Shree Kambalu Samsthana Matha

Shree Kambalu Samsthana Matha Claimed

ಶ್ರೀ ಕಂಬಾಳು ಸಂಸ್ಥಾನ ಮಠ

Average Reviews

Description

ಶ್ರೀ ಕಂಬಾಳು ಸಂಸ್ಥಾನ ಮಠ

ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಿಂದಅನತಿ ದೂರದಲ್ಲಿ ಈಗಿನ ಕಂಬಾಳು ಗ್ರಾಮದ ವ್ಯಾಪ್ತಿಯಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಕಂಬಾಳುಸಂಸ್ಥಾನ ಮಠವು ಪುರಾತನ ಇತಿಹಾಸವನ್ನು ಹೊಂದಿದ್ದು ತನ್ನ ಧಾರ್ಮಿಕ ಆಚರಣೆಗಳಮುಖೇನ ಪ್ರಚಲಿತದಲ್ಲಿದೆ. ಶ್ರೀಶೈಲ ಪೀಠದ ಶಾಖಾಮಠವಾಗಿರುವ ಶ್ರೀಮಠವುಪುತ್ರವರ್ಗದ ಸಂಪ್ರದಾಯದಲ್ಲಿ ಬೆಳೆದುಬಂದಿದೆ.ಶ್ರೀಮಠದ ಸ್ಥಾಪಿತ ಕಾಲಮಾನ ಹಾಗೂ ಕರ್ತೃ ಗುರುಗಳ ಕುರಿತಂತೆ ಸ್ಪಷ್ಟಮಾಹಿತಿಗಳಿಲ್ಲ. ಈಗ್ಗೆ ಮೂರು-ನಾಲ್ಕು ತಲೆಮಾರುಗಳ ಕುರಿತಂತೆ ಹೇಳಬಹುದಾಗಿದ್ದು ಶ್ರೀಸಿದ್ದಲಿಂಗ ಶಿವಾಚಾರ್ಯರ ನಂತರದ ಇತಿಹಾಸ ಲಭ್ಯವಿದೆ. ಆದರೆ ಶ್ರೀಮಠದ ಕಟ್ಟಡದಸುತ್ತಲ ಕಲ್ಲಿನ ಗೋಡೆಗಳು ಹೊರನೋಟಕ್ಕೆ ಕೋಟೆಯಾಕಾರವಾಗಿ ಕಾಣುತ್ತಾ ಈ ಮಠದಭವ್ಯತೆ ಹಾಗೂ ಪ್ರಾಚೀನತೆಯನ್ನು ಸಾರುತ್ತಿವೆ. ಶ್ರೀ ಕಂಬಾಳು ಮಠಕ್ಕೆ ಮುಮ್ಮಡಿ ಕೃಷ್ಣರಾಜಒಡೆಯರ ಕಾಲದಲ್ಲಿ ಅನೇಕ ದಾನಗಳು ದೊರಕಿರುವ ದಾಖಲೆಗಳಿವೆ.ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶಿವಪೂಜಾ ನಿಷ್ಠರಾಗಿ ತಮ್ಮಆಚರಣೆಗಳ ಮೂಲಕ ಅಪಾರ ಭಕ್ತಬಳಗವನ್ನು ಸಂಪಾದಿಸಿಕೊಂಡು ಅವರನ್ನು ಧರ್ಮಮಾರ್ಗವಾಗಿ ಮುನ್ನಡೆಸಿದ ಮಹನೀಯರು. ಇವರ ನಂತರ ಶ್ರೀಮಠವು ಬಹುಕಾಲ ಖಾಲಿಉಳಿದು ಜೀರ್ಣಗೊಳ್ಳತೊಡಗಿದ್ದನ್ನು ಕಂಡ ಭಕ್ತ ಸಮೂಹ ಶ್ರೀ ಷ.ಬ್ರ. ಚನ್ನವೀರಶಿವಾಚಾರ್ಯ ಮಹಾಸ್ವಾಮಿಗಳನ್ನು ಕರೆತಂದು ಅಧಿಕಾರ ವಹಿಸಿಕೊಟ್ಟರು. ಶ್ರೀಗಳುಜೀರ್ಣಗೊಳ್ಳತೊಡಗಿದ್ದ ಮಠದ ಕಟ್ಟಡವನ್ನು ಸುಸ್ಥಿತಿಗೆ ತಂದು ಭಕ್ತರಲ್ಲಿ ಧಾರ್ಮಿಕಸಂಸ್ಕಾರವನ್ನು ನೀಡಿದರು.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಉನ್ನತಿಯನ್ನು ಕಂಡಿದೆ. ತಮ್ಮಕಾಯಕಯೋಗದಿಂದ ಮಠದ ಜಮೀನನ್ನು ವೃದ್ದಿಸಿದ ಶ್ರೀಗಳು ಮಠದಲ್ಲಿ ದಾಸೋಹವನ್ನುಪ್ರಾರಂಭಿಸಿದರು. ಮಠದ ಗದ್ದುಗೆಗಳನ್ನು ಸುಸ್ತಿತಿಗೆ ತಂದ ಶ್ರೀಗಳು ಮಠದ ಆವರಣದಲ್ಲಿಕˉÁ್ಯಣ ಮಂಟಪವನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದರು. ತಮ್ಮ ಕಾಯಕನಿಷ್ಠೆಯಿಂದ ಸಮಾಜವನ್ನು ಪೊರೆದ ಶ್ರೀಗಳು 2014ರ ಏಪ್ರಿˉï 02ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಹಿರಿಯಗುರುಗಳಿರುವಾಗಲೆ 2012ರ ಮೇ 06ರಂದು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

ವಿಶೇಷತೆ

ಶ್ರೀಮಠದಲ್ಲಿ ಐತಿಹಾಸಿಕ ಶ್ರೀಶೈಲ ಮಲ್ಲಿಕಾರ್ಜುನ

ದೇವಸ್ಥಾನ ಇದೆ

Swamiji

Swamiji Name :
ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು
Date of Birth :
20-06-1991
Place :
ಕಂಚಗˉï ಬಂಡೆಮಠ, ಮಾಗಡಿ ತಾ||
Pattadikara :
06-05-2012
Photo :

Programs

ಪ್ರತಿ ನಿತ್ಯ ರುದ್ರಾಭಿಷೇಕ
ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ
ಮಾರ್ಚ್ ಕೊನೆಯ ವಾರದಲ್ಲಿ ಹಿಂದಿನ ಗುರುಗಳ ಪುಣ್ಯಾರಾಧನೆ
ಶಿವರಾತ್ರಿಯಲ್ಲಿ ನಿತ್ಯ ವಿಶೇಷಕ ಕಾರ್ಯಕ್ರಮ

Institutions

ಸಂಸ್ಕøತ ವೇದ ಪಾಠಶಾಲೆ

Photos

Full Address Kannada

ಶ್ರೀ ಕಂಬಾಳು ಸಂಸ್ಥಾನ ಮಠ
ಕಂಬಾಳು - 562 111 ನೆಲಮಂಗಲ ತಾ||,
ಬೆಂಗಳೂರು ಗ್ರಾಮಾಂತರ ಜಿಲ್ಲೆ

Map

Near by Places

ಶಿವಗಂಗೆ - 3 ಕಿ.ಮೀ.
ದಾಬಸ್ಪೇಟೆ - 7 ಕಿ.ಮೀ.
ನೆಲಮಂಗಲ - 27 ಕಿ.ಮೀ.
ಬೆಂಗಳೂರು - 45 ಕಿ.ಮೀ.

Statistic

177 Views
0 Rating
0 Favorite
0 Share
error: Content is protected !!