ಕರ್ತೃ – ಶ್ರೀ ಶಿವಯೋಗಿ ಪರ್ವತರಾಜ ಶಿವಾಚಾರ್ಯ ಮಹಾಸ್ವಾಮಿಗಳು
ಬೆಂಗಳೂರು ನಗರ ಜಿಲ್ಲೆಯ ಉತ್ತರ ವಲಯದ ಹುಣಸಮಾರನಹಳ್ಳಿಯಲ್ಲಿಪುರಾತನ ಕಾಲದ ಶ್ರೀ ಹುಣಸಮಾರನಹಳ್ಳಿ ಸಂಸ್ಥಾನ ಮಠವು ಅಸ್ತಿತ್ತ್ವದಲ್ಲಿದ್ದು ತನ್ನಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಚಟುವಟಿಕೆಗಳ ಮುಖೇನ ಪ್ರಸಿದ್ಧಿಯಲ್ಲಿದೆ.ಸುಮಾರು ಹದಿನೈದನೆಯ ಶತಮಾನದಲ್ಲಿ ಶ್ರೀಶೈಲ ಕ್ಷೇತ್ರದಿಂದ ಬೆಂಗಳೂರು ಪ್ರಾಂತ್ಯಕ್ಕೆಆಗಮಿಸಿದ್ದ ಶ್ರೀ ಪರ್ವತರಾಜ ಶಿವಾಚಾರ್ಯ ಮಹಾಸ್ವಾಮಿಗಳು ನಂದಿಬೆಟ್ಟ,ದೇವನಹಳ್ಳಿಗಳಲ್ಲಿ ಅನುಷ್ಠಾನ ಕೈಗೊಂಡು ನಂತರ ಹುಣಸಮಾರನಹಳ್ಳಿಗೆ ಆಗಮಿಸಿ ಇಲ್ಲಿಮಠವನ್ನು ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತದೆ.ಕರ್ತೃ ಗುರುಗಳ ನಂತರದ ಪರಂಪರೆಯಲ್ಲಿ ಒಟ್ಟು 14 ಜನ ಶ್ರೀಗಳು ಶ್ರೀಮಠದಅಧಿಕಾರಕ್ಕೆ ಬಂದಿದ್ದು ಕಳೆದ ಐದು ಶತಮಾನಗಳಲ್ಲಿ ಬೆಂಗಳೂರಿನ ಪ್ರಮುಖ ಮಠಗಳಲ್ಲಿಒಂದಾಗಿ ಬೆಳೆದು ನಿಂತಿದೆ. ಪರಂಪರೆಯಲ್ಲಿ ಬಂದಿರುವ ಶ್ರೀ ಚನ್ನಬಸವ ಶಿವಾಚಾರ್ಯರುಆಯುರ್ವೇದ ಪಂಡಿತರಾಗಿ, ಶಿವಪೂಜಾನಿಷ್ಠರಾಗಿ ಭಕ್ತರ ಭವ ರೋಗಗಳನ್ನು ನಿವಾರಣೆಮಾಡಬಲ್ಲಂತಹ ಮಹಾಸಾಧಕರಾಗಿದ್ದರು. ಇವರ ನಂತರದ ಪರಂಪರೆಯಲ್ಲಿ ಬಂದಿರುವಶ್ರೀ ಪರ್ವತ ಶಿವಾಚಾರ್ಯ ಮಹಾಸ್ವಾಮಿಗಳು (7ನೇ ಶ್ರೀಗಳು) ಮಠದ ಆಶ್ರಯದಲ್ಲಿದ್ದಚನ್ನಬಸವ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ, ಚಂದ್ರಮೌಳೇಶ್ವರ ಸ್ವಾಮಿ &ಚಕ್ರರಾಜೇಶ್ವರಿ ದೇವಿಯನ್ನು ಮಠದಲ್ಲಿ ಪ್ರತಿಷ್ಠಾಪಿಸಿದರು. ಈ ರೀತಿಯಾಗಿ ಮಠದಪರಂಪರೆಯ ಎಲ್ಲಾ ಗುರುಗಳೂ ಶ್ರೀಮಠ ಹಾಗೂ ಸಮಾಜಗಳೆರಡರ ಅಭಿವೃದ್ಧಿಗೆಶ್ರಮಿಸಿದ್ದಾರೆ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಪಟ್ಟದ ನಂಜೇ ಶಿವಾಚಾರ್ಯರು ಸಂಸ್ಕøತ,ವೇದ ಪಾರಂಗತರು. ಇವರ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು ಶ್ರೀಮಠವುಸರ್ವತೋಮುಖ ರೀತಿಯಲ್ಲಿ ಅಭಿವೃದ್ದಿ ಕಂಡಿದೆ. ಶ್ರೀಮಠವನ್ನುಜೀರ್ಣಾಭಿವೃದ್ದಿಗೊಳಿಸಿದ್ದ ಶ್ರೀಗಳು 1913ರಲ್ಲಿ ಲಿಂಗೈಕ್ಯರಾದರು. ಇವರ ನಂತರ1956ರವರೆಗೆ ಶ್ರೀಮಠವು ಖಾಲಿ ಉಳಿದಿದ್ದು 1956ರಲ್ಲಿ ಈಗಿನ ಹಿರಿಯ ಶ್ರೀಗಳಾದ ಶ್ರೀಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಅಧಿಕಾರಕ್ಕೆ ಬಂದರು. ಶ್ರೀಗಳುಶ್ರೀಮಠದ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದ್ದುಶ್ರೀಮಠದ ವತಿಯಿಂದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಹಿರಿಯ ಶ್ರೀಗಳುಇತ್ತೀಚೆಗೆ ಶ್ರೀ ಪಟ್ಟದ ಗುರುನಂಜೇಶ್ವರ ಶಿವಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿನೇಮಿಸಿಕೊಂಡು ಪಟ್ಟಾಧಿಕಾರದ ಅನುಗ್ರಹ ನೀಡಿದ್ದಾರೆ.
Swamiji
Swamiji Name :
ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಮಹಾಸ್ವಾಮಿಗಳು
Photo :
Swamiji Name :
ಶ್ರೀ ಪಟ್ಟದ ಶ್ರೀ ಗುರು ನಂಜೇಶ್ವರ ಶಿವಾಚಾರ್ಯ ಸ್ವಾಮಿಗಳು
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ
ಹೋಳಿ ಹುಣ್ಣಿಮೆಗೆ ಶ್ರೀ ಮಠದ ರಥೋತ್ಸವ
ಕಾರ್ತಿಕ ಮಾದಲ್ಲಿ ದೀಪಾರಾಧನೆ ಮತ್ತು ಕೊನೆಯ ಸೋಮವಾರ ಶ್ರೀ ಹಿರಿಯ ಗುರುಗಳ
ಪುಣ್ಯಾರಾಧನೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ ಕಾಲೇಜು / ಪ್ರಥಮ ದರ್ಜೇ ಕಾಲೇಜು
ವಿದ್ಯಾರ್ಥಿ ನಿಲಯ
Full Address Kannada
ಶ್ರೀ ಹುಣಸಮಾರನಹಳ್ಳಿ ಸಂಸ್ಥಾನ ಮಠ
ಹುಣಸಮಾರನಹಳ್ಳಿ - 562 157
ಬೆಂಗಳೂರು ಉತ್ತರ ವಲಯ