ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ಷ.ಬ್ರ. ಗುರುಪಾದಸ್ವಾಮಿಗಳಿಂದ 1948ರಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗುರುಪಾದ ದೇವರ ಮಠವು ಮೊದಲುಹೊಸಪೇಟೆ ಸಮೀಪದ ಕಣಿವೆ ಬಸಾಪುರ ಗ್ರಾಮದಲ್ಲಿ ಸ್ಥಾಪಿತಗೊಂಡಿದ್ದು ತುಂಗಭದ್ರಾನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣಗೊಂಡಾಗ ಮುಳುಗಡೆಯಾಗಿ ಇಲ್ಲಿಗೆ ಸ್ಥಳಾಂತರಗೊಂಡಿದೆ. ಈ ಕಾರಣದಿಂದಾಗಿ ಶ್ರೀಮಠಕ್ಕೆ ಶ್ರೀ ಕಣಿವೆ ಬಸಾಪುರದ ಹರಳಿಹಳ್ಳಿಗುರುಪಾದ ದೇವರ ಮಠವೆಂದು ಕರೆಯಲಾಗುತ್ತಿದೆ.ಶ್ರೀ ಮಠದ ಕರ್ತೃಗುರುಗಳಾದ ಶ್ರೀ ಗುರುಪಾದ ಸ್ವಾಮಿಗಳು ತಪೋನಿಷ್ಠರೂ,ಶಿವಪೂಜಾನಿಷ್ಠರೂ ಆಗಿದ್ದು ತಮ್ಮ ಅನುಷ್ಠಾನಬಲದಿಂದ ಭಕ್ತರನ್ನು ಸೆಳೆದು ಭಕ್ತರಸಹಕಾರದೊಂದಿಗೆ ಮಠ ಸ್ಥಾಪಿಸಿದ್ದಾರೆ. ಶ್ರೀಗಳು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಮನೆಮಾತಾಗಿದ್ದಾರೆ ಮತ್ತು ಈ ಭಾಗದ ಜನರಲ್ಲಿಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹಿರಿಯಗುರುಗಳ ಕಾಲದಲ್ಲಿ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ನಂತರಶಿವಯೋಗ ಮಂದಿರದಲ್ಲಿ ಸಂಸ್ಕøತ ವೇದಾಗಮಗಳನ್ನು ಅಭ್ಯಸಿಸಿ ಶ್ರೀಮಠಕ್ಕೆ ಮರಳಿ1979ರ ಮೇ 1 ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಧರ್ಮನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠದಭಕ್ತರ ಗೌರವಕ್ಕೆ ಪಾತ್ರರಾಗಿದ್ದಾರೆ. ಶ್ರೀಗಳು ವೀರಶೈವ ಧರ್ಮಾಚರಣೆಗಳ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡಿದ್ದು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುತ್ತಿದ್ದಾರೆ.ಶ್ರೀಮಠದಲ್ಲಿ ಮುಳುಗಡೆಗೊಂಡ ಮೂಲಮಠದಿಂದ ತರಲಾದ ಬಸವೇಶ್ವರರ ವಿಗ್ರಹವನ್ನುಪ್ರತಿಷ್ಠಾಪಿಸಲಾಗಿದ್ದು ದಿನನಿತ್ಯ ಪೂಜೆಗಳು ನಡೆಯುತ್ತಿವೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ವೈಶಾಖ ಶುದ್ಧ ದಶಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
1954
Place :
ಗದ್ದಿಕೇರಿ, ಹಗರಿಬೊಮ್ಮನಹಳ್ಳಿ ತಾ||
Pattadikara :
1-5-1979
Photo :
Programs
ವೈಶಾಖ ಶುದ್ಧ ದಶಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ 11 ದಿನಗಳ ಕಾಲ ವಿಶೇಷ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಶಿವರಾತ್ರಿಗೆ ವಿಶೇಷ ಪೂಜೆ.
Photos
Full Address Kannada
ಶ್ರೀ ಕಣಿವೆ ಬಸಾಪುರದ ಹರಳಿಹಳ್ಳಿ ಗುರುಪಾದ ದೇವರ ಮಠ
4ನೇ ವಾರ್ಡ್, ಮರಿಯಮ್ಮನಹಳ್ಳಿ - 583 222
ಹೊಸಪೇಟೆ ತಾ||, ಬಳ್ಳಾರಿ ಜಿ||