ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಸುಮಾರು 12ನೇ ಶತಮಾನದಲ್ಲಿಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಜಗದ್ಗುರುಅನ್ನದಾನೀಶ್ವರ ಸಂಸ್ಥಾನ ಮಠವು ತನ್ನ ಪುರಾತನ ಪರಂಪರೆಯಿಂದ ಹಾಗೂ ತನ್ನಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಾಡಿನ ಪ್ರಮುಖ ಮಠಗಳಲ್ಲಿಒಂದಾಗಿ ಬೆಳೆದಿದೆ. ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಶರಣರು ತಮ್ಮವಚನ ಸಾಹಿತ್ಯವನ್ನು ರಕ್ಷಿಸಲು ನಾಡಿನಾದ್ಯಂತ ಹಂಚಿಹೋದರು. ಆ ಸಮಯದಲ್ಲಿ ಶರಣಸಾಹಿತ್ಯದ ಪ್ರಮುಖ ರೂವಾರಿಯಾಗಿದ್ದ ಚನ್ನಬಸವಣ್ಣನವರು ಉಳವಿಯ ಕಡೆಗೆಹೊರಡುತ್ತಾರೆ. ಆ ಸಮಯದಲ್ಲಿ ಚನ್ನಬಸವಣ್ಣನವರಿಗೆ ಶಿಷ್ಯರಾಗಿ ಅವರ ಸೇವೆಮಾಡಿಕೊಂಡಿದ್ದು ಅವರಿಂದ ಆಶೀರ್ವಾದ ಪಡೆದ ಬಾಲಯೋಗಿಗಳೇ ಶ್ರೀಅನ್ನದಾನೀಶ್ವರರು ಎಂದು ತಿಳಿದುಬರುವುದು.ಚನ್ನಬಸವಣ್ಣನವರು ಲಿಂಗದೊಳಗೆ ಐಕ್ಯರಾದ ನಂತರ ಅಲ್ಲಿಂದ ಸಂಚಾರಹೊರಟು ಪುಣ್ಯಕ್ಷೇತ್ರಗಳ ದರ್ಶನ ಪಡೆದು ಜನರನ್ನು ಉದ್ದರಿಸುತ್ತಾ ಮುಂಡರಗಿಗೆ ಬರುವಸಮಯದಲ್ಲಿ ದರೋಡೆಕೋರರ ಗುಂಪಿನ ಮನ ಪರಿವರ್ತನೆ ಮಾಡಿ ಅವರಿಗೆ ಹೊಟ್ಟೆಯಹಸಿವು ಹಾಗೂ ಜ್ಞಾನದ ಹಸಿವು ಎರಡನ್ನು ನೀಗಿಸಿ ಅವರನ್ನು ಸನ್ಮಾರ್ಗದತ್ತಕೊಂಡೊಯ್ದಿದ್ದರಿಂದಾಗಿ ಶ್ರೀಗಳು ಶ್ರೀ ಅನ್ನದಾನ ಮಹಾಸ್ವಾಮಿಗಳೆಂದು ಪ್ರಸಿದ್ದರಾದರು.ಈ ಘಟನೆಯಿಂದಾಗಿ ಶ್ರೀಗಳು ಮುಂಡರಗಿಯಲ್ಲಿಯೇ ಶ್ರೀಮಠದ ಸ್ಥಾಪನೆ ಮಾಡಿಮುಂದುವರೆದು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಲಿಂಗೈಕ್ಯರಾಗುತ್ತಾರೆ.ಕರ್ತೃಗುರುಗಳ ನಂತರ ಶ್ರೀಗಳ ಶಿಷ್ಯರಾದ ಶ್ರೀ ಪಂಚಾಕ್ಷರ ದೇವರ ಸ್ವಾಮಿಗಳುಶ್ರೀ ಅನ್ನದಾನಿ ಮಹಾಸ್ವಾಮಿಗಳೆಂಬ ಅಭಿದಾನ ಪಡೆದು ತಮ್ಮ ಗುರುಗಳಅಣತಿಯಂತೆ ಶ್ರೀಮಠವನ್ನು ಮುನ್ನಡೆಸಿದ್ದು ನರಗುಂದ ತಾಲ್ಲೂಕು ಶಿರೋಳದಲ್ಲಿ ಅನೇಕಲೀಲೆಗಳನ್ನು ತೋರಿಸಿ ಅಲ್ಲಿಯೇ ಲಿಂಗೈಕ್ಯರಾಗಿದ್ದಾರೆ. ಶ್ರೀಮಠದ ಪರಂಪರೆಯಲ್ಲಿಬಂದಿರುವ ಎಲ್ಲಾ ಗುರುಗಳು ಕರ್ತೃಗುರುಗಳ ಹೆಸರನ್ನೇ ಅಭಿದಾನ ಪಡೆದಿದ್ದುಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳು ದೊರಕುವುದಿಲ್ಲವಾದರೂ ಈಗಿನ ಶ್ರೀಗಳು10ನೇ ಶ್ರೀಗಳು ಎಂದು ಹೇಳಲಾಗುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ 5ನೇ ಶ್ರೀಗಳೆಂದು ಹೇಳಲಾದ ಶ್ರೀಮ.ನಿ.ಪ್ರ. ಅನ್ನದಾನ ಮಹಾಸ್ವಾಮಿಗಳಿಂದ (1750-1815) ಪರಂಪರೆಯಮಾಹಿತಿಗಳು ಲಭ್ಯವಾಗುತ್ತವೆ. 5ನೇ ಶ್ರೀಗಳು ಮುಂಡರಗಿಯಲ್ಲೇ ಲಿಂಗೈಕ್ಯರಾಗಿದ್ದು ಶ್ರೀಗಳಗದ್ದುಗೆಯು ಈಗಿನ ಹಳೇಮಠದಲ್ಲಿದೆ. 6ನೇ ಶ್ರೀಗಳಾದ ಶ್ರೀ ಮ.ನಿ.ಪ್ರ. ಅನ್ನದಾನಮಹಾಸ್ವಾಮಿಗಳು ಬಾಲ್ಯದಲ್ಲಿಯೇ ಅನೇಕ ಲೀಲೆಗಳನ್ನು ತೋರಿದ್ದರಿಂದಾಗಿ “ಬಾಲಲೀಲಾಅನ್ನದಾನ ಸ್ವಾಮಿಗಳು” ಎಂದು ಹೆಸರು ಪಡೆದು ತಮ್ಮ ಆಚಾರ ವಿಚಾರಗಳಿಂದ ಹುಚ್ಚುಅನ್ನದಾನೀಶ್ವರ ಸ್ವಾಮಿಗಳೆಂದು ಹೆಸರಾದವರು.7ನೇ ಶ್ರೀಗಳಾದ ಶ್ರೀ ಮ.ನಿ.ಪ್ರ. ಅನ್ನದಾನ ಮಹಾಸ್ವಾಮಿಗಳ ಕಾಲದಲ್ಲಿ ಈಗಿರುವಮಠವನ್ನು 1854ರಲ್ಲಿ ಕಟ್ಟಿಸಲಾಗಿದ್ದು 8ನೇ ಶ್ರೀಗಳು ಸೊರಟೂರಿನ ಅಜ್ಜನವರು ಎಂದುಖ್ಯಾತಿಗಳಿಸಿ ಶ್ರೀ ಮಠದ ಸರ್ವಾಂಗೀಣ ಅಭಿವೃದ್ದಿಗೆ ಕಾರಣರಾದರು. ಶ್ರೀಗಳು ಹಾನಗಲ್ಲುಶ್ರೀ ಕುಮಾರ ಸ್ವಾಮಿಗಳು ಹಾಗೂ ಮಲ್ಲನಕೇರಿ ಗುರುಗಳನ್ನು ಶ್ರೀಮಠಕ್ಕೆ ಆಹ್ವಾನಿಸಿಧಾರ್ಮಿಕ ಸಭೆಗಳನ್ನೇರ್ಪಡಿಸಿ ವೀರಶೈವ ಧರ್ಮದ ಆಚರಣೆಗಳನ್ನು ಪ್ರಚುರಗೊಳಿಸಿದರು.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು1926ರಲ್ಲಿ ಶ್ರೀ ಮಠದ ಅಧಿಕಾರವನ್ನು ವಹಿಸಿಕೊಂಡು ಶ್ರೀಮಠದ ಎಲ್ಲಾ ವ್ಯಾಜ್ಯಗಳನ್ನು ಬಗೆಹರಿಸಿದರು. ಹಾಗೆಯೇ ಶ್ರೀ ಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿ ಅನೇಕಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಉದಾರ ನೆರವು ನೀಡಿ ಸಮಾಜ ಹಾಗೂಮಠವನ್ನು ಬೆಳೆಸಿದರು. ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಜಗದ್ಗುರು ಅನ್ನದಾನಮಹಾಸ್ವಾಮಿಗಳು 1969ರ ಜನವರಿ 31ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠದಹಾಗೂ ಶಾಖಾಮಠಗಳ ಸರ್ವಾಂಗೀಣ ಅಭಿವೃದ್ದಿಗೆ ಕಾರಣರಾಗಿದ್ದಾರೆ. ಶ್ರೀಗಳುಶಿವಯೋಗ ಮಂದಿರದ ಟ್ರಸ್ಟ್ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು ಸಮಾಜದ ವಿವಿದಸ್ಥರಗಳ ಜನರ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಹಾಗೆಯೇ ಶಿವಾನುಭವಘೋಷ್ಠಿ, ಉಪನ್ಯಾಸಮಾಲಿಕೆಗಳ ಮುಖಾಂತರ ವೀರಶೈವ ಧರ್ಮಾಚರಣೆಗಳ ಅರಿವನ್ನು ಜನರಲ್ಲಿ ಮೂಡಿಸುತ್ತಾಧರ್ಮದ ಉನ್ನತಿಯಲ್ಲಿ ಶ್ರಮಿಸುತ್ತಿದ್ದಾರೆ.ಶ್ರೀಗಳು ಮಾಘ ಮಾಸದಲ್ಲಿ ನಡೆಯುವ ಶ್ರೀಮಠದ ಜಾತ್ರೆಯಲ್ಲಿ ಸಾಮೂಹಿಕವಿವಾಹಗಳು ಸೇರಿದಂತೆ ಕೃಷಿ ಸಮಾವೇಶ, ಕೃಷಿ ವಸ್ತು ಪ್ರದರ್ಶನ, ವೈಜ್ಞಾನಿಕ ಬೇಸಾಯದತಿಳುವಳಿಕೆ, ಆರೋಗ್ಯ ಶಿಬಿರಗಳು ಮುಂತಾದ ಸಾಮಾಜಿಕ ಕಾರ್ಯಕ್ರಮಗಳನ್ನುನಡೆಸುತ್ತಾರೆ. ಹಾಗೆಯೇ ಸಾಹಿತ್ಯಕವಾಗಿಯೂ, ಶೈಕ್ಷಣಿಕವಾಗಿಯೂ ಶ್ರೀಮಠದ ವತಿಯಿಂದಕಾರ್ಯಕ್ರಮಗಳನ್ನು ಕೈಗೊಂಡು ಶ್ರೀಮಠವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ.ಶ್ರೀಗಳು ಸುಮಾರು 60 ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದು ಆ ಮೂಲಕ ಸಾಹಿತ್ಯಿಕಕೃಷಿಯಲ್ಲಿ ತೊಗಡಿಕೊಂಡಿದ್ದು ಶ್ರೀಮಠದ ಜಗದ್ಗುರು ಶ್ರೀ ಅನ್ನದಾನೀಶ್ವರ ಗ್ರಂಥಮಾಲೆಯಮೂಲಕ ಅನೇಕ ವಿದ್ವಾಂಸರುಗಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಶ್ರೀಗಳು ತಮ್ಮಉತ್ತರಾಧಿಕಾರಿಗಳನ್ನಾಗಿ ಬೆಳಗಾವಿ ಜಿಲ್ಲೆ ಘಟಪ್ರಭಾದ ಶ್ರೀ ಗುಬಲಗುಡ್ಡ ಕೆಂಪಯ್ಯ ಸ್ವಾಮಿಮಠದ ಪೀಠಾಧ್ಯಕ್ಷರಾದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನುನೇಮಿಸಿಕೊಂಡಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ನಾಡೋಜ ಡಾ|| ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು
Date of Birth :
04-05-1942
Place :
ವೀರಾಪುರ, ಮದ್ದೇಬಿಹಾಳ ತಾ||
Pattadikara :
31-01-1969
Photo :
Programs
ಮಾಘ ಮಾಸದಲ್ಲಿ ಶ್ರೀಮಠದ ಜಾತ್ರೆ
ಶಿವರಾತ್ರಿಗೆ, ಬಸವ ಜಯಂತಿಗೆ ವಿಶೇಷ ಕಾರ್ಯಕ್ರಮ
ವೈಶಾಖ ಮಾಸದಲ್ಲಿ ಶ್ರೀ ಚನ್ನಬಸವಣ್ಣನವರ ಜಯಂತಿ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ
ಶ್ರೀ ಗಣೇಶ ಹಬ್ಬಕ್ಕೆ ಮನರಂಜನೆ ಕಾರ್ಯಕ್ರಮ
ದಸರಾದಲ್ಲಿ ಆಯುಧಪೂಜೆ ಮತ್ತು ದಸರಾ ದರ್ಬಾರ್
ಚೈತ್ರ ಶುದ್ಧ ಪೌರ್ಣಮಿಯಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧ£
Photos
Full Address Kannada
ಶ್ರೀ ಅನ್ನದಾನೀಶ್ವರ ಸಂಸ್ಥಾನ ಮಠ
ಮುಂಡರಗಿ - 582 118
ಮುಂಡರಗಿ ತಾ||, ಗದಗ ಜಿಲ್ಲೆ