ಗದಗ ಜಿಲ್ಲೆಯು ಕರ್ನಾಟಕದ ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕøತಿಕರಾಜಧಾನಿ ಎಂದರೆ ತಪ್ಪಾಗದು. ಇಂತಹ ಗದಗ ನಗರದ ಹೃದಯಭಾಗದಲ್ಲಿ 15ನೇಶತಮಾನದ ಮಧ್ಯಭಾಗದಲ್ಲಿ ಮಹಾಮಹಿಮ ಪುರುಷ ಶ್ರೀ ತೋಂಟದ ಸಿದ್ದಲಿಂಗಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠವು ನಾಡಿನ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದಾಗಿ ಕಂಗೊಳಿಸುತ್ತಿದೆ.ತೋಂಟದ ಸಿದ್ದಲಿಂಗ ಯತಿಗಳೆಂದರೆ ಇಡೀ ಕರ್ನಾಟಕದ ವೀರಶೈವ ಧರ್ಮದಮಹಾಪುರುಷರು. 12ನೇ ಶತಮಾನದ ಅಲ್ಲಮ ಪ್ರಭುಗಳು ಸ್ಥಾಪಿಸಿದ್ದ ಶೂನ್ಯಪೀಠಪರಂಪರೆಯ ನೇರ ವಾರಸುದಾರರಾಗಿ ಶೂನ್ಯ ಸಿಂಹಾಸನವನ್ನೇರಿದವರು. ಇಂತಹಮಹಾಮಹಿಮರು ಚಾಮರಾಜನಗರದ ಹತ್ತಿರದ ಹರದನಹಳ್ಳಿಯ ತಮ್ಮ ಸ್ವಕ್ಷೇತ್ರದಿಂದಸಂಚಾರ ಹೊರಟು ವ್ಯಾಪಕವಾದ ಆಂದೋಲನವನ್ನು ರೂಪಿಸಿ ವಿಚಾರಕ್ರಾಂತಿಯನ್ನುಬಿತ್ತಿದ್ದರು. ಏಳನೂರು ವಿರಕ್ತರು, ಮೂರು ಸಾವಿರ ಜಂಗಮರು ಆಂದೋಲನದಲ್ಲಿಬಾಗಿಯಾದರು.ಹೀಗೆ ಅಪಾರ ವಿರಕ್ತ – ಜಂಗಮ ಸಮೂಹದೊಂದಿಗೆ ಹೊರಟ ಶ್ರೀ ತೋಂಟದಸಿದ್ದಲಿಂಗ ಯತಿಗಳ ಆಂದೋಲನವು ಹಳ್ಳಿ ಹಳ್ಳಿಗಳನ್ನು ಸುತ್ತುತ್ತಾ ಮುಂದುವರೆಯುತ್ತದೆ.ಆಯಾ ಹಳ್ಳಿಗಳಲ್ಲಿ ಒಬ್ಬೊಬ್ಬ ವಿರಕ್ತರು ನೆಲೆಗೊಂಡು ಮಠವನ್ನು ಸ್ಥಾಪಿಸಿ ವೀರಶೈವಧರ್ಮದ ಪ್ರಚಾರಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಈ ರೀತಿ ತಮ್ಮ ಸಂಚಾರದಸಮಯದಲ್ಲಿ ಗದಗಿನಲ್ಲಿ ಮಠವನ್ನು ಸ್ಥಾಪಿಸಿದ ಶ್ರೀ ತೋಂಟದ ಸಿದ್ದಲಿಂಗೇಶ್ವರರು ಕೆಲವುದಿನ ಅಲ್ಲೇ ನೆಲೆಗೊಂಡು ಮತ್ತೆ ಸಂಚಾರಕ್ಕೆ ಹೊರಟು ಕೊನೆಯಲ್ಲಿ ಎಡೆಯೂರಿನಲ್ಲಿನಿರ್ವಿಕಲ್ಪ ಸಮಾಧಿಯಾಗಿ ಶ್ರೀ ಎಡೆಯೂರು ಸಿದ್ದಲಿಂಗೇಶ್ವರರೆಂದೇ ಪೂಜ್ಯನೀಯರಾದರು.ಪೂಜ್ಯ ಶ್ರೀ ತೋಂಟದ ಸಿದ್ದಲಿಂಗೇಶ್ವರರು ತಮ್ಮ ನಂತರ ಶೂನ್ಯಸಿಂಹಾಸನಾಪೀಠಕ್ಕೆ ತಮ್ಮ ಶಿಷ್ಯ ಶ್ರೀ ತೋಂಟದ ಬೋಳಬಸವ ಮಹಾಸ್ವಾಮಿಗಳಿಗೆ ಅಧಿಕಾರನೀಡಿ ಮುಂದುವರೆದಿರುತ್ತಾರೆ. ಶ್ರೀಗಳು ಗುರುಗಳಂತೆ ತ್ರಿಕಾಲ ಜ್ಞಾನಿಯಾಗಿದ್ದು ತಮ್ಮಧಾರ್ಮಿಕ ಆಚರಣೆಗಳ ಮೂಲಕ ಸಮಸ್ತ ಸದ್ಬಕ್ತರಿಗೆ ಸನ್ಮಂಗಳವನ್ನುಂಟು ಮಾಡಿದ್ದಾರೆ.ಇವರ ನಂತರ ಶ್ರೀ ಗೂಳೂರು ಸಿದ್ದವೀರ ಮಹಾಸ್ವಾಮಿಗಳು, ಶ್ರೀ ಉದ್ದಾನಾರ್ಯಮಹಾಸ್ವಾಮಿಗಳು ಈ ರೀತಿ ಶ್ರೀ ಮಠದ ಪರಂಪರೆ ಬೆಳೆದು ಬಂದಿದೆ. ಶ್ರೀ ಮಠಕ್ಕೆ ಕೆಳದಿಅರಸರು ನಡೆದುಕೊಂಡಿದ್ದು ಶ್ರೀ ಮಠದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಿಕೃತಾರ್ಥರಾಗಿದ್ದರು.ಶ್ರೀ ಮಠದ ಪರಂಪರೆಯು ಮೊದಲು ಸಂಚಾರಿ ಪೀಠವಾಗಿದ್ದು ತದನಂತರಹರಪನಹಳ್ಳಿಯಿಂದ ಮುಂದೆ ಡಂಬಳಕ್ಕೆ ಸ್ಥಳಾಂತರಗೊಂಡು ಅಲ್ಲಿಂದ ಮುಂದೆ ಗದಗದಲ್ಲಿನೆಲೆಗೊಂಡಿದೆ. ಈ ರೀತಿ ಬೆಳೆದು ಬಂದಿರುವ ಶ್ರೀ ಮಠದ ಪರಂಪರೆಯಲ್ಲಿ ಇಲ್ಲಿಯವರೆಗೂ18 ಜನ ಸ್ವಾಮಿಗಳು ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸಿದ್ದು ಈಗಿನ 6ಶ್ರೀಗಳು 19ನೇ ಶ್ರೀಗಳೆಂದು ಹೇಳಲಾಗುತ್ತದೆ. ಈಗಿನ ಶ್ರೀಗಳಾದ ಜಗದ್ಗುರು ಶ್ರೀ ಮ.ನಿ.ಪ್ರ.ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು 1974ರ ಜೂನ್ 29ರಲ್ಲಿ ಶ್ರೀಮಠದಅಧಿಕಾರ ವಹಿಸಿಕೊಂಡಿದ್ದು ಶ್ರೀ ಮಠವನ್ನು ತಮ್ಮ ಧಾರ್ಮಿಕ ಹಾಗೂ ವೈಚಾರಿಕಚಿಂತನೆಗಳಿಂದ ಮುನ್ನಡೆಸುತ್ತಿದ್ದು ಪ್ರಸ್ತುತ ನಾಡಿನ ಪ್ರಮುಖ ಶ್ರೀಗಳಲ್ಲೊಬ್ಬರಾಗಿದ್ದಾರೆ.ಶ್ರೀಗಳು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದು ಸಿಂದಗಿಯಪೂಜ್ಯ ಶ್ರೀ ಶಾಂತವೀರಪಟ್ಟದ ದೇವರ ಹಾರೈಕೆ ಹಾಗೂ ಮಾರ್ಗದರ್ಶನದಲ್ಲಿ ಬೆಳೆದುಪ್ರತಿಭಾನ್ವಿತ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು.ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವನ್ನು ವೈಚಾರಿಕನೆಲೆಗಟ್ಟಿನಲ್ಲಿ ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸಿದ್ದು ಪರಂಪರೆಯ ಗುರುಗಳಂತೆಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ ನಾಡಿನಲ್ಲಿಕ್ರಾಂತಿಯನ್ನುಂಟು ಮಾಡುತ್ತಿದ್ದಾರೆ. ಶ್ರೀಗಳು ಸಿಂದಗಿ ಶ್ರೀ ಪಟ್ಟದ ದೇವರ ಅಭಿಲಾಷೆಯಂತೆಗುರುಸ್ಥಲ ಮತ್ತು ವಿರಕ್ತಮಠಗಳ ಸಂಪರ್ಕವನ್ನಿಟ್ಟುಕೊಂಡು, ಹಾವೇರಿ-ಸಿಂದಗಿಯ ಸುರಗಿಮಠ ಮತ್ತು ಇದರ ಅಧೀನ ಮಠಗಳ ಆಡಳಿತವನ್ನೂ ನೋಡಿಕೊಂಡು ಬರುತ್ತಿದ್ದಾರೆ.ಇಂತಹ ಕಾಯಕಯೋಗಿಗಳ ಸಮಾಜ ಸೇವೆ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸಿ1994ರಲ್ಲಿ ಗುಲ್ಬರ್ಗ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.ಶ್ರೀಗಳು ಅಧಿಕಾರಕ್ಕೆ ಬಂದ ನಂತರ ಪ್ರತಿ ಅಮಾವಾಸ್ಯೆಯಲ್ಲಿ ಜನಜಾಗೃತಿಗಾಗಿಗದಗಿನಿಂದ ಡಂಬಳಕ್ಕೆ 21 ಕಿ.ಮೀ. ಪಾದಯಾತ್ರೆ ನಡೆಸಿ ಡಂಬಳದಲ್ಲಿ ಹಾಳುಬಿದ್ದಿದ್ದಭೂಮಿಯನ್ನು ನಂದನವನವನ್ನಾಗಿಸಿ ಕೃಷಿಕರಿಗೆ ಆದರ್ಶಪ್ರಾಯರಾದರು. ಹಾಗೆಯೇ ಶ್ರೀಮಠದಲ್ಲಿ ಬುದ್ದ-ಬಸವ-ಅಂಬೇಡ್ಕರ್ ಜಯಂತಿಯನ್ನು ಆಚರಿಸಿ ಸಮಾಜದಲ್ಲಿಸಮನ್ವಯತೆ ತರಲು ಪ್ರಯತ್ನಿಸಿದ್ದಾರೆ. ಶ್ರೀ ಮಠದಲ್ಲಿ ಉಚಿತವಾಗಿ ಸಾಮೂಹಿಕವಿವಾಹಗಳು, ಅನ್ನಸಂತರ್ಪಣೆ, ದೇವದಾಸಿಯರ ವಿವಾಹಗಳು, ಅಂತರ್ಜಾತಿವಿವಾಹಗಳನ್ನು ಪ್ರೋತ್ಸಾಹಿಸಿ ನಡೆಸಿಕೊಂಡು ಬರುತ್ತಿದ್ದು ದೇವದಾಸಿಯರ ಮಕ್ಕಳಪುನರ್ವಸತಿಗೆ ಅನಾಥಾಶ್ರಮ ಸ್ಥಾಪಿಸಿದ್ದಾರೆ.ಶ್ರೀಮಠದ ವತಿಯಿಂದ 1976ರಲ್ಲಿ ಶ್ರೀ ತೋಂಟದಾರ್ಯ ವಿದ್ಯಾಪೀಠವನ್ನುಸ್ಥಾಪಿಸಿ ಈ ಸಂಸ್ಥೆಯ ಮೂಲಕ ನಾಡಿನಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣಮತ್ತು ಸ್ವಯಂ ಉದ್ಯೋಗಕ್ಕೆ ನೆರವು ನೀಡಿದ್ದಾರೆ. ಹಾಗೆಯೇ 1975ರಲ್ಲಿ ವೀರಶೈವಅಧ್ಯಯನ ಸಂಸ್ಥೆಯನ್ನು ಪ್ರಾರಂಭಿಸಿ ವೀರಶೈವ ಧರ್ಮದ ಬಗ್ಗೆ ಬೆಳಕು ಚೆಲ್ಲುವಂತಹಅನೇಕ ಪುಸ್ತಕಗಳನ್ನು ಪ್ರಕಟಿಸಲಾಗಿದೆ.
Swamiji
Swamiji Name :
ಜಗದ್ಗುರು ಶ್ರೀ ಮ.ನಿ.ಪ್ರ. ಡಾ|| ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
21-02-1949
Place :
ಸಿಂದಗಿ, ಬಿಜಾಪುರ ಜಿಲ್ಲೆ
Pattadikara :
29-06-1974
Photo :
Programs
ಪ್ರತಿದಿನ ರುದ್ರಾಭಿಷೇಕ
ಪ್ರತಿ ಸೋಮವಾರ “ಶಿವಾನುಭವ ಗೋಷ್ಠಿ”
ದವನದ ಹುಣ್ಣಿಮೆಯಂದು ಶ್ರೀಮಠದ ಜಾತ್ರೆ
ಬಸವ ಜಯಂತಿಯಂದು ವಿಶೇಷ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ನಿತ್ಯ ಪ್ರವಚನ.
Institutions
ಸಂಸ್ಕøತ ವೇದ ಪಾಠಶಾಲೆ
ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆ
ಪದವಿ ಪೂರ್ವ ಕಾಲೇಜ್
ವಿದ್ಯಾರ್ಥಿ ನಿಲಯ / ಗೋ ಶಾಲೆ
Photos
Full Address Kannada
ಶ್ರೀ ಜಗದ್ಗುರು ತೋಂಟಾದಾರ್ಯ ಸಂಸ್ಥಾನ ಮಠ
ಗದಗ - 582 102 ಗದಗ ತಾ||, ಗದಗ ಜಿಲ್ಲೆ