ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಅನೇಕ ವೀರಶೈವ ಮಠಗಳು ತಮ್ಮಆಚರಣೆಗಳ ಮೂಲಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿ ಪಡೆದಿವೆ.ಅಂತಹ ಮಠಗಳಲ್ಲಿ ಒಂದಾದ ಬೆಂಗಳೂರಿನ ಬೇಲಿ ಮಠವು ಪುರಾತನ ಇತಿಹಾಸಹೊಂದಿದ್ದು ಅನೇಕ ಶಾಖಾ ಮಠಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾಗಿ ಶ್ರೀ ಬೇಲಿಮಠದ ಖಾಸಾ ಶಾಖಾಮಠವಾಗಿ ಪ್ರಚಲಿತದಲ್ಲಿ ಇರುವ ಮಠವೇ ಗುಡೇಮಾರನಹಳ್ಳಿಯಶ್ರೀಜಗಣ್ಣಯ್ಯನ ಮಠ.ಶ್ರೀ ಜಗಣ್ಣಯ್ಯನ ಮಠವು ಶ್ರೀ ಬೇಲಿ ಮಠದ ಖಾಸಾ ಶಾಖಾಮಠವಾಗಿಶತಮಾನಗಳಿಂದ ಮುಂದುವರೆದಿದ್ದು ತೀರಾ ಇತ್ತೀಚಿನವರೆಗೂ ಶ್ರೀ ಬೇಲಿ ಮಠದ ನೇರಆಡಳಿತದಲ್ಲಿಯೇ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿತ್ತು. ಇತ್ತೀಚೆಗೆಶ್ರೀ ಬೇಲಿ ಮಠದ ಈಗಿನ ಶ್ರೀಗಳಾದ ಶ್ರೀ ನಿ.ಪ್ರ. ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳುಗುಡೇಮಾರನಹಳ್ಳಿಯ ಶಾಖಾಮಠಕ್ಕೆ ಗುರುಗಳ ಅಗತ್ಯತೆ ಕಂಡು 1992ರ ಸೆಪ್ಟಂಬರ್27ರಲ್ಲಿ ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು ಅಧಿಕಾರಕ್ಕೆ ತಂದರು.ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು ಇದೇ ಗ್ರಾಮದವರಾಗಿದ್ದು ಶ್ರೀ ಬೇಲಿಮಠದಲ್ಲಿ ಅಭ್ಯಸಿಸಿದವರು. ತಮ್ಮ 15ನೇ ವಯಸ್ಸಿಗೆ ಶ್ರೀಮಠದ ಅಧಿಕಾರ ಸ್ವೀಕರಿಸಿದಶ್ರೀಗಳು ನಂತರದಲ್ಲಿ ಶ್ರೀ ಬೇಲಿ ಮಠದಲ್ಲಿ ಕೆಲಕಾಲ ಅಭ್ಯಸಿಸಿ ಗುರುಗಳಮಾರ್ಗದರ್ಶನದಲ್ಲಿ ಪರಿಪಕ್ವಗೊಂಡರು. ನಂತರ ಶ್ರೀಮಠಕ್ಕೆ ಮರಳಿದ ಶ್ರೀ ಚನ್ನಬಸವಸ್ವಾಮಿಗಳು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಶ್ರೀಮಠವನ್ನುಮುಂಚೂಣಿಗೆ ತಂದಿದ್ದಾರೆ.ಶ್ರೀ ಚನ್ನಬಸವ ಸ್ವಾಮಿಗಳು ಪ್ರತಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿಅಮವಾಸ್ಯೆಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಪ್ರತಿ ವರ್ಷ ಬಸವಜಯಂತಿಯನ್ನು ವಿಶೇಷವಾಗಿ ಆಚರಿಸುವ ಶ್ರೀಗಳು ವಿವಿಧ ಧಾರ್ಮಿಕ ಸಾಮಾಜಿಕಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಹಾಗೂ ಕಾರ್ತೀಕ ಮಾಸದಲ್ಲಿ ನಾಲ್ಕೂಸೋಮವಾರಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ.ಅಮವಾಸ್ಯೆ ದಿನ ಮಹಾದಾಸೋಹ ಮಾಡುತ್ತಾರೆ ಮತ್ತು ಶ್ರೀಮಠದಲ್ಲಿ ಭದ್ರಕಾಳಿ ಸಮೇತವೀರಭದ್ರಸ್ವಾಮಿ ಸನ್ನಿಧಾನವಿದ್ದು ಭಕ್ತರು ಶ್ರದ್ದಾಭಕ್ತಿಯಿಂದ ಪೂಜಿಸುತ್ತಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು
Date of Birth :
20-07-1977
Place :
ಗುಡೇಮಾರನಹಳ್ಳಿ, ಮಾಗಡಿ ತಾ||
Pattadikara :
27-09-1992
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ ಬಸವ ಜಯಂತಿಗೆ ವಿಶೇಷ ಪೂಜೆ ಮತ್ತು ಕಾರ್ಯಕ್ರಮಗಳು ಕಾರ್ತಿಕ ಮಾಸದಲ್ಲಿ ನಾಲ್ಕು ಸೋಮವಾರ ಹಾಗೂ ಕಾರ್ತಿಕ ಅಮವಾಸೆ ದಿನ ಪೂಜೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು, ಕೊನೆ ಅಮವಾಸ್ಯೆಗೆ ಅನ್ನದಾಸೋಹ
Photos
Full Address Kannada
ಶ್ರೀ ಜಗಣ್ಣಯ್ಯನ ಮಠ
ಶ್ರೀ ರುದ್ರೇಶ್ವರ ನಗರ, ಗುಡೇಮಾರನಹಳ್ಳಿ - 562 127
ಮಾಗಡಿ ತಾ||, ರಾಮನಗರ ಜಿಲ್ಲೆ