Shree Hukkeri Matha, Haveri

Shree Hukkeri Matha, Haveri Claimed

ಶ್ರೀ ಹುಕ್ಕೇರಿ ಮಠ, ಹಾವೇರಿ

Average Reviews

Description

ಶ್ರೀ ಹುಕ್ಕೇರಿ ಮಠ, ಹಾವೇರಿ

ಕರ್ತೃ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು

ಹಾವೇರಿ ನಗರವು ಕರ್ನಾಟಕದ ಧಾರ್ಮಿಕ ರಾಜಧಾನಿ ಎಂದರೆ ತಪ್ಪಾಗದು.ಈ ನಗರದಲ್ಲಿ ಸುಮಾರು 63 ಮಠಗಳು ಅಸ್ತಿತ್ವದಲ್ಲಿದ್ದವೆಂದು ಹೇಳಲಾಗಿದ್ದು ಅದರಲ್ಲಿಪ್ರಮುಖವಾದದ್ದು ಶ್ರೀ ಹುಕ್ಕೇರಿ ಮಠ. ಶ್ರೀಮಠವು ಸುಮಾರು 325 ವರ್ಷಗಳ ಹಿಂದೆಲೋಕಸಂಚಾರಿ, ಶಿವಪೂಜಾನಿಷ್ಠ ಶ್ರೀ ರಾಚೋಟೇಶ್ವರ ಸ್ವಾಮಿಗಳಿಂದ ಸ್ಥಾಪಿತಗೊಂಡಿದೆ.ಶ್ರೀಗಳು ಇಲ್ಲಿನ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿದ್ದಲ್ಲದೆ, ವೀರಶೈವ ಧರ್ಮದಮೂಲ ಸಿದ್ಧಾಂತವನ್ನು ಬೋಧಿಸಿ ಶಿವಾನುಭವ ಗೋಷ್ಠಿಗಳನ್ನು ಮಾಡುತ್ತಿದ್ದರು.ಶ್ರೀ ರಾಚೋಟೇಶ್ವರ ಸ್ವಾಮಿಗಳ ನಂತರ ಅನೇಕ ಸ್ವಾಮಿಗಳು ಅಧಿಕಾರನಡೆಸಿದ್ದಾರೆ ಎಂದು ಹೇಳಲಾದರೂ ದಾಖಲೆಗಳು ಲಭ್ಯವಿಲ್ಲ. ನಂತರ ಶ್ರೀ ಬಸವಲಿಂಗಸ್ವಾಮಿಗಳು ಮತ್ತು ಶ್ರೀ ಸಿದ್ದಲಿಂಗ ಸ್ವಾಮಿಗಳು ಮಠದ ಅಧಿಕಾರವನ್ನು ನಡೆಸಿ ಧಾರ್ಮಿಕಕಾರ್ಯಕ್ರಮಗಳ ಮೂಲಕ ಮಠವನ್ನು ಹೆಚ್ಚು ಪ್ರವರ್ಧಮಾನಕ್ಕೆ ತಂದಿದ್ದಾರೆ. ಹಾಗೆಯೇಸಾಮಾಜಿಕವಾಗಿ ಮಠವು ಹೆಸರಾಗುವಂತೆ ಮಾಡಿದ್ದಾರೆ. ಉಭಯ ಶ್ರೀಗಳ ಗದ್ದುಗೆಗಳುಹುಕ್ಕೇರಿ ಮಠದ ಶಾಖಾಮಠವಾಗಿರುವ ಹಾವೇರಿ ನಗರದ ಹೊಸಕೇರಿ ಮಠದಲ್ಲಿವೆ.ಉಭಯ ಶ್ರೀಗಳ ತರುವಾಯ ಶ್ರೀಮಠದ ಅಧಿಕಾರ ವಹಿಸಿಕೊಂಡವರು ಶ್ರೀಶಿವಬಸವ ಸ್ವಾಮಿಗಳು. ಶ್ರೀ ಶಿವಬಸವ ಸ್ವಾಮಿಗಳು ಧರ್ಮನಿಷ್ಠರಾಗಿದ್ದು ಜೊತೆಯಲ್ಲಿಯೇತಮ್ಮ ವೈಚಾರಿಕ ಚಿಂತನೆಯಿಂದ ಹೆಸರಾಗಿದ್ದಾರೆ. ಹಾಗೆಯೇ ತಮ್ಮ ಅನುಷ್ಠಾನ ಬಲದಿಂದಹುಕ್ಕೇರಿ ಮಠವನ್ನು ಸರ್ವರೀತಿಯಲ್ಲೂ ಅಭಿವೃದ್ಧಿಗೊಳಿಸಲು ಶ್ರಮಿಸಿದ್ದಾರೆ. ಶ್ರೀಗಳುಹಾನಗಲ್ಲ ಕುಮಾರಸ್ವಾಮಿಗಳೊಡಗೂಡಿ ಶಿವಯೋಗ ಮಂದಿರದ ಸ್ಥಾಪನೆಗೆ ಕಾರಣರಾಗಿಅದರ ಪ್ರಥಮ ಅಧ್ಯಕ್ಷರಾಗಿದ್ದವರು. ಉಭಯ ಶ್ರೀಗಳು ಸಮಾಜದ ಅಭಿವೃದ್ಧಿಗೆಪಣತೊಟ್ಟು ನಿಂತವರು. ಇಂತಹ ಮಹಾಮಹಿಮ ಶ್ರೀಗಳಾದ ಶ್ರೀ ಶಿವಬಸವ ಸ್ವಾಮಿಗಳುತಮ್ಮ 89ನೇ ವಯಸ್ಸಿನಲ್ಲಿ 1940ರಲ್ಲಿ ಲಿಂಗೈಕ್ಯರಾದರು.ಶ್ರೀ ಶಿವಬಸವ ಸ್ವಾಮಿಗಳ ತರುವಾಯ ಬಂದವರು ಶ್ರೀ ಶಿವಲಿಂಗ ಸ್ವಾಮಿಗಳು.ಶ್ರೀಗಳು ಇದಕ್ಕೂ ಮೊದಲು ಬಿಜಾಪುರ ಜಿಲ್ಲೆ ಮಾದನ ಹಿಪ್ಪರಗಿಯ ಶಿವಲಿಂಗೇಶ್ವರವಿರಕ್ತಮಠಕ್ಕೆ ಪಟ್ಟಾಧಿಕಾರಿಯಾಗಿ ನೇಮಕಗೊಂಡಿದ್ದರು. ಶ್ರೀಗಳು ಹಾವೇರಿ ಭಕ್ತರಒತ್ತಾಯಕ್ಕೆ ಮಣಿದು ಹಾಗೂ ಸಿಂದಗಿಯ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಒತ್ತಾಸೆ ಮೇರೆಗೆಶ್ರೀ ಹುಕ್ಕೇರಿ ಮಠದ ಅಧಿಕಾರವನ್ನೂ ವಹಿಸಿಕೊಂಡರು. ಶ್ರೀಗಳು ಶ್ರೀ ಹುಕ್ಕೇರಿ ಮಠದಜೊತೆಯಲ್ಲಿಯೇ ತಮ್ಮ ಮೂಲ ವಿರಕ್ತಮಠವನ್ನೂ ಸಮರ್ಥವಾಗಿ ಮುನ್ನಡೆಸಿಕೊಂಡುಬಂದಿದ್ದಾರೆ.ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಮಠವನ್ನು ಧಾರ್ಮಿಕ,ಸಾಮಾಜಿಕ, ಸಾಂಸ್ಕøತಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ.ಶ್ರೀಗಳು ಯಶವಂತಪುರದ ಶ್ರೀಗಳ ಆಶಯದಂತೆ ಶ್ರೀ ಶಿವಬಸವೇಶ್ವರ ದಾಸೋಹಮಂದಿರವನ್ನು ಸ್ಥಾಪಿಸಿ ಶ್ರೀಮಠಕ್ಕೆ ಬರುವ ಭಕ್ತಾದಿಗಳ ಹಾಗೂ ಬಡ ವಿದ್ಯಾರ್ಥಿಗಳದಾಸೋಹದ ವ್ಯವಸ್ಥೆ ಮಾಡಿದ್ದಾರೆ. 1973ರಲ್ಲಿ ಶ್ರೀಗಳು “ಹಾವೇರಿ ತಾಲ್ಲೂಕು ಎಜುಕೇಶನ್ಸೊಸೈಟಿ” ಯನ್ನು ಹುಟ್ಟುಹಾಕಿ ಅದರ ಮುಖಾಂತರ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದರು. ಶ್ರೀಗಳು ಸ್ವತಃ ಲೇಖಕರಾಗಿದ್ದು ಸುಮಾರು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.

ಈಗಿನ ಶ್ರೀಗಳಾದ ಶ್ರೀ ಸದಾಶಿವ ಮಹಾಸ್ವಾಮಿಗಳು 2010ರ ಮೆ 23ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡು ಮಠವನ್ನು ಹಿರಿಯ ಶ್ರೀಗಳ ಹಾದಿಯಲ್ಲಿಯೇ ಮುನ್ನಡೆಸುತ್ತಿದ್ದಾರೆ. ಹಾಗೆಯೇ ಅರ್ಧ ಶತಮಾನ ಕಂಡ ಪ್ರಸಾದ ನಿಲಯವನ್ನೂ ಅತ್ಯಂತ ಸಮರ್ಥವಾಗಿ ಮುನ್ನಡೆಸುವುದರ ಮೂಲಕ ಈ ಭಾಗದ ಜನರ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸತುಂಬುವ ಕೆಲಸ ಮಾಡುತ್ತಿದ್ದಾರೆ. ಶ್ರೀಮಠದಲ್ಲಿ ವಿಜೃಂಭಣೆಯ ಬಸವ ಜಯಂತಿ ಆಚರಣೆರೂಢಿಯಲ್ಲಿದ್ದು ಶ್ರಾವಣಮಾಸದಲ್ಲಿ ಪುರಾಣ ಪ್ರವಚನಗಳನ್ನು ಆಯೋಜಿಸಲಾಗುತ್ತದೆ.ಶ್ರೀಮಠದ ಜಾತ್ರೆಯು ಪ್ರತಿವರ್ಷ ಪುಷ್ಯ ಮಾಸದಲ್ಲಿ ಜರುಗುತ್ತಿದ್ದು ಆ ಸಮಯದಲ್ಲಿಶ್ರೀಮಠದ ಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ನಡೆಯುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು
Date of Birth :
20-8-1988
Place :
ಶಾಗೋಟಿ, ಗದಗ ತಾ||
Pattadikara :
23-5-2010
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಬಸವ ಜಯಂತಿಯಂದು ವಿಶೇಷ ಕಾರ್ಯಕ್ರಮಗಳು, ಸಾಮೂಹಿಕ ವಿವಾಹ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಪುಷ್ಯ ಮಾಸದಲ್ಲಿ ಶ್ರೀಮಠದಲ್ಲಿ ಜಾತ್ರೆ.
ದಸರಾ ಹಾಗೂ ಶಿವರಾತ್ರಿಗಳಲ್ಲಿ ವಿಶೇಷ ಪೂಜೆ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ಪದವಿ ಪೂರ್ವ ಕಾಲೇಜು / ಮಹಿಳಾ ಪದವಿ ಕಾಲೇಜು ಡಿ.ಎಡ್., ಕಾಲೇಜು / ಐ.ಟಿ.ಐ. ಕಾಲೇಜು ಉಚಿತ ವಿದ್ಯಾರ್ಥಿ ನಿಲಯ /
ಪ್ರಸಾದ ನಿಲಯ ಶಾರದಾ ಸಂಗೀತ ಶಾಲೆ

Photos

Full Address Kannada

ಶ್ರೀ ಹುಕ್ಕೇರಿ ಮಠ
ಹಾವೇರಿ - 581 110
ಹಾವೇರಿ (ತಾ.) (ಜಿ.)

Map

Near by Places

ಗುತ್ತಲ - 27 ಕಿ.ಮೀ.
ರಾಣೆಬೆನ್ನೂರು - 35 ಕಿ.ಮೀ.
ಬಂಕಾಪುರ - 22 ಕಿ.ಮೀ. ಅಕ್ಕಿ
ಆಲೂರು - 24 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!