Shree Hosamatha, Alamelu

Shree Hosamatha, Alamelu Claimed

ಶ್ರೀ ಹೊಸಮಠ, ಅಲಮೇಲು

Average Reviews

Description

ಶ್ರೀ ಹೊಸಮಠ, ಅಲಮೇಲು

ಕರ್ತೃ – ಶ್ರೀ ಷ.ಬ್ರ. ಲಗಳೇಶ್ವರ ಶಿವಾಚಾರ್ಯ ಸ್ವಾಮಿಗಳು

ವಿಜಯಪುರ ಜಿˉÉ್ಲ ಸಿಂಧಗಿ ತಾಲ್ಲೂಕಿನ ಅಲಮೇಲು ಗ್ರಾಮವು ತಾಲ್ಲೂಕುಕೇಂದ್ರದಿಂದ 20 ಕಿ.ಮೀ. ದೂರದಲಿದ್ದು, ಈ ಗ್ರಾಮದಲ್ಲಿ ಶ್ರೀ ಷ.ಬ್ರ. ಲಗಳೇಶ್ವರಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟ ಪುರಾತನ ಕಾಲದ ಶ್ರೀ ಹೊಸಮಠವುಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರಿಗೆ ಸನ್ಮಾರ್ಗ ತೋರುತ್ತಿದೆ. ಶ್ರೀಹೊಸಮಠವು ಶ್ರೀ ಉಜ್ಜಯಿನಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದುಬಂದಿದೆ.ಶ್ರೀ ಹೊಸಮಠದ ಕರ್ತೃಗುರುಗಳಾದ ಶ್ರೀ ಷ.ಬ್ರ. ಲಗಳೇಶ್ವರ ಶಿವಾಚಾರ್ಯಸ್ವಾಮಿಗಳು ಅಲಮೇಲು ಗ್ರಾಮದಲ್ಲಿ ನೆˉÉನಿಂತು ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾಶ್ರೀಮಠವನ್ನು ಸ್ಥಾಪಿಸಿದ್ದು ಭಕ್ತರನ್ನು ತಮ್ಮ ಆಚರಣೆಗಳಲ್ಲಿ ಪಾˉÉ್ಗೂಳ್ಳುವಂತೆ ಮಾಡಿದರು.ಪ್ರಸ್ತುತ ಮಠದ ಆವರಣದಲ್ಲಿ ನಾಲ್ಕು ಗದ್ದುಗೆಗಳಿದ್ದು ಅವುಗಳಲ್ಲಿ ಕತೃಗುರುಗಳು ಹಾಗೂಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ದಯಾನಂದ ಶಿವಾಚಾರ್ಯ ಸ್ವಾಮಿಗಳ ಗದ್ದುಗೆಗಳನ್ನುಗುರುತಿಸಬಹುದಾಗಿದ್ದು ಉಳಿದವುಗಳ ಬಗ್ಗೆ ತಿಳಿದುಬರುವುದಿಲ್ಲ.ಹಿಂದಿನ ಶ್ರೀಗಳಾದ ಶ್ರೀ ದಯಾನಂದ ಶಿವಾಚಾರ್ಯ ಸ್ವಾಮಿಗಳು ಪಟ್ಟಾಧಿಕಾರಸ್ವೀಕರಿಸುವ ಪೂರ್ವದಲ್ಲಿ ಶ್ರೀಮಠವು ಬಹುಕಾಲ ಖಾಲಿ ಉಳಿದಿರುವಂತೆ ತೋರುತ್ತದೆ.ಶ್ರೀಗಳು ಅಧಿಕಾರಕ್ಕೆ ಬಂದ ನಂತರ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಗಳು ಚುರುಕುಗೊಂಡವು. ಹಾಗೂ ತಮ್ಮ ಆಚರಣೆಗಳ ಮೂಲಕ ಶ್ರೀಗಳು ಭಕ್ತರನ್ನು ಶ್ರೀಮಠದತ್ತ ಸೆಳೆದುಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ.ಪ್ರಸ್ತುತ ಶ್ರೀ ಹೊಸಮಠದ ಉತ್ತರಾಧಿಕಾರಿಗಳಾಗಿ ಇಂಡಿ ತಾಲ್ಲೂಕಿನ ಅರ್ಜುಣಿಗಿಗ್ರಾಮದ ಶ್ರೀ ಸಂಗನಬಸವ ದೇವರು ನೇಮಕಗೊಂಡಿದ್ದು ಶ್ರೀಗಳು ವಿದ್ಯಾಭ್ಯಾಸದಲ್ಲಿನಿರತರಾಗಿದ್ದಾರೆ. ಪ್ರಸ್ತುತ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಮಠದ ವಂಶಸ್ಥರುಹಾಗೂ ಭಕ್ತವೃಂದ ನಿರ್ವಹಿಸಿಕೊಂಡು ಬರುತ್ತಿದ್ದು ಶ್ರೀಮಠದಲ್ಲಿ ವೈಶಾಖ ಮಾಸದಲ್ಲಿ ಶ್ರೀಹಿರಿಯ ಗುರುಗಳ ಪುಣ್ಯಾರಾಧನೆ, ಕಾರ್ತೀಕ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ,ವಿಜಯದಶಮಿಗೆ ಶ್ರೀದೇವಿ ಪುರಾಣ ಪ್ರವಚನಗಳು ಆಯೋಜನೆಗೊಂಡಿರುತ್ತವೆ.

Swamiji

Swamiji Name :
ಪೂಜ್ಯ ಶ್ರೀ ಸಂಗನಬಸವ ದೇವರು
Date of Birth :
19-6-1994
Place :
ಅರ್ಜುಣಿಗಿ ಬಿ.ಕೆ., ಇಂಡಿ ತಾ||
Photo :

Programs

ವೈಶಾಖ ಮಾಸದಲ್ಲಿ ಲಿಂ. ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ಲಿಂ. ಶ್ರೀ ಷ.ಬ್ರ. ದಯಾಸಾಗರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ. ವಿಜಯದಶಮಿಗೆ ಶ್ರೀ ದೇವಿ ಪುರಾಣ ಪ್ರವಚನ.
ಕಾರ್ತೀಕ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಹಾಗೂ ವಿವಿಧ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಹೊಸಮಠ
ಅಲಮೇಲು - 586 202
ಸಿಂಧಗಿ ತಾ||, ವಿಜಯಪುರ ಜಿ||

Map

Near by Places

ಸಿಂಧಗಿ - 20 ಕಿ.ಮೀ.
ಅಫ್ಜಲ್‍ಪುರ - 20 ಕಿ.ಮೀ.
ವಿಜಯಪುರ - 80 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!