ಹಿರೇಕೆರೂರು ತಾಲ್ಲೂಕಿನ ರಟ್ಟಿಹಳ್ಳಿ ಗ್ರಾಮವು ಪುರಾತನ ಗ್ರಾಮವಾಗಿದ್ದು,ಉಜ್ಜಯಿನಿಯಿಂದ ಇಲ್ಲಿಗೆ ಬಂದು ಅನುಷ್ಠಾನಗೊಂಡು ಪವಾಡಗಳನ್ನು ನಡೆಸಿದ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಸುಮಾರು 12ನೇ ಶತಮಾನದಲ್ಲಿಸ್ಥಾಪಿಸಿರಬಹುದಾದ ಶ್ರೀ ಕಬ್ಬಿಣಕಂಥಿ ಮಠವು ಅಸ್ತಿತ್ವದಲ್ಲಿದೆ.ಶ್ರೀ ಸಿದ್ದಲಿಂಗ ಶಿವಾಚಾರ್ಯರು ಸದಾ ಸಂಚಾರಿಗಳಾಗಿದ್ದು ಶ್ರೀಮಠಕ್ಕೆಉತ್ತರಾದಿಕಾರಿಗಳನ್ನು ನಿಯುಕ್ತಿಗೊಳಿಸಿ ತಾವು ಮುಂದಕ್ಕೆ ಹೋಗಿದ್ದಾರೆ. ಹೋದಕಡೆಗಳೆಲ್ಲೆಲ್ಲಾ ಮಠಗಳನ್ನು ಸ್ಥಾಪಿಸಿ ತಮ್ಮ ಅನುಷ್ಠಾನಬಲದಿಂದ ಆ ಮಠಗಳಿಗೆ ಭಕ್ತರನ್ನುಸೆಳೆದು ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇವರ ನಂತರದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳುಲಭ್ಯವಿಲ್ಲವಾದರೂ ಏಳು ಜನ ಶ್ರೀಗಳನ್ನು ಗುರುತಿಸಬಹುದು. ಈ ಎಲ್ಲಾ ಗುರುಗಳುಶಿವಪೂಜಾ ನಿಷ್ಠರಾಗಿ ಮಠವನ್ನು ಮುನ್ನಡೆಸಿದ್ದಾರೆ. ಹಾಗೆಯೇ ಶ್ರೀಮಠದ ಗುರುಗಳುಕತೃಗುರುಗಳ ಹಾದಿಯಲ್ಲಿಯೇ ಲೋಕಸಂಚಾರಿಗಳಾಗಿದ್ದು ಸಂಚಾರ ಹೋದ ಸ್ಥಳಗಳಲ್ಲಿಲಿಂಗೈಕ್ಯರಾಗಿರುವುದರಿಂದ ಅಲ್ಲಲ್ಲೇ ಸಮಾಧಿ ಗದ್ದುಗೆಗಳು ನಿರ್ಮಾಣಗೊಂಡಿವೆ.ಈಗಿನ ಶ್ರೀಗಳಾದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು 1988ರಲ್ಲಿಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳುಸ್ನಾತಕೋತ್ತರ ಪದವೀಧರರಾಗಿದ್ದು ತಮ್ಮ ವಿದ್ವತ್ನಿಂದಾಗಿ ಮಠಕ್ಕೆ ಹೆಚ್ಚು ಭಕ್ತರನ್ನುಸೆಳೆದಿದ್ದಾರೆ. ಹಾಗೆಯೇ ತಮ್ಮ ಸರಳ ಸ್ವಭಾವದಿಂದಾಗಿ ಹೆಚ್ಚು ಪ್ರಸಿದ್ಧಿಯನ್ನು ಹೊಂದಿಶ್ರೀಮಠವನ್ನು ಹೆಚ್ಚು ಪ್ರಚುರಗೊಳಿಸಿದ್ದಾರೆ.ಶ್ರೀಮಠದಲ್ಲಿ ಶ್ರೀಗಳು ಅನೇಕ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಸಂದರ್ಭಗಳಲ್ಲಿ ಧಾರ್ಮಿಕ ಆಚರಣೆಗಳ ಮಹತ್ವವನ್ನು ಭಕ್ತರಿಗೆತಿಳಿಸಿಕೊಡುತ್ತಾರೆ. ಹಾಗೂ ವೈಶಾಖ ಮಾಸದಲ್ಲಿ ಹಿಂದಿನ ಶ್ರೀಗಳಾದ ಶ್ರೀ ಜಯಸಿದ್ದಲಿಂಗಸ್ವಾಮಿಗಳ ಪುಣ್ಯಾರಾಧನೆಯನ್ನು 3 ದಿನಗಳ ಕಾಲ ನಡೆಸಿ ಪ್ರತಿದಿನ ಆರೋಗ್ಯ ತಪಾಸಣಾಶಿಬಿರ ಹಾಗೂ ಸಾಮೂಹಿಕ ವಿವಾಹಗಳನ್ನು ನಡೆಸಿಕೊಡುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
10-1-1963
Place :
ಗಾಮ, ಶಿಕಾರಿಪುರ ತಾ||
Pattadikara :
24-6-1988
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭೀಷೇಕ.
ಗಣೇಶ ಚೌತಿಯಲ್ಲಿ ಶ್ರೀ ಗೌರಿಗೆ ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ.
ವೈಶಾಖ ಮಾಸದಲ್ಲಿ ಲಿಂ|| ಶ್ರೀ ಜಯಸಿದ್ದಲಿಂಗ ಶಿವಾಚಾರ್ಯರ ಪುಣ್ಯಾರಾಧನೆ,
ಸಾಮೂಹಿಕ ವಿವಾಹಗಳು. (3 ದಿನಗಳ ಕಾಲ ಆರೋಗ್ಯ ಶಿಬಿರ, ವೃತ್ತಿ ತರಬೇತಿ ಶಿಬಿರದ ಆಯೋಜನೆ.)
Institutions
ಸಂಸ್ಕøತ ಪಾಠಶಾಲೆ
ವಿದ್ಯಾರ್ಥಿ ನಿಲಯ
ಗೋಶಾಲೆ
Photos
Full Address Kannada
ಶ್ರೀ ಕಬ್ಬಿಣಕಂಥಿ ಮಠ
ರಟ್ಟಿಹಳ್ಳಿ - 581 116
ಹಿರೇಕೆರೂರು ತಾ., ಹಾವೇರಿ ಜಿ.