ಹೊಸಪೇಟೆ ತಾಲ್ಲೂಕಿನ ಕಂಪ್ಲಿ ಪಟ್ಟಣವು ತಾಲ್ಲೂಕು ಕೇಂದ್ರದಿಂದ 30 ಕಿ.ಮೀ.ದೂರದಲ್ಲಿದ್ದು ಈ ಪಟ್ಟಣದಲ್ಲಿ ಸುಮಾರು 600 ವರ್ಷಗಳ ಹಿಂದೆ ಶ್ರೀ ಗುರುಸಿದ್ದೇಶ್ವರಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಕಲ್ಮಠವು ಈ ಭಾಗದಲ್ಲಿ ತನ್ನ ಧಾರ್ಮಿಕ,ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿಗೊಂಡಿದೆ.ಆಂಧ್ರಪ್ರದೇಶದ ಅನಂತಪುರದ ಕಡೆಯಿಂದ ಲೋಕ ಸಂಚಾರ ಕೈಗೊಂಡುಕಂಪ್ಲಿಗೆ ಆಗಮಿಸಿದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಇಲ್ಲಿನ ಪ್ರಶಾಂತ ವಾತಾವರಣಕ್ಕೆಮನಸೋತು ಇಲ್ಲಿಯೇ ಅನುಷ್ಠಾನ ಕೈಗೊಳ್ಳುತ್ತಾರೆ. ಶ್ರೀಗಳು ತಮ್ಮ ಅನುಷ್ಠಾನ ಬಲದಿಂದಮಠವನ್ನು ಸ್ಥಾಪಿಸಿ ಧಾರ್ಮಿಕ ಆಚರಣೆಗಳನ್ನು ನಡೆಸತೊಡಗಿದರು. ಈ ಸುದ್ದಿಯನ್ನುಕೇಳಿದ ವಿಜಯನಗರದ ಅರಸರು ವಿಶಾಲವಾದ ಕಲ್ಮಠವನ್ನು ನಿರ್ಮಿಸಿಕೊಟ್ಟರು.ಕರ್ತೃಗುರುಗಳ ನಂತರ ಅಧಿಕಾರಕ್ಕೆ ಬಂದ ಶ್ರೀ ಪ್ರಭುಸ್ವಾಮಿಗಳು ತಪೋನಿಷ್ಠರಾಗಿದ್ದು ತಮ್ಮ ಧಾರ್ಮಿಕ ಚಿಂತನೆಗಳಿಂದ ಶ್ರೀಮಠವನ್ನು ಬಹುಬೇಗನೆ ಪ್ರಸಿದ್ಧಿಗೊಳಿಸಿದರು. ಶ್ರೀಗಳು ಸದಾಸಂಚಾರದಲ್ಲಿದ್ದು ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಯಶಸ್ವಿಯಾದರು. ಇವರ ತರುವಾಯ ಬಂದ ಎಲ್ಲಾ ಗುರುಗಳೂ ಕೂಡ ಶ್ರೀ ಪ್ರಭುಸ್ವಾಮಿಗಳಹೆಸರನ್ನೇ ಅಭಿದಾನ ಪಡೆದುಕೊಂಡು ಅಧಿಕಾರಕ್ಕೆ ಬಂದಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಪ್ರಭುಸ್ವಾಮಿಗಳು 1957ರಲ್ಲಿ ಪಟ್ಟಕ್ಕೆ ಬಂದು ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕವಾಗಿ ಶ್ರೀಮಠವನ್ನು ಮುನ್ನಡೆಸಿದ್ದಾರೆ. “ಶ್ರೀ ಪ್ರಭುಸ್ವಾಮಿ ಶಿಕ್ಷಣಸಂಸ್ಥೆ” ಯನ್ನು ಸ್ಥಾಪಿಸಿ ಈ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶವನ್ನು ಕಲ್ಪಿಸಿದ್ದಾರೆ.ಪ್ರಸ್ತುತ ಶ್ರೀ ಅಭಿನವ ಪ್ರಭು ಸ್ವಾಮಿಗಳು ಮಠದ ಅಧಿಕಾರ ವಹಿಸಿಕೊಂಡುಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದ ಕರ್ತೃ ಶ್ರೀಗುರುಸಿದ್ದೇಶ್ವರ ಸ್ವಾಮಿಗಳು ಹಾಗೂ ಪರಂಪರೆಯಲ್ಲಿ ಬರುವ ಮೂರು ಜನ ಸ್ವಾಮಿಗಳಗದ್ದುಗೆಗಳು ಶ್ರೀಮಠದಲ್ಲಿದ್ದು ನಿತ್ಯಪೂಜೆ ನಡೆಯುತ್ತಿದೆ. ಪ್ರತಿವರ್ಷ ಹಂಪಿ ಜಾತ್ರಾಮಹೋತ್ಸವದ ಸಂದರ್ಭದಲ್ಲಿ 3 ದಿನಗಳ ಕಾಲ ಶ್ರೀ ಕಂಪ್ಲಿ ಕಲ್ಮಠದ ಶಾಖಾಮಠವಾದಹಂಪಿಯಲ್ಲಿ ಪರಂಪರಾನುಗತವಾಗಿ ಮಹಾ ದಾಸೋಹ ನಡೆದುಕೊಂಡು ಬರುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಅಭಿನವ ಪ್ರಭುಸ್ವಾಮಿಗಳು
Date of Birth :
14-6-1964
Place :
ತೊಂಡೂರು ಸವಣೂರು ತಾ||
Photo :
Programs
ಪ್ರತಿ ತ್ರಯೋದಶಿಗೆ ರುದ್ರಾಭಿಷೇಕ, ವಿಶೇಷ ಪೂಜೆ.
ಪ್ರತಿ ತಿಂಗಳ ಶನಿವಾರ "ಮಾಸಿಕ ಶಿವಾನುಭವ ಗೋಷ್ಠಿ"
ಪ್ರತಿ ವರ್ಷ ಜನವರಿ 26ರಂದು ಶ್ರೀ ಹಿರಿಯ ಗುರುಗಳ ಪುಣ್ಯಸ್ಮರಣೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
ಕಾರ್ತೀಕ ಮಾಸದಲ್ಲಿ ದೀಪೋತ್ಸವ. ಶಿವರಾತ್ರಿಗೆ ಜಾಗರಣೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಐ.ಟಿ.ಐ. ಕಾಲೇಜ್.
ವಿದ್ಯಾರ್ಥಿ ನಿಲಯ / ಬಡ ವಿದ್ಯಾರ್ಥಿಗಳಿಗೆ ಪ್ರಸಾದ ನಿಲಯ.
Photos
Full Address Kannada
ಶ್ರೀ ಕಲ್ಮಠ ಕಂಪ್ಲಿ - 583 132
ಹೊಸಪೇಟೆ ತಾ||, ಬಳ್ಳಾರಿ ಜಿ||