ಚಿತ್ತಾಪುರ ಪಟ್ಟಣವು ಪುರಾತನ ಪಟ್ಟಣವಾಗಿದ್ದು ಇಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀಕಂಬಳೇಶ್ವರ ಸಂಸ್ಥಾನ ಮಠವು ಶ್ರೀಮದ್ ಕಾಶಿ ಪೀಠದ ಶಾಖಾ ಮಠವಾಗಿ ಪ್ರಾಚೀನಪರಂಪರೆಯಲ್ಲಿ ಬೆಳೆದುಬಂದಿದೆ. ಪುರಾತನ ಕಾಲದಲ್ಲಿ ಸ್ಥಾಪಿತಗೊಂಡ ಶ್ರೀಮಠದಕರ್ತೃಗುರುಗಳು ಪೂಜ್ಯ ಶ್ರೀ ಕಂಬಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು. ಕರ್ತೃಗುರುಗಳು ಸಂಚಾರದಲ್ಲಿ ಚಿತ್ತಾಪುರ ಭಾಗದಲ್ಲಿ ಸಂಚರಿಸುತ್ತ ಕಾಗಿಣಿ ನದಿ ದಡದಲ್ಲಿತಪೋನುಷ್ಠಾನ ಕೈಗೊಳ್ಳುತ್ತಾರೆ. ಭಕ್ತರ ಅಪೇಕ್ಷೆ ಮೇರೆಗೆ ಇಲ್ಲಿಯೇ ನೆಲೆನಿಂತ ಶ್ರೀಗಳುಚಿತ್ತಾಪುರದಲ್ಲಿ ಶ್ರೀಮಠವನ್ನು ಸ್ಥಾಪಿಸಿ ನಿರಂತರವಾಗಿ ತಮ್ಮ ಧಾರ್ಮಿಕ ಆಚರಣೆಗಳಮೂಲಕ ಸಂಸ್ಕಾರವಂತ ಸಮಾಜವನ್ನು ರೂಪಿಸುವಲ್ಲಿ ಶ್ರಮಿಸಿದ್ದಾರೆ. ಈ ಕಾರಣದಿಂದಾಗಿಶ್ರೀಮಠವು ಶ್ರೀ ಕಂಬಳೇಶ್ವರ ಸಂಸ್ಥಾನ ಮಠ ಎಂಬ ಹೆಸರಿನಿಂದಲೇ ಪ್ರಸಿದ್ದಿಗೊಂಡಿತು.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಪುರಾತನ ಮಠದಪರಂಪರೆಯಲ್ಲಿ ಅನೇಕ ಗುರುಗಳು ಅಧಿಕಾರವನ್ನು ನಡೆಸಿ ಮಠವನ್ನು ಬೆಳೆಸಿದ್ದುದಾಖಲೆಗಳ ಕೊರತೆಯಿಂದ ಸ್ಪಷ್ಟವಾಗಿ ಉಲ್ಲೇಖಿಸಲು ಸಾಧ್ಯವಿಲ್ಲ. ಶ್ರೀಮಠದಪರಂಪರೆಯಲ್ಲಿ ಶ್ರೀ ಷ.ಬ್ರ. ಮಡಿವಾಳ ಶಿವಾಚಾರ್ಯರ ನಂತರದ ಶ್ರೀಗಳ ಬಗ್ಗೆ ತಿಳಿದುಬರುತ್ತದೆ. ಶ್ರೀ ಮಡಿವಾಳ ಶಿವಾಚಾರ್ಯರು ಘನ ಪಂಡಿತರಾಗಿದ್ದು ಸಂಚಾರ ಕೈಗೊಂಡುಧರ್ಮಪ್ರಚಾರ ಮಾಡುತ್ತಿದ್ದರು. ಇವರ ನಂತರ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯರು1935ರಲ್ಲಿ ಅಧಿಕಾರಕ್ಕೆ ಬಂದು ಶ್ರೀಮಠವನ್ನು ಪ್ರಸಿದ್ದಿಗೆ ತಂದರು. ಶ್ರೀಗಳು ಶಿವಯೋಗಮಂದಿರದಲ್ಲಿ ಪ್ರಾಧ್ಯಾಪಕರಾಗಿದ್ದುದು ಇವರ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿ.ಪ್ರಸ್ತುತದ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ಸಣ್ಣವಯಸ್ಸಿನಲ್ಲಿಯೇ ಶ್ರೀಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡು ಶಿವಯೋಗಮಂದಿರದಲ್ಲಿ ಸಂಸ್ಕøತ, ಸಾಹಿತ್ಯ ಮತ್ತು ಸಂಗೀತವನ್ನು ಅಭ್ಯಾಸ ಮಾಡಿ ವಿದ್ವತ್ಸಂಪಾದಿಸಿಕೊಂಡವರು. ಶ್ರೀಗಳು ಉತ್ತಮ ಸಂಗೀತಗಾರರಾಗಿದ್ದು ಶ್ರೀಮಠದ ಧಾರ್ಮಿಕಆಚರಣೆಗಳ ನಡುವೆಯೇ ಸಂಗೀತ ಕ್ಷೇತ್ರದಲ್ಲಿಯೂ ಒಲವು ಹೊಂದಿದ್ದಾರೆ. ಶ್ರೀಗಳುಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದ ಷಷ್ಠಿಗೆ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆಯನ್ನು ನಡೆಸಿಕೊಂಡು ಬಂದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
05-05-1967
Place :
ವಚ್ಚಾ ಕೋರವಾರ, ಚಿತ್ತಾಪುರ ತಾ||
Photo :
Programs
ಶ್ರಾವಣ ಮಾಸದ ಷಷ್ಟಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಶಿವರಾತ್ರಿಯಲ್ಲಿ ವಿಶೇಷ ಪೂಜೆ
Photos
Full Address Kannada
ಶ್ರೀ ಕಂಬಳೇಶ್ವರ ಸಂಸ್ಥಾನ ಮಠ
ಚಿತ್ತಾಪುರ - 585211
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ