Shree Hosamatha, Hubballi

Shree Hosamatha, Hubballi Claimed

ಶ್ರೀ ಹೊಸಮಠ, ಹುಬ್ಬಳ್ಳಿ

Average Reviews

Description

ಶ್ರೀ ಹೊಸಮಠ, ಹುಬ್ಬಳ್ಳಿ

ಕರ್ತೃ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಮಹಾಸ್ವಾಮಿಗಳು

ಹುಬ್ಬಳ್ಳಿ ನಗರದ ಅಕ್ಕಿಹೊಂಡ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಹೊಸಮಠವುಸುಮಾರು 1727ರಲ್ಲಿ ಜಗದ್ಗುರು ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡುಇದುವರೆಗೂ ತನ್ನ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ಅರಿವನ್ನುಮೂಡಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಮೂರು ಶತಮಾನಗಳಿಂದ ಹುಬ್ಬಳ್ಳಿ ನಗರದಧಾರ್ಮಿಕ ಇತಿಹಾಸವನ್ನು ಶ್ರೀಮಂತಗೊಳಿಸಿರುವ ಹೊಸಮಠದ ಶ್ರೀಗಳೆಲ್ಲರೂ, ಶೈವಾಗಮಗಳ ಉಪಾಸಕರಾಗಿ, ಧರ್ಮ-ಜ್ಞಾನದಾಸೋಹವನ್ನು ಜನರಿಗೆ ಉಣಬಡಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚಂದ್ರಶೇಖರ ಶಿವಯೋಗಿ ರಾಜೇಂದ್ರಮಹಾಸ್ವಾಮಿಗಳವರದು ಉನ್ನತ ವ್ಯಕ್ತಿತ್ವ ಹಾಗೂ ಸಾಧನೆ. ಶ್ರೀಮಠದ ಹಿಂದಿನ ಶ್ರೀಗಳಾದಲಿಂ. ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳ ಕೃಪೆಯಲ್ಲಿ ಬೆಳೆದ ಶ್ರೀಗಳು 1973ರಲ್ಲಿಸ್ನಾತಕೋತ್ತರ ಪದವಿಯನ್ನು ಗಳಿಸಿದರು. ತಮ್ಮ ತತ್ವಶಾಸ್ತ್ರದ ಮೇಲಿನ ಆಸಕ್ತಿಯಿಂದಾಗಿಶ್ರೀಗಳು ಇಂಗ್ಲೇಂಡಿನ ಆಕ್ಸ್ಫರ್ಡ್, ಅಮೇರಿಕಾದ ಫೆಲಿಡೆಲ್ಫಿಯಾ ಹಾಗೂ ಟೆಂಪಲ್ಟನ್ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣ ಪಡೆದರು.ಇಂತಹ ಘನಪಂಡಿತ ಶ್ರೀಗಳು ಶ್ರೀ ಹೊಸಮಠಕ್ಕೆ ಪೀಠಾದಿಪತಿಗಳಾಗಿ 1983ರಮೇ 22ರಂದು ಅಧಿಕಾರ ವಹಿಸಿಕೊಂಡು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಹಾಗೂ ಜಗತ್ತಿನಾದ್ಯಂತ ಪರಮಹಂಸಜಗದ್ಗುರು ಎನ್.ಎಸ್. ಇಂಟರ್ನ್ಯಾಷನಲ್ ಯೋಗ ಮಂದಿರಗಳನ್ನು ಸ್ಥಾಪಿಸಿ ಧರ್ಮಪ್ರಚಾರ ಹಾಗೂ ಯೋಗ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.ಶ್ರೀಗಳು ಜಗತ್ತಿನ ನಾನಾ ಮೂಲೆಗಳಲ್ಲಿ ಜರುಗಿರುವ ಅಂತರಾಷ್ಟ್ರೀಯ ಧರ್ಮಮತ್ತು ಶಾಂತಿ ಸಮ್ಮೇಳನಗಳಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. 1974ರಲ್ಲಿ ಬೆಲ್ಜಿಯಂನಲ್ಲಿ ಜರುಗಿದ ಸಮ್ಮೇಳನದಿಂದ ಪ್ರಾರಂಭಿಸಿ ಇಲ್ಲಿಯವರೆಗೂ ಹತ್ತಾರು ಸಮ್ಮೇಳನಗಳಲ್ಲಿಭಾಗವಹಿಸಿರುವ ಶ್ರೀಗಳು 1979ರಲ್ಲಿ ಅಮೇರಿಕಾದ ಹಿಂದಿನ ಅಧ್ಯಕ್ಷ ಶ್ರೀ ಜಿಮ್ಮಿಕಾರ್ಟರ್ರಿಂದ ವೈಟ್ ಹೌಸ್ನಲ್ಲಿ ಸತ್ಕಾರ ಸ್ವೀಕರಿಸಿದ್ದಾರೆ. ಸಮಾಜೋನ್ನತಿಗೆ ಕ್ರಿಯಾಶೀಲವಾಗಿರುವ ಶ್ರೀಗಳು ಶ್ರೀಮಠದಲ್ಲಿ ವಿವಿಧ ಜಯಂತಿಗಳನ್ನು ಆಚರಿಸುವ ಮೂಲಕಜನಜಾಗೃತಿ ಕಾರ್ಯಕೈಗೊಂಡಿದ್ದಾರೆ.

ವಿಶೇಷತೆ :

ಪ್ರಸ್ತುತ ಶ್ರೀಗಳಿಂದ ಜಗತ್ತಿನ ನಾನಾ ಭಾಗಗಳಲ್ಲಿ ಪರಮಹಂಸ ಜಗದ್ಗುರು

ಎನ್.ಎಸ್. ಇಂಟರ್‍ನ್ಯಾಷನಲ್ ಯೋಗ ಮಂದಿರಗಳ ಸ್ಥಾಪನೆ.

ಪ್ರಸ್ತುತ ಶ್ರೀಗಳು ಜಗತ್ತಿನ ನಾನಾ ಭಾಗಗಳಲ್ಲಿ ಜರುಗುವ

ಅಂತರಾಷ್ಟ್ರಿಯ ಧರ್ಮ ಮತ್ತು ಶಾಂತಿ ಸಮ್ಮೇಳನಗಳಲ್ಲಿ ಭಾರತ

ದೇಶದ ಪ್ರತಿನಿಧಿಕರು.

Swamiji

Swamiji Name :
ಶ್ರೀ ಮ.ನಿ.ಪ್ರ. ಚಂದ್ರಶೇಖರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು
Date of Birth :
5-6-1948
Place :
ತಳಕಲ್, ಯಲಬುರ್ಗಾ ತಾ||
Pattadikara :
22-5-1983
Photo :

Programs

ಪ್ರತಿ ತಿಂಗಳು ಶಿವಾನುಭವ ಗೋಷ್ಠಿ. ದಸರಾದಲ್ಲಿ ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳು.
ಪ್ರತಿವರ್ಷ ಜೂನ್ 1 ರಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರೀಮಠದ ವತಿಯಿಂದ ವ್ಯಕ್ತಿ ವಿಕಸನ ಶಿಬಿರಗಳ ಆಯೋಜನೆ.

Photos

Full Address Kannada

ಶ್ರೀ ಹೊಸಮಠ ಅಕ್ಕಿಹೊಂಡ,
ಹುಬ್ಬಳ್ಳಿ - 580 020
ಧಾರವಾಡ ಜಿ||

Map

Near by Places

ಹುಬ್ಬಳ್ಳಿ ಸಿ.ಬಿ.ಟಿ. - 500 ಮೀ.
ರೈಲು ನಿಲ್ದಾಣ - 2 ಕಿ.ಮೀ.
ಹಳೆ ಬಸ್ನಿಲ್ದಾಣ - 3 ಕಿ.ಮೀ.
ಕೆ.ಎಸ್.ಆರ್.ಟಿ.ಸಿ. - 6 ಕಿ.ಮೀ.

Statistic

14 Views
0 Rating
0 Favorite
0 Share
error: Content is protected !!