್ಟಾಧಿಕಾರ ಸ್ವೀಕರಿಸುತ್ತಾರೆ. ಚಿತ್ರದುರ್ಗ,ಧಾರವಾಡಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಶ್ರೀಗಳು ಶ್ರೀಮಠಕ್ಕೆ ಭಕ್ತರಸಹಕಾರದೊಂದಿಗೆ ನೂತನ ಕಟ್ಟಡ ನಿರ್ಮಿಸುತ್ತಾರೆ.ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು ಶ್ರೀಮಠದ ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು ಶ್ರೀಮಠದ ಜಮೀನನ್ನುಅಭಿವೃದ್ಧಿಪಡಿಸಿ ಮಠದ ಆದಾಯ ಮೂಲವನ್ನು ಹೆಚ್ಚಿಸಿದ್ದಾರೆ. ಜನಜಾಗೃತಿಗಾಗಿ ಅನೇಕಪಾದಯಾತ್ರೆಗಳನ್ನು ಕೈಗೊಂಡ ಶ್ರೀಗಳು ಸಮಾಜದಲ್ಲಿನ ಮೌಢ್ಯ, ಅಂಧಕಾರಗಳನ್ನುದೂರಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಯುಗಾದಿಯಂದು ಪ್ರಾರಂಭವಾಗಿಒಂದು ತಿಂಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕೊನೆ ದಿನ ಶ್ರೀಕೋರಣೇಶ್ವರ ರಥೋತ್ಸವ ಜಗುರುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು
Date of Birth :
01-09-1961
Place :
ಅಸೂಟಿ, ರೋಣ ತಾ||
Pattadikara :
15-10-1996
Photo :
Programs
ಯುಗಾದಿಯಿಂದ ಪ್ರಾರಂಭವಾಗಿ ಒಂದು ತಿಂಗಳ ಕಾಲ ಪುರಾಣ ಪ್ರವಚನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಅಖಿಲ ಭಾರತ ಶರಣ ಸಂಸ್ಕøತಿ ಉತ್ಸವ ಸಮಿತಿಯ ಅಧ್ಯಕ್ಷರ ಮೆರವಣಿಗೆ ನಡೆಯುತ್ತದೆ ಹಾಗೂ ಕೊನೆಯ ದಿನ ಶ್ರೀಮಠದ ರಥೋತ್ಸವ ಇರುತ್ತದೆ.
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಕೋರಣೇಶ್ವರ ಸಂಸ್ಥಾನ ಮಠ
ಖಜೂರಿ - 585314
ಆಳಂದ ತಾ||, ಕಲಬುರಗಿ ಜಿಲ್ಲೆ