ದಾವಣಗೆರೆಯ ವಿನೋಬನಗರದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಜಡೇಸಿದ್ದಶಿವಯೋಗಿ ಶಾಂತಾಶ್ರಮವು ಕಳೆದ ಶತಮಾನದಲ್ಲಿ ದಾವಣಗೆರೆಯ ವೇದಾಂತ ಪ್ರವಚನದಕೇಂದ್ರವಾಗಿತ್ತು. ಆಶ್ರಮದ ಕರ್ತೃಗಳಾದ ಶ್ರೀ ಜಡೇಸಿದ್ದ ಶಿವಯೋಗಿಗಳು ವೇದಾಂತಪ್ರವಚನ ನಡೆಸಿಕೊಟ್ಟು ದಾವಣಗೆರೆಯ ಶ್ರೀ ಗುರು ಶಾಂತಾಶ್ರಮದಲ್ಲಿ ಲಿಂಗೈಕ್ಯರಾದವರು.ಪೂಜ್ಯಶ್ರೀಗಳು ಸೊಲ್ಲಾಪುರದವರಾಗಿದ್ದು, ದಾವಣಗೆರೆಯ ಶ್ರೀ ರಂಗಾವಧೂತಆಶ್ರಮದ ಗುರುಗಳಾದ ಶ್ರೀ ಶಿವಾನಂದ ಸ್ವಾಮಿಗಳ ಕೋರಿಕೆಯ ಮೇರೆಗೆ ದಾವಣಗೆರೆಗೆಬಂದವರು. ಇವರ ಕಾಲದಲ್ಲೇ ಭಕ್ತರು ಶ್ರೀಗಳಿಗೋಸ್ಕರ ವಿನೋಬನಗರದಲ್ಲಿ ಸಣ್ಣಕುಟೀರವನ್ನು ಕಟ್ಟಿಸಿಕೊಟ್ಟಿದ್ದಲ್ಲದೆ ಶ್ರೀಗಳ ಅಪ್ಪಣೆಯ ಮೇರೆಗೆ ಈಗಿನ ಎಂ.ಸಿ.ಸಿ.’ಎ’ಬ್ಲಾಕ್ನಲ್ಲಿ (ಶ್ರೀಗುರುಶಾಂತಾಶ್ರಮ) ಜಾಗವನ್ನು ಖರೀದಿಸಿದರು.ಶ್ರೀಗಳು ದಾವಣಗೆರೆಯ ಆಶ್ರಮದ ಜೊತೆಗೆ ಸೊಲ್ಲಾಪುರದ ತಮ್ಮ ಮೂಲಆಶ್ರಮದ ಜೊತೆಗೂ ಸಂಪರ್ಕವನ್ನಿರಿಸಿಕೊಂಡು ತಮ್ಮ ಶಿಷ್ಯರಾದ ಶ್ರೀ ನಿರಂಜನಸ್ವಾಮಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. 7-9-1960 ರಲ್ಲಿ ಶ್ರೀಗಳು ಬ್ರಹ್ಮಲೀನರಾದಮೇಲೆ ಪ್ರತೀವರ್ಷ ಪುಣ್ಯಾರಾಧನೆಯನ್ನು ಶರಣೆ ಸರ್ವಮಂಗಳಮ್ಮನವರು ನಡೆಸಿಕೊಂಡುಬರುತ್ತಿದ್ದರು. 1963 ರಲ್ಲಿ ಶ್ರೀ ನಿರಂಜನ ಸ್ವಾಮಿಗಳು ದಾವಣಗೆರೆಗೆ ಬಂದು ನೆಲೆಸಿ ಶ್ರಿಗಳಸಮಾಧಿಯ ಪಕ್ಕದಲ್ಲಿ ಭಕ್ತರ ಸಹಾಯದಿಂದ ಶ್ರೀಗುರು ಶಾಂತಾಶ್ರಮವನ್ನು ಸ್ಥಾಪಿಸಿ, 1965ರಮೇ 30 ರಂದು ಲಿಂಗೈಕ್ಯರಾಗುತ್ತಾರೆ.ವಿನೋಬನಗರದ ಆಶ್ರಮದಲ್ಲಿ ಶರಣೆ ಸರ್ವಮಂಗಳಮ್ಮನವರು ಧಾರ್ಮಿಕಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾಗ ಶ್ರೀ ಶಿವಾನಂದ ಸ್ವಾಮಿಗಳು ದಾವಣಗೆರೆಗೆಆಗಮಿಸಿ ಶ್ರೀ ಗುರುಶಾಂತಾಶ್ರಮದಲ್ಲಿ ಸೇವೆಗೈಯುತ್ತಿರುತ್ತಾರೆ. ಸರ್ವಮಂಗಳಮ್ಮನವರುಶಿವಾನಂದ ಸ್ವಾಮಿಗಳ ಭಕ್ತಿಯನ್ನು ಮೆಚ್ಚಿ ಶ್ರೀಗಳನ್ನು ಆಶ್ರಮದ ಉತ್ತರಾಧಿಕಾರಿಗಳನ್ನಾಗಿನೇಮಿಸುತ್ತಾರೆ. ಹೀಗೆ ನೇಮಕಗೊಂಡ ಶ್ರೀಗಳು ಕಾಶಿಯಲ್ಲಿ ವೇದಾಂತಾಚಾರ್ಯಪದವಿಯನ್ನು ಪಡೆದು ದಾವಣಗೆರೆಗೆ ಮರಳುತ್ತಾರೆ. ಶ್ರೀಗಳು ವಿನೋಬನಗರದ ಆಶ್ರಮಕ್ಕೆಬೃಹತ್ ಕಟ್ಟಡವನ್ನು ನಿರ್ಮಿಸಿದ್ದು ಎರಡೂ ಆಶ್ರಮಗಳಲ್ಲಿ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶೋ.ಬ್ರ. ಶ್ರೀ ಶಿವಾನಂದ ಸ್ವಾಮಿಗಳು
Date of Birth :
1-1-1964
Place :
ಔರಾದ್, ಸೊಲ್ಲಾಪುರ ತಾ||
Programs
ಪ್ರತಿ ಶಿವರಾತ್ರಿಯಂದು ವಿಶೇಷ ಕಾರ್ಯಕ್ರಮಗಳು.
ಅನಂತನ ಹುಣ್ಣಿಮೆಯ ಮರುದಿನ ಹಿರಿಯ ಗುರುಗಳ ಪುಣ್ಯಾರಾಧನೆ.
ದಸರಾದಲ್ಲಿ ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳು.
ಮಾಘ ಮಾಸದಲ್ಲಿ ಮಾತಾ ಸರ್ವಮಂಗಳಮ್ಮನವರ ಪುಣ್ಯಾರಾಧನೆ.
Full Address Kannada
ಶ್ರೀ ಜಡೇಸಿದ್ದ ಶಿವಯೋಗೀಶ್ವರ ಶಾಂತಾಶ್ರಮ
2ನೇ ಮೇನ್, 3ನೇ ಕ್ರಾಸ್,
ವಿನೋಬ ನಗರ ದಾವಣಗೆರೆ - 577 006