ಗದಗ ಜಿಲ್ಲೆ ಶಿರಹಟ್ಟಿಯು ತಾಲ್ಲೂಕು ಕೇಂದ್ರವಾಗಿ ಕರ್ನಾಟಕ ಭೂಪಟದಲ್ಲಿಸ್ಥಾನ ಪಡೆದಿರುವಂತೆಯೇ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಪಡೆದುಹೆಸರಾಗಿದೆ. ಧಾರ್ಮಿಕ ವಿಷಯಗಳಲ್ಲಿ ಸಾಮರಸ್ಯವಿಲ್ಲದೆ ಕಲಹಗೊಳ್ಳುತ್ತಿರುವ ಈಸಂದರ್ಭದಲ್ಲಿ ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರೇಶ್ವರ ಸಂಸ್ಥಾನ ಮಠವು ಭಾವೈಕ್ಯಕೆಯಸಂಕೇತವಾಗಿ ಬೆಳೆದು ನಾಡಿಗೆ ಮಹತ್ತರವಾದ ಸಂದೇಶವನ್ನು ನೀಡುತ್ತಾ ಬಂದಿದೆ.ಬಿಜಾಪುರದ ಸಮೀಪದ ಮಂಜಲಪುರದ ಹಿರೇಮಠದ ವೀರಶೈವ ದಂಪತಿಗಳಿಗೆಸಮೀಪದ ಖಾಜಾ ಅಮೀನ್ ದರ್ಗಾದ ಖಾಜಾ ಅಮೀನ್ ಉದ್ದೀನರಆಶೀರ್ವಾದದಿಂದ ಹುಟ್ಟಿದ ಚನ್ನವೀರೇಶ್ವರರು ನಂತರ ದರ್ಗಾದ ಖಾಜಿಗಳ ಸಂಪರ್ಕಕ್ಕೆಬಂದು ಅವರ ಹಾರೈಕೆಯಲ್ಲೇ ಬೆಳೆದು ಗುರುಗಳಿಂದ ದೀಕ್ಷಾಸಂಸ್ಕಾರ, ಶಿಕ್ಷಣ ಪಡೆದುಸಮಾಜ ಸುಧಾರಣೆಯ ಹರಿಕಾರರಾದರು. ವರ್ಷಗಳ ನಂತರ ದರ್ಗಾದ ಗುರುಗಳಆಶೀರ್ವಾದ ಪಡೆದು ವೀರಶೈವ ಧರ್ಮ ಮತ್ತು ಮುಸ್ಲಿಂ ಧರ್ಮ ಎರಡೂ ಧರ್ಮಗಳತತ್ತ್ವಗಳನ್ನು ಪ್ರಚಾರ ಪಡಿಸಿ ಸಮಾಜದಲ್ಲಿ ಸಾಮರಸ್ಯ ತರುವ ಮಹಾನ್ ಕೆಲಸಕ್ಕೆಮುಂದಾಗುತ್ತಾರೆ.93ಹೀಗೆ ಶ್ರೀ ಚನ್ನವೀರೇಶ್ವರರು ಶ್ರೀ ಜಗದ್ಗುರು ಫಕೀರೇಶ್ವರ ಶಿವಯೋಗಿಗಳಾಗಿಎರಡೂ ಧರ್ಮಗಳ ಪ್ರಚಾರ ಮಾಡುತ್ತಾ ಶಿರಹಟ್ಟಿಗೆ ಆಗಮಿಸಿ ಅನುಷ್ಠಾನಕ್ಕೆಕುಳಿತುಕೊಳ್ಳುತ್ತಾರೆ. ಆಗ ಶ್ರೀಗಳಿಗೆ ಕೇವಲ 18ವರ್ಷ. ಶ್ರೀಗಳ ಶಿವಪೂಜೆ ಮತ್ತು ನಮಾಜ್ಎರಡನ್ನೂ ಆಚರಿಸುತ್ತಿದ್ದ ರೀತಿಯನ್ನು ಕಂಡ ಭಕ್ತರು ಪರಮಾಶ್ಚರ್ಯಗೊಂಡು ಶ್ರೀಗಳಭಕ್ತರಾದರು. ಇದೇ ಸಂದರ್ಭದಲ್ಲಿ ಸಾಂಗ್ಲಿ ಸಂಸ್ಥಾನದ ಪಟವರ್ಧನ ರಾಜನಿಗೆಆಶೀರ್ವದಿಸಿ ಅವರ ಪತ್ನಿಯ ರೋಗವನ್ನು ಗುಣಪಡಿಸಿದಕ್ಕಾಗಿ ರಾಜರು ಶ್ರೀಗಳಿಗೆನಾನೂರು ಎಕರೆ ಜಮೀನನ್ನು ಇನಾಂ ನೀಡಿ ಮಠ ಸ್ಥಾಪನೆಗೆ ಕಾರಣರಾಗುತ್ತಾರೆ.ಶ್ರೀಗಳ ಪ್ರಭಾವ ಎಲ್ಲಾ ಕಡೆ ಹರಡಿದ್ದರಿಂದಾಗಿ ಹೈದರಾಬಾದ್ ನಿಜಾಂರುಗುರುಗಳ ಪವಾಡಕ್ಕೆ ತಲೆಬಾಗಿ ಕಠಾರಿಯನ್ನು, ಅಕ್ಬರ್ ಬಾದಶಹರು ರಣಬಿಟ್ಟ (ಬಂಗಾರದರಣಬಿಲ್ಲೆ), ಸಿರಾಪೇಟು (ಕಿರೀಟ) ಹಾಗೂ ಅಪಾರ ಬೆಳ್ಳಿ ಬಂಗಾರಗಳನ್ನು ಕಾಣಿಕೆಯಾಗಿನೀಡಿ ಗುರುಗಳ ಆಶಿರ್ವಾದಕ್ಕೆ ಪಾತ್ರರಾಗಿದ್ದಾರೆ. ಈಗಲೂ ಈ ಎಲ್ಲಾ ಕಾಣಿಕೆಗಳು ಮಠದಲ್ಲಿನೋಡಲು ಸಿಗುತ್ತಿದ್ದು ಶ್ರೀಗಳು ಸರ್ವಧರ್ಮ ಸಮನ್ವಯಕಾರರಾಗಿ ಬೆಳಗಿದ ಅಪರೂಪದಮಹಾಮಹಿಮ ಶಿವರಣರು.ಕರ್ತೃ ಶ್ರೀಗಳ ನಂತರ ಅವರಿಂದಲೇ ಪಟ್ಟಕ್ಕೆ ಬಂದು “ಮನುಜಕಲ ಒಂದೇ.ನಾವೆಲ್ಲರೂ ನೀತಿವಂತರಾಗಿ ಬಾಳಬೇಕು ಈಶ್ವರ ಬೇರೆಯಲ್ಲ ಅಲ್ಲಾ ಬೇರೆಯಲ್ಲ” ಎಂಬಉಪದೇಶ ಪಡೆದು ಅಧಿಕಾರ ಪಡೆದ ಜಗದ್ಗುರು ಶ್ರೀ ಫಕೀರೇಶ್ವರ ಸಿದ್ದರಾಮಮಹಾಸ್ವಾಮಿಗಳು ಕರ್ತೃಗುರುಗಳ ಉಪದೇಶದಂತೆಯೇ ಶ್ರೀಮಠವನ್ನು ಅಭಿವೃದ್ದಿಪಡಿಸುತ್ತಾ ಸಮಾಜದ ಸಾಮರಸ್ಯವನ್ನು ಕಾಪಾಡುತ್ತಾ, ಮಠದ ಕಾರ್ಯ ವ್ಯಾಪ್ತಿಯನ್ನುವಿಸ್ತರಿಸಿ ಪರಂಪರೆಯನ್ನು ಮುಂದುವರೆಸಿದರು. ಇವರ ನಂತರದ ಎಲ್ಲಾ ಗುರುಗಳುಫಕೀರೇಶ್ವರ ಎಂಬ ಹೆಸರನ್ನು ಅಭಿದಾನ ಪಡೆದು ಅಧಿಕಾರಕ್ಕೆ ಬಂದಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಫಕೀರ ಸಿದ್ದರಾಮಮಹಾಸ್ವಾಮಿಗಳು ಪರಂಪರೆಯಲ್ಲಿ 13ನೇ ಶ್ರೀಗಳಾಗಿ ಶ್ರೀಮಠದ ಅಧಿಕಾರವನ್ನು 1988ರಲ್ಲಿವಹಿಸಿಕೊಂಡಿದ್ದು ಕರ್ತೃಗುರುಗಳ “ದ್ವೇಷ ಬಿಡು, ಪ್ರೀತಿ ಮಾಡು” ಎಂಬ ತತ್ವದ ಮೇಲೆನಂಬಿಕೆಯಿಟ್ಟು ಅದರಂತೆಯೇ ಸಮಾಜವನ್ನು ಮಠವನ್ನು ಮುನ್ನಡೆಸಿಕೊಂಡುಬರುತ್ತಿದ್ದಾರೆ. 12ನೇ ಶ್ರೀಗಳು ದೈಹಿಕವಾಗಿ ಸಾಮಥ್ರ್ಯವನ್ನು ಕಳೆದುಕೊಂಡ ಸಂದರ್ಭದಲ್ಲಿಶ್ರೀಮಠಕ್ಕೆ ಪ್ರವಚನಕ್ಕೆ ಆಗಮಿಸಿದ್ದ ಶ್ರೀಗಳ ಪ್ರತಿಭೆಯನ್ನು ಗಮನಿಸಿದ 12ನೇ ಶ್ರೀಗಳು ಹಾಗೂಭಕ್ತರು ಶ್ರೀಮಠದ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡುತ್ತಾರೆ.ಶ್ರೀಗಳು ಧಾರವಾಡದಲ್ಲಿ ಕನ್ನಡ ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಸಂಸ್ಕøತ ವ್ಯಾಸಂಗ ಮಾಡಿದ್ದಾರೆ. ವಿದ್ವತ್ಪೂರ್ಣ ಪ್ರತಿಭೆಯನ್ನು ಗಳಿಸಿಕೊಂಡುಭಾವೈಕ್ಯತೆಯನ್ನು ಸಾರುವ ಈ ಮಠದ ಆಡಳಿತವನ್ನು ವಹಿಸಿಕೊಂಡು ಶ್ರೀ ಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿಪಡಿಸಿದ್ದಾರೆ. ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರಎರಡೂವರೆ ಕೋಟಿ ರೂಗಳ ಯೋಜನೆಯಲ್ಲಿ ಕರ್ತೃಗುರುಗಳ ಗದ್ದುಗೆಗೆ ಮಂಟಪ ಮತ್ತುಮೇಲಂತಸ್ತಿನ ಕಟ್ಟಡ ನಿರ್ಮಾಣಗೊಂಡಿದ್ದು ನೂತನ ಕಟ್ಟಡವು ಹಿಂದೂ ಮತ್ತು ಮುಸ್ಲಿಂವಾಸ್ತು ಶಿಲ್ಪದ ಮಾದರಿಯಲ್ಲಿ ನಿರ್ಮಾಣಗೊಂಡಿದೆ. ಶ್ರೀಗಳು ಕರ್ತೃಗುರುಗಳ ಗದ್ದುಗೆಗೆಕಟ್ಟಡವಲ್ಲದೆ ಉಗ್ರಾಣ, ಸುಂದರವಾದ ಗೋಶಾಲೆ, ಕಲ್ಯಾಣ ಮಂಟಪ, ಮಠದ ಅಂಗಳಕ್ಕೆಕಲ್ಲು ಹಾಸಿಗೆ ಹಾಗೂ ಈ ಮಠ ಮತ್ತು ಶಾಖಾ ಮಠಗಳ ನಿರ್ಮಾಣಕ್ಕಾಗಿ ಕೋಟ್ಯಾಂತರರೂಪಾಯಿ ಖರ್ಚು ಮಾಡಿದ್ದು ಜೊತೆಯಲ್ಲಿಯೇ ಕರ್ತೃ ಗದ್ದುಗೆಯ ನಿರಂತರಪೂಜೆಗೆಂದು ಚಿರಸ್ಥಾಯಿ ಫಂಡನ್ನು ಸ್ಥಾಪಿಸಿದ್ದಾರೆ. ಗ್ರಂಥ ಪ್ರಕಟಣೆ, ಅನ್ನದಾಸೋಹಹಾಗೂ ಜ್ಞಾನದಾಸೋಹಗಳನ್ನು ನಡೆಸಿಕೊಂಡು ಬರುತ್ತಿರುವ ಶ್ರೀಗಳು ಮಳಲಿ, ಗುರ್ನಳ್ಳಿ,ಸಂಶಿ, ಶಿರಹಟ್ಟಿಗಳಲ್ಲಿ ಒಟ್ಟು 3000ಕ್ಕೂ ಅಧಿಕ ಸಾಮೂಹಿಕ ವಿವಾಹಗಳನ್ನುನೆರವೇರಿಸಿದ್ದಾರೆ. ಶ್ರೀಗಳು ಬಡವ ಬಲ್ಲಿದ ಎನ್ನದೇ ಸರ್ವರ ಅಭ್ಯುದಯಕ್ಕೆ ಶ್ರಮಿಸುತ್ತಿದ್ದುತಮ್ಮ ಉಪದೇಶಗಳಿಂದ ಸಮಾಜದಲ್ಲಿ ಸೌಹಾರ್ದತೆ ಬೆಳೆಸಿದ್ದಾರೆ.ಶ್ರೀಮಠದ ಧಾರ್ಮಿಕ ಆಚರಣೆಗಳು ವಿಶಿಷ್ಟವಾಗಿದ್ದು ಎರಡೂ ಧರ್ಮಗಳಸಂಪ್ರದಾಯದಂತೆ ನಡೆಯುತ್ತವೆ. ಹಾಗೆಯೇ ಮಠದ ಗುರುಗಳ ಉತ್ತರಾದಿಕಾರಿಯಪಟ್ಟಾದಿಕಾರವು ವಿಶಿಷ್ಟವಾಗಿ ಜರುಗುತ್ತಿದ್ದು ಹಿರಿಯ ಶ್ರೀಗಳು ಲಿಂಗೈಕ್ಯರಾದಾಗ ಅವರಪಾರ್ಥಿವ ಶರೀರದ ಎಡಪಕ್ಕದಲ್ಲಿ ಉತ್ತರಾದಿಕಾರಿಯನ್ನು ಕೂರಿಸಿ ರಣಬಿಲ್ಲೆಯನ್ನು ಕಟ್ಟಿನಂತರ ಪಾರ್ಥೀವ ಶರೀರವನ್ನು ಮುಂದಿಟ್ಟುಕೊಂಡು ಪಟ್ಟಾಭಿಷೇಕದ ಶಾಸ್ತ್ರವನ್ನುಪ್ರಾರಂಭಿಸಲಾಗುತ್ತದೆ. ಇತ್ತ ಪಟ್ಟಾಭಿಷೇಕ ಒಂದೆಡೆ ನಡೆಯುತ್ತಿದ್ದ ಇನ್ನೊಂದೆಡೆ ಅಂತ್ಯಕ್ರಿಯನಡೆಯುತ್ತಿರುತ್ತದೆ. ಈ ಎಲ್ಲಾ ಸಮಯಗಳಲ್ಲೂ ವೀರಶೈವ ಧರ್ಮದ ಗುರುಗಳು ಹಾಗುದರ್ಗಾದ ಗುರುಗಳು ಹಾಜರಿದ್ದು ತಮ್ಮ ತಮ್ಮ ಸಂಪ್ರದಾಯಗಳನ್ನು ನಡೆಸುತ್ತಾರೆ.{ ಶ್ರೀಗಳವರು ಗರೀಬ ನವಾಜ ಮಸೀದಿಯ ಮುಂದೆ ಓದಿಕೆ ಮಾಡಿ ದಸರಾದಲ್ಲಿ ಬನ್ನಿ ಮುಡಿಯುವರು.{ ಶ್ರೀಮಠದ ಪೀಠಾಧಿಪತಿಗಳು ಜಾತ್ರೆ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ಹಿಂದೂ, ಮುಸ್ಲಿಂ (ಕೇಸರಿ ಪೇಟ,ಹಸಿರು ಶಾಲು, ಶ್ವೇತ ವಸ್ತ್ರ) ರೀತಿಯ ಪೋಷಾಕು ಧರಿಸುತ್ತಾರೆ.{ ಧಾರವಾಡದ ಫಕೀರೇಶ್ವರ ಶಾಖಾ ಮಠದ ಜಗುಲಿಯ ಮೇಲೆ ಮೂರು ಪಂಜಾಗಳಿವೆ. ಇವುಗಳಿಗೆ ಸಿದ್ಧರಾಮಸ್ವಾಮಿ, ಶಿವಯೋಗಿ ಸ್ವಾಮಿ, ಚನ್ನವೀರ ಸ್ವಾಮಿ ಎಂದು ಕರೆಯುತ್ತಾರೆ. ಈ ಪಂಜಗಳಿಗೆ ಲಿಂಗ, ರುದ್ರಾಕ್ಷಿಹಾಕುವರು, ಬಸವ, ಗಂಧ, ಹೂ, ಪತ್ರೆಗಳಿಂದ ಪೂಜೆ ಮಾಡುವರು. ಇದನ್ನು ಮುಸ್ಲಿಮರೇ ನಡೆಸುತ್ತಾರೆ.{ ಶ್ರೀಮಠಕ್ಕೆ 60 ಶಾಖಾ ಮಠಗಳಿವೆ. ಇವುಗಳಲ್ಲಿ 10 ಶಾಖಾ ಮಠಗಳನ್ನು ಪ್ರಸ್ತುತ ಶ್ರೀಗಳವರೇ ಸ್ಥಾಪಿಸಿದ್ದಾರೆ.{ ಶ್ರೀಮಠಕ್ಕೆ 2 ಶಾಖಾ ಮಸೀದಿಗಳಿವೆ. ಈ ಎರಡೂ ಮಸೀದಿಗಳಲ್ಲಿ ಮೊಹರಂ ಹಬ್ಬದ ಎಲ್ಲಾ ಕಾರ್ಯಗಳುಮಠದಿಂದಲೇ ನಡೆಯುತ್ತವೆ. ಸದ್ಯದ ಸಂಶಿ ಮಠದ ಹಳೆಯ ಮಸೀದಿ ತೆಗೆದು ಹೊಸ ಮಸೀದಿ ಕಟ್ಟಲಾಗಿದೆ.{ ಶಿರಹಟ್ಟಿಯ ಮೆಹಬೂಬ ಸುಹಾನಿ ಉರುಸ್ ಸಂದರ್ಭದಲ್ಲಿ ತಬಾಬ ದಿವಾಸ ಶ್ರೀಮಠದಿಂದ ಗೌರವಸಲ್ಲುತ್ತದೆ.
Swamiji
Swamiji Name :
ಜಗದ್ಗುರು ಶ್ರೀ. ಮ.ನಿ.ಪ್ರ. ಫಕೀರ ಸಿದ್ದರಾಮ ಮಹಾಸ್ವಾಮಿಗಳು
Date of Birth :
01-02-1948
Place :
ತೆಲಸಂಗ, ಅಥಣಿ ತಾ||
Pattadikara :
22-11-1988
Photo :
Programs
ಪ್ರತಿ ಅಮಾವಾಸ್ಯೆಗೆ ಶ್ರೀಗಳ ದರ್ಶನ ಮತ್ತು ವಿಶೇಷ ಪೂಜೆ ಕಾರ್ಯಕ್ರಮಗಳು ಆಗಿ ಹುಣ್ಣಿಮೆಯಂದು ಜಾತ್ರೆ, ಮರುದಿನ ಕಡುಬಿನ ಕಾಳಗ, ಕುಸ್ತಿ ಮತ್ತು ಮನರಂಜನೆ ಕಾರ್ಯಕ್ರಮ ಶ್ರಾವಣಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಫಕೀರಸ್ವಾಮಿಗಳ ಪುರಾಣ ಪ್ರವಚನ ಮತ್ತು ನಿತ್ಯದಾಸೋಹ ದಸರಾದಲ್ಲಿ ನಿತ್ಯ ಶ್ರೀದೇವಿ ಪುರಾಣ ಪಾರಾಯಣ ಭಾದ್ರಪದ ಶುದ್ಧ ತೃತಿಯದಂದು ಮಹಾಪೂಜೆ, ವಿವಿಧ ಕಾರ್ಯಕ್ರಮಗಳು ಕಾರ್ತೀಕ ಮಾಸದಲ್ಲಿ ನಿತ್ಯ ದೀಪಾರಾಧನೆ
Institutions
ಪ್ರೌಢಶಾಲೆಗಳು ಟಿ.ಸಿ.ಹೆಚ್. ಕಾಲೇಜ್
Photos
Full Address Kannada
ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠ
ಶಿರಹಟ್ಟಿ - 582 120
ಶಿರಹಟ್ಟಿ ತಾ||, ಗದಗ ಜಿಲ್ಲೆ