Shree Jangam Matha

Shree Jangam Matha Claimed

ಶ್ರೀ ಜಂಗಮ ಮಠ

Average Reviews

Description

ಶ್ರೀ ಜಂಗಮ ಮಠ

ಶ್ರೀ ಷ.ಬ್ರ. ಚನ್ನಬಸವ ಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ಕೇಂದ್ರದಿಂದ 25 ಕಿ.ಮೀ.ದೂರದಲ್ಲಿರುವ ಕಬ್ಬಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಜಂಗಮ ಮಠವುತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದ್ದು ಪುತ್ರವರ್ಗದ ಸಂಪ್ರದಾಯದಲ್ಲಿಬೆಳೆದು ಬಂದಿದೆ. ಸುಮಾರು 350 ವರ್ಷಗಳ ಹಿಂದೆ ಸಂಚಾರದಲ್ಲಿ ಇಲ್ಲಿಗೆ ಆಗಮಿಸಿದಪರಮ ಪೂಜ್ಯ ಶ್ರೀ ರಾಚೋಟಿ ಒಡೆಯರ್‍ರವರು ಈ ನೆಲದಲ್ಲಿ ಧೀರ್ಘಾನುಷ್ಠಾನಗೊಂಡುಶ್ರೀಮಠದ ಸ್ಥಾಪನೆ ಮಾಡಿದ್ದಾರೆ. ಕರ್ತೃಗುರುಗಳ ಅನುಷ್ಠಾನಗಳಿಂದ, ಆಚರಣೆಗಳಿಂದಗ್ರಾಮದ ಜನರಲ್ಲಿ ಧರ್ಮ ಸಂಸ್ಕಾರ ಹೆಚ್ಚಿ ಸಂಸ್ಕಾರಯುತ ಸಮಾಜ ರೂಪುಗೊಂಡಿತು.ಕರ್ತೃಗುರುಗಳ ನಂತರ ಶ್ರೀಮಠದ ಪರಂಪರೆಯಲ್ಲಿ ಐದು ಜನ ಶ್ರೀಗಳುಅಧಿಕಾರ ನಡೆಸಿದ್ದು ಎಲ್ಲಾ ಗುರುಗಳೂ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ್ದಾರೆ. ಶ್ರೀಮಠದಪರಂಪರೆಯಲ್ಲಿ ಶ್ರೀ ಷ.ಬ್ರ. ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ ಷ.ಬ್ರ. ಚನ್ನಬಸವಮಹಾಸ್ವಾಮಿಗಳು ಹಾಗೂ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಸಿದ್ದ ಮಹಾಸ್ವಾಮಿಗಳುಅಧಿಕಾರ ನಡೆಸಿದ್ದು ಇವರ ಕಾಲದಲ್ಲಿ ದಾಸೋಹಕ್ರಿಯೆ ಮಹತ್ತರವಾಗಿ ನಡೆದು ಶ್ರೀಮಠವುಹೆಚ್ಚು ಪ್ರಚಾರಕ್ಕೆ ಬಂದಿತು.ಪ್ರಸ್ತುತ ಶ್ರೀಮಠದ ಹಿರಿಯ ಗುರುಗಳಾದ ಶ್ರೀ ಷ.ಬ್ರ. ಚನ್ನಬಸವಮಹಾಸ್ವಾಮಿಗಳನ್ನು ಅವರ ಏಳನೇ ವಯಸ್ಸಿನಲ್ಲಿಯೇ 1943ರ ಜೂನ್ 16 ರಂದುಅಧಿಕಾರಕ್ಕೆ ತರಲಾಯಿತು. ಶ್ರೀಗಳು ನಂತರ ತಮ್ಮ ವಿಧ್ಯಾಭ್ಯಾಸ ಮುಂದುವರೆಸಿ ಮೈಸೂರಿನಸಂಸ್ಕøತ ಪಾಠಶಾಲೆಯಲ್ಲಿ ಸಂಸ್ಕøತ, ವೇದ, ಆಗಮ ಹಾಗೂ ಜ್ಯೋತಿಷ್ಯವನ್ನು ಕಲಿತುಅದರಲ್ಲಿ ಆಳವಾದ ಅರಿವನ್ನು ಪಡೆದರು. ಶ್ರೀಗಳು ಕ್ರಿಯಾಶೀಲರಾಗಿ ಶ್ರೀಮಠದಲ್ಲಿಒಂದೊಂದೇ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಶ್ರೀಮಠವನ್ನು ವಿಸ್ತರಿಸಿದರು.ಪರಂಪರೆಯ ಗುರುಗಳ ಕಾಲದಲ್ಲಿ ಮೈಸೂರು ಅರಸರು ನೀಡಿದ್ದ 7.13 ಎಕರೆ ಹೊಲವನ್ನುಉಳಿಸಿ ಅಭಿವೃದ್ದಿಗೊಳಿಸಿರುವ ಶ್ರೀಗಳು ತಮ್ಮ ಈ ಇಳಿವಯಸ್ಸಿನಲ್ಲಿಯೂ ಬತ್ತದಚಿಲುಮೆಯಾಗಿದ್ದಾರೆ. ಶ್ರೀಗಳು ಇತ್ತೀಚೆಗೆ ತಮ್ಮ ಉತ್ತರಾಧಿಕಾರಿಯನ್ನಾಗಿ ಶ್ರೀ ಮಹೇಶದೇವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಚನ್ನಬಸವ ಸ್ವಾಮಿಗಳು
Date of Birth :
01-10-1934
Place :
ಕಬ್ಬಹಳ್ಳಿ, ಗುಂಡ್ಲುಪೇಟೆ ತಾ||
Pattadikara :
16-06-1943
Photo :

Programs

ಶಿವರಾತ್ರಿ, ಕಾರ್ತೀಕ ಮಾಸ ಹಾಗೂ ಧನುರ್ಮಾಸದಲ್ಲಿ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ಶಿವಾನುಭವ ಗೋಷ್ಠಿಗಳು ಹಾಗೂ
ವಿಶೇಷ ಧಾರ್ಮಿಕ ಆಚರಣೆಗಳು

Institutions

ಮಹಿಳಾ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಜಂಗಮ ಮಠ
ಕಬ್ಬಹಳ್ಳಿ - 571 319
ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆ

Map

Near by Places

ಬೇಗೂರು - 17 ಕಿ.ಮೀ.
ಬೇಗೂರು ಗೇಟ್ - 14 ಕಿ.ಮೀ.
ಗುಂಡ್ಲುಪೇಟೆ - 25 ಕಿ.ಮೀ.
ನಂಜನಗೂಡು - 35 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!