Shree Keladi Rajaguru Samsthana Hirematha

Shree Keladi Rajaguru Samsthana Hirematha Claimed

ಶ್ರೀ ಕೆಳದಿ ರಾಜಗುರು ಸಂಸ್ಥಾನ ಹಿರೇಮಠ

Average Reviews

Description

ಶ್ರೀ ಕೆಳದಿ ರಾಜಗುರು ಸಂಸ್ಥಾನ ಹಿರೇಮಠ.

ಶ್ರೀ ಷ.ಬ್ರ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು

ಸಾಗರ ತಾಲ್ಲೂಕು ಕೇಂದ್ರದಿಂದ 8 ಕಿ.ಮೀ. ದೂರದಲ್ಲಿರುವ ಬಂದಗದ್ದೆಯಹೊರಭಾಗದ ಕಾಡಿನಲ್ಲಿ ಶ್ರೀ ಕಾಶೀಪೀಠದ ಶಾಖಾಮಠವಾದ ಶ್ರೀ ಕೆಳದಿ ರಾಜಗುರುಸಂಸ್ಥಾನ ಹಿರೇಮಠವು ಪ್ರಾಚೀನ ಕಾಲದಲ್ಲಿ ಸ್ಥಾಪನೆಗೊಂಡಿದೆ. ಶ್ರೀಮಠವು ಸದಾಶಿವನಾಯಕರ ಕಾಲದಲ್ಲಿ ಸ್ಥಾಪಿತಗೊಂಡಿದೆಯೆಂದು ಹೇಳಲಾಗಿದ್ದು ಚನ್ನಮ್ಮಾಜಿಯ ಕಾಲದಲ್ಲಿಹೆಚ್ಚು ಅಭಿವೃದ್ಧಿಯನ್ನು ಕಂಡಿದೆ.ಶ್ರೀಮಠವು 16ನೇ ಶತಮಾನದಲ್ಲೇ ಪ್ರಾರಂಭಗೊಂಡಿದ್ದರೂ ಮಠದ ಇತಿಹಾಸದಲ್ಲಿ ಬಂದಿರಬಹುದಾದ ಗುರುಗಳ ಬಗ್ಗೆ ಮಾಹಿತಿಗಳು ಲಭ್ಯವಿಲ್ಲ. ಹಿಂದಿನ ಶ್ರೀಗಳಾದ ಡಾ.ಗುರುಸಿದ್ಧದೇವ ಶಿವಾಚಾರ್ಯ ಸ್ವಾಮಿಗಳು ಸಂಸ್ಕøತ ವಿದ್ವಾನ್ ಪದವಿಯನ್ನು ಪಡೆದವರಾಗಿದ್ದು, ದರ್ಶನಶಾಸ್ತ್ರ ಪೂರ್ಣತ್ವಕಾರ ಬಿರುದಾಂಕಿತರಾಗಿ ಸಂಸ್ಕøತ ಪಂಡಿತರೆನಿಸಿಕೊಂಡಿದ್ದವರು. ಶ್ರೀಗಳ ಕಾಲದಲ್ಲಿ ಮಠವು ಅಭಿವೃದ್ಧಿಗೊಂಡಿದ್ದು, ನಂತರದಲ್ಲಿ ಇವರುಪ್ರತ್ಯೇಕವಾದ ಆಶ್ರಮವನ್ನು ಸ್ಥಾಪಿಸಿಕೊಂಡು ಹೋಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ.ಷ.ಬ್ರ.ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ಅಧಿಕಾರವಹಿಸಿಕೊಂಡು ಪ್ರಾಚೀನ ಹಿನ್ನೆಲೆ ಇರುವ ಮಠವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಹಾಗೆಯೇ ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಮಠದಲ್ಲಿ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಶ್ರೀಮಠದಲ್ಲಿ ವಿಜೃಂಭಣೆಯ ವಿಶೇಷನವರಾತ್ರಿ ಆಚರಣೆಗಳು ದಸರಾದಲ್ಲಿ ಜರುಗುತ್ತವೆ.ಪುರಾತನವಾದ ಶ್ರೀಮಠವು ಹಾಗೂ ಅದರ ಕಟ್ಟಡವು ತುಂಬಾ ವೈಶಿಷ್ಟ್ಯಪೂರ್ಣವಾಗಿದ್ದು ಮಣ್ಣಿನ ಗಚ್ಚು ಹಾಗೂ ವಿಶೇಷ ಕೆತ್ತನೆಯ ಮರದ ಬೃಹತ್ ಕಂಬಗಳಿಂದನಿರ್ಮಿಸಲ್ಪಟ್ಟಿದೆ. ಹಾಗೆಯೇ ಮಠದ ಒಳ ಆವರಣದಲ್ಲಿ ಶ್ರೀ ರೇವಣ ಸಿದ್ದೇಶ್ವರ ದೇವಸ್ಥಾನಹಾಗೂ ಶ್ರೀ ಚೌಡಮ್ಮನ ದೇವಸ್ಥಾನಗಳು ಸ್ಥಾಪಿತಗೊಂಡಿವೆ. ಜೊತೆಯಲ್ಲಿಯೇ ಕತೃಗುರುಗಳ ಗದ್ದುಗೆಯಿದ್ದು ನಿತ್ಯ ವಿಶೇಷ ಪೂಜೆ ನಡೆಯುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು
Photo :

Programs

ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹಾಗೂ ಅಮವಾಸ್ಯೆಗೆ ವಿಶೇಷ ಪೂಜೆ. ಶ್ರಾವಣ ಮಾಸದ ಕೊನೆಯ ಶುಕ್ರವಾರ ಶ್ರೀ ಚೌಡೇಶ್ವರಿ ಮಾತೆಗೆ ಉಡಿ ತುಂಬುವ ಕಾರ್ಯಕ್ರಮ. ದಸರಾದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.

Institutions

ಸಂಸ್ಕøತ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ

Photos

Full Address Kannada

ಶ್ರೀ ಕೆಳದಿ ರಾಜಗುರು ಸಂಸ್ಥಾನ ಹಿರೇಮಠ ಬಂದಗದ್ದೆ, ಕೆಳದಿ ಪೋಸ್ಟ್- 577 401 ಸಾಗರ ತಾ., ಶಿವಮೊಗ್ಗ ಜಿ.

Map

Near by Places

ಸಾಗರ - 8 ಕಿ.ಮೀ. ಸೊರಬ - 22 ಕಿ.ಮೀ. ಜೋಗ್ಫಾಲ್ಸ್ - 35 ಕಿ.ಮೀ.

Statistic

38 Views
0 Rating
0 Favorite
0 Share
error: Content is protected !!