Shree Kencha Basaveshwara Samthana Hirematha

Shree Kencha Basaveshwara Samthana Hirematha Claimed

ಶ್ರೀ ಕೆಂಚ ಬಸವೇಶ್ವರ ಸಂಸ್ಥಾನ ಹಿರೇಮಠ

Average Reviews

Description

ಶ್ರೀ ಕೆಂಚ ಬಸವೇಶ್ವರ ಸಂಸ್ಥಾನ ಹಿರೇಮಠ

ಕರ್ತೃ ಶ್ರೀ ಷ.ಬ್ರ. ಕೆಂಚಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಜೀವರ್ಗಿ ತಾಲ್ಲೂಕಿನ ಆಲೂರ ಗ್ರಾಮದ ಮಧ್ಯಭಾಗದಲ್ಲಿಅಸ್ತಿತ್ವದಲ್ಲಿರುವ ಶ್ರೀ ಕೆಂಚಬಸವೇಶ್ವರ ಸಂಸ್ಥಾನ ಹಿರೇಮಠವು ಶ್ರೀಮದ್ ರಂಭಾಪುರಿಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಸುಮಾರು12ನೇ ಶತಮಾನದಲ್ಲಿಯೇ ಅಸ್ತಿತ್ವದಲ್ಲಿತ್ತೆಂದು ಹೇಳಲಾಗುವ ಶ್ರೀಮಠದ ಕರ್ತೃಗುರುಗಳುಶ್ರೀ.ಷ.ಬ್ರ. ಕೆಂಚಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು.ಕರ್ತೃಗುರುಗಳಾದ ಶ್ರೀ ಕೆಂಚಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಈಮಠವನ್ನು ಸ್ಥಾಪಿಸಿ ಅಷ್ಠಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಸಿದ್ಧಾಂತವನ್ನು ಆಚರಣೆಗೆತಂದು ಭಕ್ತರನ್ನು ಸಂಸ್ಕಾರವಂತರನ್ನಾಗಿ ಮಾಡಿದರು. ಆದರೆ ಕರ್ತೃ ಗುರುಗಳ ನಂತರದಲ್ಲಿಬಂದಿರುವ ಎಲ್ಲಾ ಶ್ರೀಗಳು ಶ್ರೀ.ಷ.ಬ್ರ. ಕೆಂಚಬಸವ ಶಿವಾಚಾರ್ಯ ಮಹಾಸ್ವಾಮಿಗಳೆಂದುಅಭಿದಾನ ಪಡೆದು ಅಧಿಕಾರಕ್ಕೆ ಬಂದಿರುವುದರಿಂದ ಶ್ರೀಮಠದ ಪರಂಪರೆಯನ್ನು ಸ್ಪಷ್ಟವಾಗಿಹೇಳಲು ಬರುವುದಿಲ್ಲ. ಈಗಿನ ಶ್ರೀಗಳ ಪ್ರಕಾರ ಶ್ರೀಮಠದ ಪರಂಪರೆಯಲ್ಲಿ ಈವರೆಗೂ 41ಜನ ಶ್ರೀಗಳು ಅಧಿಕಾರ ನಡೆಸಿದ್ದು ಈಗಿನ ಶ್ರೀಗಳು 42ನೇ ಯವರೆಂದು ಹೇಳಬಹುದು.ಪರಂಪರೆಯ ಹಿಂದಿನ ಗುರುಗಳಾದ ಶ್ರೀ.ಷ.ಬ್ರ. ಕೆಂಚಬಸವ ಶಿವಾಚಾರ್ಯಮಹಾಸ್ವಾಮಿಗಳು ಸುದೀರ್ಘ ಕಾಲ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿದ್ದು1995ರ ಮೇ 29 ರಲ್ಲಿ ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಕೆಂಚ ವೃಷಬೇಂದ್ರಮಹಾಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಪಟ್ಟಕ್ಕೆ ತಂದು 2014ರ ಜನವರಿ24ರಲ್ಲಿ ಲಿಂಗೈಕ್ಯರಾದರು. ಪ್ರಸ್ತುತ ಶ್ರೀಗಳು ಹಿರಿಯಗುರುಗಳ ಮಾರ್ಗದರ್ಶನದಲ್ಲಿಪರಿಪಕ್ವಗೊಂಡು ಶ್ರೀಮಠವನ್ನು ಅಭಿವೃದ್ಧಿ ಕಾರ್ಯಗಳೊಂದಿಗೆ ಮುನ್ನಡೆಸುತ್ತಿದ್ದಾರೆ.ಪ್ರಸ್ತುತ ಶ್ರೀಗಳು ಸೊಲ್ಲಾಪುರದ ಶ್ರೀ ರೇವಣಸಿದ್ದಾಶ್ರಮದಲ್ಲಿ ಸಂಸ್ಕøತಅಧ್ಯಯನವನ್ನು ಮಾಡಿ ಶ್ರೀಮಠಕ್ಕೆ ಮರಳಿ ಶ್ರೀಮಠದ ಧಾರ್ಮಿಕ ಆಚರಣೆಗಳನ್ನುವಿಸ್ತಾರಗೊಳಿಸಿದರು. ಶ್ರೀಗಳು ಶ್ರೀಮಠದ ಜೊತೆಯಲ್ಲಿ ಶಾಖಾಮಠಗಳಾದ ಭವಸಗಿ,ಗೊಬ್ಬರವಾಡಿಗಿ, ಜನಳಗಿ, ಮಾಗಣಗೇರಿ, ಹಾಗರಗುಂಡಗಿ, ಯಡ್ರಾಮಿ ಮತ್ತು ಗುಲ್ಬರ್ಬದಮಠಗಳನ್ನು ಅಭಿವೃದ್ಧಿಪಡಿಸುತ್ತಿದ್ದು ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಕೆಂಚ ವೃಷಭೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
12-07-1967
Place :
ಆಲೂರ, ಜೇವರ್ಗಿ ತಾ||
Pattadikara :
29-05-1995
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ, ವಿಶೇಷ ಪೂಜೆ
ದವನದ ಹುಣ್ಣಿಮೆಗೆ ಶ್ರೀ ಮಠದ ಜಾತ್ರೆ
ಶ್ರಾವಣ ಮಾಸದಲ್ಲಿ ನಿತ್ಯ ಭಜನೆ
ದಸರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು
ಡಿಸೆಂಬರ್ 25ರಂದು ಶ್ರೀ ರೇಣುಕಗಿರಿ,
ಆಲೂರು ಶಾಖಾಮಠ ಯಂಡ್ರಾಮಿಯಲ್ಲಿ ಶ್ರೀ
ರೇಣುಕ ಯುಗಮಾನೋತ್ಸವ ಜ್ಯೋತಿ ಪಾದಯಾತ್ರೆ

Institutions

ಕಿರಿಯ, ಹಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ಕೆಂಚಬಸವೇಶ್ವರ ಸಂಸ್ಥಾನ ಹಿರೇಮಠ
ಆಲೂರ - 585 325
ಜೀವರ್ಗಿ ತಾ|| ಕಲಬುರಗಿ ಜಿ||

Map

Near by Places

ಚಿಗರಹಳ್ಳಿ ಕ್ರಾಸ್ - 16 ಕಿ.ಮೀ.
ಶಹಾಪುರ - 46 ಕಿ.ಮೀ.
ಜೇವರ್ಗಿ - 40 ಕಿ.ಮೀ
ಕಲಬುರಗಿ - 70 ಕಿ.ಮೀ.

Statistic

4 Views
0 Rating
0 Favorite
0 Share
error: Content is protected !!