Shree Jagadguru Niranjana Samsthana Matha

Shree Jagadguru Niranjana Samsthana Matha Claimed

ಶ್ರೀ ಜಗದ್ಗುರು ನಿರಂಜನ ಸಂಸ್ಥಾನ ಮಠ

Average Reviews

Description

ಶ್ರೀ ಜಗದ್ಗುರು ನಿರಂಜನ ಸಂಸ್ಥಾನ ಮಠ, 

ಕರ್ತೃ – ಪೂಜ್ಯ ಶ್ರೀ ವಿರೂಪಾಕ್ಷ ಶಿವಯೋಗಿಗಳು

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಶ್ರೀ ಜಗದ್ಗುರುನಿರಂಜನ ಸಂಸ್ಥಾನ ಮಠವು ಬೀದರ್ ಜಿಲ್ಲೆಯ ಪ್ರಮುಖ ವೀರಶೈವ ಮಠಗಳಲ್ಲಿಒಂದಾಗಿದೆ. ಸುಮಾರು 15ನೇ ಶತಮಾನದಲ್ಲಿ ಪೂಜ್ಯ ಶ್ರೀ ವಿರೂಪಾಕ್ಷ ಶಿವಯೋಗಿಗಳಿಂದಸ್ಥಾಪಿತಗೊಂಡಿರುವ ಶ್ರೀಮಠವು ಅಂದಿನಿಂದ ಇಂದಿನವರೆಗೂ ವೀರಶೈವ ಧರ್ಮದಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದೆ.ಕರ್ತೃಗುರುಗಳು ಹಾಗೂ ನಂತರದ ಪರಂಪರೆಯ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲವಾದರೂ ಇಲ್ಲಿಯವರೆಗೂ 11 ಜನ ಶ್ರೀಗಳು ಶ್ರೀಮಠದ ಅಧಿಕಾರ ನಡೆಸಿದ್ದುಈಗಿನ ಶ್ರೀಗಳು 12ನೇ ಶ್ರೀಗಳೆಂದು ತಿಳಿದುಬರುತ್ತದೆ. ಹಾಗೂ ಶ್ರೀಮಠದ ಇತಿಹಾಸದಲ್ಲಿಬಂದಿರುವ ಎಲ್ಲಾ ಗುರುಗಳು ಪೂಜ್ಯ ಶ್ರೀ ವಿರೂಪಾಕ್ಷ ಸ್ವಾಮಿಗಳು ಹಾಗೂ ಪೂಜ್ಯ ಶ್ರೀಶಂಕರಲಿಂಗ ಸ್ವಾಮಿಗಳು ಎಂಬ ಅಭಿದಾನ ಪಡೆದು ಅಧಿಕಾರ ನಡೆಸಿದ್ದು ಈಗಿನ ಶ್ರೀಗಳುಶ್ರೀ ಶಿವಯೋಗೀಶ್ವರ ಮಹಾಸ್ವಾಮಿಗಳೆಂಬ ಅಭಿದಾನದೊಂದಿಗೆ ಶ್ರೀಮಠದ ಅಧಿಕಾರಕ್ಕೆಬಂದಿದ್ದಾರೆ.ಶ್ರೀಮಠದ ಪೂರ್ವೇತಿಹಾಸದ ಬಗ್ಗೆ ಅಷ್ಟಾಗಿ ತಿಳಿದುಬರುವುದಿಲ್ಲವಾದರೂ10ನೇ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಂಕರಲಿಂಗ ಮಹಾಸ್ವಾಮಿಗಳಿಂದ ನಂತರದ ಇತಿಹಾಸಲಭ್ಯವಿದೆ. 1880ರಿಂದ 1902ರವರೆಗೆ ಶ್ರೀಮಠದ ಅಧಿಕಾರ ನಡೆಸಿದ್ದ ಶ್ರೀ ಶಂಕರಲಿಂಗಸ್ವಾಮಿಗಳು ಅನಾಥರಿಗೆ ಆಶ್ರಯ ಒದಗಿಸಿ ಕಂತೆಭಿಕ್ಷೆಯಿಂದ ಅವರ ಹೊಟ್ಟೆ ತುಂಬಿಸುತ್ತಿದ್ದರುಎಂದು ತಿಳಿದುಬರುತ್ತದೆ. ಶ್ರೀಗಳು ಶ್ರೀಮಠದ ಅಭಿವೃದ್ಧಿಗೆ ಕಾರ್ಯ ಯೋಜನೆರೂಪಿಸಿಕೊಂಡು ಗುರುಮನೆ, ಪೂಜಾಗೃಹ, ಅಡುಗೆಮನೆ ಮತ್ತು ಮಠದ ಸುತ್ತಲಿನಆವರಣವನ್ನು ನಿರ್ಮಾಣ ಮಾಡಿದ್ದರು.ಶ್ರೀ ಶಂಕರಲಿಂಗ ಸ್ವಾಮಿಗಳ ನಂತರ ಬಂದ ಶ್ರೀ ಮ.ನಿ.ಪ್ರ. ವಿರೂಪಾಕ್ಷಯ್ಯಮಹಾಸ್ವಾಮಿಗಳು 1902ರಿಂದ 1937ರವರೆಗೆ ಶ್ರೀಮಠವನ್ನು ಮುನ್ನಡೆಸಿದ್ದಾರೆ. ಶ್ರೀಗಳುಪೂಜಾನಿಷ್ಠರಾಗಿದ್ದು ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿಧಾರ್ಮಿಕ ಅರಿವನ್ನು ಮೂಡಿಸುತ್ತಿದ್ದರು. ಆದರೆ ಇವರ ಕಾಲಾನಂತರ 1937ರಿಂದ1974ರವರೆಗೆ ಶ್ರೀಮಠಕ್ಕೆ ಸಮರ್ಥ ಪೀಠಾಧಿಪತಿಗಳು ಸಿಗದಿರುವುದರಿಂದ ಶ್ರೀಮಠವುಸಾರ್ವಜನಿಕರ ಅಧೀನದಲ್ಲಿಯೇ ಉಳಿದು ಜೀರ್ಣಗೊಳ್ಳತೊಡಗಿತು. ಹೀಗಿರುವಾಗಲೇ1975ರಲ್ಲಿ ಶ್ರೀಮಠದ ಅಧಿಕಾರ ಸ್ವೀಕರಿಸಿ ಬಂದವರೇ ಈಗಿನ ಶ್ರೀಗಳಾದ ಶ್ರೀ ಜಗದ್ಗುರುಶಿವಯೋಗೀಶ್ವರ ರಾಜಯೋಗೀಂದ್ರ ಮಹಾಸ್ವಾಮಿಗಳು.ಶ್ರೀ ಜಗದ್ಗುರು ಶಿವಯೋಗೀಶ್ವರ ರಾಜಯೋಗೀಂದ್ರ ಮಹಾಸ್ವಾಮಿಗಳವರಜನ್ಮಸ್ಥಾನ ಇಂದಿನ ತೆಲಂಗಾಣದ ಮೇದಕ್ ಜಿಲ್ಲೆಯ ನಾರಾಯಣಖೇಡ ತಾಲ್ಲೂಕಿನಅಬ್ಬೆಂದಿ ಗ್ರಾಮ. ಈ ಗ್ರಾಮದ ಸುಸಂಸ್ಕøತ ದಂಪತಿಗಳಿಗೆ 1945ರಲ್ಲಿ ಜನಿಸಿದ ಶ್ರೀಗಳುಭಾಲ್ಕಿ ಹಿರೇಮಠದ ಪರಮ ಪೂಜ್ಯ ಲಿಂ. ಶ್ರೀ ಮ.ಘ.ಚ. ಡಾ. ಚನ್ನಬಸವ ಪಟ್ಟದ್ದೇವರಕೃಪಾದೃಷ್ಠಿಗೆ ಒಳಗಾಗಿ ಭಾಲ್ಕಿ ಹಿರೇಮಠಕ್ಕೆ ಬರುತ್ತಾರೆ.ಭಾಲ್ಕಿಗೆ ಬಂದ ಶ್ರೀಗಳು ಮುಂದೆ ಶಿವಯೋಗ ಮಂದಿರ ಹಾಗೂ ಬನಾರಸ್ಗಳಲ್ಲಿ ಧರ್ಮ, ತತ್ವ, ಸಾಹಿತ್ಯ, ಸಂಸ್ಕøತಿ ಕುರಿತು ಉನ್ನತ ಅಭ್ಯಾಸ ಮಾಡಿ ಸಾಹಿತ್ಯ ಹಾಗೂದರ್ಶನ ಶಾಸ್ತ್ರಗಳಲ್ಲಿ ಪದವಿ ಪಡೆದು ಇತಿಹಾಸ ವಿಷಯದಲ್ಲಿ ಎಂ.ಎ. ಪದವಿ ಪಡೆದರು.ಅಲ್ಲಿಂದ ಭಾಲ್ಕಿಗೆ ಮರಳಿದ ಶ್ರೀಗಳು ಗುರುಗಳ ಮಾರ್ಗದರ್ಶನದಲ್ಲಿ ಶ್ರೀ ಹಿರೇಮಠದ ಕೆಲಸಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು.ಆದರೆ ಯಾವುದೋ ಕೆಟ್ಟ ಘಳಿಗೆಯಲ್ಲಿ ಗುರು ಶಿಷ್ಯರ ನಡುವೆ ಕಂದಕಸೃಷ್ಠಿಯಾಗಿ ಗುರು ಡಾ. ಚನ್ನಬಸವ ಪಟ್ಟದ್ದೇವರು ಇವರನ್ನು ಶ್ರೀ ಹಿರೇಮಠದಿಂದಹೊರಕಳುಹಿಸುತ್ತಾರೆ. ಅಲ್ಲಿಂದ ಹೊರಹೊರಟ ಶ್ರೀ ಶಿವಯೋಗೀಶ್ವರರನ್ನು ಭಾತಂಬ್ರಾಮಠದ ಭಕ್ತರು ತಮ್ಮ ಮಠಕ್ಕೆ ಕರೆತಂದು 1975ರಲ್ಲಿ ಶ್ರೀ ಜಗದ್ಗುರು ನಿರಂಜನ ಸಂಸ್ಥಾನಮಠದ ಪೀಠಾಧಿಪತಿಗಳನ್ನಾಗಿ ಮಾಡಿದರು. ಅಂದು ಸುಮಾರು 4 ದಶಕಗಳ ಕಾಲ ಖಾಲಿಉಳಿದು ಜೀರ್ಣಗೊಂಡಿದ್ದ ಮಠವು ಇಂದು ಮಹಾಮಠವಾಗಿ ಕಂಗೊಳಿಸುತ್ತಿದೆ ಹಾಗೂಅದರ ಶಾಖಾಮಠವಾದ ಭಾಲ್ಕಿ ವಿರಕ್ತಮಠವೂ ಕೂಡ ಭವ್ಯವಾಗಿ ಪ್ರಜ್ವಲಿಸುತ್ತಿದೆ.ಶ್ರೀ ಶಿವಯೋಗೀಶ್ವರ ಸ್ವಾಮಿಗಳು ಅತ್ಯುತ್ತಮ ವಾಗ್ಮಿಗಳು, ಬಸವಾದಿ ಶಿವಶರಣರವಚನಗಳನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳನ್ನು ಸಾಮಾನ್ಯರಿಗೆ ಮನಮುಟ್ಟುವಂತೆತಿಳಿಯಪಡಿಸುವಂಥವರು. ಕನ್ನಡ, ತೆಲುಗು, ಸಂಸ್ಕøತ, ಮರಾಠಿ, ಇಂಗ್ಲೀಷ್, ಹಿಂದಿ,ಉರ್ದು ಮೊದಲಾದ ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದು ಆ ಕಾರಣದಿಂದಾಗಿಕರ್ನಾಟಕಾಂಧ್ರ, ಮಹಾರಾಷ್ಟ್ರಗಳಲ್ಲಿ ಅವರವರ ಭಾಷೆಗಳಲ್ಲಿ ನಿರರ್ಗಳವಾಗಿ ಬಸವತತ್ವಪ್ರಸಾರ ಮಾಡುತ್ತಿರುವವರು.ಪೂಜ್ಯ ಶ್ರೀ ಶಿವಯೋಗೀಶ್ವರರು ‘ಬಸವ ಮಹಾಜೋಳಿಗೆ’ಯ ಹರಿಕಾರರು.ಈಗಾಗಲೇ ಸಾವಿರಾರು ಹಳ್ಳಿಗಳಲ್ಲಿ ಪಾದಯಾತ್ರೆ ಕೈಗೊಂಡು ದುಶ್ಚಟಗಳಿಗೆಅಂಟಿಕೊಂಡವರ ಮನವೊಲಿಸಿ ಅವರ ಆ ಕೆಟ್ಟಚಟಗಳನ್ನು ತಮ್ಮ ‘ಬಸವ ಮಹಾ ಜೋಳಿಗೆ’ಯಲ್ಲಿ ಹಾಕಿಕೊಂಡು ಸಮಾಜ ಪರಿವರ್ತನಾ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣತೊಡಗಿಸಿಕೊಂಡಿದ್ದಾರೆ. ಎಲ್ಲೆಡೆ ಬಸವಾದಿ ಶಿವಶರಣರ ವಚನಗಳನ್ನು, ಆದರ್ಶಗಳನ್ನುಸಾರುತ್ತಾ ಜನರಿಗೆ ಕಾಯಕ-ದಾಸೋಹ ತತ್ವಗಳ ಮಹತ್ವವನ್ನು ತಿಳಿಯಪಡಿಸುತ್ತಿದ್ದಾರೆ.ಹಾಗೂ ಸ್ತ್ರೀ ಪುರುಷರಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸುತ್ತಾ ಸ್ತ್ರೀಸ್ವಾತಂತ್ರ್ಯದ ಮಹತ್ವವನ್ನು ಸಾದರ ಪಡಿಸುತ್ತಿದ್ದಾರೆ.1982ರಲ್ಲಿ ಪೂಜ್ಯ ಶಿವಯೋಗೀಶ್ವರರು ಬೀದರ್ ನಗರದಲ್ಲಿ ಒಂದು ತಿಂಗಳಪರ್ಯಂತ ಪ್ರವಚನ ನೀಡಿದರು. ಇವರ ಮಹಾತ್ಮೆಗೆ, ಕ್ರಾಂತಿಗೆ ಮಾರುಹೋದ ಭಕ್ತರುತಮ್ಮ ಅಧೀನದಲ್ಲಿದ್ದ ಭೂಮಿಯನ್ನು ಬಸವತತ್ವ ಪ್ರಸಾರಕ್ಕಾಗಿ ಸಮರ್ಪಿಸಿದರು. ಅದುವೇಬಸವ ಮುಕ್ತಿಮಂದಿರವಾಗಿ ಇಂದು ಕಂಗೊಳಿಸುತ್ತಿರುವುದು. ಹಾಗೂ ಇದರ ನಿರ್ವಹಣೆಗೆಶ್ರೀಗಳು ತಮ್ಮ ಅಧ್ಯಕ್ಷತೆಯ ಟ್ರಸ್ಟ್ ಒಂದನ್ನು ಮಾಡಿದ್ದು ಅದರ ಮುಖೇನ ಇಲ್ಲಿವರ್ಷದುದ್ದಕ್ಕೂ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳುನಡೆಯುತ್ತವೆ.ಶ್ರೀಗಳು ಸಾಹಿತ್ಯಿಕವಾಗಿಯೂ ಕಾರ್ಯಪ್ರವೃತ್ತರಾಗಿದ್ದು ಕಲ್ಯಾಣ ಕರ್ನಾಟಕಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿದ್ದು ಆ ಸಂಸ್ಥೆಯು ಹಲವಾರು ಧ್ಯೇಯೋದ್ದೇಶಗಳನ್ನುಹೊಂದಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕ ಪರಂಪರೆಗೆಸಂಬಂಧಿಸಿದ ಪುಸ್ತಕಗಳನ್ನು ವರ್ಷಕ್ಕೊಂದರಂತೆ ಪ್ರಕಟಿಸುತ್ತದೆ. ಈ ರೀತಿ ಸುಮಾರು 40ಪುಸ್ತಕಗಳು ಪ್ರಕಟಗೊಂಡಿವೆ. ಹಾಗೂ ಕನ್ನಡ, ಕನ್ನಡೇತರ ಭಾಷೆಗಳಲ್ಲಿ ರಚನೆಗೊಂಡಉತ್ತಮ ಶರಣ ಸಾಹಿತ್ಯ ಕೇಂದ್ರಿತ ಗ್ರಂಥಗಳಿಗೆ ‘ಗ್ರಂಥ ಪುರಸ್ಕಾರ ಯೋಜನೆ’ ಮುಖಾಂತರಸಹಾಯ ಹಸ್ತ ನೀಡುತ್ತಾ ಬಂದಿದೆ.ಈ ರೀತಿಯಾಗಿ ಶ್ರೀಮಠ ಹಾಗೂ ಸಮಾಜಗಳೆರಡರ ನಿರ್ಮಾಣದಲ್ಲಿನಿರತರಾಗಿರುವ ಶ್ರೀಗಳು ಭಾತಂಬ್ರಾದ ಹೊರಭಾಗದಲ್ಲಿ ಸುಮಾರು ಎರಡು ಕೋಟಿಗೂಅಧಿಕ ವೆಚ್ಚ ಮಾಡಿ ಶ್ರೀಮಠವನ್ನು ನವೀಕರಿಸುತ್ತಿದ್ದಾರೆ. ಇಲ್ಲಿ ಧ್ಯಾನಮಂದಿರ,ಯೋಗಮಂದಿರ, ದಾಸೋಹ ಮಂದಿರ, ವಸತಿ ನಿಲಯಗಳು ನಿರ್ಮಾಣಗೊಳ್ಳಲಿವೆ.

ಶ್ರಿ ಜಗದ್ಗುರು ನಿರಂಜನ ಸಂಸ್ಥಾನ ಮಠದ ಶಾಖಾಮಠವಾದ ಬೀದರ್ ನಗರದ

ಶ್ರೀ ಬಸವ ಮುಕ್ತಿ ಮಂದಿರ

ಸ್ಥಾಪಿತ ವರ್ಷ:

1982

ಸಂಸ್ಥಾಪಕ ಶ್ರೀಗಳು:

ಶ್ರೀ ಜಗದ್ಗುರು ಶಿವಯೋಗೀಶ್ವರ ರಾಜಯೋಗೀಂದ್ರ ಮಹಾಸ್ವಾಮಿಗಳು

Swamiji

Swamiji Name :
ಪೂಜ್ಯ ಶ್ರೀ ಜಗದ್ಗುರು ಶಿವಯೋಗೀಶ್ವರ ರಾಜಯೋಗೀಂದ್ರ ಮಹಾಸ್ವಾಮಿಗಳು
Date of Birth :
11-2-1945
Place :
ಅಬ್ಬೆಂದಿ, ತೆಲಂಗಾಣ ರಾಜ್ಯ
Pattadikara :
28-4-1975
Photo :

Programs

ಮಕರ ಸಂಕ್ರಾಂತಿಗೆ 11 ದಿನಗಳ ಕಾಲ ‘ಕೋಟಿ ವಚನಗಳ’ ಅನುಷ್ಠಾನ.
ಶ್ರಾವಣ ಮಾಸದಲ್ಲಿ ಧರ್ಮಬೋಧನೆ ಹಾಗೂ ವಿವಿಧ ಕಾರ್ಯಕ್ರಮಗಳು.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.
ಪ್ರೌಢ ಶಾಲೆ. ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ಜಗದ್ಗುರು ನಿರಂಜನ ಸಂಸ್ಥಾನ ಮಠ
ಭಾತಂಬ್ರಾ - 585 411 ಭಾಲ್ಕಿ
ತಾ||, ಬೀದರ್ ಜಿ||

Map

Near by Places

ಭಾಲ್ಕಿ - 7 ಕಿ.ಮೀ.
ಹುಲಸೂರು - 20 ಕಿ.ಮೀ.
ಬೀದರ್ - 47 ಕಿ.ಮೀ.

Statistic

12 Views
0 Rating
0 Favorite
1 Share
error: Content is protected !!