Shree Jangama Kshetra, Ganjam Matha

Shree Jangama Kshetra, Ganjam Matha Claimed

ಶ್ರೀ ಜಂಗಮ ಕ್ಷೇತ್ರ, ಗಂಜಾಂ ಮಠ

Average Reviews

Description

ಶ್ರೀ ಗಂಜಾಂ ಮಠ – (ಚಾಮರಾಜಪೇಟೆ) ಬೆಂಗಳೂರು

ಕರ್ತೃ – ಶ್ರೀ ಮ.ನಿ.ಪ್ರ. ನಂಜುಂಡ ಮಹಾಸ್ವಾಮಿಗಳು

ಬೆಂಗಳೂರು ನಗರ ಚಾಮರಾಜಪೇಟೆ ಪ್ರದೇಶದ ಶಿರಸಿ ವೃತ್ತದ ಸಮೀಪದಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ಜಂಗಮ ಕ್ಷೇತ್ರ ಗಂಜಾಂ ಮಠವು ಬೆಂಗಳೂರು ನಗರದ ಪ್ರಮುಖಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಶ್ರೀಮಠದ ದಾಖಲೆಗಳ ಪ್ರಕಾರ ಸುಮಾರು ಎರಡುಶತಮಾನಗಳಿಗೂ ಮೊದಲು ಶ್ರೀಮಠದ ಮೂಲ ಮಠವು ಹನುಮಂತಪುರ (ಈಗಿನಗಾಂಧಿನಗರ)ದ ಸೆಂಟ್ರಲ್ ಜೈಲ್ ಹತ್ತಿರವಿತ್ತೆಂದು ತಿಳಿದು ಬರುತ್ತದೆ. ಆನಂತರ ಕರ್ತೃಗುರುಗಳಾದ ಶ್ರೀ ಮ.ನಿ.ಪ್ರ. ನಂಜುಂಡ ಮಹಾಸ್ವಾಮಿಗಳ ಕಾಲದಲ್ಲಿ (ಕಾಲ ಸು. 1875)ಬೆಂಗಳೂರಿನ ಪ್ರಮುಖ ಪೇಟೆಗಳಲ್ಲಿ ಒಂದಾಗಿದ್ದ ಮಾಮೂಲು ಪೇಟೆಗೆಸ್ಥಳಾಂತರಗೊಂಡಿತ್ತು. ಪ್ರಸ್ತುತ ಈಗಿನ ಶ್ರೀಗಳು 2005ರಲ್ಲಿ ಈಗ ಮಠ ಇರುವ ಸ್ಥಳವನ್ನುಖರೀದಿಸಿ 2007ರಲ್ಲಿ ಶ್ರೀಮಠದ ಆಡಳಿತವನ್ನು ನೂತನ ಮಠಕ್ಕೆ ಸ್ಥಳಾಂತರಿಸಿದರು.ಶ್ರೀಮಠದ ಸ್ಥಾಪಿತ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ. ಸುಮಾರು 1800ಕ್ಕಿಂತಲೂಪೂರ್ವದಲ್ಲಿಯೇ ಅಸ್ತಿತ್ತ್ವದಲ್ಲಿರಬಹುದಾದ ಶ್ರೀಮಠದಲ್ಲಿ 19ನೇ ಶತಮಾನದಪ್ರಾರಂಭದಲ್ಲಿ ಶ್ರೀ ಚನ್ನವೀರ ಒಡೆಯರ್‍ರವರು ಅಧಿಕಾರದಲ್ಲಿದ್ದರೆಂದು ತಿಳಿದು ಬರುತ್ತದೆ.ನಂತರದಲ್ಲಿ ತಿಪ್ಪಶೆಟ್ಟಿ ಮಠ ಹಾಗೂ ಗಂಜಾಂ ಮಠಗಳೆರಡನ್ನೂ ಮುನ್ನಡೆಸಿದವರು ಶ್ರೀಮ.ನಿ.ಪ್ರ. ಇಮ್ಮಡಿ ಗುರುಸಿದ್ದ ಮಹಾಸ್ವಾಮಿಗಳೆಂಬುದಾಗಿ ಉಲ್ಲೇಖವಿದೆ. ಇವರ ನಂತರಶ್ರೀಮಠದಲ್ಲಿ ಶ್ರೀ ರಾಚೋಟಿ ಮಹಾಸ್ವಾಮಿಗಳೆಂಬ ಶರಣರು ಅಧಿಕಾರದಲ್ಲಿದ್ದು ಧಾರ್ಮಿಕಆಚರಣೆಗಳನ್ನು ಮುನ್ನಡೆಸಿದ್ದಾರೆ.ಶ್ರೀಮಠದ ಬಗೆಗಿನ ಸ್ಪಷ್ಟವಾದ ಮಾಹಿತಿಗಳು ಶ್ರೀ ಮ.ನಿ.ಪ್ರ. ನಂಜುಂಡಮಹಾಸ್ವಾಮಿಗಳ ಕಾಲದಿಂದ ದೊರೆಯುತ್ತವೆ ಹಾಗೂ ಶ್ರೀಮಠದ ಈಗಿನ ಶ್ರೀಗಳಅಭಿಪ್ರಾಯದಲ್ಲಿ ಶ್ರೀ ನಂಜುಂಡ ಸ್ವಾಮಿಗಳೇ ಮಾಮೂಲು ಪೇಟೆಯ ಈಗಿನ ಹಳೆಯಮಠವನ್ನು ಸ್ಥಾಪಿಸಿರುತ್ತಾರೆ. ಈ ಕಾರಣದಿಂದಾಗಿ ಇವರನ್ನೇ ಶ್ರೀಮಠದ ಕರ್ತೃಗುರುಗಳೆಂದು ಹೆಸರಿಸಲಾಗಿದೆ. ನಮಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರಮಾಮೂಲಪೇಟೆಯ ಚನ್ನವೀರಶೆಟ್ಟರು ಎಂಬ ಧರ್ಮಾಭಿಮಾನಿ ವರ್ತಕರು ಸದರಿಮಠವನ್ನು ಹೆಗ್ಗುಂದರ ಶ್ರೀ ನಂಜುಂಡ ಮಹಾಸ್ವಾಮಿಗಳಿಗೆ 1886ರ ಜುಲೈ 12ರಂದುದಾನವಾಗಿ ಬರೆದುಕೊಟ್ಟಿದ್ದು ಈ ಕಾರಣದಿಂದಾಗಿಯೂ ಶ್ರೀ ನಂಜುಂಡಮಹಾಸ್ವಾಮಿಗಳನ್ನೇ ಶ್ರೀಮಠದ ಕರ್ತೃ ಗುರುಗಳನ್ನಾಗಿ ದಾಖಲಿಸಬಹುದಾಗಿದೆ.ಶ್ರೀ ಮ.ನಿ.ಪ್ರ. ನಂಜುಂಡ ಮಹಾಸ್ವಾಮಿಗಳು ಕಾಯಕನಿಷ್ಠರೂ, ಕ್ರಿಯಾಶೀಲರೂ,ಶಿಕ್ಷಣ ಪ್ರೇಮಿಗಳು, ವಿಚಾರವಂತರೂ ಆಗಿದ್ದು ಶ್ರೀಮಠವನ್ನು ಬೆಂಗಳೂರಿನ ಪ್ರಮುಖಧಾರ್ಮಿಕ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಲು ಅಡಿಪಾಯಹಾಕಿದರು. 1886ರ ಡಿಸಂಬರ್ 15ರಲ್ಲಿ “ಶ್ರೀ ಪ್ರಮಥಗಣ ಮನೋರಂಜನ ಸಂಸ್ಕøತಪಾಠಶಾಲೆ”ಯನ್ನು ಪ್ರಾರಂಭಿಸಿದ ಶ್ರೀಗಳು ಸ್ವತಃ ಸಾಹಿತಿಗಳೂ ಆಗಿದ್ದರು. ಶಿಥಿಲಗೊಂಡಿದ್ದಮಠದ ಕಟ್ಟಡವನ್ನು 1895ರ ವೇಳೆಗೆ 80 ಅಂಕಣದ ಮಠವನ್ನಾಗಿ ರೂಪಿಸಿದ ಶ್ರೀಗಳಿಗೆಬೆಂಬಲವಾಗಿ ನಿಂತವರು ಅವರ ಶಿಷ್ಯರಾಗಿದ್ದ ಶ್ರೀ ಮ.ನಿ.ಪ್ರ. ಚಿದ್ಘನ ಮಹಾಸ್ವಾಮಿಗಳು.1898ರಲ್ಲಿ ಶ್ರೀ ನಂಜುಂಡ ಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಶ್ರೀಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಶ್ರೀ ಚಿದ್ಘನ ಮಹಾಸ್ವಾಮಿಗಳು ಗುರುಗಳು ಪ್ರಾರಂಭಿಸಿದ್ದಪಾಠಶಾಲೆಯನ್ನು ಉನ್ನತೀಕರಿಸಿದ್ದಲ್ಲದೇ ಶ್ರೀಮಠದ ವ್ಯಾಪ್ತಿಯನ್ನು ವಿಸ್ತರಿಸಿ 1911ರಲ್ಲಿಲಿಂಗೈಕ್ಯರಾದರು.ಶ್ರೀ ಚಿದ್ಘನ ಮಹಾಸ್ವಾಮಿಗಳು ತಾವು ಲಿಂಗೈಕ್ಯರಾಗುವ ಮುನ್ನ ತಮ್ಮಉತ್ತರಾಧಿಕಾರಿಯನ್ನಾಗಿ ಶ್ರೀ ಬಸವರಾಜ ಸ್ವಾಮಿಗಳನ್ನು ನೇಮಿಸಿ ಅವರ ಹಾಗೂ ಮಠದಮೇಲ್ವಿಚಾರಕರಾಗಿ ಸರ್ಪಭೂಷಣ ಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳುಕಾರ್ಯನಿರ್ವಹಿಸುವಂತೆ ಕೋರಿಕೊಂಡಿದ್ದರು. ಅದರಂತೆ ಶ್ರೀ ಚನ್ನಬಸವ ಸ್ವಾಮಿಗಳು ಶ್ರೀಬಸವರಾಜ ಸ್ವಾಮಿಗಳನ್ನು ವೇದ ವೇದಾಂತ ಸಂಪನ್ನರನ್ನಾಗಿ ಮಾಡಿ 1924ರ ಸೆಪ್ಟಂಬರ್15ರಲ್ಲಿ ವಿದಿವತ್ತಾಗಿ ಶ್ರೀ ಗಂಜಾಂ ಮಠದ ಪಟ್ಟಾಧಿಕಾರವನ್ನು ವಹಿಸಿಕೊಟ್ಟು ಶ್ರೀ ಮ.ನಿ.ಪ್ರ.ಬಸವರಾಜ ಮಹಾಸ್ವಾಮಿಗಳು ಎಂಬ ಅಭಿದಾನ ನೀಡಿದರು. ಶ್ರೀ ಬಸವರಾಜ ಸ್ವಾಮಿಗಳುಶ್ರೀಮಠದಲ್ಲಿ ಶ್ರೀ ನಂಜುಂಡ ಮಹಾಸ್ವಾಮಿಗಳ ಕಾಲದಿಂದಲೂ ನಡೆದು ಬಂದಿದ್ದ ಸಂಸ್ಕರತಪಾಠಶಾಲೆಯನ್ನು ಪುನಶ್ಚೇತನಗೊಳಿಸಿದರು. ಶ್ರೀಮಠದ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಿದ ಶ್ರೀಗಳು 1959ರಲ್ಲಿ ಈಗಿನ ಶ್ರೀಗಳಾದ ಶ್ರೀಮ.ನಿ.ಪ್ರ. ಚಿದ್ಘನ ಮಹಾಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಂಡರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚಿದ್ಘನ ಮಹಾಸ್ವಾಮಿಗಳು ಹಿರಿಯಗುರುಗಳಿರುವಾಗಲೇ ಶ್ರೀಮಠದ ಉತ್ತರಾದಿತ್ವ ಪಡೆದು ಗುರುಗಳ ಐಕ್ಯಾ ನಂತರ 1966ರಫೆಬ್ರವರಿ 03 ರಂದು ತಮ್ಮ 16ನೇ ವಯಸ್ಸಿನಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹವನ್ನುಪಡೆದರು. ಶ್ರೀಗಳು ಸ್ನಾತಕೋತ್ತರ ಪದವೀದರರಾಗಿದ್ದು ಚಾಮರಾಜೇಂದ್ರ ಸಂಸ್ಕøತಪಾಠಶಾಲೆಯಲ್ಲಿ ಸಂಸ್ಕøತ ವಿದ್ವಾನ್, ಶಕ್ತಿವಿಶಿಷ್ಟಾದ್ವೈತ ವೀರಶೈವ ವಿದ್ವಾನ್ ಪದವಿಗಳನ್ನುಪೂರ್ಣಗೊಳಿಸಿದ್ದಾರೆ. ಶ್ರೀಗಳು ಮಾಮೂಲು ಪೇಟೆಯಲ್ಲಿದ್ದ ಶ್ರೀ ಗಂಜಾಂ ಮಠದಮೂಲಮಠದಲ್ಲಿ ಕಳೆದ ಐದು ದಶಕಗಳಿಂದ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬಂದಿದ್ದು ಇತ್ತೀಚೆಗೆ 2007ರಲ್ಲಿ ಈಗಿರುವ ಚಾಮರಾಜಪೇಟೆ ಪ್ರದೇಶದನೂತನ ಶ್ರೀ ಜಂಗಮ ಕ್ಷೇತ್ರ ಗಂಜಾಂ ಮಠಕ್ಕೆ ಮಠದ ಆಡಳಿತವನ್ನು ಸ್ಥಳಾಂತರಿಸಿದ್ದಾರೆ.ಶ್ರೀಗಳು ಎರಡೂ ಮಠಗಳಲ್ಲಿಯೂ ತಮ್ಮ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.ಶ್ರೀ ಚಿದ್ಘನ ಮಹಾಸ್ವಾಮಿಗಳು ನಗರದ ಚಾಮರಾಜಪೇಟೆಯಲ್ಲಿ ಲಿಟರರಿ ಶಿಕ್ಷಣಸಂಸ್ಥೆಯನ್ನು 1983ರಲ್ಲಿ ಸ್ಥಾಪಿಸಿ ಅಂದಿನಿಂದ ಇಂದಿನವರೆಗೂ ಮುನ್ನಡೆಸಿಕೊಂಡುಬರುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪದವಿಯವರೆಗಿನ ಶಿಕ್ಷಣದೊರೆಯುತ್ತಿದ್ದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಹಾಗೆಯೇಪೀಣ್ಯ ಪ್ರದೇಶದ ಲವಕುಶ ನಗರದಲ್ಲಿ ನರ್ಸಿಂಗ್ ಕಾಲೇಜನ್ನು ಕೂಡ ಪ್ರಾರಂಭಿಸಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಚಿದ್ಘನ ಮಹಾಸ್ವಾಮಿಗಳು
Date of Birth :
02-03-1950
Place :
ಬೆಂಗಳೂರು
Pattadikara :
03-02-1966
Photo :

Programs

ಚೈತ್ರ ಹುಣ್ಣಿಮೆ ತೃತೀಯದಂದು ಶ್ರೀ ಹಿರಿಯ ಗುರುಗಳ ಆರಾಧನೆ
ಬಸವ ಜಯಂತಿ ಆಚರಣೆ ಕಾರ್ತೀಕ ಮಾಸದಲ್ಲಿ ದೀಪಾರಾಧನೆ

Institutions

ಲಿಟರರಿ ಶಿಕ್ಷಣ ಸಂಸ್ಥೆ (ರಿ) - ಸ್ಥಾಪನೆ 1983
ಪೂರ್ವ / ಕಿರಿಯ / ಹಿರಿಯ / ಪ್ರೌಢಶಾˉÉ ¥ದ À
ಪದವಿ ಪೂರ್ವ / ಪದವಿ ಕಾಲೇಜು
ನರ್ಸಿಂಗ್ ಕಾಲೇಜು

Photos

Full Address Kannada

ಶ್ರೀ ಜಂಗಮ ಕ್ಷೇತ್ರ, ಗಂಜಾಂ ಮಠ
1ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ,
ಚಾಮರಾಜಪೇಟೆ, ಬೆಂಗಳೂರು - 560 018

Map

Near by Places

ಶಿರಸಿ ಸರ್ಕಲ್ - 100 ಮೀ.
ಕೆಂ.ಬ.ನಿ. - 2 ಕಿ.ಮೀ.
ಕೆ.ಆರ್.ಮಾರ್ಕೆಟ್ - 2 ಕಿ.ಮೀ.
ರೈಲ್ವೆ ಸ್ಟೇಷನ್ - 2 ಕಿ.ಮೀ.

Statistic

18 Views
0 Rating
0 Favorite
0 Share
error: Content is protected !!