ಶ್ರೀ ಕÉೈಲಾಸ ಲಿಂಗೇಶ್ವರ ಸಂಸ್ಥಾನ ಹಿರೇಮಠ - ಹಿರೇಗೌರ (ಬಿ)
Average Reviews
Description
ಶ್ರೀ ಕೈಲಾಸ ಲಿಂಗೇಶ್ವರ ಸಂಸ್ಥಾನ ಹಿರೇಮಠ – ಹಿರೇಗೌರ (ಬಿ)
ಕರ್ತೃ – ಶ್ರೀ ಕೈಲಾಸ ಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕು ಕೇಂದ್ರದಿಂದ 12 ಕಿ.ಮೀ.ದೂರದಲ್ಲಿರುವ ಹಿರೇಗೌರ (ಬಿ) ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಕೈಲಾಸಲಿಂಗೇಶ್ವರ ಸಂಸ್ಥಾನ ಹಿರೇಮಠವು ತನ್ನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಜನರಲ್ಲಿ ಧಾರ್ಮಿಕ ಸಂಸ್ಕಾರವನ್ನು ಬೆಳೆಸುತ್ತಾ ಬಂದಿದೆ. ಶ್ರೀಮದ್ ಉಜ್ಜಯಿನಿ ಪೀಠದಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀಮಠದ ಸ್ಥಾಪಕಗುರುಗಳು ಪೂಜ್ಯ ಶ್ರೀ ಕೈಲಾಸ ಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು.ಸುಮಾರು 900 ವರ್ಷಗಳ ಇತಿಹಾಸವಿದೆಯೆಂದು ಹೇಳಲಾಗುವ ಶ್ರೀಮಠದಪೂರ್ವೇತಿಹಾಸದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಕರ್ತೃ ಗುರುಗಳ ಕುರಿತಾಗಲೀನಂತರದ ಪರಂಪರೆಯ ಕುರಿತಾಗಲೀ ತಿಳಿದುಬರುವುದಿಲ್ಲ. ಈಗಿನ ಶ್ರೀಗಳಿಗೂಪೂರ್ವದಲ್ಲಿ ಶ್ರೀ ಮರಿದೇವರು ಎಂಬುವವರು ಶ್ರೀ ಮಠದ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿರುವುದು ಕಂಡುಬರುತ್ತಿದ್ದು ಶ್ರೀ ಮಠದಲ್ಲಿ ಪರಂಪರೆಯ ಗುರುಗಳ ಎರಡುಗದ್ದುಗೆಗಳನ್ನು ಕಾಣಬಹುದಾಗಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಕೈಲಾಸ ಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು2010ರ ಜೂನ್ 02ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹವನ್ನು ಪಡೆದಿದ್ದುದೀರ್ಘಕಾಲದಿಂದ ಖಾಲಿ ಉಳಿದಿದ್ದ ಶ್ರೀಮಠದ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು ಭಕ್ತರ ಶ್ರೇಯೋಭಿವೃದ್ಧಿಗೆಶ್ರಮಿಸುತ್ತಿದ್ದಾರೆ. ಆಗಾಗ್ಗೆ ಸಂಚಾರ ಹೊರಟು ಭಕ್ತರ ಮನೆಗಳಿಗೆ, ಅವರ ಕಾರ್ಯಕ್ರಮಗಳಿಗೆಬೇಟಿ ನೀಡಿ ಆಶೀರ್ವದಿಸುತ್ತಾ ಬರುತ್ತಿರುವ ಶ್ರೀಗಳು ಕ್ರಿಯಾಶೀಲತೆಯಿಂದಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣಮಾಸದಲ್ಲಿ ರುದ್ರಾಭಿಷೇಕ ಕಾರ್ಯಕ್ರಮಗಳು ಹಾಗೂ ಜ್ಯೇಷ್ಠ ಮಾಸದಲ್ಲಿ 11 ದಿನಗಳ ಕಾಲಪುರಾಣ ಪ್ರವಚನಗಳು ನಡೆಯುತ್ತವೆ.
Swamiji
Swamiji Name :
ಶ್ರೀ ಷ.ಬ್ರ. ಕೈಲಾಸ ಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
1970
Place :
ದುದನಿ, ಅಕಲಕೋಟೆ ತಾ||, ಮಹಾರಾಷ್ಟ್ರ
Pattadikara :
02-06-2010
Photo :
Programs
ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ಜ್ಯೇಷ್ಠ ಮಾಸದಲ್ಲಿ 11 ದಿನಗಳ ಕಾಲ ಪುರಾಣ ಪ್ರವಚನ
Photos
Full Address Kannada
ಶ್ರೀ ಕೈಲಾಸ ಲಿಂಗೇಶ್ವರ ಸಂಸ್ಥಾನ ಹಿರೇಮಠ
ಹಿರೇಗೌರ (ಬಿ) - 585 301
ಅಫಜಲಪುರ ತಾ||, ಕಲಬುರಗಿ ಜಿಲ್ಲೆ