Shree Khattangeshwara Matha Sulepet

Shree Khattangeshwara Matha Sulepet Claimed

ಶ್ರೀ ಖಟ್ವಾಂಗೇಶ್ವರ ಮಠ ಸುಲೇಪೇಟ್

Average Reviews

Description

ಶ್ರೀ ಖಟ್ವಾಂಗೇಶ್ವರ ಮಠ ಸುಲೇಪೇಟ್

ಕರ್ತೃ – ಶ್ರೀ ಗುರು ಖಟ್ವಾಂಗೇಶ್ವರ ಮಹಾಸ್ವಾಮಿಗಳು

ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಗ್ರಾಮದ ಮಧ್ಯಭಾಗದಲ್ಲಿ ಸುಮಾರು 400ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಖಟ್ವಾಂಗೇಶ್ವರ ಮಠವು ಅಸ್ತಿತ್ತ್ವದಲ್ಲಿದ್ದು ಶ್ರೀಮಠದಕರ್ತೃಗುರುಗಳು ಶ್ರೀ ಗುರು ಖಟ್ವಾಂಗೇಶ್ವರ ಮಹಾಸ್ವಾಮಿಗಳು. ಕರ್ತೃಗುರುಗಳುಕಾರವಾರದ ಕಡೆಯಿಂದ ಸಂಚಾರಕ್ಕೆ ಹೊರಟು ಸುಲೇಪೇಟದ ಹೊರಭಾಗದ ಎತ್ತರಪ್ರದೇಶದಲ್ಲಿ ಅನುಷ್ಠಾನ ನಿರತರಾಗಿದ್ದರು. ಆಗ ಭಕ್ತರು ತಪಸ್ಸಿಗೆ ಕುಳಿತ ಗುರುಗಳನ್ನು ಸತ್ಕರಿಸಿಮಠವನ್ನು ಸ್ಥಾಪಿಸಿಕೊಡುತ್ತಾರೆ. ಹೀಗೆ ಸ್ಥಾಪಿತಗೊಂಡ ಮಠವು ಈ ಭಾಗದವಿರಕ್ತಮಠಗಳಲ್ಲಿ ಪ್ರಮುಖವೆನಿಸಿ ಸಮಾಜವನ್ನು ಧಾರ್ಮಿಕ ತಳಹದಿಯ ಮೇಲೆಬೆಳೆಸುತ್ತಿದೆ.ಕರ್ತೃ ಗುರುಗಳ ನಂತರದಲ್ಲಿ ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು, ಶ್ರೀಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀಮಠವನ್ನು ಮುನ್ನಡೆಸಿದ್ದು ಉಭಯ ಶ್ರೀಗಳುಶಿವಪೂಜಾನಿಷ್ಠರಾಗಿ ಶರಣ ತತ್ತ್ವಗಳನ್ನು ಪ್ರಚುರಪಡಿಸಿ ವೀರಶೈವ ಲಿಂಗಾಯತಧರ್ಮವನ್ನು ಅಭಿವೃದ್ಧಿಪಡಿಸಿದರು. ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಉತ್ತಮಸಂಘಟಕರೆನಿಸಿದ್ದು ವೀರಶೈವ ಲಿಂಗಾಯತ ಧರ್ಮದ ಆಚಾರ-ವಿಚಾರಗಳನ್ನು ಭಕ್ತರುಆಚರಣೆಗೆ ತರುವಂತೆ ಪ್ರೇರಣೆ ನೀಡಿದ್ದರು. ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸದಾಶಿವಮಹಾಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ 1984ರ ಫೆಬ್ರವರಿ 24ರಲ್ಲಿಲಿಂಗೈಕ್ಯರಾಗಿದ್ದು ಆನಂತರ ಶ್ರೀಮಠವು ಒಂದು ದಶಕ ಕಾಲ ಖಾಲಿ ಉಳಿದಿದೆ.ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಗುರುಲಿಂಗ ಮಹಾಸ್ವಾಮಿಗಳು 1995ರಲ್ಲಿಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ ಮಠವನ್ನು ಅಭಿವೃದ್ದಿಪಥದತ್ತ ಮುನ್ನಡೆಸಿದ್ದಾರೆ. ಶ್ರೀಗಳುಶಿವಯೋಗ ಮಂದಿರದಲ್ಲಿ ಆಧ್ಯಾತ್ಮ ಶಿಕ ್ಷಣವನ್ನು ಪಡೆದು ಜ್ಞಾನವನ್ನುಸಂಪಾದಿಸಿದವರಾಗಿದ್ದಾರೆ. ಶ್ರೀಗಳು ಮಠದ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡುಶರಣರ ತತ್ತ್ವಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ನಿತ್ಯಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನಗಳನ್ನುಹೇಳಿಸಲಾಗುತ್ತದೆ. ಶಿವರಾತ್ರಿಗೆ ಕರ್ತೃಗುರುಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮನಡೆಯುತ್ತಿದ್ದು, ಯುಗಾದಿಯಿಂದ ಒಂದು ತಿಂಗಳ ಕಾಲ ಶ್ರೀ ವೀರಭದ್ರೇಶ್ವರ ಸ್ವಾಮಿಯಜಾತ್ರೆಯು ನಡೆಯುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಗುರುಲಿಂಗ ಮಹಾಸ್ವಾಮಿಗಳು
Date of Birth :
24-09-1974
Place :
ಹಳ್ಳಿಕೆರೆ, ಮುಂಡರಗಿ ತಾ||
Pattadikara :
1995
Photo :

Programs

ಶಿವರಾತ್ರಿಯಂದು ಕರ್ತೃ ಗುರುಗಳ ಪುಣ್ಯಾರಾಧನೆ
ಯುಗಾದಿಯಿಂದ ಒಂದು ತಿಂಗಳು ಶ್ರೀ ವೀರಭದ್ರೇಶ್ವರ ಜಾತ್ರೆ
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ

Photos

Full Address Kannada

ಸುಲೇಪೇಟ್ - 585324
ಚಿಂಚೋಳಿ ತಾ||, ಕಲಬುರಗಿ ಜಿಲ್ಲೆ

Map

Near by Places

ಚಿಂಚೋಳಿ 10 ಕಿ.ಮೀ.
ಕಲಬುರಗಿ 75 ಕಿ.ಮೀ.
ಸೇಡಂ 30 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!