ಗುಂಡ್ಲುಪೇಟೆ ತಾಲ್ಲೂಕು ಕೇಂದ್ರದಿಂದ 14 ಕಿ.ಮೀ. ದೂರದಲ್ಲಿರುವಗೋಪಾಲಪುರ ಗ್ರಾಮದ ಹೊರಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಕಬ್ಬಿಣ ಕೋಲೇಶ್ವರಮಠವು ಶ್ರೀ ಸೋಮಹಳ್ಳಿ ಮಠದ ಶಾಖಾ ಮಠವಾಗಿ ಶ್ರೀಮದ್ ರಂಭಾಪುರಿ ಪೀಠದಸಂಪ್ರದಾಯದಲ್ಲಿ ಬೆಳೆದು ಬಂದಿದೆ. ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವಶ್ರೀ ಮಠದ ಕರ್ತೃ ಗುರುಗಳು ಪೂಜ್ಯ ಶ್ರೀ ಕಬ್ಬಿಣ ಕೋಲೇಶ್ವರರು.ಪವಾಡ ಪುರುಷರಾಗಿ ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಪ್ರಸಿದ್ಧಿ ಪಡೆದಿದ್ದಕರ್ತೃ ಗುರುಗಳಿಗೆ ಭಕ್ತರೇ ಮಠ ಸ್ಥಾಪನೆ ಮಾಡಿಕೊಟ್ಟಿದ್ದು ಅಂದಿನಿಂದ ಪ್ರತಿದಿನ ನೂರಾರುಭಕ್ತರಿಗೆ ಹುರಳಿ, ಅಂಬಲಿ ದಾಸೋಹ ನಡೆಯಲು ಪ್ರಾರಂಭವಾಯಿತು. ದಿನದಿಂದ ದಿನಕ್ಕೆಶ್ರೀಮಠಕ್ಕೆ ಭಕ್ತರ ಹರಿವು ಹೆಚ್ಚಾಯಿತು. ಕರ್ತೃಗುರುಗಳು ತಮ್ಮ ಕರ್ತೃತ್ವ ಶಕ್ತಿಯಿಂದಅಗಾಧವಾದುದನ್ನು ಸಾದಿಸಿ, ಭಕ್ತರನ್ನುದ್ದರಿಸಿ ನಿರ್ವಿಕಲ್ಪ ಸಮಾದಿಯಾದರು.ಕರ್ತೃ ಗುರುಗಳ ನಂತರ ಶ್ರೀ ಷ.ಬ್ರ. ಜಡೆ ಮಹಾಸ್ವಾಮಿಗಳು ಹಾಗೂ ಶ್ರೀ ಷ.ಬ್ರ.ಶಿವಲಿಂಗ ಮಹಾಸ್ವಾಮಿಗಳು ಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆಮುನ್ನಡೆಸಿದ್ದಾರೆ. ಇವರ ನಂತರ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ವೀರಭದ್ರಮಹಾಸ್ವಾಮಿಗಳು ಅಧಿಕಾರ ನಡೆಸಿದ್ದು ಇವರ ಕಾಲದಲ್ಲಿ ಶ್ರೀಮಠವು ಪ್ರಬುದ್ಧಮಾನಕ್ಕೆಬಂದಿದೆ. ಶ್ರೀಗಳು ಶ್ರೀಮಠದ ಕಟ್ಟಡವನ್ನು ವಿಸ್ತಾರಗೊಳಿಸಿ ನೂತನ ಕಟ್ಟಡವನ್ನುನಿರ್ಮಿಸಿದ್ದಾರೆ. ಇವರ ಕಾಲದಲ್ಲಿ ಮಠ ಸ್ವಾವಲಂಬನೆ ಸಾದಿಸಿದ್ದು ಶ್ರೀಗಳು 1976ರಲ್ಲಿಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಗಂಗಾಧರ ಸ್ವಾಮಿಗಳು 1978ರಲ್ಲಿ ಶ್ರೀಮಠದಪಟ್ಟಕ್ಕೆ ಬಂದಿದ್ದು ಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದ್ದಾರೆ. ಶ್ರೀಮಠದಜಮೀನನ್ನು ಫಲವತ್ತತೆಗೊಳಿಸಿ ಬೆಳೆ ಬೆಳೆದು ಶ್ರೀಮಠದ ಆದಾಯವನ್ನು ಹೆಚ್ಚಿಸಿದ್ದಾರೆ.ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಕಾರ್ತಿಕ ಮಾಸದಲ್ಲಿ ದೀಪೋತ್ಸವಹಾಗೂ ಯುಗಾದಿ ಆದ ಐದನೇ ದಿನಕ್ಕೆ ಕರ್ತೃಗಳ ಆರಾಧನೆ ನಡೆಯುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಗಂಗಾಧರ ಸ್ವಾಮಿಗಳು
Date of Birth :
1959
Place :
ಯಲೇಹಳ್ಳಿ, ನಂಜನಗೂಡು ತಾ||
Pattadikara :
1978
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಯುಗಾದಿ ಆದ ಐದನೇ ದಿನಕ್ಕೆ ಕರ್ತೃ ಗುರುಗಳ ಆರಾಧನೆ
ಕಾರ್ತೀಕ ಮಾಸದಲ್ಲಿ ದೀಪೋತ್ಸವ
ಧನುರ್ಮಾಸದಲ್ಲಿ ವಿಶೇಷ ಪೂಜೆ
Photos
Full Address Kannada
ಶ್ರೀ ಕಬ್ಬಿಣ ಕೋಲೇಶ್ವರ ಮಠ ಗೋಪಾಲಪುರ,
ಕನ್ನೇಗಾಲ (ಪೋ) - 571 111
ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆ