ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿ ಸುಮಾರು 300 ವರ್ಷಗಳ ಹಿಂದೆ ಶ್ರೀಲಲಾಟೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಕಲ್ಮಠವು ಈ ಭಾಗದಲ್ಲಿಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಸವಣೂರಿನ ಇತಿಹಾಸದಲ್ಲಿ ತನ್ನದೇ ಅದಮಹತ್ವವನ್ನು ಹೊಂದಿ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ.ಶ್ರೀ ಲಲಾಟೇಶ್ವರ ಮಹಾಸ್ವಾಮಿಗಳು ಲೋಕಸಂಚಾರಿಗಳಾಗಿದ್ದು ಹೀಗೆ ಲೋಕಸಂಚಾರ ಕೈಗೊಂಡಿದ್ದಾಗ ಸವಣೂರಿಗೆ ಬಂದು ದೀರ್ಘಕಾಲ ಅನುಷ್ಠಾನಗೊಂಡು ಧರ್ಮಜಾಗೃತಿಯನ್ನುಂಟು ಮಾಡಿ ಮಠವನ್ನು ಸ್ಥಾಪಿಸಿದ್ದಾರೆ. ಶ್ರೀಗಳು ತಪೋನಿಷ್ಠರಾಗಿದ್ದುಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ, ಶಿವಾನುಭವ ಗೋಷ್ಠಿಗಳನ್ನು ನಡೆಸುವುದರಮೂಲಕ ಸಾಮಾಜಿಕವಾಗಿ ಮಠವನ್ನು ಗುರುತಿಸುವಂತೆ ಮಾಡಿದ್ದಾರೆ.ಕರ್ತೃಗುರುಗಳ ನಂತರ ಬಂದ ಶ್ರೀ ಸಿದ್ದಲಿಂಗ ಸ್ವಾಮಿಗಳು ಧರ್ಮನಿಷ್ಠರಾಗಿದ್ದು,ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಶ್ರೀಮಠವನ್ನುಮುನ್ನಡೆಸಿದ್ದಾರೆ. ನಂತರದಲ್ಲಿ ಶ್ರೀ ಗುರುಬಸವ ಸ್ವಾಮಿಗಳು, ಶ್ರೀ ಸಂಗನಬಸವಸ್ವಾಮಿಗಳು ಮಠದ ಅಧಿಕಾರವನ್ನು ವಹಿಸಿಕೊಂಡು ಮಠವನ್ನು ಮುನ್ನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮಹಾಂತ ಸ್ವಾಮಿಗಳು 1982ರ ಜನವರಿ 18ರಂದುಅಧಿಕಾರವಹಿಸಿಕೊಂಡು ಕೆಲ ಸಮಯ ಖಾಲಿ ಉಳಿದಿದ್ದ ಮಠವನ್ನು ಪುನರುಜ್ಜೀವನಗೊಳಿಸಿದ್ದಾರೆ. ಶ್ರೀಗಳು ಶಿವಯೋಗ ಮಂದಿರದಲ್ಲಿ ಸಂಸ್ಕøತ, ವೇದ ಮತ್ತು ವಚನಸಾಹಿತ್ಯವನ್ನು ಅಭ್ಯಸಿಸಿದವರಾಗಿದ್ದು ಉತ್ತಮ ವಾಗ್ಮಿಗಳೆಂದು ಹೆಸರಾಗಿದ್ದಾರೆ.ಶ್ರೀಗಳು ಮಠದ ಅಧಿಕಾರ ವಹಿಸಿಕೊಂಡ ನಂತರ ಮಠದ ಕಟ್ಟಡವನ್ನುನವೀಕರಿಸುವುದರ ಜೊತೆಗೆ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದ್ದಾರೆ.ಶ್ರೀಗಳು ವಿದ್ಯಾಸಂಸ್ಥೆ ಸ್ಥಾಪಿಸಿದ್ದು ಅದರ ಮೂಲಕ ಬಡಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ.ಹಾಗೆಯೇ ಪ್ರತಿ ತಿಂಗಳ 21ರಂದು ಶಿವಾನುಭವ ಗೋಷ್ಠಿ ಏರ್ಪಡಿಸಿ ಜನರನ್ನು ವೈಚಾರಿಕಚಿಂತನೆಗೆ ಒಳಪಡಿಸುತ್ತಿದ್ದು ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವವನ್ನು ಹಮ್ಮಿಕೊಂಡು ಜನರಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು
Date of Birth :
28-2-1948
Place :
ಬಂಕಾಪುರ, ಶಿಗ್ಗಾಂವ ತಾ||
Pattadikara :
18-1-1982
Photo :
Programs
ಪ್ರತಿ ತಿಂಗಳು 21ನೇ ತಾರೀಖು "ಶಿವಾನುಭವ ಗೋಷ್ಠಿ" ಅಕ್ಕನ ಬಳಗ ಮತ್ತ್ತು ಕೆಳದಿ ವೇದಿಕೆಯ ವತಿಯಿಂದ ಶ್ರೀ ಮಠದಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ.
ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಸ್ಮರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.
Institutions
ಪೂರ್ವ ಪ್ರಾಥಮಿಕ ಪಾಠಶಾಲೆ.
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
Photos
Full Address Kannada
ಶ್ರೀ ಕಲ್ಮಠ
ಸವಣೂರು - 581 115
ಸವಣೂರು ತಾ., ಹಾವೇರಿ ಜಿ.