ರಾಮನಗರ ಜಿˉÉ್ಲ ಮಾಗಡಿ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ.ಅಂತರದಲ್ಲಿರುವ ಚಿಕ್ಕಮಸ್ಕˉï ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀಜಂಗಮಮಠವು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರನ್ನು ಧಾರ್ಮಿಕ ಮಾರ್ಗದಲ್ಲಿಮುನ್ನಡೆಯಲು ಪ್ರೇರೇಪಿಸುತ್ತಿದೆ. ಸುಮಾರು 200 ವರ್ಷಗಳಿಗೂ ಅಧಿಕ ಇತಿಹಾಸವನ್ನುಹೊಂದಿರುವ ಶ್ರೀ ಜಂಗಮ ಮಠದ ಕರ್ತೃ ಗುರುಗಳು ಪೂಜ್ಯ ಶ್ರೀ ಮ.ನಿ.ಪ್ರ. ನಿರ್ವಾಣಮಹಾಸ್ವಾಮಿಗಳು.ಶ್ರೀ ನಿರ್ವಾಣ ಮಹಾಸ್ವಾಮಿಗಳಿಂದ ಪ್ರಾರಂಭಗೊಂಡ ಶ್ರೀಮಠದ ಪರಂಪರೆನಂತರ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ. ಗಿಣಿಯಪ್ಪಮಹಾಸ್ವಾಮಿಗಳು ಹಾಗೂ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳಮುಖಾಂತರ ಮುಂದುವರೆದಿದೆ. ಆದರೆ ಇವರುಗಳ ಕಾಲಮಾನ ಹಾಗೂ ಉಳಿದಮಾಹಿತಿಗಳ ಕೊರತೆಯಿದೆ. ಬಹುಶಃ ಮೂರನೇ ಶ್ರೀಗಳ ನಂತರ ಶ್ರೀಮಠ ಬಹುಕಾಲ ಖಾಲಿಉಳಿದಂತೆ ತೋರುತ್ತಿರುವುದು ಇದಕ್ಕೆ ಕಾರಣವಾಗಿರಬಹುದು. ಹಿಂದಿನ ಶ್ರೀಗಳಾದ ಶ್ರೀಸಿದ್ದಲಿಂಗ ಸ್ವಾಮಿಗಳು ಖಾಲಿ ಉಳಿದಿದ್ದ ಶ್ರೀಮಠದ ಅಧಿಕಾರ ವಹಿಸಿಕೊಂಡು ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಮುನ್ನಡೆಸಿದ್ದು 1992ರ ಮಾರ್ಚ್ 31ರಲ್ಲಿಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು 1992ರ ಮೇ18ರಂದು ಸಿದ್ದಗಂಗಾ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಾನಿದ್ಯದಲ್ಲಿ ದೇಗುಲ ಮಠದಶ್ರೀ ನಿರ್ವಾಣ ಮಹಾಸ್ವಾಮಿಗಳಿಂದ ಪಟ್ಟಾಧಿಕಾರದ ಧೀಕ್ಷೆ ಪಡೆದು ಶ್ರೀಮಠದ ಅಧಿಕಾರವಹಿಸಿಕೊಂಡರು. ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ ಶ್ರೀಗಳುಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀ ಬಸವಲಿಂಗ ಸ್ವಾಮಿಗಳುಅಧಿಕಾರಕ್ಕೆ ಬಂದಂದಿನಿಂದ ಶ್ರೀಮಠದ ಅಭಿವೃದ್ದಿಗೆ ಅವಿರತ ಶ್ರಮಿಸಿದ್ದು 2000ರಲ್ಲಿಶ್ರೀಮಠದ ಜೀರ್ಣಾಭಿವೃದ್ದಿಯನ್ನು ಪೂರ್ಣಗೊಳಿಸಿ ಸಿದ್ದಗಂಗಾ ಶ್ರೀ ಶಿವಕುಮಾರಮಹಾಸ್ವಾಮಿಗಳ ಅಮೃತ ಹಸ್ತದಿಂದ ಉದ್ಘಾಟಿಸಿದರು. ಶ್ರೀಮಠದ ಜಾತ್ರಾ ಮಹೋತ್ಸವವುಪ್ರತಿ ವರ್ಷ ದಸರಾದಲ್ಲಿ ನಡೆಯುತ್ತಿದ್ದು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳುಆಯೋಜಿಸಲ್ಪಟ್ಟಿರುತ್ತವೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು
Date of Birth :
01-06-1968
Place :
ಚಿಕ್ಕಮಸ್ಕˉï, ಮಾಗಡಿ ತಾ||
Pattadikara :
18-05-1992
Photo :
Programs
ಅಮವಾಸೆಗೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ zಸ Àರಾದಲ್ಲಿ ಶ್ರೀ ಮಠದ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು