Shree Jukti Hirematha – Soodi

Shree Jukti Hirematha – Soodi Claimed

ಶ್ರೀ ಜುಕ್ತಿ ಹಿರೇಮಠ - ಸೂಡಿ

Average Reviews

Description

ಶ್ರೀ ಜುಕ್ತಿ ಹಿರೇಮಠ – ಸೂಡಿ

ಶ್ರೀ. ಷ.ಬ್ರ. ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು

ಗದಗ ಜಿಲ್ಲೆ ರೋಣ ತಾಲ್ಲೂಕಿನ ಸೂಡಿ ಗ್ರಾಮದ ಮಧ್ಯಭಾಗದಲ್ಲಿಅಸ್ತಿತ್ವದಲ್ಲಿರುವ ಶ್ರೀ ಜುಕ್ತಿ ಹಿರೇಮಠವು ಶ್ರೀಮದ್ ಕಾಶೀ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಬಿಜಾಪುರ ಜಿಲ್ಲೆ ಬಸವನ ಬಾಗೇವಾಡಿತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಮೂಲ ಮಠ ಸ್ಥಾಪನೆಯಾಗಿತ್ತು. ಆದಿಲ್ ಶಾಹಿಯಆಡಳಿತದಲ್ಲಿ ಮಸೂತಿಯ ಜುಕ್ತಿ ಮಠವು ತುಂಬಾ ಹೆಸರುಗಳಿಸಿದ್ದು ತಿಳಿದುಬರುತ್ತದೆ.ನಂತರದ ಕಾಲಘಟ್ಟದಲ್ಲಿ ಆಗಿನ ಗುರುಗಳು ಮಸೂತಿಯಿಂದ ಸಂಚಾರ ಹೊರಟು ರೋಣಪ್ರಾಂತ್ಯಕ್ಕೆ ಬಂದು ನೆಲೆನಿಂತು ಮಠವನ್ನು ಸ್ಥಾಪಿಸಿದರೆಂದು ತಿಳಿದುಬರುತ್ತದೆ.ಶ್ರೀಮಠದ ಪರಂಪರೆಯಲ್ಲಿ ಈವರೆಗೂ 17 ಜನ ಶ್ರೀಗಳು ಅಧಿಕಾರನಡೆಸಿದ್ದಾರೆಂದು ಹೇಳಲಾಗುತ್ತದಾದರೂ ದಾಖಲೆಗಳ ಕೊರತೆಯಿಂದ ನಮೂದಿಸಲುಸಾಧ್ಯವಾಗುವುದಿಲ್ಲ. ಮೊದಲ 13 ಜನ ಶ್ರೀಗಳು ಯಾರು, ಅವರ ಗದ್ದುಗೆಗಳು ಎಲ್ಲಿವೆಎಂಬುದರ ಕುರಿತಾಗಿ ಯಾವುದೇ ಮಾಹಿತಿಗಳಿಲ್ಲ. 14ನೇ ಶ್ರೀಗಳೆಂದು ಹೇಳಲಾದ ಶ್ರೀಷ.ಬ್ರ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಹಾತಪಸ್ವಿಗಳಾಗಿದ್ದುಕೀರ್ತನೆ, ಪುರಾಣ ಪ್ರವಚನ ಹೇಳುವುದರಲ್ಲಿ ಮಹಾ ಪ್ರವೀಣರಾಗಿದ್ದರು.ಹದಿನೈದನೆಯವರಾದ ಶ್ರೀ ಷ.ಬ್ರ. ಉಮಾಪತಿ ಶಿವಾಚಾರ್ಯರು “ಕಾಶಿ ಪಂಡಿತ”ರೆಂದೇಹೆಸರಾಗಿದ್ದು ಇವರ ಕಾಲದಲ್ಲಿ ಮಠ ಅಭಿವೃದ್ದಿಗೊಂಡಿದೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ.ಎರಡನೇ ಉಮಾಪತಿ ಶಿವಾಚಾರ್ಯರ ಪ್ರತಿಭೆಯನ್ನು ಗಮನಿಸಿದ ಕೊಪ್ಪಳದ ಗವಿಮಠದಹಿರಿಯಗುರುಗಳು ಇವರನ್ನು ಗವಿಮಠಕ್ಕೆ ಪಟ್ಟಾಧಿಕಾರಗೊಳಿಸುತ್ತಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳುತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಪಿ.ಹೆಚ್ಡಿ ಪದವಿ ಕೂಡ ಪಡೆದಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ಅಪಾರವಾದುದ್ದನ್ನು ಸಾಧಿಸಿರುವ ಶ್ರೀಗಳು ಧಾರವಾಡವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಾಬಿಡುವಿನ ವೇಳೆಯಲ್ಲಿ ಸೂಡಿಗೆ ಆಗಮಿಸಿ ಧಾರ್ಮಿಕ ಕಾರ್ಯಗಳನ್ನು ಮುನ್ನಡೆಸಿಕೊಂಡುಬರುತ್ತಿದ್ದಾರೆ.

Swamiji

Swamiji Name :
ಶ್ರೀ. ಷ.ಬ್ರ. ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
1970
Place :
ಗಂಗಾವತಿ, ಕೊಪ್ಪಳ ಜಿಲ್ಲೆ
Photo :

Programs

ಪ್ರತಿ ನಿತ್ಯ ರುದ್ರಾಭಿಷೇಕ
ಪ್ರತಿ ಅಮವಾಸ್ಯೆ ಆದ 6ನೇ ದಿನಕ್ಕೆ ಶಿವಾನುಭವ ಗೋಷ್ಠಿ
ಆಶ್ವೀಜ ಮಾಸದಲ್ಲಿ ಶ್ರೀ ಮಠದ ಜಾತ್ರೆ, ಪುರಣ ಮಂಗಳ
ಹಾಗೂ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಕಾರ್ತೀಕ ಮತ್ತು ದಸರಾಗಳಲ್ಲಿ ವಿಶೇಷ ಪೂಜೆ

Photos

Full Address Kannada

ಶ್ರೀ ಜುಕ್ತಿ ಹಿರೇಮಠ
ಸೂಡಿ - 582 211
ರೋಣ ತಾ||, ಗದಗ ಜಿಲ್ಲೆ

Map

Near by Places

ಗಜೇಂದ್ರಗಡ - 12 ಕಿ.ಮೀ.
ರೋಣ - 16 ಕಿ.ಮೀ.
ಗದಗ - 40 ಕಿ.ಮೀ.

Statistic

45 Views
0 Rating
0 Favorite
0 Share
error: Content is protected !!